ಸಿದ್ದರಾಮಯ್ಯ ಮಹಾ ಸುಳ್ಳ, ಸುಳ್ಳೇ ಅವರ ಮನೆ ದೇವರು: ಸಚಿವ ಶ್ರೀರಾಮುಲು ವಾಗ್ದಾಳಿ
ರಾಜ್ಯದ ಹಿಂದುಳಿದ ಸಮುದಾಯದವರು ರೋಸಿ ಹೋಗಿದ್ದಾರೆ. ಎಸ್ಸಿ, ಎಸ್ಟಿ ಜನಾಂಗ ಸಿದ್ದರಾಮಯ್ಯರನ್ನ ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನ ತಿರಸ್ಕರಿಸುತ್ತಾರೆ.
ರಾಯಚೂರು: ಸಿದ್ದರಾಮಯ್ಯ ಮಹಾ ಸುಳ್ಳ. ಸುಳ್ಳೇ ಅವರ ಮನೆ ದೇವರು ಎಂದು ಸಿದ್ದರಾಮಯ್ಯ (Siddaramaiah) ವಿರುದ್ಧ ಸಾರಿಗೆ ಸಚಿವ ಶ್ರೀರಾಮುಲು ವಾಗ್ದಾಳಿ ಮಾಡಿದರು. ಸಿದ್ದರಾಮಯ್ಯ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯದ ಹಿಂದುಳಿದ ಸಮುದಾಯದವರು ರೋಸಿ ಹೋಗಿದ್ದಾರೆ. ಎಸ್ಸಿ, ಎಸ್ಟಿ ಜನಾಂಗ ಸಿದ್ದರಾಮಯ್ಯರನ್ನ ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನ ತಿರಸ್ಕರಿಸುತ್ತಾರೆ ಎಂದು ಹೇಳಿದರು. ಪಂಚ ವಾರ್ಷಿಕ ಯೋಜನೆ ಮಾಡಿಕೊಳ್ತಿದ್ರು. ಅಹಿಂದ, ಹಿಂದುಳಿದ ನಾಯಕ ಅನ್ನುವಂಥದ್ದು. ಕೇವಲ ಚುನಾವಣೆ ಸಮಯದಲ್ಲಿ ಯಾಕೆ ನಿನಗೆ ಬರ್ತಾವೆ? ಸಿದ್ದರಾಮಯ್ಯ ಮನಸ್ಸು ಮಾಡಿದರೆ ಆಯೋಗ ರಚನೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಬಿಜೆಪಿ ಮೀಸಲಾತಿ ಕೊಟ್ಟಂತ ಪಾರ್ಟಿ ಸಿದ್ದರಾಮಯ್ಯಗೆ ವಿನಂತಿ ಮಾಡುತ್ತೇನೆ. ನೀವು ಅಹಿಂದ, ಹಿಂದುಳಿದ ನಾಯಕ ಅನ್ನೋದನ್ನ ವಿರೋಧಿಸುತ್ತೇನೆ. ರಾಹುಲ್ ಗಾಂಧಿ, ಡಿ.ಕೆ ಶಿವಕುಮಾರ, ಸಿದ್ಧರಾಮಯ್ಯರನ್ನ ಕೈ ಹಿಡಿದು ಓಡಿಸಿದ್ರು. ಡಿಕೆಶಿ, ಸಿದ್ದರಾಮಯ್ಯ ಇಬ್ಬರು ಗೊಲ್ಲ ಸಮುದಾಯದವರಿಗೆ ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.
