ಹೋರಾಟವೋ ಅಥವಾ ಹಾರಾಟವೋ? ಜಿಮ್​ನಲ್ಲಿ ಎದುರಾಗುವ ಆತಂಕವನ್ನು ಹೇಗೆ ಎದುರಿಸುವುದು?

ಯಾವಾಗಲಾದರೂ ಜಿಮ್​ನಲ್ಲಿ ನೀವು ತುಂಬಾ ದುರ್ಬಲರು ಅನ್ನಿಸಿದೆಯಾ? ಹೆಚ್ಚು ಒತ್ತಡವನ್ನು ಅನುಭವಿಸಿದ್ದೀರಾ? ಏಕಾಂಗಿಯಾಗಿದ್ದಾಗ ಜಿಮ್​ನಲ್ಲಿ ಆತಂಕ ನಿಜ ಆದರೆ ಸಮಸ್ಯೆಗಳನ್ನು ಎದುರಿಸಲು ಮಾರ್ಗಗಳಿವೆ ಎಂಬುದು ತಿಳಿದಿರಲಿ.

ಹೋರಾಟವೋ ಅಥವಾ ಹಾರಾಟವೋ? ಜಿಮ್​ನಲ್ಲಿ ಎದುರಾಗುವ ಆತಂಕವನ್ನು ಹೇಗೆ ಎದುರಿಸುವುದು?
ಸಂಗ್ರಹ ಚಿತ್ರ

ದೇಹದ ಫಿಟ್ನೆಸ್​ಗಾಗಿ ಜಿಮ್​ ಸೇರಲು ಯೋಚಿಸುರಿತ್ತೀರಿ. ನಮ್ಮ ಮಾಮೂಲಿ ಜೀವನಶೈಲಿಯಲ್ಲಿ ನಮ್ಮ ದೇಹದ ಕುರಿತಾಗಿ ನಾವು ಯೋಚಿಸಿಯೇ ಇಲ್ಲ. ಆಕಾರ, ಗಾತ್ರ, ತೂಕ ಇವೆಲ್ಲದರ ಬಗ್ಗೆ ಯೋಚಿಸದೇ ಆಲಸ್ಯ ತೋರುತ್ತೇವೆ. ಆದರೆ ನೀವು ಒಮ್ಮೆ ಜಿಮ್​ನೊಳಕ್ಕೆ ಎಂಟ್ರಿಯಾದಗಲೇ ಅನಿಸುವುದು! ಇತರರನ್ನು ನೋಡಿದಾಗಲೇ ಮನಸ್ಸು ಸದೃಢವಾಗಿ ಸಿದ್ಧವಾಗುತ್ತದೆ.. ಇಲ್ಲ! ಇನ್ನುಂದೆ ಫಿಟ್ನೆಸ್​ಗಾಗಿ ಶ್ರಮಿಸಲೇಬೇಕೆಂದು. ಆದರೆ ಕೆಲವು ಬಾರಿ ನಿಮ್ಮ ದೇಹ, ಆಕಾರ ನಿಮ್ಮನ್ನು ಜಿಮ್​ನೊಳಕ್ಕೆ ಪ್ರವೇಶಿಸಲು ನಿಮಗೆ ಹಿಂಜರಿಕೆಯುಂಟು ಮಾಡಿರಬಹುದು. ನಿಮ್ಮ ದೇಹವನ್ನು ನೋಡಿ ಅಲ್ಲಿರುವವರು ಏನನ್ನುತ್ತಾರೋ ಏನೋ? ಎಂಬ ಚಿಂತೆ ಗಾಢವಾಗಿ ಕಾಡಿರಬಹುದು. ಯಾವಾಗಲಾದರೂ ಜಿಮ್​ನಲ್ಲಿ ನೀವು ತುಂಬಾ ದುರ್ಬಲರು ಅನ್ನಿಸಿದೆಯಾ? ಹೆಚ್ಚು ಒತ್ತಡವನ್ನು ಅನುಭವಿಸಿದ್ದೀರಾ? ಏಕಾಂಗಿಯಾಗಿದ್ದಾಗ ಜಿಮ್​ನಲ್ಲಿ ಆತಂಕ ನಿಜ ಆದರೆ ಸಮಸ್ಯೆಗಳನ್ನು ಎದುರಿಸಲು ಮಾರ್ಗಗಳಿವೆ ಎಂಬುದು ತಿಳಿದಿರಲಿ.

