ಹೆತ್ತವರು ತನ್ನ ಪಾಲಿಗೆ ಜಮೀನು ಕೊಟ್ಟಿಲ್ಲ ಎಂದು ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ ಮಗಳು-ಅಳಿಯ!

mulberry: ಹಿರಿಯ ಮಗಳಾದ ಚೌಡಮ್ಮನಿಗೆ ಜಮೀನು ನೀಡಿಲ್ಲ ಎಂಬ ಕಾರಣಕ್ಕೆ ಹಿಪ್ಪು ನೇರಳೆ ಬೆಳೆಗೆ ವಿಷ ಹಾಕಿದ್ದಾಳೆ ಎಂದು ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಆರೋಪ ಮಾಡಿದ್ದಾರೆ. ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದು ಇದೀಗ ಹುಳುಗಳು ಸಾಯುತ್ತಿವೆ.

ಹೆತ್ತವರು ತನ್ನ ಪಾಲಿಗೆ ಜಮೀನು ಕೊಟ್ಟಿಲ್ಲ ಎಂದು  ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ ಮಗಳು-ಅಳಿಯ!
ಪೋಷಕರು ಜಮೀನು ಕೊಟ್ಟಿಲ್ಲ ಎಂದು ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿದ ಮಗಳು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 29, 2022 | 11:39 AM

ಕೋಲಾರ: ಪೋಷಕರು ಜಮೀನು ಕೊಟ್ಟಿಲ್ಲ ಎಂದು ಅಸಮಾಧಾನಗೊಂಡ ಮನೆಯ ಮಗಳು ಹಿಪ್ಪು ನೇರಳೆ ಬೆಳೆಗೆ ವಿಷ ಸಿಂಪಡಣೆ ಮಾಡಿ, ಮನೆ ಮಕ್ಕಳಂತೆ ಬೆಳೆದು ನಿಂತಿದ್ದ ಬೆಳೆಯನ್ನು ನಾಶ ಮಾಡಿದ್ದಾಳೆ! ಕೋಲಾರ ತಾಲೂಕಿನ ಯಳಚೀಪುರ ಗ್ರಾಮದಲ್ಲಿ ಈ ಹೇಯ ಘಟನೆ ನಡೆದಿದೆ. ಗ್ರಾಮದ ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಬೆಳೆದಿದ್ದ ರೇಷ್ಮೆ ಬೆಳೆಯನ್ನು ಅವರ ಮಗಳು ಚೌಡಮ್ಮ ನಾಶ ಮಾಡಿದ್ದಾರೆ.

ಹಿರಿಯ ಮಗಳಾದ ಚೌಡಮ್ಮನಿಗೆ ಜಮೀನು ನೀಡಿಲ್ಲ ಎಂಬ ಕಾರಣಕ್ಕೆ ಹಿಪ್ಪು ನೇರಳೆ ಬೆಳೆಗೆ ವಿಷ ಹಾಕಿದ್ದಾಳೆ ಎಂದು ರಾಮಣ್ಣ-ಲಕ್ಷ್ಮಮ್ಮ ಎಂಬ ವೃದ್ದ ದಂಪತಿ ಆರೋಪ ಮಾಡಿದ್ದಾರೆ. ವಿಷ ಸಿಂಪಡಣೆ ಮಾಡಿದ ಹಿಪ್ಪು ನೇರಳೆ ಸೊಪ್ಪು ತಿಂದು ಚಾಕಿಯಲ್ಲಿದ್ದ ರೇಷ್ಮೆ ಹುಳುಗಳು ಸಾಯುತ್ತಿವೆ. 150 ಮೊಟ್ಟೆಯ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ರೇಷ್ಮೆ ಬೆಳೆ ನಾಶವಾಗಿದೆ.

