AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Sink Clean Tips in Kannada : ಅಡುಗೆ ಮನೆಯ ಸಿಂಕ್ ಬ್ಲಾಕ್ ಆಗಿದ್ಯಾ? ಈ ಟ್ರಿಕ್ಸ್ ಬಳಸಿ

ಮಹಿಳೆಯರ ಅಚ್ಚು ಮೆಚ್ಚಿನ ಸ್ಥಳವಾದ ಅಡುಗೆ ಮನೆಯನ್ನು ಸ್ವಚ್ವವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಕೆಲವೊಮ್ಮೆ ಎಷ್ಟೇ ಅಡುಗೆ ಮನೆಯ ಸ್ವಚ್ಛತೆಯ ಕಡೆಗೆ ಗಮನ ಕೊಟ್ಟರೂ ಅಡುಗೆ ಮನೆಯಲ್ಲಿರುವ ಸಿಂಕ್ ಬ್ಲಾಕ್ ಆಗಿ ಕೆಟ್ಟ ವಾಸನೆಯು ಬರುತ್ತದೆ. ಬೇಸಿಗೆಯಲ್ಲಿ ಈ ರೀತಿಯಾಗಿ ಬಿಟ್ಟರಂತೂ, ನೊಣಗಳು ಹಾರಾಡುತ್ತಾ ಇರುತ್ತವೆ. ಹೀಗಾಗಿ ಅಡುಗೆ ಮನೆಗೆ ಹೋಗಲು ಕೂಡ ಮನಸ್ಸಾಗುವುದಿಲ್ಲ. ಹೀಗಾದಾಗ ಮನೆಯಲ್ಲೇ ಇರುವ ಕೆಲವೇ ಕೆಲವು ವಸ್ತುಗಳನ್ನು ಬಳಸಿ ಬ್ಲಾಕ್ ಅನ್ನು ತೆಗೆಯಬಹುದು.

Kitchen Sink Clean Tips in Kannada : ಅಡುಗೆ ಮನೆಯ ಸಿಂಕ್ ಬ್ಲಾಕ್ ಆಗಿದ್ಯಾ? ಈ ಟ್ರಿಕ್ಸ್ ಬಳಸಿ
Kitchen Sink Clean Tips in Kannada
ಸಾಯಿನಂದಾ
| Edited By: |

Updated on: May 03, 2024 | 5:02 PM

Share

ಅಡುಗೆಯೆಲ್ಲಾ ಆದ ಬಳಿಕ ರಾಶಿ ಪಾತ್ರೆಗಳು ಸಿಂಕ್ ಅನ್ನು ತುಂಬಿಕೊಳ್ಳುತ್ತವೆ. ಪಾತ್ರೆಗಳನ್ನು ತೊಳೆದ ಬಳಿಕ ಸಿಂಕ್ ಬೇಗನೇ ಕೊಳಕಾಗುವುದು, ಬ್ಲಾಕ್ ಆಗುವುದು ಸಹಜ. ಅದಲ್ಲದೇ ಕೆಲವೊಮ್ಮೆ ಬೇಡದ ವಸ್ತುಗಳು ಸಿಂಕ್ ಒಳಗೆ ಸೇರಿಕೊಂಡು ಬ್ಲಾಕ್ ಆಗುತ್ತದೆ. ಈ ಸಿಂಕನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ಹಲವಾರು ರೋಗಗಳು ಕಾಡುತ್ತವೆ. ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಅಡುಗೆ ಮನೆಯ ಸಿಂಕ್ ನಲ್ಲಿ ತುಂಬಿರುವ ಬ್ಲಾಕ್ ಅನ್ನು ತೆಗೆಯಬಹುದು.

  • ಅಡುಗೆ ಮನೆಯ ಸಿಂಕ್ ಬ್ಲಾಕ್ ನಿಂದಾಗಿ ಕಿಚನ್ ಕೆಟ್ಟ ವಾಸನೆ ಬರುತ್ತಿರುತ್ತದೆ. ಸಿಂಕ್‌ ಬ್ಲಾಕ್‌ ಆದಾಗ ಕುದಿಯುವ ನೀರನ್ನು ಸಿಂಕ್‌ಗೆ ಸುರಿಯಿರಿ. ಹೀಗೆ ಮಾಡಿದಾಗ ಪೈಪ್‌ನ ಬದಿಗಳಲ್ಲಿ ಅಂಟಿರುವ ಜಿಡ್ಡು, ಸಿಲುಕಿ ಹಾಕಿಕೊಂಡಿರುವ ಪದಾರ್ಥಗಳು ಕೊಚ್ಚಿ ಹೋಗಿ ಪೈಪ್ ಸ್ವಚ್ಛವಾಗುತ್ತದೆ.
  • ಬ್ಲಾಕ್ ಆಗಿರುವ ಸಿಂಕನ್ನು ತೆರವುಗೊಳಿಸಲು ಒಂದು ಕಪ್‌ ನೀರಿಗೆ ಬೇಕಿಂಗ್‌ ಸೋಡಾ ಬೆರೆಸಿ ಸಿಂಕ್ ಮೇಲೆ ಸುರಿಯಿರಿ. ಆ ತಕ್ಷಣವೇ ವಿನೆಗರ್‌ ಅನ್ನು ಸುರಿದರೆ ಸಿಂಕ್ ಒಳಗೆ ಬ್ಲಾಕ್ ಆಗಿರುವ ಪದಾರ್ಥಗಳು ಸರಾಗವಾಗಿ ಹರಿದು ಹೋಗುತ್ತದೆ.
  • ಸಿಂಕ್ ಬ್ಲಾಕ್ ಆಗಿದ್ದರೆ ಅರ್ಧ ಕಪ್ ಉಪ್ಪು ಹಾಕಿ, ಆ ಬಳಿಕ ಅರ್ಧ ಕಪ್ ಬೇಕಿಂಗ್ ಸೋಡಾ ಹಾಕಿ. ಅರ್ಧ ಗಂಟೆ ಬಿಟ್ಟು ಒಂದು ಕಪ್ ಬಿಸಿ ನೀರನ್ನು ಸುರಿಯುವುದರಿಂದ ಬ್ಲಾಕ್ ಸರಿಯಾಗುತ್ತದೆ.
  • ಅಡುಗೆ ಮನೆಯ ಸಿಂಕ್ ಗಳನ್ನು ತೆರವುಗೊಳಿಸಲು ಒಂದು ಕಪ್ ಅಡುಗೆ ಸೋಡಾವನ್ನು ಒಂದು ಕಪ್ ನಿಂಬೆ ರಸದೊಂದಿಗೆ ಬೆರೆಸಿ ಸಿಂಕ್ ಗೆ ಹಾಕಿ, ಸ್ವಲ್ಪ ಸಮಯದ ನಂತರದಲ್ಲಿ ಕುದಿಯುವ ನೀರನ್ನು ಹಾಕಿದರೆ ಪೈಪ್ ಒಳಗಿರುವ ಜಿಡ್ಡು ಹಾಗೂ ಆಹಾರ ಪದಾರ್ಥಗಳು ಸುಲಭವಾಗಿ ಹರಿದು ಹೋಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