ಬುದ್ಧಿಗೇಡಿಯ ಕೃತ್ಯ! ಕುಟುಂಬದ 6 ಜನರಿಗೆ ಕೊರೊನಾ, ಪೊಲೀಸರು ಕೇಸ್‌ ದಾಖಲಿಸಿದರು

ತುಮಕೂರು: ಕೊರೊನಾ ವೈರಸ್‌ ಮಾರಿಯ ಬಗ್ಗೆ ಸರ್ಕಾರ ಮತ್ತು ವೈದ್ಯರು ಸಾಕಷ್ಟು ತಿಳಿವಳಿಕೆಯನ್ನ ಸಾರ್ವಜನಿಕರಿಗೆ ನೀಡ್ತಾನೆ ಇದ್ದಾರೆ. ಆದ್ರೂ ಕೆಲ ಜನ ಮಾತ್ರ ತಾವು ನಡೆದಿದ್ದೇ ದಾರಿ ಅಂತಾರೆ. ಎಷ್ಟೇ ತಿಳಿವಳಿಕೆ ಹೇಳಿದ್ರೂ ಕೇಳೋ ವ್ಯವಧಾನ ಇವರದಲ್ಲ. ಅಂಥ ಭೂಪನೊಬ್ಬನಿಗೆ ಪೊಲೀಸ್‌ರು ಈಗ ಸರಿಯಾಗಿ ಬುದ್ದಿ ಕಲಿಸಿದ್ದಾರೆ. ಹೌದು ತುಮಕೂರು ಜಿಲ್ಲೆ ಶಿರಾ ಪಟ್ಟಣವನ್ನ ಕಂಟೈನ್ಮೆಂಟ್‌ ಜೋನ್‌ ಅಂತಾ ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಪಾಸಿಟಿವ್‌ ಪ್ರಕರಣಗಳು. ಆದ್ರೂ ಇಲ್ಲಿನ ಅತೀ ಜಾಣನೊಬ್ಬ ಸುತ್ತಾಡಿದ್ರೆ […]

ಬುದ್ಧಿಗೇಡಿಯ ಕೃತ್ಯ! ಕುಟುಂಬದ 6 ಜನರಿಗೆ ಕೊರೊನಾ, ಪೊಲೀಸರು ಕೇಸ್‌ ದಾಖಲಿಸಿದರು
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 15, 2020 | 11:03 AM

ತುಮಕೂರು: ಕೊರೊನಾ ವೈರಸ್‌ ಮಾರಿಯ ಬಗ್ಗೆ ಸರ್ಕಾರ ಮತ್ತು ವೈದ್ಯರು ಸಾಕಷ್ಟು ತಿಳಿವಳಿಕೆಯನ್ನ ಸಾರ್ವಜನಿಕರಿಗೆ ನೀಡ್ತಾನೆ ಇದ್ದಾರೆ. ಆದ್ರೂ ಕೆಲ ಜನ ಮಾತ್ರ ತಾವು ನಡೆದಿದ್ದೇ ದಾರಿ ಅಂತಾರೆ. ಎಷ್ಟೇ ತಿಳಿವಳಿಕೆ ಹೇಳಿದ್ರೂ ಕೇಳೋ ವ್ಯವಧಾನ ಇವರದಲ್ಲ. ಅಂಥ ಭೂಪನೊಬ್ಬನಿಗೆ ಪೊಲೀಸ್‌ರು ಈಗ ಸರಿಯಾಗಿ ಬುದ್ದಿ ಕಲಿಸಿದ್ದಾರೆ.

ಹೌದು ತುಮಕೂರು ಜಿಲ್ಲೆ ಶಿರಾ ಪಟ್ಟಣವನ್ನ ಕಂಟೈನ್ಮೆಂಟ್‌ ಜೋನ್‌ ಅಂತಾ ಸರ್ಕಾರ ಘೋಷಣೆ ಮಾಡಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಪಾಸಿಟಿವ್‌ ಪ್ರಕರಣಗಳು. ಆದ್ರೂ ಇಲ್ಲಿನ ಅತೀ ಜಾಣನೊಬ್ಬ ಸುತ್ತಾಡಿದ್ರೆ ಏನಾಗುತ್ತೆ ಅಂತಾ ಆಂಧ್ರದಲ್ಲಿರೋ ಹಿಂದೂಪುರದ ಮಾವನ ಮನೆಗೆ ಹೋಗಿದ್ದಾನೆ.

ಕುಟುಂಬದ ಆರು ಜನರಿಗೆ ಕೊರೊನಾ ಹಬ್ಬಿಸಿದ, ಹೇಗೆ? ಹೋಗಿದ್ದೇನು ಅಪರಾಧ ಅಲ್ಲ ಬಿಡಿ. ಆದ್ರೆ ಆತ ಕೊರೊನಾ ಸೋಂಕಿತ ಪೇಶಂಟ್‌ ನಂಬರ್‌ 5813 ಅನ್ನೋದೇ ವಿಷ್ಯ ಇಲ್ಲಿ. ಮಾವನ ಮನೆಗೆ ಹೋಗಿದ್ದಷ್ಟೇ ಅಲ್ಲ. ಅಲ್ಲಿಂದ ಹೆಂಡತಿ ಮತ್ತು ಮಕ್ಕಳನ್ನ ಬೈಕ್‌ನಲ್ಲಿ ಕರೆದುಕೊಂಡು ಬಂದಿದ್ದಾನೆ. ಪರಿಣಾಮ ಈಗ ಅವರೂ ಸೇರಿದಂತೆ ಕುಟುಂಬದ ಆರು ಜನರೀಗ ಕೊರೊನಾ ಪಾಸಿಟಿವ್‌.

ವಿಷಯ ಗೊತ್ತಾಗ್ತಿದ್ದಂತೆ ಶಿರಾ ಪೊಲೀಸ್‌ರು ಕೆಂಡಾಮಂಡಲವಾಗಿದ್ದಾರೆ. ಕಾನೂನು ಉಲ್ಲಂಘಿಸಿದ್ದಲ್ಲದೇ, ಹೇಳದೆ ಕೇಳದೆ ಬೇರೊಂದು ರಾಜ್ಯಕ್ಕೆ ಹೋಗಿದ್ದು, ಅದನ್ನೂ ಮುಚ್ಚಿಟ್ಟು  ಮತ್ತು ಇತರರಿಗೆ ಕೊರೊನಾ ಹಬ್ಬಿಸಿದ್ದಕ್ಕೆ ಅವನ ಮೇಲೆ ಕೇಸ್‌ ಜಡಿದಿದ್ದಾರೆ.  ಈ ಸಂಬಂಧ ಶಿರಾ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಅವನ ವಿರುದ್ಧ ಪ್ರಕರಣ ದಾಖಲಾಗಿದೆ.

Published On - 4:08 pm, Sun, 14 June 20

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