ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದಂಥ ಹೀನ ಕೃತ್ಯ ಎಸಗಿರುವ ವಿಚಾರ ಕೇಳಿಬಂದಿದೆ. ಐವರು ಅಪ್ರಾಪ್ತ ಬಾಲಕರ ವಿರುದ್ಧ ಅತ್ಯಾಚಾರವೆಸಗಿದ ಆರೋಪ ಕಲಬುರಗಿಯ ವಿಶ್ವವಿದ್ಯಾಲಯ ಠಾಣೆಯಲ್ಲಿ ಕೇಳಿಬಂದಿದ್ದು ಪ್ರಕರಣ ದಾಖಲು ಮಾಡಲಾಗಿದೆ. ಜನವರಿ 6 ರಂದು ಬುದ್ಧಿಮಾಂದ್ಯ ಬಾಲಕಿ ಕರೆದೊಯ್ದು ಕೃತ್ಯ ಎಸಗಿರುವ ಬಗ್ಗೆ ಆರೋಪ ದಾಖಲಾಗಿದ್ದು ಬಾಲಕಿ ಪೋಷಕರಿಂದ ವಿವಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಐವರು ಬಾಲಕರನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದೆ.
ಕೋಲಾರ: ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಕೋಲಾರ ತಾಲ್ಲೂಕಿನ ಮಂಗಸಂದ್ರ ಪಿಜಿ ಸೆಂಟರ್ ಬಳಿ ನಡೆದಿದೆ. ಸುಮಾರು 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆಯಾಗಿದೆ. ಆದರೆ, ವ್ಯಕ್ತಿಯ ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಲಾರ: ಬೈಕ್ಗೆ ಕಾರು ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವು ಬೈಕ್ಗೆ ಕಾರು ಡಿಕ್ಕಿ ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ರಾಷ್ಟ್ರಿಯ ಹೆದ್ದಾರಿಯ ಕಾಂತರಾಜ ಸರ್ಕಲ್ ಬಳಿ ನಡೆದಿದೆ. ಮುಳಬಾಗಿಲು ತಾಲ್ಲೂಕಿನ ಚಮಕಲಹಳ್ಳಿ ಗ್ರಾಮದ ವ್ಯಕ್ತಿ ಸುರೇಶ್ ಎಂಬವರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರು ಮುಳಬಾಗಿಲು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೆಲಮಂಗಲ: ವಿಡಿಯೋ ಕಾಲ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ ವ್ಯಕ್ತಿಯ ಬಂಧನ ಪ್ರಾವಿಜನ್ ಸ್ಟೋರ್ ಮಹಿಳೆಗೆ ವಿಡಿಯೋ ಕಾಲ್ ನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸರಿಂದ ಆರೋಪಿ, ಮಂಜುನಾಥ್ ನಗರದ ಮಾರುತಿ (23) ಬಂಧಿಸಲಾಗಿದೆ. ಆಗಾಗ ಪ್ರಾವಿಜನ್ ಸ್ಟೋರ್ಗೆ ಬರುತ್ತಿದ್ದ ಯುವಕ, ಪ್ರಾವಿಜನ್ ಸ್ಟೋರ್ ಮಹಿಳೆಯ ನಂಬರ್ ಪಡೆದಿದ್ದ. ವಿಡಿಯೋ ಕಾಲ್ ಮುಖಾಂತರ ಖಾಸಗಿ ಅಂಗ ತೋರಿಸದ್ದರ ಬಗ್ಗೆ ಮಹಿಳೆ ದೂರು ನೀಡಿದ್ದರು. ಬಾಗಲಗುಂಟೆ ಪೊಲೀಸ್ ಠಾಣೆಗೆ ಮಹಿಳೆ ದೂರು ದಾಖಲಿಸಿದ್ದರು. ಜ.6ರಂದು ದೂರು ದಾಖಲಿಸಿಕೊಂಡು ಯುವಕನ ಬಂಧನ ಮಾಡಲಾಗಿದೆ. ಬಾಗಲಗುಂಟೆ ಠಾಣೆಯಲ್ಲಿ IPC 1860, ರೀತ್ಯಾ 354(D) ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಬಿಸಿಯೂಟ ಸೇವಿಸಿದ್ದ 60 ಮಕ್ಕಳ ಆರೋಗ್ಯದಲ್ಲಿ ಏರುಪೇರು
ಇದನ್ನೂ ಓದಿ: ತಲೆಯ ಮೇಲೆ ಕಲ್ಲು ಎತ್ತಿಹಾಕಿ ಆಟೋ ಚಾಲಕನ ಕೊಲೆ, ಪಾಳು ಬಿದ್ದ ಮನೆಯ ಶೌಚಾಲಯದಲ್ಲಿ ಶವ ಪತ್ತೆ