ಹೋರಾಟ ಅಥವಾ ಹಾರಾಟ ಎಂಬುವುದು ಶಾರೀರಿಕ ಪ್ರತಿಕ್ರಿಯೆ. ಇದು ನಿರ್ದಿಷ್ಟ ಘಟನೆ, ಸಮಯ, ಆತಂಕ ಅಥವಾ ಪ್ರತಿಕ್ರಿಯೆಯ ರೂಪವಾಗಿ ಸಂಭವಿಸುತ್ತದೆ ಎಂದು ಇಂಟರ್ನೆಟ್ ವಿವರಿಸುತ್ತದೆ. 1932ರಲ್ಲಿ ಅಮೆರಿಕಾದ ಶರೀರಶಾಸ್ತ್ರಜ್ಞ ವಾಲ್ಟರ್ ಬ್ರಾಡ್ ಫೋರ್ಡ್ ಇದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ. ತಾವು ಜಿಮ್​ ಸೇರುವ ಮೊದಲ ಆರಂಭದ ದಿನಗಳನ್ನು ನೆನಪಿಸಿಕೊಂಡ ಅವರು, ಬುದ್ಧಿವಂತ ವ್ಯಕ್ತಿಯಾದ ನಾನು ಜಿಮ್​ನಲ್ಲಿ ನಿರ್ವಹಿಸುವ ಸುಲಭದ ಕೆಲಸದಲ್ಲಿ ಅಷ್ಟು ದುರ್ಬಲನು ಅಥವಾ ಆತಂಕವನ್ನು ಎದುರಿಸುತ್ತೇನೆ ಎಂದು ನಾನು ಭಾವಿಸಿರಲಿಲ್ಲ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮೊದಲು ಜಿಮ್​ ಸೇರುವಾಗ ನಾನು ಅತ್ಯಂತ ದುರ್ಬಲನು ಎಂದು ಭಾವಿಸಿಕೊಂಡಿದ್ದೆ. ಅದಕ್ಕೂ ಮುಂಚೆ ನನ್ನ ದೇಹ ಹೇಗಿದೆ? ಕೊಬ್ಬಿನಾಂಶ ಎಷ್ಟಿದೆ ಎಂಬ ಕುರಿತಾಗಿ ಯಾವುದೇ ಗಮನಹಿರಿಸಿಲ್ಲ, ನಾನು ಸಾಕಿದ ನಾಯಿಗಳ ಜತೆ ಖುಷಿಯಿಂದ ಆಟವಾಡುವಾಗ ನನಗೆ ಯಾವುದೂ ಅರಿವಿಗೆ ಬಂದಿರಲಿಲ್ಲ,  ನನ್ನ ಸ್ನೇಹಿತರೊಂದಿಗೆ ಖುಷಿಯಿಂದ ನಗುತ್ತಾ ಪ್ರಯಾಣ ಮಾಡುವಾಗಲೂ ನನಗೆ ಆ ಬಗ್ಗೆ ಅರಿವಾಗುವುದಿಲ್ಲ. ಆದರೆ ನಾನು ಒಂದು ಬಾರಿ ಜಿಮ್ ಬಾಗಿಲನ್ನು ದಾಟಿದಾಗ ನನ್ನ ದೇಹ, ಆಕಾರ, ಚಿತ್ರಣದ ಸಮಸ್ಯೆಗಳು ನನ್ನ ಅರಿವಿಗೆ ಬರುತ್ತದೆ. ಅದೇ ವಿಷಯಕ್ಕೆ ನನಗೆ ಚಿಂತೆ ಕಾಡತೊಡಗುತ್ತದೆ. ನನ್ನನ್ನು ನೋಡಿ ಅವರಾಡುವ ಕಾಮೆಂಟ್​ಗಳು, ದೇಹ ನೋಡಿ ನಕ್ಕ ಆ ದಿನಗಳು ಪ್ರತಿದಿನ ವ್ಯಾಯಾಮ ಮಾಡಲು ನನ್ನನ್ನು ಓಡುವಂತೆ ಮಾಡುತ್ತದೆ. ಇದೇ ಹೋರಾಟ ಅಥವಾ ಹಾರಾಟ ಎಂದು ಅವರು ವಿವರಿಸಿದ್ದಾರೆ.

