KV Tirumalesh Death: ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆವಿ ತಿರುಮಲೇಶ್ ವಿಧಿವಶ

ಭಾರತದ ಖ್ಯಾತ ಕವಿ, ವಿಮರ್ಶಕ ಕೆವಿ ತಿರುಮಲೇಶ್ ವಿಧಿವಶರಾಗಿದ್ದಾರೆ. ಕವಿ-ಕತೆಗಾರ ಕೆ.ವಿ. ತಿರುಮಲೇಶ್ ಅವರು ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರು. ಅಕ್ಷಯ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತಿರುಮಲೇಶ್ ಅವರು ವಠಾರ ಸಂಕಲನದ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.

KV Tirumalesh Death: ಖ್ಯಾತ ಕವಿ, ಕತೆಗಾರ, ವಿಮರ್ಶಕ ಕೆವಿ ತಿರುಮಲೇಶ್ ವಿಧಿವಶ
ಕೆವಿ ತಿರುಮಲೇಶ್Image Credit source: Deccan Herald
Follow us
|

Updated on:Jan 30, 2023 | 9:20 AM

ಭಾರತದ ಖ್ಯಾತ ಕವಿ, ವಿಮರ್ಶಕ ಕೆವಿ ತಿರುಮಲೇಶ್ ವಿಧಿವಶರಾಗಿದ್ದಾರೆ. ಕವಿ-ಕತೆಗಾರ ಕೆ.ವಿ. ತಿರುಮಲೇಶ್ ಅವರು ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರು. ಅಕ್ಷಯ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತಿರುಮಲೇಶ್ ಅವರು ವಠಾರ ಸಂಕಲನದ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.

ನಂತರ ಒಂಬತ್ತು ಕವನ ಸಂಕಲನ ಪ್ರಕಟಿಸಿದ್ದಾರೆ. ತಿರುಮಲೇಶ್ ಅವರ ಆಯ್ದ ಕವಿತೆಗಳನ್ನು ಈ ಸಂಕಲನ ಒಳಗೊಂಡಿದೆ. ಕಾವ್ಯ, ಕತೆ, ಕಾದಂಬರಿ ಹೀಗೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೆಲಸ ಮಾಡಿರುವ ಕೆ.ವಿ. ತಿರುಮಲೇಶ್ ಸಾಹಿತ್ಯ ವಿಮರ್ಶೆ ಮತ್ತು ಭಾಷಾ ವಿಜ್ಞಾನ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. ತಮ್ಮ ಬಾಲ್ಯವನ್ನು (ಜ. 1940) ಕಾಸರಗೋಡಿನ ಕಾರಡ್ಕದಲ್ಲಿ ಮಲೆಯಾಳಿಗಳ ನಡುವೆ ಕಳೆದ ತಿರುಮಲೇಶ್ ಅವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕರ್ನಾಟಕದಿಂದ ಹೊರಗಡೆಯೇ ಇದ್ದು ಕಳೆದಿದ್ದಾರೆ.

ಹೈದರಾಬಾದ್ ನ ಸೆಂಟ್ರಲ್ ಇನ್ಸ್ ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್’ ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ‘ಮುಖವಾಡಗಳು’, ‘ವಠಾರ’, ‘ಮಹಾಪ್ರಸ್ಥಾನ’, ಮುಖಾಮುಖಿ’, ‘ಅವಧ’, ‘ಪಾಪಿಯೂ’ ಕವನ ಸಂಕಲನಗಳು. ತಿರುಮಲೇಶ್ ಅವರ ತಮ್ಮ ಕಾವ್ಯಕ್ಕೆ ಹಲವು ಪರಂಪರೆಗಳಿಂದ ತಾತ್ವಿಕತೆ, ಅನುಭವ ಮತ್ತು ಪ್ರತಿಮೆಗಳನ್ನು ತಂದಿದ್ದಾರೆ. ಶಬ್ದಗಳನ್ನು ಸಾಧ್ಯವಾದಷ್ಟೂ ನಿರಾಭರಣಗೊಳಿಸಿ ಬಳಲೆತ್ನಿಸಿದ ಎ.ಕೆ. ರಾಮಾನುಜನ್ ತರಹದ ಕನ್ನಡ ಕವಿಗಳ ಜೊತೆಗೆ ತಿರುಮಲೇಶ್ ಕೂಡ ಇದ್ದರು.

ನಾಯಕ ಮತ್ತು ಇತರರು, ಜಾಗುವ ಮತ್ತು ಇತರರು, ಕೆಲವು ಕಥಾನಕಗಳು, ಕಳ್ಳಿಗಿಡದ ಹೂ ಕಥಾಸಂಕಲನಗಳು. ಆರೋಪ, ಅನೇಕ, ತರಂಗಾಂತರ ಕಾದಂಬರಿಗಳು. ವ್ಯಕ್ತಿ ಮತ್ತು ಪರಂಪರೆಗಳು, ಸಮ್ಮುಖ, ನಮ್ಮ ಕನ್ನಡ, ಅಸ್ತಿತ್ವವಾದ, ವಿಮರ್ಶಾ ಬರಹಗಳು. ತಿರುಮಲೇಶ್ ಅವರ ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಮಕ್ಕಳ ಸಾಹಿತ್ಯ ರಚನೆ ಮಾಡಿರುವ ತಿರುಮಲೇಶ್ ಅವರು ಎಜ್ರಾ ಪೌಂಡ್, ಚೀನಿ ಕವಿತೆಗಳನ್ನು ಅನುವಾದಿಸಿದ್ದಾರೆ. ತಿರುಮಲೇಶ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿದೆ.

