ಮೈಸೂರಿನಲ್ಲೂ ಮನೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಶಾಲಾ ಸುತ್ತಾಮುತ್ತ ಗಗನಕ್ಕೇರಿದ ಬಾಡಿಗೆ, ಕಾರಣ ಇಲ್ಲಿದೆ

ಶಾಲೆಗೆ ಸಮೀಪವಿರುವಲ್ಲಿ ಮನೆ ಬಾಡಿಗೆಗೆ ಪೋಷಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಶಾಲಾ ವಲಯಗಳ ಸುತ್ತಲಿನ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಮೈಸೂರಿನಲ್ಲೂ ಮನೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು, ಶಾಲಾ ಸುತ್ತಾಮುತ್ತ ಗಗನಕ್ಕೇರಿದ ಬಾಡಿಗೆ, ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on:Apr 26, 2023 | 10:51 AM

ಮೈಸೂರು: ಹೊಸ ಶೈಕ್ಷಣಿಕ ವರ್ಷ ಸಮೀಪಿಸುತ್ತಿದ್ದಂತೆ ನಗರದ ಶಾಲಾ ವಲಯಗಳ(School Zones) ಸುತ್ತಮುತ್ತ ಮನೆ ಬಾಡಿಗೆ(House Rentals) ಗಗನಕ್ಕೇರಿದೆ. ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಸಾರಿಗೆ ಖರ್ಚು, ಮಕ್ಕಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳ ಸುತ್ತಮುತ್ತಲ ಏರಿಯಾ ಅಥವಾ ಶಾಲೆಗೆ ಸಮೀಪವಿರುವಲ್ಲಿ ಮನೆ ಬಾಡಿಗೆಗೆ ಪೋಷಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಶಾಲಾ ವಲಯಗಳ ಸುತ್ತಲಿನ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಪ್ರಸಿದ್ಧ ಶಾಲೆಗಳ ಸಮೀಪದಲ್ಲಿ ಬಾಡಿಗೆ ಮನೆ ಮಾಡುವುದು ಕೂಡ ಕಷ್ಟದ ಸಂಗತಿಯಾಗಿದೆ.

ನಗರದ ಇತರೆ ವಸತಿ ಪ್ರದೇಶಗಳನ್ನು ಹೋಲಿಕೆ ಮಾಡಿದರೆ ಶಾಲೆಗಳು ಇರುವ ಸುತ್ತಮುತ್ತಲಿನ ಬಾಡಿಗೆ ಮನೆಗಳ ಬಾಡಿಗೆ ಹೆಚ್ಚಿದೆ. ಶಾಲೆಗಳಿಂದ ವಿಪರೀತ ಸಾರಿಗೆ ಶುಲ್ಕವನ್ನು ತಪ್ಪಿಸಲು ಪೋಷಕರು ಶಾಲೆಯ ಸಮೀಪವೇ ಮನೆ ಹುಡುಕಲು ನಿಂತರೆ. ಇತ್ತ ಮನೆ ಮಲೀಕರು ಹೆಚ್ಚಿನ ಬಾಡಿಗೆ ಇಟ್ಟು ಹಣ ಮಾಡಲು ನಿಂತಿದ್ದಾರೆ. ಇದರಿಂದ ಪೋಷಕರಿಗೆ ದೊಡ್ಡ ತಲೆ ನೋವಾಗಿದೆ. ಶಾಲೆಗಳ ಸುತ್ತ ಉಂಟಾಗುವ ಟ್ರಾಫಿಕ್ ದಟ್ಟಣೆಯಿಂದ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಪ್ರಯಾಣದಲ್ಲೇ ಕಳೆಯುವಂತಾಗಿದೆ. ಇದರಿಂದ ಮಕ್ಕಳು ಓದಲು ಹಾಗೂ ಇತರೆ ಚಟುವಟಿಕೆಗಳಿಗೆ ಸಮಯ ಕೊಡಲು ಆಗುತ್ತಿಲ್ಲ. ಮಕ್ಕಳಿಗೆ ಸುಸ್ತು ಹೆಚ್ಚಾಗುತ್ತಿದ್ದು ಅವರ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಶಾಲೆಯ ಸಮೀಪವೇ ಮನೆ ಮಾಡಿದರೆ. ಸಮಯ ಉಳಿಯುತ್ತೆ ಎಂದು ಪೋಷಕರೊಬ್ಬರು ತಿಳಿಸಿದರು.