ಒಂದು ಹೆಜ್ಜೆ ಹಿಂದಿಟ್ಟು ಯೋಚಿಸುವುದಾದರೆ, ಇದು ನನ್ನನ್ನು ಹೆಚ್ಚು ಆತಂಕಕ್ಕೀಡು ಮಾಡಿದೆಯೇ ಅನಿಸುತ್ತಿತ್ತು. ಎಲ್ಲಾ ಜಿಮ್​ಗಳಲ್ಲಿಯೂ ಇದೇ ಸಮಸ್ಯೆಯೇ? ಎಂಬೆಲ್ಲಾ ಪ್ರಶ್ನೆಗಳು ಕಾಡತೊಡಗುತ್ತಿತ್ತು. ಹೇಳಬೇಕೆಂದರೆ, ಹೃತ್ತಿಕ್ ರೋಷನ್ ಅವರಿಂದಲೇ ಎಲ್ಲವೂ ಆರಂಭವಾದದ್ದು, ಇವರಂತೆಯೇ ನಾನೂ ಇರಬೇಕು ಎಂಬುದು ಮೊದಲ ಅವರಲ್ಲಿನ ಆಕರ್ಷಣೆಯಾಯಿತು. ಹಾಗಾಗಿಯೇ ನನಗೆ ಪರಿಚಯವಿದ್ದ ಜಿಮ್ ತರಬೇತುದಾರರಲ್ಲಿ ಮಾತನಾಡಿ ಜಿಮ್ ಸೇರಿಕೊಂಡೆ. ಅಲ್ಲಿ ಅನುಭವ, ಮಾತು ಎಲ್ಲ ಸೇರಿ ನನಗೆ ಎರಡನೆ ಮನೆಯೇ ಜಿಮ್ ಆಗಿ ಬದಲಾಯಿತು.

ನಾನು ಲೆಕ್ಕವಿಲ್ಲದಷ್ಟು ಜಿಮ್​ಗಳಿಗೆ ಹೋಗಿದ್ದೇನೆ. ಪ್ರತಿ ವಾರವೂ ಸಹ ಬೇರೆ ಬೇರೆ ಜಿಮ್​ಗಳಿಗೆ ಹೋಗುತ್ತಿದ್ದೆ. ಅವುಗಳಲ್ಲಿ ಒಳ್ಳೆಯ ಜಿಮ್ ಯಾವುದು ಎಂಬ ಹುಡುಕಾಟದಲ್ಲಿದ್ದೆ. ಹೋರಾಟ ಅಥವಾ ಹಾರಾಟದ ಪ್ರತಿಕ್ರಿಯೆಗಳಿಲ್ಲದೇ ಯಾರಾದರೂ ವರ್ಕೌಟ್ ಮಾಡುವ ಸ್ಥಳವಿದೆಯೇ? ಎಂಬೆಲ್ಲಾ ಹುಡುಕಾಟದಲ್ಲಿ ನಾನಿದ್ದೆ. ಜಿಮ್​ಗಳಲ್ಲಿ ಯಾವುದೇ ಹೋರಾಟ ಅಥವಾ ಹಾರಾಟಗಳಿಲ್ಲದಂತೆ ಸಂದರ್ಭ ಸೃಷ್ಟಿಸುವುದು ನಮ್ಮ ಜವಾಬ್ದಾರಿ ಎಂಬುದನ್ನು ನಾನು ಕಂಡುಕೊಂಡೆ ಎಂದು ಹೇಳಿದ್ದಾರೆ.

