ಒಂದು ಗಂಟೆ ಓದಿದರೆ ‘ಒಂದು ಗಿಫ್ಟ್’, ಹೀಗೊಂದು ಚಿನ್ನರ ಲೈಬ್ರರಿ ಎಲ್ಲಿದೆ ಗೊತ್ತಾ?

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಮಿನಿ ಲೈಬ್ರರಿಯೊಂದನ್ನು ರಾಯಚೂರು ನಗರದ ಗಾಜಗಾರಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. ರಂಗರಾವ್ ದೇಸಾಯಿ ಎಂಬವರು ಈ ಗ್ರಂಥಾಲಯವನ್ನು ಆರಂಭಿಸಿದ್ದಾರೆ.

ಒಂದು ಗಂಟೆ ಓದಿದರೆ 'ಒಂದು ಗಿಫ್ಟ್', ಹೀಗೊಂದು ಚಿನ್ನರ ಲೈಬ್ರರಿ ಎಲ್ಲಿದೆ ಗೊತ್ತಾ?
ಗ್ರಂಥಾಲಯದಲ್ಲಿ ಓದುತ್ತಿರುವ ಮಕ್ಕಳು
Follow us
TV9 Web
| Updated By: Rakesh Nayak Manchi

Updated on:May 22, 2022 | 3:22 PM

ರಾಯಚೂರು: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಮಿನಿ ಲೈಬ್ರರಿ (library)ಯೊಂದನ್ನು ನಗರದ ಗಾಜಗಾರಪೇಟೆಯಲ್ಲಿ ನಿರ್ಮಾಣ ಮಾಡಲಾಗಿದೆ. ಮಕ್ಕಳನ್ನು ಗ್ರಂಥಾಲಯದ ಕಡೆಗೆ ಸೆಳೆಯುವ ನಿಟ್ಟಿನಲ್ಲಿ  ಒಂದು ಗಂಟೆ ಓದಿದರೆ ಒಂದು ಗಿಫ್ಟ್ ಎಂಬ ವಿನೂತನ ಟಾಸ್ಕ್ ಆರಂಭಿಸಲಾಗಿದ್ದು, ಚಿನ್ನರು ಫಿದಾ ಆಗಿದ್ದಾರೆ. ಇಂಥ ಗ್ರಂಥಾಲಯವನ್ನು ಖಾಸಗಿ ಕಂಪನಿಯೊಂದರ ಪ್ರಾಜೆಕ್ಟ್ ಮ್ಯಾನೇಜರ್ ಕಾಡ್ಲೂರು ರಂಗರಾವ್ ದೇಸಾಯಿ (Rangarav Desai) ಅವರು ನಿರ್ಮಾಣ ಮಾಡಿದ್ದಾರೆ. ಗಾಜಗಾರಪೇಟೆಯಲ್ಲಿರುವ ತಮ್ಮ ಹಳೆಯ ಕಟ್ಟಡದಲ್ಲಿ ನಿರ್ಮಾಣ ಮಾಡಿದ್ದಾರೆ.

ಮಕ್ಕಳು ಮನೆಯಲ್ಲಿಯೇ ಕುಳಿತು ಟಿವಿ, ಮೊಬೈಲ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳ ಅಮೂಲ್ಯ ಸಮಯ ವ್ಯರ್ಥವಾಗಬಾರದು ಎಂಬ ಕಾರಣಕ್ಕಾಗಿ ರಂಗರಾವ್ ದೇಸಾಯಿ ಅವರು ಈ ಲೈಬ್ರರಿ ಪ್ರಾರಂಭಿಸಿದ್ದು, ಮಕ್ಕಳಿಗೆ ಕಲಿಕಾಸಕ್ತಿ ಹೆಚ್ಚಿಸಲು ಒಂದು ಗಂಟೆ ಓದಿದರೆ ಒಂದು ಗಿಫ್ಟ್ ಎಂಬ ವಿನೂತನ ಟಾಸ್ಕ್ ಆರಂಭಿಸಿದ್ದಾರೆ.

ಇದನ್ನೂ ಓದಿ: ಪ್ಲಾಸ್ಟಿಕ್​ ಬಾಟಲಿಗಳನ್ನು ಕೊಟ್ಟರೆ ಬಸ್​​ನಲ್ಲಿ ಉಚಿತ ಪ್ರಯಾಣ, ಬಸ್​ ನಿಲ್ದಾಣದಲ್ಲಿದೆ ಮಶಿನ್​; ಈ ದೇಶದಲ್ಲೊಂದು ವಿನೂತನ ಆಫರ್​ !​

