ಮಾಜಿ ಸಂಸದ LR ಶಿವರಾಮೇಗೌಡ ಪುತ್ರನಿಗೆ ISD ನೋಟಿಸ್
ಆಂತರಿಕ ಭದ್ರತಾ ವಿಭಾಗದಿಂದ ಮಾಜಿ ಸಂಸದ LR ಶಿವರಾಮೇಗೌಡ ಪುತ್ರ ಚೇತನ್ ಗೌಡಗೆ ನೋಟಿಸ್ ನೀಡಲಾಗಿದೆ. ಚೇತನ್ ಗೌಡಗೆ ವಿಚಾರಣೆಗೆ ಹಾಜರಾಗುವಂತೆ ISD ನೋಟಿಸ್ ನೀಡಿದೆ.
ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕಿರುತೆರೆ ನಟರಾದ ಅಭಿಷೇಕ್ ದಾಸ್ ಮತ್ತು ಗೀತಾಭಾರತಿ ಭಟ್ ಶಾಂತಿನಗರದಲ್ಲಿರುವ ISD ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.
ಇದೀಗ, ತನಿಖೆ ಮುಂದುವರೆದಿದ್ದು ಆಂತರಿಕ ಭದ್ರತಾ ವಿಭಾಗದಿಂದ ಮಾಜಿ ಸಂಸದ LR ಶಿವರಾಮೇಗೌಡ ಪುತ್ರ ಚೇತನ್ ಗೌಡಗೆ ನೋಟಿಸ್ ನೀಡಲಾಗಿದೆ. ಚೇತನ್ ಗೌಡಗೆ ನಾಳೆ ವಿಚಾರಣೆಗೆ ಹಾಜರಾಗುವಂತೆ ISD ನೋಟಿಸ್ ನೀಡಿದೆ.
Published On - 6:38 pm, Tue, 22 September 20