ಬಹಳಷ್ಟು ಜಿಮ್​ಗಳು ಇತ್ತೀಚೆಗಷ್ಟೇ ಮತ್ತೆ ತೆರೆಯುತ್ತಿವೆ. ತಮ್ಮ ಫಿಟ್ನೆಸ್ ಜತೆಗೆ ದೇಹದ ಆಕಾರ, ಸದೃಢ ದೇಹಕ್ಕಾಗಿ ಎಲ್ಲರೂ ಚಿಂತಿಸುತ್ತಾರೆ. ಮತ್ತೆ ಜಿಮ್​ಗಳಿಗೆ ಸೇರುತ್ತಾರೆ. ಮನೆಯಲ್ಲಿ ವರ್ಕೌಟ್ ಮಾಡುವುದು ಒಬ್ಬರಿಗೆ ಮಾತ್ರ ಸಾಧ್ಯ. ಜಿಮ್​ಗಳಲ್ಲಿ ನಿಮಗೆ ಸರಿಯಾದ ಅನುಭವವಿದೆಯೇ? ಮೊದಲ ಬಾರಿಗೆ ಜಿಮ್ ಸೇರುತ್ತಿದ್ದೀರಾ? ಹೀಗಿರುವಾಗ ಈ ಹಂತಗಳು ನೆನಪಿನಲ್ಲಿರಲಿ ಎಂದು ಕೆಲವು ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ.

ಜಿಮ್ ಮೆಂಬರ್: ಸಾಂಕ್ರಾಮಿಕ ಸಮಯದಲ್ಲಂತೂ ಜಿಮ್ ನಡೆಸುವವರ ಪರಿಸ್ಥಿತಿ, ಅವರಿಗೆ ಯಾವುದೇ ಗಳಿಕೆಯಿಲ್ಲದ ಕಾರಣ ಅತ್ಯಂತ ಕೆಟ್ಟದಾಗಿತ್ತು. ಅನೇಕ ತರಬೇತುದಾರರು ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಿ ಹಣ ಗಳಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದರು. ಬಹಳ ದಿನಗಳ ನಂತರ ನೀವು ಜಿಮ್​ಗೆ ಎಂಟ್ರಿಯಾದರೆ, ಈಗ ತಾನೆ ಗುಹೆಯೊಳಕ್ಕೆ ಪ್ರವೇಶಿಸುತ್ತಿರುವ ಸಿಂಹದಂತೆ ಆಗಿರುತ್ತೀರಿ. ಹಾಗಾಗಿ ಮೊದಲಿಗೆ ಜಿಮ್​ ಮೆಂಬರ್​ಶಿಪ್​ ಪಡೆಯಿರಿ.

ವಾರ್ಷಿಕ ಮೆಂಬರ್ಶಿಪ್( annual membership) ಖರೀದಿಸಬೇಡಿ
ವಾರ್ಷಿಕ ಮೆಂಬರ್​ಶಿಪ್​ಗೆ ನೀವು ಹೆಚ್ಚಿನ ಹಣ ನೀಡಬೇಕಾಗುತ್ತದೆ. ಹೆಚ್ಚು ಆಕರ್ಷಕವಾಗಿ ಕಂಡರೂ ಸಹ ಬಹಳ ದಿನಗಳವರೆಗೆ ಅಲ್ಲಿಯೇ ಕಲಿಯಬೇಕಾದ ಸಂದರ್ಭ ಸಮಯ ಕಳೆಯುತ್ತಿದ್ದಂತೆಯೇ ನಿಮಗೆ ಕಿರಿ ಭಾವವನ್ನುಂಟು ಮಾಡಬಹುದು. ಇದರ ಬದಲಾಗಿ, ಮೊದಲಿಗೆ ಜಿಮ್ ಸೇರಲು ಬಯಸುತ್ತಿದ್ದರೆ ಟ್ರಯಲ್ ಸೆಷನ್​ಗಾಗಿ ಕೇಳಿ. ಒಂದು ತಿಂಗಳ ಮೆಂಬರ್​ಶಿಪ್​ನಲ್ಲಿ ಸದಸ್ಯತ್ವ ಪಡೆಯಿರಿ. ನಿಮಗೆ ಆರಾಮದಾಯಕ ಅನಿಸಿದರೆ ದೀರ್ಘಾವಧಿಯ ಸದಸ್ಯತ್ವದಲ್ಲಿ ಮುಂದುವರೆಯಬಹುದು.