ಇದನ್ನೂ ಓದಿ: ಐಪಿಎಲ್​ನಲ್ಲೂ ಸದ್ದು ಮಾಡಿದ ಬಾಡಿಗೆ ಮನೆ ಗೋಳು: ಇಂದಿರಾನಗರದಲ್ಲಿ ಮನೆ ಬೇಕೆಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪೋಸ್ಟರ್​ ಪ್ರದರ್ಶನ

ಇದರಿಂದ ಶಾಲೆಯ ಸುತ್ತಮುತ್ತ ಮನೆಗಳಿಗೆ ಬೇಡಿಕೆ ಬಂದಿದೆ. ರಿಯಲ್ ಎಸ್ಟೇಟ್ ಸಲಹೆಗಾರರ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ, ವಿಶೇಷವಾಗಿ ನಗರದ ಹೊರವಲಯದಲ್ಲಿರುವ ಪ್ರೀಮಿಯರ್ ಶಾಲೆಗಳ ಬಾಡಿಗೆಯು 10% ರಿಂದ 20% ರಷ್ಟು ಹೆಚ್ಚಾಗಿದೆ. ನಗರದ ವರ್ತುಲ ರಸ್ತೆಯೊಳಗೆ 3-4 ಕಿಲೋಮೀಟರ್ ದೂರವಿದ್ದರೂ, ಶಾಲೆಗಳಿಗೆ ಸಮೀಪದಲ್ಲಿರುವುದರಿಂದ ಎರಡು ಬೆಡ್ ರೂಂಗಳ ಮನೆ ಬಾಡಿಗೆಗೆ ತಿಂಗಳಿಗೆ 11,000 ರೂ.13,000 ಬಾಡಿಗೆ ಇದೆ. ಒಂದು ವರ್ಷದ ಹಿಂದೆ, ಬೇಡಿಕೆ ಹೆಚ್ಚಿಲ್ಲದ ವೇಳೆ ಇದೇ ಮನೆಗಳಿಗೆ ಮಾಸಿಕ ಬಾಡಿಗೆ Rs10,000ಕ್ಕಿಂತ ಕಡಿಮೆ ಇತ್ತು. ಇದೀಗ ಮತ್ತೆ ಬೇಡಿಕೆ ಹೆಚ್ಚಾಗಿದ್ದು ಶಾಲಾ ವಲಯಗಳಲ್ಲಿ ಇರುವ ಮನೆಗಳ ಬಾಡಿಗೆ ಗಗನಕ್ಕೇರಿದೆ. ಸಿಬಿಎಸ್‌ಇ/ಐಸಿಎಸ್‌ಇ ಶಾಲೆಗಳಿಗೆ ಮೇ ಮೂರನೇ ವಾರದಲ್ಲಿ ತರಗತಿಗಳು ಪ್ರಾರಂಭವಾಗುವುದರಿಂದ ಅನೇಕರು ಮೇ ಮೊದಲ ವಾರದಲ್ಲಿ ಮನೆಗಳನ್ನು ಶಿಫ್ಟ್ ಮಾಡುತ್ತಿದ್ದಾರೆ.

ಅನೇಕ ಬಜೆಟ್ ಶಾಲೆಗಳಲ್ಲಿ, ಸಾರಿಗೆ ಶುಲ್ಕವು ಬೋಧನಾ ಶುಲ್ಕಕ್ಕಿಂತ ಹೆಚ್ಚಾಗಿರುತ್ತದೆ. ಹೀಗಾಗಿ ಶಾಲೆಗಳ ಸಮೀಪವೇ ಮನೆ ಬಾಡಿಗೆಗೆ ಮುಂದಾಗಿದ್ದಾರೆ. ಶಾಲಾ ಶುಲ್ಕ ವರ್ಷಕ್ಕೆ 30,000 ರೂ.ಗಳಾಗಿದ್ದರೆ, ಸಾರಿಗೆ ಶುಲ್ಕ ಸುಮಾರು 35,000 ರೂ. ಶಾಲಾ ಬಸ್‌ಗಳು ಒಂದೇ ದಿಕ್ಕಿನಲ್ಲಿ ಚಲಿಸಲು ಸುಮಾರು 45 ನಿಮಿಷಗಳನ್ನು ತೆಗೆದುಕೊಳ್ಳುವುದರಿಂದ, ಶಾಲೆಯ ಹತ್ತಿರ ಹೋಗುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ ಎಂದು ಪೋಷಕರೊಬ್ಬರು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:50 am, Wed, 26 April 23