Chandrakala Mohan Profile: ಬಿಗ್ ಬಾಸ್ ಮನೆಯಲ್ಲಿ ಪುಟ್ಟಗೌರಿ ಮದುವೆ ಖ್ಯಾತಿಯ ಅಜ್ಜಮ್ಮ

Bigg Boss Kannada Season 8, Ajjamma Chandrakala Mohan Profile: ಪುಟ್ಟಗೌರಿ ಮದುವೆಯಲ್ಲಿ ಮನೆಯ ಹಿರಿಯಜ್ಜಿಯಾಗಿ, ಪುಟ್ಟಗೌರಿಯನ್ನು, ಮಹೇಶನನ್ನೂ ಸಂಭಾಳಿಸಿದ ಚಂದ್ರಕಲಾ ಮೋಹನ್, ಬಿಗ್ ಬಾಸ್ ಮನೆಯಲ್ಲಿ ಏನು ಮಾಡುತ್ತಾರೆ ಎಂದು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.

Chandrakala Mohan Profile: ಬಿಗ್ ಬಾಸ್ ಮನೆಯಲ್ಲಿ ಪುಟ್ಟಗೌರಿ ಮದುವೆ ಖ್ಯಾತಿಯ ಅಜ್ಜಮ್ಮ
ಪುಟ್ಟಗೌರಿ ಮದುವೆ ಅಜ್ಜಮ್ಮ ಈಗ ಬಿಗ್ ಬಾಸ್ ಮನೆಯ ಅಭ್ಯರ್ಥಿ
Follow us
TV9 Web
| Updated By: ganapathi bhat

Updated on:Apr 06, 2022 | 7:36 PM

ಕನ್ನಡ ಕಿರುತೆರೆ ಪ್ರೇಕ್ಷಕರು ಒಂದು ದಿನವೂ ತಪ್ಪಿಸಲು ಇಷ್ಟಪಡದೆ, ಆಸಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳ ಪೈಕಿ ಪುಟ್ಟಗೌರಿ ಮದುವೆ ಕೂಡ ಸ್ಥಾನ ಪಡೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪುಟ್ಟಗೌರಿ ಮದುವೆ ಎಂದು ಹೆಸರು ಹೇಳ ಹೊರಟರೆ ಸಾಕು, ಧಾರಾವಾಹಿ ಶೀರ್ಷಿಕೆ ಗೀತೆಯೇ ಮನದಲ್ಲಿ ಕೇಳಲಾರಂಭಿಸುತ್ತದೆ. ಅಂಥಾ ಅಭಿಮಾನ ಗಳಿಸಿದ್ದ ಧಾರಾವಾಹಿಯಲ್ಲಿ ಜನರ ಪ್ರೀತಿ ಪಡೆದ ಮುಖ್ಯ ಪಾತ್ರ ಎಂದರೆ ಅದು ಅಜ್ಜಮ್ಮ. ಚಂದ್ರಕಲಾ ಮೋಹನ್ ಎಂದರೆ ಯಾರೆಂದು ಗೊತ್ತಾಗುತ್ತೋ ಇಲ್ಲವೋ, ಆದರೆ ಅಜ್ಜಮ್ಮ ಎಂದರೆ ಎಲ್ಲರಿಗೂ ಗೊತ್ತು. ಪುಟ್ಟಗೌರಿ ಮದುವೆಯ ಅಜ್ಜಮ್ಮ ಈಗ ಬಿಗ್ ಬಾಸ್ ಸ್ಪರ್ಧಿ. ಬಿಗ್ ಬಾಸ್ ಕನ್ನಡದ 12ನೇ ಅಭ್ಯರ್ಥಿಯಾಗಿ ಅವರು ಮನೆ ಪ್ರವೇಶಿಸಿದ್ದಾರೆ.

ಪುಟ್ಟಗೌರಿ ಮದುವೆಯಲ್ಲಿ ಮನೆಯ ಹಿರಿಯಜ್ಜಿಯಾಗಿ, ಪುಟ್ಟಗೌರಿಯನ್ನು, ಮಹೇಶನನ್ನೂ ಸಂಭಾಳಿಸಿದ ಚಂದ್ರಕಲಾ ಮೋಹನ್, ಬಿಗ್ ಬಾಸ್ ಮನೆಯಲ್ಲಿ ಏನು ಮಾಡುತ್ತಾರೆ ಎಂದು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ನೋಡಲು ತುಂಬಾ ಗಂಭೀರ ಮತ್ತು ನೇರ ನಡೆನುಡಿಯ ವ್ಯಕ್ತಿಯಂತೆ ಚಂದ್ರಕಲಾ ಕಾಣುತ್ತಾರೆ. ಈ ನಡವಳಿಕೆ ಬಿಗ್ ಬಾಸ್​ನಲ್ಲಿ ಹೇಗೆ ಕೆಲಸ ಮಾಡುತ್ತದೆ? ಇತರ ಸ್ಪರ್ಧಿಗಳು ಮತ್ತು ಚಂದ್ರಕಲಾ ಒಡನಾಟ ಹೇಗಿರುತ್ತದೆ? ಮನೆಯ ಆಟ, ಸ್ಪರ್ಧೆಗಳಲ್ಲಿ ಚಂದ್ರಕಲಾ ಯಶಸ್ವಿಯಾಗುತ್ತಾರಾ? ಕಾದುನೋಡಬೇಕಿದೆ.

