ಟಿಕೆಟ್ ಕೈ ತಪ್ಪುತ್ತಿದ್ದಂತೆ ಫುಲ್ ಸೈಲೆಂಟ್; ಅಮಿತ್ ಶಾ ಕರೆ ಮಾಡಿದ್ರು ಸ್ವೀಕರಿಸದ ಅನಂತ್ ಕುಮಾರ್ ಹೆಗಡೆ
ಸಂಸದ ಅನಂತ್ ಕುಮಾರ್ ಹೆಗಡೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆರು ಬಾರಿ ಗೆಲುವು ಸಾಧಿಸಿ ಹಿಂದೂತ್ವದ ಫೈರ್ ಬ್ರ್ಯಾಂಡ್ ಎಂದು ಕರೆಯಲ್ಪಟ್ಟಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ರಾಜಕೀಯದಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ತನ್ನದೆ ಆದ ವೋಟ್ ಬ್ಯಾಂಕ್ ಹೊಂದಿರುವ ಅನಂತ್ ಕುಮಾರ್ ಮನವೋಲಿಸಲು ಕಮಲ ಕಲಿಗಳು ಯಾವೆಲ್ಲ ಸರ್ಕಸ್ ಮಾಡಿದ್ರು. ಅದಕ್ಕೆ ಹೆಗಡೆ ಪ್ರತಿಕ್ರಿಯೆ ಏನಿತ್ತು? ಈಗ ಅವರು ಏನ್ ಮಾಡುತ್ತಿದ್ದಾರೆ ಅಂತೀರಾ? ಈ ಸ್ಟೋರಿ ಓದಿ.
ಉತ್ತರ ಕನ್ನಡ, ಏ.17: ಮಾತಾಡಿದ್ರೆ ವಿವಾದ ಸೃಷ್ಟಿಸುತ್ತಿದ್ದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde), ಅದೇ ಮಾತಿನ ದಾಟಿಯ ಮೂಲಕ ಜನ ಮಣ್ಣನೆ ಗಳಿಸಿ ಆರು ಬಾರಿ ಬಿಜೆಪಿ ಸಂಸದನಾಗಿದ್ದರು. ಈ ಬಾರಿಯೂ ಟಿಕೆಟ್ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿದ್ದ ಅವರು, ಡಿಸೆಂಬರ್ನಿಂದ ಮಾರ್ಚ್ವರೆಗೆ ಕ್ಷೇತ್ರದಾದ್ಯಂತ ಸಂಚರಿಸಿ ಚುನಾವಣೆಗೆ ಪ್ರಚಾರ ಆರಂಭ ಮಾಡಿದ್ದರು. ಆದ್ರೆ, ಕೊನೆಯ ಹಂತದಲ್ಲಿ ಟಿಕೆಟ್ ಮಿಸ್ ಆಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಾಲಾಗಿದೆ. ಹೀಗಾಗಿ ಮುನಿಸಿಕೊಂಡಿರುವ ಅನಂತ್ ಕುಮಾರ್, ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳದೆ, ಒಂದೇ ಒಂದು ಹೇಳಿಕೆಯನ್ನ ಕೊಡದೆ ಫುಲ್ ಸೈಲೆಂಟ್ ಆಗಿದ್ದಾರೆ.
ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಅನಂತ್ ಕುಮಾರ್ ಸೈಲೆಂಟ್ ಆಗಿದ್ದುಕೊಂಡು ಪರೋಕ್ಷವಾಗಿ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದರೂ ಎಂಬ ಮಾತಿದೆ. ಈಗ ಮತ್ತೆ ಅವರು ಸೈಲೆಂಟ್ಗೆ ಸರಿದಿದ್ದು, ಕಮಲ ಅಭ್ಯರ್ಥಿ ಕಾಗೇರಿ ಸೇರಿದಂತೆ ಇನ್ನೂಳಿದ ನಾಯಕರಿಗೂ ಟೆನ್ಷನ್ ತಂದಿಟ್ಟಿದೆ. ಅವರ ಭೇಟಿಗೆ ಅವಕಾಶ ಕೊಡಿ ಎಂದು ಕಾಗೇರಿ ಕರೆ ಮಾಡಿ ಕೇಳಿದರೂ ಸರಿಯಾಗಿ ಪ್ರತಿಕ್ರಿಯಿಸದೆ ಇದುವರೆಗೂ ಭೇಟಿಗೂ ಅವಕಾಶ ಕೊಟ್ಟಿಲ್ಲ. ಹೇಗಾದರೂ ಮಾಡಿ ಅನಂತ್ ಕುಮಾರ್ ಮುನಿಸು ತಣ್ಣಗಾಗಿಸಲು ಉತ್ತರ ಕನ್ನಡ ಲೋಕಸಭಾ ಉಸ್ತುವಾರಿ ಹರತಾಳು ಹಾಲಪ್ಪ, ಅವರ ಮನೆಗೆ ಭೇಟಿ ನೀಡಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಹಿಂದೂ ಫೈರ್ ಬ್ರ್ಯಾಂಡ್ಗೆ ಹಿನ್ನಡೆ: ಅನಂತ್ಕುಮಾರ್ ಹೆಗಡೆಗೆ ತಲೆನೋವಾದ ಸ್ವಪಕ್ಷದ ನಾಯಕರ ನಡೆ
ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ , ಆರ್ ಎಸ್ ಎಸ್ ಮುಖ್ಯಸ್ತರು ಸೇರಿದಂತೆ ಕೆಲವರು ಕರೆ ಮಾಡಿ ಮಾತನಾಡಲು ಪ್ರಯತ್ನಿಸಿದ್ದಾರೆ. ಆದ್ರೆ, ಅನಂತ್ ಕುಮಾರ್ ಇವರ ಯಾರ ಕರೆಯನ್ನ ಸ್ವಿಕರಿಸದೆ ಸೈಲೆಂಟ್ ಆಗಿದ್ದಾರೆ ಎಂದು ಬಿಜೆಪಿ ಶಾಸಕ ಬನಸಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರ ಕರೆಯನ್ನೆ ಸ್ವಿಕರಿಸದೆ ಮೊಂಡುತನ ತೋರಿದ ಅನಂತ್ ಕುಮಾರ್, ಲೋಕಸಭಾ ಚುನಾವಣೆಯ ಪ್ರಕ್ರಿಯೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ.
ಈಗ ಸದ್ಯ ತಾಯ್ನೆಲದ ಸೇವೆಯಲ್ಲಿ ಶಿರ್ಷಿಕೆ ಅಡಿ ಕದಂಬ ಪುಸ್ತಕ ಬರೆಯುತ್ತಿರುವ ಅನಂತ್ ಕುಮಾರ್ ಹೆಗಡೆ, ತಮ್ಮ ಜೀವನದಲ್ಲಿ ಅನುಭವಿಸಿದ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಕುರಿತಾದ ವಿಷಯಗಳನ್ನ ಈ ಪುಸ್ತಕದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ತಾನು ಬರೆಯುತ್ತಿರುವ ಪುಸ್ತಕದ ಒಂದೊಂದು ಪುಟವನ್ನ ತನ್ನ ಫೆಸ್ ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದಕ್ಕೆ ಕೈ ನಾಯಕ ಬಿಕೆ ಹರಿಪ್ರಸಾದ್ ವ್ಯಂಗ್ಯ ಮಾಡಿದ್ದಾರೆ.
ಒಟ್ಟಾರೆಯಾಗಿ ರಾಜಕೀಯದಿಂದ ದೂರ ಉಳಿದಿರುವ ಸಂಸದ ಅನಂತ್ ಕುಮಾರ್ ಹೆಗಡೆ. ಪುಸ್ತಕ ಬರೆಯುವುದರ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ, ರಾಜಕೀಯದಿಂದ ಸಂಪೂರ್ಣವಾಗಿ ವಿಮುಕ್ತರಾಗ್ತಾರಾ? ಎಂಬುವುದನ್ನ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Wed, 17 April 24