ವೈಯಕ್ತಿತ ತರಬೇತುದಾರ
ಇದೇ ರೀತಿ ನೀವು ಜಿಮ್ ತರಬೇತಿಗೆ ಸೇರಲು ಯೋಚಿಸಿದ್ದರೆ, ವೈಯಕ್ತಿತ ತರಬೇತುದಾರರನ್ನು ಹೊಂದಿರಲೇಬೇಕು. ಹೊಸ ಹೊಸ ಉಪಕರಣಗಳ ಬಳಕೆ, ಇದರಿಂದ ಉಂಟಾಗುವ ಆತಂಕ, ಭಯ ಇಲವೆಲ್ಲವನ್ನು ನೀವು ಎದುರಿಸಬೇಕಾಗುವ ಸಂದರ್ಭ ಬರುತ್ತವೆ. ಹಾಗಾಗಿ ತರಬೇತುದಾರರು ಅತ್ಯಗತ್ಯ. ಜತೆಗೆ ಜಿಮ್​ನಲ್ಲಿ ಏಕಾಂಗಿಯಾಗಿ ಅನುಭವಿಸುವ ಆತಂಕವನ್ನು ಇದು ದೂರ ಮಾಡುತ್ತದೆ.

ಸ್ನೇಹಿತರು ಜೊತೆಗಿರಲಿ
ನೀವು ಸ್ನೇಹಿತರು ಅಥವಾ ಸಂಗಾತಿಯೊಂದಿಗೆ ವರ್ಕೌಟ್ ಮಾಡಿದರೆ, ನಿಮ್ಮ ಫಿಟ್ನೆಸ್ ಸಾಧನೆಯ ಗುರಿಯನ್ನು ಬುಹುಬೇಗ ತಲುಪಬಹುದು. ಅವರೊಟ್ಟಿಗೆ ಜಿಮ್​ನಲ್ಲಿ ಕಳೆಯುವ ಕ್ಷಣ ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಈ ಕುರಿತಂತೆ ಸಂಶೋಧನೆಗಳೂ ನಡೆದಿವೆ.

ಗುರಿ ನೇರವಾಗಿರಲಿ, ಸ್ಪಷ್ಟವಾಗಿರಲಿ
ದೀರ್ಘಾವಧಿಯಲ್ಲಿ ಸಾಧಿಸಿಕೊಳ್ಳಬಹುದಾದ ನಿಮ್ಮ ಗುರಿಯನ್ನು ಹೆಚ್ಚು ಆಯ್ದುಕೊಳ್ಳಿ ಮತ್ತು ತರಬೇತುದಾರರಿಗೆ ಈ ಕುರಿತಾಗಿ ತಿಳಿಸಿ. ನನ್ನ ಮದುವೆಗೆ ಮುಂಚೆ 10 ಕೆಜಿ ಇಳಿಸಲೇಬೇಕು ಎಂಬ ತಕ್ಷಣದ ನಿರ್ಧಾರ ಆರೋಗ್ಯಕ್ಕೆ ಹೆಚ್ಚು ಅಪಾಯವನ್ನು ತಂದೊಡ್ಡುತ್ತದೆ. ಜತೆಗೆ ಮಾನಸಿಕ ಆರೋಗ್ಯವೂ ಹದಗೆಡುತ್ತದೆ.

ಜಿಮ್ ಸೇರುವುದು ನಿಮ್ಮ ಆರೋಗ್ಯ ಮತ್ತು ಫಿಟ್ನೆಸ್ ದೃಷ್ಟಿಯಿಂದ ಒಳ್ಳೆಯದು. ಇದು ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಆದರೆ ಜಿಮ್ ಸೇರುವ ಮೊದಲು ಶರೀರ ಶಾಸ್ತ್ರಜ್ಞ ವಾಲ್ಟರ್ ಬ್ರಾಡ್ ಫೋರ್ಡ್ ಅವರ ಫ್ಲೈಟ್ ಅಥವಾ ಫೈಟ್ ( ಹೋರಾಟ ಅಥವಾ ಹಾರಾಟ)ದ ವ್ಯಾಖ್ಯಾನ ನೆನಪಿನಲ್ಲಿರಲಿ.

ಇದನ್ನೂ ಓದಿ:

Late Night Exercise: ರಾತ್ರಿ ಹೊತ್ತು ವ್ಯಾಯಾಮ ಮಾಡ್ತೀರಾ? ಈ ಕೆಲವು ವಿಷಯಗಳು ನೆನಪಿನಲ್ಲಿರಲಿ

Workouts After Long Break: ತಿಂಗಳುಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ವ್ಯಾಯಾಮ ಮಾಡಲು ಈ ನಿಯಮಗಳನ್ನು ಪಾಲಿಸಿ

Click on your DTH Provider to Add TV9 Kannada