ರಾಜಕೀಯನೇ ಬೇರೆ ಸ್ನೇಹನೇ ಬೇರೆ: ಶ್ರೀರಾಮುಲು
ನಮ್ಮ ಸರ್ಕಾರ ಬಂದ ಮೇಲೆ 24 ಗಂಟೆಯಲ್ಲಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡೋದಾಗಿ ಹೇಳಿದ್ದೆ. ಆದರೆ ಕೆಲ ಕಾನೂನಾತ್ಮ ತೊಡಕುಗಳಿಂದ ಅದು ಆಗಿಲ್ಲ. ಈಗ ನಮ್ಮ ಸರ್ಕಾರದ ಸಿಎಂ ಅವರು ಮೀಸಲಾತಿ ಘೋಷಣೆ ಮಾಡಿದ್ದಾರೆ. ಮೀಸಲಾತಿ ಸಿಕ್ಕಿದ್ರೆ ನಮ್ಮೆಲ್ಲರ ಆಶೀರ್ವಾದದಿಂದ ಸಿಕ್ಕಿದೆ. 57 ವರ್ಷ ನಿವೇ ಆಳ್ವಿಕೆ ಮಾಡಿದ್ರಲ್ಲ, ಯಾಕೆ ಮೀಸಲಾತಿ ಕೊಡಲು ಆಗಿಲ್ಲ ಎಂದ ರಾಮುಲು. ಬಿಜೆಪಿಯಿಂದ ನನಗೆ ಟಾರ್ಚರ್ ಆಗ್ತಾಯಿದೆ ಎನ್ನುವ ಜನಾರ್ಧನ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ರೆಡ್ಡಿ ನಮ್ಮ ಆತ್ಮೀಯ ಸ್ನೇಹಿತರು ರಾಜಕೀಯನೆ ಬೇರೆ ಸ್ನೇಹನೇ ಬೇರೆ. ರೆಡ್ಡಿ ಅವರು ಏನ್ ಹೇಳಿದ್ದಾರೆ ಎನ್ನುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಪ್ರವಾಸದಲ್ಲಿ ಇರೋ ಕಾರಣಕ್ಕೆ ಅವರ ಹೇಳಿರುವ ಬಗ್ಗೆ ಮಾಹಿತಿ ಇಲ್ಲ. ಅವರು ಏನ್ ಹೇಳಿದ್ದಾರೆ ಎನ್ನುವ ಬಗ್ಗೆ ತಿಳಿದುಕೊಂಡು ಮಾತಾಡುತ್ತೆನೆ ಎಂದರು.
ಸಿದ್ದರಾಮಯ್ಯಗೆ ರಾಮುಲು ಅವರ ಮೇಲೆ ಲವ್ ಆಗಿದೆ: ಶಾಸಕ ರಾಜುಗೌಡ
ಇನ್ನು ಸಿದ್ದರಾಮಯ್ಯಗೆ ರಾಮುಲು ಟಾರ್ಗೆಟ್ ವಿಚಾರವಾಗಿ ಶಾಸಕ ರಾಜುಗೌಡ ಮಾತನಾಡಿದ್ದು, ಸಿದ್ದರಾಮಯ್ಯಗೆ ರಾಮುಲು ಅವರ ಮೇಲೆ ಲವ್ ಆಗಿದೆ. ಅವರ ಮೇಲೆ ರಾಮುಲು ಅವರಿಗೆ ಲವ್ ಆಗಿದೆ. ಅವರಿಬ್ಬರ ಮಧ್ಯೆ ನಾವು ಅಡ್ಡಬರಲ್ಲ ಎಂದರು. ಬಿಜೆಪಿ ಅವರಿಂದ ಮೋಸ ಅಂತ ಜನಾರ್ಧನ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಮುಲು ಅವರು ನಾಳೆ ಜನಾರ್ಧನ ರೆಡ್ಡಿ ಅವರನ್ನ ಭೇಟಿಯಾಗಲಿದ್ದಾರೆ. ಅವರಿಬ್ಬರೂ ಆತ್ಮೀಯರು. ಕಾರ್ನಲ್ಲಿ ಅದೇ ಡಿಸ್ಕಸ್ ಮಾಡಿದ್ದೇವೆ. ಎಲ್ಲವೂ ಸುಖಾಂತ್ಯಗೊಳ್ಳತ್ತೆ. ಅವರು 2008 ರಿಂದ ಪ್ರಮುಖ ಕೆಲಸ ಮಾಡಿದರು.
ಡಿಸಿಎಂಗಿಂತ ಮೀಸಲಾತಿ ದೊಡ್ಡದು
ಕೆಲ ಇನ್ಸಿಡೆಂಟ್ನಿಂದ ರಾಜಕೀಯದಿಂದ ದೂರವಿದ್ದಾರೆ. ಯಾವ ಪಕ್ಷದಿಂದಕೂ ಸಕ್ರೀಯವಾಗಿ ಗುರುತಿಸಿಕೊಂಡಿಲ್ಲ. ರಾಮುಲು ಅವರು, ಜನಾರ್ಧನ ರೆಡ್ಡಿ ಅವರೊಟ್ಟಿಗೆ ಮಾತನಾಡುತ್ತಾರೆ ಎಂದು ಹೇಳಿದರು. ನಮಗೆ ಮೀಸಲಾತಿ ಏರಿಕೆಯಾಗಿದೆ. ಡಿಸಿಎಂಗಿಂತ ಮೀಸಲಾತಿ ದೊಡ್ಡದು. ಡಿಸಿಎಂ ಕೊಟ್ರೆ ರಾಮುಲು ಅವರೊಬ್ಬರೇ ಆಗ್ತಾರೆ. ಆದರೆ, ನಮ್ಮ ಸಮುದಾಯಕ್ಕೆ ಮೀಸಲಾತಿ ದೊಡ್ಡ ವಿಚಾರ. ಮರೆಯಲಾರದ ಕೊಡುಗೆ ನಮಗೆ ಸಿಕ್ಕಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.