ನನ್ನ ತಪ್ಪಿಲ್ಲದೆ ನನ್ನ ವಿರುದ್ಧ ಮಾತನಾಡಿದರೆ ಸಿಟ್ಟಾಗುತ್ತೇನೆ. ಇಲ್ಲವಾದರೆ ಮಾಡಿದ ತಪ್ಪು ತಿದ್ದಿಕೊಳ್ಳುತ್ತೇನೆ. ಬಹಳ ಕಷ್ಟಪಟ್ಟು, ಜೀವನವನ್ನು ಸವಾಲಾಗಿ ಸ್ವೀಕರಿಸಿ ಬದುಕಿದ್ದೇನೆ. ಈ ವೇದಿಕೆಗೆ ಬರಲು ಬಹಳ ಸಂತಸಪಡುತ್ತೇನೆ ಎಂದು ಚಂದ್ರಕಲಾ ಹೇಳಿದರು. ಚಂದ್ರಕಲಾ ಮೋಹನ್ ಕಿರುತೆರೆಯಲ್ಲಿ ಮಾತ್ರವಲ್ಲದೆ, ಹಿರಿತೆರೆಯಲ್ಲೂ ಅಭಿನಯಿಸಿದ್ದಾರೆ. 2018ರಲ್ಲಿ ತೆರೆಕಂಡ ಅಭಿಸಾರಿಕೆ ಎಂಬ ಚಿತ್ರದಲ್ಲಿ ಚಂದ್ರಕಲಾ ನಟಿಸಿದ್ದಾರೆ. ತುಳು ಸಿನಿಮಾ ಪಿಲಿಬೈಲ್ ಯಮುನಕ್ಕದಲ್ಲೂ ಚಂದ್ರಕಲಾ ಕಾಣಿಸಿಕೊಂಡಿದ್ದಾರೆ.

ಬಿಗ್​ ಬಾಸ್​ ವೀಕ್ಷಣೆ ಮಾಡೋದು ಎಲ್ಲಿ? ಭಾನುವಾರ ಸಂಜೆ 6 ಗಂಟೆಗೆ ಬಿಗ್​ ಬಾಸ್​ 8ಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್​ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಪ್ರತಿ ದಿನ ರಾತ್ರಿ 9:30ರಿಂದ ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್​ ಬಾಸ್​ ಎಲ್ಲಿ ವೀಕ್ಷಣೆ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ.  ಕಲರ್ಸ್​ ಕನ್ನಡ ವಾಹಿನಿಯಲ್ಲಿ ಬಿಗ್​ ಬಾಸ್​ 8 ಪ್ರಸಾರವಾಗುತ್ತದೆ. ಆನ್​ಲೈನ್​ನಲ್ಲಿ ಬಿಗ್​ ಬಾಸ್​ ನೋಡಬೇಕು ಎಂದಾದರೆ ನೀವು ವೂಟ್​ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕು. ಜಿಯೋ ಟಿವಿಯಲ್ಲಿ ಕೂಡ ನೀವು ಬಿಗ್​ ಬಾಸ್​ ವೀಕ್ಷಣೆ ಮಾಡಬಹುದಾಗಿದೆ. ಜಿಯೋ ಟಿವಿಗೆ ತೆರಳಿ ಕಲರ್ಸ್​ ಕನ್ನಡ ಎಂದು ಸರ್ಚ್​ ಮಾಡಿದರೆ ಕಲರ್ಸ್​ ಕನ್ನಡ ವಾಹಿನಿ ಸಿಗಲಿದೆ. ಅದರಲ್ಲಿ ನೀವು ಬಿಗ್​ ಬಾಸ್​ ವೀಕ್ಷಿಸಬಹುದು.

ಇದನ್ನೂ ಓದಿ: Bigg Boss Kannada 8 Launch LIVE Updates: 11ನೇ ಸ್ಪರ್ಧಿಯಾಗಿ ದಿವ್ಯ ಸುರೇಶ್​ ಬಿಗ್​ ಬಾಸ್​ ಮನೆಗೆ ಎಂಟ್ರಿ

Shubha Poonja Profile: ಮಾದಕ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಗೆ ಎಂಟ್ರಿ!

Published On - 9:37 pm, Sun, 28 February 21

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್