ಮಹಾನ್ ಸಾಧಕರು, ಮಹಾನ್ ಚೇತನರು ಸೇರಿದಂತೆ ವಿವಿಧ ವಿಭಾಗಗಳ ಸಾಧಕರ ಪುಸ್ತಗಳನ್ನು ಗ್ರಂಥಾಲಯದಲ್ಲಿ ಇಡಲಾಗಿದೆ. ಸುಮಾರು‌ 800ಕ್ಕೂ ಹೆಚ್ಚು ಪುಸ್ತಕಗಳನ್ನು ಜೋಡಣೆ ಮಾಡಲಾಗಿದ್ದು, ವಿವಿಧ ಬ್ಯಾಚ್​ಗಳ ಮೂಲಕ ಮಕ್ಕಳು ಗ್ರಂಥಾಲಯಕ್ಕೆ ಬರುತ್ತಾರೆ. ರಂಗರಾವ್ ಅವರು ಕೊರೋನಾ ಮಹಾಮಾರಿ ಸಂದರ್ಭದಲ್ಲೂ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮ ನಡೆಸಿ ಗಮನಸೆಳೆದಿದ್ದರು. ಇದೀಗ ಮತ್ತೆ ಮಕ್ಕಳ ಕಲಿಕೆ ಮೇಲೆ ಕಾಳಜಿ ತೋರಿ ಹೊಸ ಟಾಸ್ಕ್ ನೀಡಿದ್ದಾರೆ. ಅಲ್ಲದೆ, ಈ ಟಾಸ್ಕ್​ನಲ್ಲೂ ಅವರೂ ಯಶಸ್ವಿಯಾಗಿದ್ದಾರೆ.

ಹೇಗಿದೆ ಗ್ರಂಥಾಲಯದ ವ್ಯವಸ್ಥೆ?

ಒಂದು ಗಂಟೆ ಅವಧಿಯಲ್ಲಿ ಐದರಿಂದ ಹತ್ತು ನಿಮಿಷಗಳ ಕಾಲ ಮಕ್ಕಳು ತಮ್ಮಿಷ್ಟದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ 50 ನಿಮಿಷಗಳಲ್ಲಿ 50-60 ಪುಟಗಳ ಪುಸ್ತಕವನ್ನು ಓದಿ ಮುಗಿಸಬೇಕು. ಓದಿನ ಬಳಿಕ ತಮ್ಮಿಷ್ಟದ ಒಂದು ಗಿಫ್ಟ್ ಪಡೆಯಬಹುದು. ವಾಟರ್ ಬಾಟಲ್, ಪೇಂಟ್ ಬಾಕ್ಸ್, ಗಾಳಿಪಟ, ಕ್ರಿಕೆಟ್ ಬಾಲ್, ಕ್ಯಾಪ್ ಸೇರಿ ವಿವಿಧ ಬಗೆಯ ಗಿಫ್ಟ್​ಗಳನ್ನು ನೀಡಲಾಗುತ್ತದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಮಕ್ಕಳು ಗಿಫ್ಟ್ ಪಡೆದಿದ್ದಾರೆ.

ಇದನ್ನೂ ಓದಿ: Recruitment: ಬೆಂಗಳೂರು ಗ್ರಾಮಾಂತರದಲ್ಲಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

ರಾಯಚೂರಿನಲ್ಲಿ ತಾಪಮಾನ ಹೆಚ್ಚಾಗಿರುತ್ತೆ. ಮಕ್ಕಳು ಹೊರ ಬಂದರೆ ಬಿಸಿಲಲ್ಲಿ ಓಡಾಡೋದು, ಮನೆಯಲ್ಲಿದ್ದರೆ ಟಿವಿ, ಮೊಬೈಲ್​ನಲ್ಲಿ ಕಾಲ ಕಳೆಯುತ್ತಾರೆ. ಪುಸ್ತಕದ ಆಸಕ್ತಿ ಜೊತೆ ಕಲಿಕಾಸಕ್ತಿ ಹೆಚ್ಚಿಸಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈಗಾಗಲೇ ಸಾವಿರಾರು ಮಕ್ಕಳ ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ರಂಗರಾವ್ ದೇಸಾಯಿ ಹೇಳುತ್ತಾರೆ.

ಒಂದು ಗಂಟೆ ಓದಿದರೇ ಒಂದು ಗಿಫ್ಟ್ ಕೊಡಲಾಗುತ್ತಿದೆ. ಸಾಧಕರ ಪುಸ್ತಗಳನ್ನು ಓದುತ್ತಿದ್ದೇನೆ. ನಾನಂತು ಎರಡು ದಿನಕ್ಕೊಮ್ಮೆ ಈ ಗ್ರಂಥಾಲಯಕ್ಕೆ ಬರುತ್ತಿದ್ದೇನೆ. ಇಲ್ಲಿನ ಸಾಧಕರ ಪುಸ್ತಗಳನ್ನು ಓದುವ ಮೂಲಕ ನಾವೂ ಅದೇ ರೀತಿ ಸಾಧಕರಾಗೋ ಆಸೆ ಹುಟ್ಟುತ್ತಿದೆ ಎಂದು ವಿದ್ಯಾರ್ಥಿನಿ ಪಲ್ಲವಿ ಅಭಿಪ್ರಾಯ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ: ಬೆಳಗಿನ ಜಾವ 5 ಗಂಟೆಗೆ ರಾಯಚೂರು ಬಳಿ ಎಮ್ಮೆಗೆ ಢಿಕ್ಕಿ ಹೊಡೆದ ಖಾಸಗಿ ಬಸ್, ಐವರು ಪ್ರಯಾಣಿಕರಿಗೆ ಗಂಭೀರ ಗಾಯ

ಇದನ್ನೂ ಓದಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವೇ ನಂಬರ್ ಒನ್; ರಾಯಚೂರಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Published On - 3:22 pm, Sun, 22 May 22