AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಲ್ಡೋಟಾ ವಿರುದ್ಧದ ಹೋರಾಟಕ್ಕೆ 1 ವರ್ಷ ಬೆನ್ನಲ್ಲೇ ಹೊಸ ವಿವಾದ: ಗವಿಶ್ರೀಗಳ ವಿರುದ್ಧದ ಹೇಳಿಕೆಗೆ ಭಕ್ತರು ಗರಂ

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ಒಂದು ವರ್ಷ ಪೂರೈಸಿದೆ. ಇತ್ತೀಚೆಗೆ ಹೋರಾಟಗಾರರು ಗವಿಮಠದ ಶ್ರೀಗಳ ಬೆಂಬಲ ಕೋರಿ, ವಿವಾದಾತ್ಮಕ ಹೇಳಿಕೆ ನೀಡಿದ ಪರಿಣಾಮ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಗಳ ವಿರುದ್ಧ ಹೋರಾಟ ಮಾಡುವ ಎಚ್ಚರಿಕೆ ಭಕ್ತರನ್ನು ಕೆರಳಿಸಿದೆ. ಹೋರಾಟದ ನಿಜ ಉದ್ದೇಶದಿಂದ ಗಮನ ಬೇರೆಡೆಗೆ ಹರಿಯುತ್ತಿದ್ದು, ಜಂಟಿ ಕ್ರಿಯಾ ಸಮಿತಿ ವಿಷಾದ ವ್ಯಕ್ತಪಡಿಸಿದೆ.

ಬಲ್ಡೋಟಾ ವಿರುದ್ಧದ ಹೋರಾಟಕ್ಕೆ 1 ವರ್ಷ ಬೆನ್ನಲ್ಲೇ ಹೊಸ ವಿವಾದ: ಗವಿಶ್ರೀಗಳ ವಿರುದ್ಧದ ಹೇಳಿಕೆಗೆ ಭಕ್ತರು ಗರಂ
ಬಲ್ಡೋಟಾ ಕಾರ್ಖಾನೆ
ಶಿವಕುಮಾರ್ ಪತ್ತಾರ್
| Edited By: |

Updated on: Nov 03, 2026 | 6:25 PM

Share

ಕೊಪ್ಪಳ, ನವೆಂಬರ್​ 03: ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಆರಂಭವಾಗಿರುವ ಧರಣಿಗೆ ಇದೀಗ ಒಂದು ವರ್ಷ. ಆದರೆ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯನ್ನ ವಿರೋಧಿಸುವ ಬರದಲ್ಲಿ, ಹೋರಾಟ ಹಾದಿ ತಪ್ಪುತ್ತಿದೆ. ಹೋರಾಟಗಾರರು ಗವಿಶ್ರೀಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ರೀತಿ ಹೋರಾಟದಲ್ಲಿ ಭಾಗವಹಿಸಿದ್ದವರು ಮಾತನಾಡಿರುವುದು ಸದ್ಯ ಗವಿಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಗವಿಶ್ರೀಗಳಿಗೆ ಹೋರಾಟಗಾರರು ಕ್ಷಮೆ ಕೇಳಬೇಕು ಎಂದು ಒತ್ತಾಯ ಕೇಳಿಬಂದಿದೆ.

ಏನಿದು ವಿವಾದ? 

ಅಕ್ಟೋಬರ್ 31ರಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ಸಮಿತಿಯ ಜಂಟಿ ಕ್ರಿಯಾ ಸಮಿತಿ ಇತ್ತೀಚೆಗೆ ಕೊಪ್ಪಳ ಬಂದ್‌ಗೆ ಕರೆ ನೀಡಿತ್ತು. ಬಂದ್ ಹಿನ್ನೆಲೆ ಬೃಹತ್ ಬಹಿರಂಗ ಸಮಾವೇಶವನ್ನೂ ಆಯೋಜಿಸಲಾಗಿತ್ತು. ಆದರೆ ಕಾರ್ಖಾನೆ ನಿರ್ಮಾಣ ವಿರೋಧಿ ಹೋರಾಟದ ವೇದಿಕೆಯಲ್ಲಿ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳ ಕುರಿತು ಹಗುರವಾಗಿ ಮಾತಾಡಿದ್ದಾರೆ.

ಇದನ್ನೂ ಓದಿ: ಬಲ್ಡೋಟಾ ಕಾರ್ಖಾನೆ ಕೆರೆ ವಿವಾದ: ರಾತ್ರೋರಾತ್ರಿ ಗೇಟ್ ಮರುನಿರ್ಮಾಣ; ಮತ್ತೆ ಸಿಡಿದೆದ್ದ ರೈತರು

ಸಮಾವೇಶದಲ್ಲಿ ಭಾಗಿಯಾಗಿದ್ದ, ಸಾಹಿತಿ ಬಸವರಾಜ ಸಬರದ, ಜೇವರ್ಗಿಯ ಸಿದ್ದಬಸವ ಕಬೀರ ಸ್ವಾಮೀಜಿ ಹಾಗೂ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ, ‘ಬಲ್ಡೋಟಾ ವಿರುದ್ಧದ ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಗಳು ಬೆಂಬಲ ನೀಡಬೇಕು, ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು. ಹೋರಾಟಕ್ಕೆ ಬರದಿದ್ದರೆ ಸ್ವಾಮೀಜಿಗಳ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ’ ಎಂಬ ಎಚ್ಚರಿಕೆಯ ಮಾತುಗಳು ಕೂಡ ಕೇಳಿಬಂದಿದ್ದವು. ಈ ಮಾತುಗಳು ಸದ್ಯ ಗವಿಮಠದ ಭಕ್ತರನ್ನ ಕೆರಳಿಸಿದೆ‌.

