ಮಧ್ಯಾಹ್ನದ ಬಿಸಿಯೂಟಕ್ಕೆ ಚಿತ್ರಾನ್ನ ಸೇವಿಸಿದ್ದ 15 ಮಕ್ಕಳಿಗೆ ವಾಂತಿ, ಭೇದಿ: ಆಸ್ಪತ್ರೆಗೆ ದಾಖಲು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದರು. ಮಧ್ಯಾಹ್ನ ಊಟಕ್ಕೆ ಚಿತ್ರಾನ್ನ ಸೇವಿಸಿದ ನಂತರ ಕೆಲಹೊತ್ತಿನಲ್ಲಿ ವಾಂತಿ ಭೇದಿಯಿಂದ ವಿದ್ಯಾರ್ಥಿಗಳು ಬಳಲಿದ್ದಾರೆ. ಕೂಡಲೇ ಅಸ್ವಸ್ಥ ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕೊಪ್ಪಳ, ಮಾರ್ಚ್ 02: ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ 15 ಮಕ್ಕಳಿಗೆ (Childrens) ವಾಂತಿ, ಭೇದಿ ಉಂಟಾಗಿ ಅಸ್ವಸ್ಥರಾಗಿದ್ದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದರು. ಮಧ್ಯಾಹ್ನ ಊಟಕ್ಕೆ ಚಿತ್ರಾನ್ನ ಸೇವಿಸಿದ ನಂತರ ಕೆಲಹೊತ್ತಿನಲ್ಲಿ ವಾಂತಿ ಭೇದಿಯಿಂದ ವಿದ್ಯಾರ್ಥಿಗಳು ಬಳಲಿದ್ದಾರೆ. ಕೂಡಲೇ ಅಸ್ವಸ್ಥ ಮಕ್ಕಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪಿಹೆಚ್ಸಿಗೆ ಡಿಹೆಚ್ಒ ಡಾ.ಲಿಂಗರಾಜ್ ಭೇಟಿ ನೀಡಿ ಆರೋಗ್ಯ ವಿಚಾರಣೆ ಮಾಡಿದ್ದಾರೆ. ಸುದ್ದಿ ತಿಳಿದು ಪ್ರಾಥಮಿಕ ಆರೋಗ್ಯ ಪೋಷಕರು ಕೇಂದ್ರಕ್ಕೆ ಆಗಮಿಸಿದ್ದಾರೆ.
ವಸತಿ ಶಾಲೆಯ ಮಕ್ಕಳಿಗೆ ಸಿಗುತ್ತಿಲ್ಲ ಸರಿಯಾದ ಊಟ
ಯಾದಗಿರಿ: ಜಿಲ್ಲೆಯ ವಡಗೇರ ಪಟ್ಟಣದ ವಡಗೇರ ಪಟ್ಟಣದ ಕಸ್ತೂರಿ ಬಾ ಗಾಂಧಿ ವಸತಿ ಶಾಲೆಯ ಮಕ್ಕಳು ನಿತ್ಯ ಹೊಟ್ಟೆಗೆ ಊಟವಿಲ್ಲದೆ ಪರದಾಡುವಂತಾಗಿದೆ. ಏಕೆಂದರೆ ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಊಟ ಪೂರೈಕೆ ಆಗ್ತಾಯಿಲ್ಲ. ನಿತ್ಯ ಮೇನು ಪ್ರಕಾರ ಏನ್ ಊಟ ಕೊಡಬೇಕೋ ಅದೆ ಕೊಡ್ತಾಯಿಲ್ಲ. ವಸತಿ ಶಾಲೆಗೆ ಊಟ ಮತ್ತು ದಿನ ಬಳಕೆ ವಸ್ತುಗಳನ್ನ ಪೂರೈಕೆ ಮಾಡುವ ಗುತ್ತಿಗೆಯನ್ನ ಯಾದಗಿರಿ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಮೋದಿ ಒಡೆತನದ ಸಂಸ್ಥೆ ಪಡೆದಿದೆ.