ಸಾಲ ಮಾಡಿ, ಕಷ್ಟಪಟ್ಟು ಜೀವನದೂಡುತ್ತಿದ್ದರೆ ಇದೀಗ ಬಂಗಾರದಂತಹ ರೇಷ್ಮೆ ಬೆಳೆಗೆ ವಿಷ ಹಾಕಿದ್ದಾರೆಂದು ವೃದ್ದ ದಂಪತಿ ಕಣ್ಣೀರು ಹಾಕಿದ್ದಾರೆ. ವೃದ್ದ ದಂಪತಿಯ ಮಗಳಾದ ಚೌಡಮ್ಮ, ಅಳಿಯ ಲಕ್ಷ್ಮಣ್ ಮತ್ತು ಮೊಮ್ಮಗ ಆನಂದ ವಿಷ ಹಾಕಿರುವ ಆರೋಪಕ್ಕೆ ತುತ್ತಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನೀರಿರುವ, ತೆರೆದ ಬಾವಿಗೆ ಬಿದ್ದಿದ್ದ ಮೂಕ ಜೀವಿಯ ಯಶಸ್ವೀ ರಕ್ಷಣೆ ಮಾಡಿದ ಗ್ರಾಮಸ್ಥರು! ಕಾರವಾರ: ತೆರೆದ ಆಳವಾದ ಬಾವಿಗೆ ಬಿದ್ದ ಹಸುವನ್ನು ಸ್ಥಳೀಯರು ಭಾರೀ ಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಈ ಘಟನೆ ನಡೆದಿದೆ. ಗೋಕರ್ಣ ನಗರದ ಗಾಯತ್ರಿ ಓಣಿಯ ಖಾಸಗಿ ಜಾಗದಲ್ಲಿನ ನೀರು ಇರುವ, ತೆರೆದ ಬಾವಿಗೆ ಹಸು (cow) ಬಿದ್ದಿತ್ತು. ಬಾವಿಯಲ್ಲಿ ಬಿದ್ದು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಹಸುವನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಶ್ರೀ ಮಹಾಬಲೇಶ್ವರ ದೇವಾಲಯದ ಸಿಬ್ಬಂದಿ ಹಾಗೂ ಸ್ಥಳೀಯರು ಈ ಮೂಕಜೀವಿ ರಕ್ಷಣೆ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

ತೆರೆದ ಬಾವಿಯ ಸುತ್ತ ಗಿಡಗಂಟೆಗಳು ಬೆಳೆದಿದ್ದು, ಮೇವು ಅರಸುತ್ತ ಬಂದ ಸದರಿ ಹಸು ತಿಳಿಯದೆ ಬಾವಿಗೆ ಜಾರಿ ಬಿದ್ದಿದೆ. ತಕ್ಷಣವೇ ಹಸುವಿನ ರಕ್ಷಣೆಗೆ ಕಟಿಬದ್ಧರಾದ ದೇವಸ್ಥಾನದ ಸಿಬ್ಬಂದಿ ಮತ್ತ ಸುತ್ತಮುತ್ತಲ ಜನ ಭಾರೀ ಸಾಹಸ ಮಟ್ಟು ಹಸುವನ್ನು ರಕ್ಷಣೆ ಮಾಡಿದ್ದಾರೆ. ಮೂಕ ಪ್ರಾಣಿಯ ಜೀವ ರಕ್ಷಿಸಿ ಮಾನವೀಯತೆ ಮೆರೆದ ದೇವಾಲಯ ಸಿಬ್ಬಂದಿಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ, ಮುಂದೆ ಮತ್ಯಾವುದೇ ಅನಾಹುತ ಆಗದಂತೆ ಸುತ್ತ ಗಿಡಗಂಟೆ ಬೆಳೆದು ಪಾಳು ಬಿದ್ದಿರುವ ಬಾವಿಯನ್ನ ಮುಚ್ಚಲು ಜನ ಆಗ್ರಹಿಸಿದ್ದಾರೆ.

Also Read: ನಂದಿ ಬೆಟ್ಟಕ್ಕೆ ಹೋಗಲು ಇದು ಪ್ರಶಸ್ತ ಸಮಯ, ಆದ್ರೆ ಪರಿಸರ ಹಾಳಾಗುತ್ತೆ ಯಾರೂ ಬರೋದು ಬೇಡಾ ಅಂತಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ!

Also Read: ರೌಡಿಶೀಟರ್ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲು

Published On - 11:36 am, Sat, 29 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