ಕ್ಷಮೆ ಕೇಳುವಂತೆ ಗವಿಮಠದ ಭಕ್ತರು ಎಚ್ಚರಿಕೆ 

2025ರಲ್ಲಿ ನಡೆದ ಬೃಹತ್ ಹೋರಾಟಕ್ಕೆ ಚಾಲನೆ ನೀಡಿದ್ದು ಗವಿಮಠದ ಅಭಿನವ ಶ್ರೀಗಳು. ಕಾರ್ಖಾನೆ ವಿಸ್ತರಣೆಯನ್ನ ಕೈ ಬಿಡವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಇದರ ಜವಾಬ್ದಾರಿಯನ್ನ ಕೊಪ್ಪಳದ ಜನಪ್ರತಿನಿಧಿಗಳಿಗೆ ವಹಿಸಿದ್ದರು. ಇದಾದ ಬಳಿ ಎರಡು ಬಾರಿ ದೊಡ್ಡ ಹೋರಾಟ ನಡೆದಾಗ, ಶ್ರಿಗಳು ನೈತಿಕ ಬೆಂಬಲ ನೀಡಿದ್ದರು. ಆದರೆ ಶ್ರೀಗಳ ವಿರುದ್ಧ ಹೋರಾಟದ ವೇದಿಯಲ್ಲಿ ಈ ರೀತಿ ಮಾತನಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಗವಿಮಠದ ಭಕ್ತರು ಎಚ್ಚರಿಕೆ ನೀಡಿದ್ದಾರೆ.

LIVE TV

ವಿಷಾದ ವ್ಯಕ್ತಪಡಿಸಿದ ಜಂಟಿ ಕ್ರಿಯಾ ಸಮಿತಿ

ಗವಿಮಠದ ಶ್ರೀಗಳು ಮೊದಲಿಂದಲೂ ಬಲ್ಡೋಟಾ ವಿಸ್ತರಣೆಯನ್ನ ವಿರೋಧಿಸುತ್ತಲೇ ಬಂದವರು. ಹೋರಾಟಕ್ಕೆ ಬೇಕಾದ ವ್ಯವಸ್ಥೆಯನ್ನ ಗವಿಶ್ರೀಗಳು ಇಂದಿಗೂ ನೀಡುತ್ತಾ ಬಂದಿದ್ದಾರೆ. ಆದರೆ ಹೋರಾಟಕ್ಕೆ ಬಂದವರು ಶ್ರೀ ವಿರುದ್ಧ ಮಾತನಾಡಿದ್ದಾರೆ. ಆ ಮೂಲಕ ಹೋರಾಟದ ಹಾದಿ ಶ್ರೀಗಳ ಮಠದ ಕಡೆ ವಾಲುತ್ತಿದೆ ಎನ್ನುವುದು ತಿಳಿಯುತ್ತಿದ್ದಂತೆ ಭಕ್ತರು ಆಕ್ರೋಶಗೊಂಡಿದ್ದಾರೆ. ಇತ್ತ ಭಕ್ತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮತ್ತೊಂದೆಡೆ ಜಂಟಿ ಕ್ರಿಯಾ ಸಮಿತಿ ಮುಖಂಡರು ಅಲರ್ಟ್ ಆಗಿದ್ದಾರೆ. ತುರ್ತು ಸಭೆ ನಡೆಸಿ ಸಮಾವೇಶದಲ್ಲಿ ಭಾಷಣಕಾರರು ಮಾತನಾಡಿರುವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಅಥವಾ ಅವರ ಭಕ್ತರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ನಿರಂತರ ಹೋರಾಟದ ಫಲ: ಕೊಪ್ಪಳದಲ್ಲಿ ಮತ್ತೆ 8 ಕಾರ್ಖಾನೆ ಕ್ಲೋಸ್

ಬಲ್ಡೋಟಾ ಕಾರ್ಖಾನೆ ನಿರ್ಮಾಣ ವಿರೋಧಿ ಹೋರಾಟ ಇದೀಗ ಗವಿಮಠದ ಶ್ರೀಗಳ ಕುರಿತ ಹೇಳಿಕೆಗಳಿಂದ ಹೊಸ ವಿವಾದಕ್ಕೆ ಕಾರಣವಾಗಿದೆ. ಹೋರಾಟದ ಉದ್ದೇಶ ಕಾರ್ಖಾನೆ ನಿರ್ಮಾಣ ವಿರೋಧವೋ ಅಥವಾ ಶ್ರೀಗಳನ್ನು ಹೋರಾಟಕ್ಕೆ ಕರೆತರುವುದೋ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ. ಜಂಟಿ ಕ್ರಿಯಾ ಸಮಿತಿ ವಿಷಾದ ವ್ಯಕ್ತಪಡಿಸಿದ್ದರೂ ಭಕ್ತರ ಆಕ್ರೋಶ ಮಾತ್ರ ತಣ್ಣಗಾಗಿಲ್ಲ. ಈ ವಿವಾದ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಶಿವಕುಮಾರ್ ಪತ್ತಾರ್
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಕೋಲಾರದಲ್ಲಿ ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ’ ಮಹಾ ಪಾದಯಾತ್ರೆ
ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!
ಗೆಳತಿ ಜೊತೆ ಬಂದು ಹಾಸನಾಂಬೆ ದರ್ಶನ ಪಡೆದ ಮುಸ್ಲಿಂ ಮಹಿಳೆ!