IPL 2020: ಪಂಜಾಬ್ ಕಿಂಗ್ಸ್ ಹವಾ ಶುರುವಾಗಿದೆ, ಮೈದಾನದಲ್ಲಿ ಬೆವರಿಳಿಸಿದ್ದು ಹೀಗೆ..
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸೆಪ್ಟೆಂಬರ್ 20 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ 2020 ಯನ್ನು ಆರಂಭಿಸಲಿದೆ. ಕೆಎಲ್ ರಾಹುಲ್ ಮೊದಲ ಬಾರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕತ್ವ ವಹಿಸಲಿದ್ದಾರೆ. ಐಪಿಎಲ್ 2020 ಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಈಗಾಗಲೇ ದುಬೈ ಸೇರಿದ್ದು, ಇಲ್ಲಿ ತಂಡವು ಐಸಿಸಿ ಅಕಾಡೆಮಿಯಲ್ಲಿ ತಮ್ಮ ತರಬೇತಿ ಮತ್ತು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಹೊರೆಯನ್ನು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಹೊರಲಿದ್ದಾರೆ. […]

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸೆಪ್ಟೆಂಬರ್ 20 ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ 2020 ಯನ್ನು ಆರಂಭಿಸಲಿದೆ. ಕೆಎಲ್ ರಾಹುಲ್ ಮೊದಲ ಬಾರಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕತ್ವ ವಹಿಸಲಿದ್ದಾರೆ.
ಐಪಿಎಲ್ 2020 ಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಈಗಾಗಲೇ ದುಬೈ ಸೇರಿದ್ದು, ಇಲ್ಲಿ ತಂಡವು ಐಸಿಸಿ ಅಕಾಡೆಮಿಯಲ್ಲಿ ತಮ್ಮ ತರಬೇತಿ ಮತ್ತು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಹೊರೆಯನ್ನು ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಹೊರಲಿದ್ದಾರೆ. ಇದಕ್ಕಾಗಿ ಶಮಿ ಕೂಡ ಅಭ್ಯಾಸದಲ್ಲಿ ಭಾರೀ ಬೆವರು ಸುರಿಸುತ್ತಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಈ ಆವೃತ್ತಿಯಲ್ಲಿ ಭಾರತದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಕುಂಬ್ಳೆ ಈ ಹಿಂದೆ ಮುಂಬೈ ಇಂಡಿಯನ್ಸ್‌ನ ಕೋಚಿಂಗ್ ಸಿಬ್ಬಂದಿಯ ಭಾಗವಾಗಿ ಕಾರ್ಯ ನಿರ್ವಹಿಸಿದ್ದರು.
ಎಲ್ಲಾ ತಂಡಗಳಂತೆ ಪಂಜಾಬ್ ತಂಡವು ಎಲ್ಲಾ ಆಟಗಾರರನ್ನು 2 ತಂಡಗಳಾಗಿ ವಿಂಗಡಿಸುವ ಮೂಲಕ ಪಂದ್ಯವನ್ನು ಅಭ್ಯಾಸ ಮಾಡುತ್ತಿದೆ. ಈ ಆವೃತ್ತಿಯಲ್ಲಿ ಕ್ರಿಸ್ ಗೇಲ್ ಅವರ ಬ್ಯಾಟ್ನಿಂದ ಪಂಜಾಬ್ ತಂಡ ಹೆಚ್ಚಿನ ನಿರೀಕ್ಷೆ ಹೊಂದಿದೆ.
ತಂಡದ ನಾಯಕತ್ವವನ್ನು ಭಾರತದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ನಿರ್ವಹಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಹುಲ್ ಅದ್ಭುತ ಪ್ರದರ್ಶನ ನೀಡಿದ್ದರು. ಈಗ ಮೊದಲ ಬಾರಿಗೆ ಅವರು ತಂಡದ ಬಗ್ಗೆಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲ್ಲಿದ್ದಾರೆ.
ಪಂಜಾಬ್ ಪರವಾಗಿ ಕರುಣ್ ನಾಯರ್ ಅವರ ಆಟದ ಮೇಲೆ ಎಲ್ಲರ ಗಮನ ಬಿದಿದ್ದು, ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿಸುವ ಮೂಲಕ ನಾಯರ್ ಟೀಮ್ ಇಂಡಿಯಾಕ್ಕೆ ಮರಳುವ ಪ್ರಯತ್ನ ಮಾಡುತ್ತಿದ್ದಾರೆ.
ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಾಯಾಂಕ್ ಅಗರ್ವಾಲ್ ಅವರು ಪಂಜಾಬ್‌ನ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಪಂದ್ಯದ ಅಂತಿಮ ಹಂತದಲ್ಲಿ ಅವರ ಪಾತ್ರ ಮುಖ್ಯವಾಗಿರುತ್ತದೆ.
(Photo courtesy: Kings XI Punjab Twitter)
Published On - 3:52 pm, Fri, 18 September 20