ಕೆವಿ ತಿರುಮಲೇಶ್ ಅವರು ಆರು ಕಥಾ ಸಂಕಲನಗಳು, ನಾಲ್ಕು ಕಿರು ಕಾದಂಬರಿಗಳು, ಎರಡು ನಾಟಕಗಳು, ಭಾವಗೀತೆ ಹಾಗೂ ಮಕ್ಕಳ ಕವಿತೆಗಳ ತಲಾ ಒಂದು ಸಂಕಲನಗಳು ಪ್ರಕಟವಾಗಿವೆ.

ಕಥೆಗಾರನಾಗಿ ತಮ್ಮ ವೈನೋದಿತ ಶೈಲಿಯಲ್ಲಿ ಗಂಭೀರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಮಸ್ಯೆಗಳ ಸಂಕೀರ್ಣತೆಯನ್ನು ಅನಾವರಣಗೊಳಿಸುವ ಪರಿ ವಿಶಿಷ್ಟವಾಗಿವೆ.

ವಿಶ್ವದ ಅಗ್ರಮಾನ್ಯ ಚಿಂತನೆ, ಜ್ಞಾನ, ಅನುಭವ, ದರ್ಶನಗಳನ್ನು ನಮ್ಮ ಕನ್ನಡ ಭಾಷೆಯೂ ತನ್ನದಾಗಿಸಿಕೊಳ್ಳಬೇಕು ಎಂಬ ಧೋರಣೆಯಿಂದ ತಿರುಮಲೇಶ ಅವರು ವಿವಿಧ ದೇಶ ಭಾಷೆಗಳ ಎಂಟು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ.

ಕೆವಿ ತಿರುಮಲೇಶ್ ಕವನಸಂಕಲನಗಳು ಅಕ್ಷಯ ಕಾವ್ಯ. ಅಭಿನವ ಪ್ರಕಾಶನ, ಬೆಂಗಳೂರು, 2010 ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ, ಅಭಿನವ ಪ್ರಕಾಶನ, ಬೆಂಗಳೂರು, 2011 ಅವ್ಯಯ ಕಾವ್ಯ . ಅಭಿನವ ಪ್ರಕಾಶನ, ಬೆಂಗಳೂರು, 2019 ಅರಬ್ಬಿ. ಅಭಿನವ, ಬೆಂಗಳೂರು. 2015 ಅವಧ. ಅಕ್ಷರ ಪ್ರಕಾಶನ, 1986 ಏನೇನ್ ತುಂಬಿ. ಅಭಿನವ, ಬೆಂಗಳೂರು, 2014 ಪಾಪಿಯೂ. ಅಕ್ಷರ ಪ್ರಕಾಶನ, 1990 ಮಹಾಪ್ರಸ್ಥಾನ. ಅಕ್ಷರ ಪ್ರಕಾಶನ, 1971 ಮುಖವಾಡಗಳು. ಅಕ್ಷರ ಪ್ರಕಾಶನ, ಸಾಗರ, 1986 ಮುಖಾಮುಖಿ. ನೆಲಮನೆ ಪ್ರಕಾಶನ, ಮೈಸೂರು, 1978 ವಠಾರ. ನವ್ಯ ಸಾಹಿತ್ಯ ಸಂಘ, ಕಾಸರಗೋಡು, 1969

ಕಥಾಸಂಕಲನ ನಾಯಕ ಮತ್ತು ಇತರರು ಕೆಲವು ಕಥಾನಕಗಳು ಕಳ್ಳಿ ಗಿಡದ ಹೂ ಅಪರೂಪದ ಕತೆಗಳು ಕಾದಂಬರಿ ಆರೋಪ ಮುಸುಗು ಅನೇಕ

ವಿಮರ್ಶಾ ಕೃತಿಗಳು ಬೇಂದ್ರೆಯವರ ಕಾವ್ಯಶೈಲಿ. ಅಸ್ತಿತ್ವವಾದ – 1989 / 2016 ಸಮ್ಮುಖ. ಉಲ್ಲೇಖ. ಕಾವ್ಯಕಾರಣ (ಆಧುನಿಕ ಕನ್ನಡ ಕಾವ್ಯದ ಒಂದು ಪಾರ್ಶ್ವನೋಟ)

ಭಾಷಾ ವಿಜ್ಞಾನ ಲೇಖನ ಸಂಗ್ರಹಗಳು ನಮ್ಮ ಕನ್ನಡ ಸಮೃದ್ಧ ಕನ್ನಡ ಇನ್ನಷ್ಟು ಕನ್ನಡ

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:08 am, Mon, 30 January 23