ಇದನ್ನೂ ಓದಿ: ಚಿಕ್ಕಮಗಳೂರು; ಬಿರಿಯಾನಿ ಸೇವಿಸಿ 17 ಮಂದಿ ಅಸ್ವಸ್ಥ, ಆಸ್ಪತ್ರೆಗೆ ಶಾಸಕ ಭೇಟಿ
ಇಷ್ಟು ದಿನ ಸರಿಯಾಗಿ ಊಟ ಮತ್ತು ವಸ್ತುಗಳನ್ನ ಪೂರೈಕೆ ಮಾಡ್ತಾಯಿದ್ದ ಸಂಸ್ಥೆ ಕಳೆದ ಒಂದು ತಿಂಗಳಿನಿಂದ ಸರಬರಾಜು ಮಾಡ್ತಾಯಿಲ್ಲ. ಹೀಗಾಗಿ ಮಕ್ಕಳಿಗೆ ಸರಿಯಾಗಿ ಊಟ ಸಿಗ್ತಾಯಿಲ್ಲ. ಜೊತೆಗೆ ಸೋಪು, ತಲೆಗೆ ಹೆಚ್ಚುವ ಎಣ್ಣೆ ಸೇರಿದಂತೆ ನಾನಾ ವಸ್ತುಗಳನ್ನ ಪೂರೈಕೆ ಮಾಡೋದ್ದನ್ನ ನಿಲ್ಲಿಸಿದೆ. ಇದೆ ಕಾರಣಕ್ಕೆ ವಿದ್ಯಾರ್ಥಿನಿಯರು ಪರದಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ.
ಊಟ ಸರಿಯಾಗಿ ಸಿಗದ ಕಾರಣಕ್ಕೆ ಮಕ್ಕಳು ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ವಾರ್ಡನ್ಗೆ ಸಾಕಷ್ಟು ಬಾರಿ ಕೇಳಿದ್ದಾರೆ. ಅಷ್ಟೇ ಅಲ್ದೆ ಮಕ್ಕಳ ಪೋಷಕರು ಸಹ ಕೇಳಿದ್ದಾರೆ. ಆದರೆ ಮಕ್ಕಳ ಸಮಸ್ಯೆಗೆ ಸ್ಪಂದಿಸಬೇಕಾಗಿದ್ದ ಅಧಿಕಾರಿಗಳು ಉಲ್ಟಾ ಮಕ್ಕಳು ಹಾಗೂ ಪೋಷಕರ ಮೇಲೆ ದರ್ಪ ತೋರುವ ಕೆಲಸ ಮಾಡ್ತಾಯಿದ್ದಾರೆ. ಮೊದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿವೆ. ರಾತ್ರಿಯಲ್ಲಿ ಕುಳಿತು ಮಕ್ಕಳು ವಿದ್ಯಾಭ್ಯಾಸ ಮಾಡ್ತಾಯಿದ್ದಾರೆ. ಇಂತಹ ಸಂದರ್ಭದಲ್ಲೇ ಮಕ್ಕಳಿಗೆ ಸರಿಯಾಗಿ ಊಟ ಸಿಗ್ತಾಯಿಲ್ಲ.
ಇದನ್ನೂ ಓದಿ: ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ್ದ ಎಂಟು ಮಕ್ಕಳು ಅಸ್ವಸ್ಥ
ಊಟ ಸಿಗ್ತಾಯಿಲ್ಲ ಅಂತ ಮಕ್ಕಳು ಮನೆಗೂ ಸಹ ಹೋಗುವ ಹಾಗೆ ಇಲ್ಲ. ಯಾಕೆಂದ್ರೆ ಪರೀಕ್ಷೆ ಆರಂಭವಾಗಿದ್ದರಿಂದ ಪರೀಕ್ಷೆ ಮುಗಿಸಿಕೊಂಡೆ ಮನೆಗೆ ಹೋಗಬೇಕು ಅಂತ ಅಂದುಕೊಂಡಿದ್ದಾರೆ. ಆದರೆ ಇಲ್ಲಿ ನೋಡಿದರೆ ವಿದ್ಯಾರ್ಥಿನಿಯರಿಗೆ ಸರಿಯಾಗಿ ಊಟ ಸಿಗ್ತಾಯಿಲ್ಲ. ಸರ್ಕಾರ ಗುತ್ತಿಗೆ ಪಡೆದ ಏಜೆನ್ಸಿಗೆ ಸಮಯಕ್ಕೆ ಸರಿಯಾಗಿ ಹಣವನ್ನ ನೀಡ್ತಾಯಿದೆ. ಆದರೆ ಹಣ ಪಡದು ಏಜೆನ್ಸಿ ಊಟ ಮತ್ತು ದಿನ ಬಳಕೆ ವಸ್ತುಗಳನ್ನ ನೀಡುತ್ತಿಲ್ಲ.
ಕಸ್ತೂರಿ ಬಾ ಗಾಂಧಿ ಶಾಲೆಯ ಮಕ್ಕಳು ಕಳೆದ ಒಂದು ತಿಂಗಳಿನಿಂದ ಸರಿಯಾಗಿ ಊಟ ಮಾಡಿಲ್ಲ. ಒಂದು ರೀತಿ ಮಕ್ಕಳ ಸ್ಥಿತಿ ದೇವರು ಕೊಟ್ಟರೆ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Tue, 2 April 24