Ali Akbar Khan Birth Centenary: ನಿಮ್ಮ ಟೈಮ್​ಲೈನ್; ‘ಪುರುಸೊತ್ತು ಸಿಗಲೆಂದು ತಂತಿ ತುಂಡರಿಸುವುದನ್ನು ಕಲಿತೆ!’

Sarod Maestro : ಬೆಳಗಿನ ನಾಲ್ಕಕ್ಕೆ ರಿಯಾಜ್. ‘ಅಲಿ ಅಕ್ಬರ್’ ಅಪ್ಪನ ಮೊದಲ ಕೂಗಿಗೆ ಸರೋದ್ ಹಿಡಿದು ಮೂರು ವರ್ಷದ ಅಲಿ ತನ್ನ ರೂಮು ಬಿಟ್ಟಾಗಿರುತ್ತಿತ್ತು. ಎರಡನೇ ಕರೆಗೆ ರೂಮಿನ ಬಳಿ, ಮೂರನೇ ಕರೆಗೆ ಅಪ್ಪನ ಬಳಿ. ಹಾಗಾಗಿ ಪುಟ್ಟ ಅಲಿ ಮಲಗುವಾಗ ಡ್ರೆಸ್ ಮಾಡಿಕೊಂಡೇ ಮಲಗುತ್ತಿದ್ದರು.

Ali Akbar Khan Birth Centenary: ನಿಮ್ಮ ಟೈಮ್​ಲೈನ್; ‘ಪುರುಸೊತ್ತು ಸಿಗಲೆಂದು ತಂತಿ ತುಂಡರಿಸುವುದನ್ನು ಕಲಿತೆ!’
ಸರೋದ ಸಾಮ್ರಾಟ್ ಉಸ್ತಾದ ಅಲಿ ಅಕ್ಬರ್ ಖಾನ
Follow us
ಶ್ರೀದೇವಿ ಕಳಸದ
|

Updated on:Apr 14, 2022 | 9:55 AM

Ustad Ali Akbar Khan Birth Centenary : ಸರೋದ್ ಸಾಮ್ರಾಟ ಉಸ್ತಾದ ಅಲಿ ಅಕ್ಬರ್ ಖಾನ್, ತಂದೆ ಅಲ್ಲಾವುದ್ದೀನ್ ಖಾನ್ ಅವರಿಂದ ಮೂರನೇ ವರ್ಷಕ್ಕೆ ಸಂಗೀತದ ಪಾಠ ಪ್ರಾರಂಭಿಸಿದರು. ಅದು ಅಂತಿಂಥ ಪಾಠವಲ್ಲ. ಮಗು ಅಂತ ಯಾವುದೇ ಮುಲಾಜೂ ಇರಲಿಲ್ಲ. ತೀರಾ ಕಠಿಣವಾದ ಪಾಠಕ್ರಮ. ಸೂರ್ಯ ಹುಟ್ಟುವ ಮೊದಲೇ ಇವರಿಗೆ ಪಾಠ ಶುರು. ನಾಲ್ಕು ಗಂಟೆಗೆ ಸರಿಯಾಗಿ ರಿಯಾಜ್ ಪ್ರಾರಂಭ. ಬೆಳಗಾಗುತ್ತಿದ್ದಂತೆ ‘ಅಲಿ ಅಕ್ಬರ್’ ಅಂತ ಅಪ್ಪ ಕೂಗುತ್ತಿದ್ದರು. ಮೊದಲ ಕರೆಗೆ ಸರೋದ್ ಹಿಡಿದು ಅಲಿ ಅಕ್ಬರ್ ತನ್ನ ರೂಮು ಬಿಟ್ಟಾಗಿರುತ್ತಿತ್ತು. ಎರಡನೇ ಕರೆಗೆ ರೂಮಿನ ಬಳಿ ಇರುತ್ತಿದ್ದರು. ಮೂರನೇ ಕರೆಗೆ ಅಪ್ಪನ ಬಳಿ ಕುಳಿತಾಗಿರುತ್ತಿತ್ತು. ಎಲ್ಲವೂ ಕರಾರುವಾಕ್ಕಾಗಿ ಆಗಬೇಕು. ಸ್ವಲ್ಪ ಎಡವಟ್ಟಾದರೆ ಏಟು ತಪ್ಪಿದ್ದಲ್ಲ. ಹಾಗಾಗಿ ಪಾಪ ಅಲಿ ಅಕ್ಬರ್ ಖಾನ್ ಮಲಗುವಾಗ ಡ್ರೆಸ್ ಮಾಡಿಕೊಂಡೇ ಮಲಗುತ್ತಿದ್ದರು. ತಂದೆಯ ಈ ಕಠಿಣ ಶಿಕ್ಷಾಕ್ರಮ ತಾಳಲಾರದೆ ಅಲಿ ಅಕ್ಬರ್ ಖಾನ್ ಮನೆ ಬಿಟ್ಟು ಓಡಿ ಹೋಗಿದ್ದೂ ಉಂಟು. ಯಾವುದೋ ಒಂದು ಸಂಚಾರ ಸರಿಯಾಗಿ ಬರಲಿಲ್ಲ ಎಂದು ಖಾನ್‌ಸಾಹೇಬರನ್ನು ಒಂದು ವಾರ ಮರಕ್ಕೆ ಕಟ್ಟಿ ಹೊಡೆದರು ಅಷ್ಟೇ ಅಲ್ಲ ಊಟ ಕೂಡ ಕೊಡಲಿಲ್ಲವಂತೆ. ಶೈಲಜ ಮತ್ತು ವೇಣುಗೋಪಾಲ್, ಲೇಖಕರು, ಅನುವಾದಕರು, ಮೈಸೂರು

(ಭಾಗ 1) 

ಖಾನ್ ಸಾಹೇಬರು ಅಪ್ಪನನ್ನು ನೆನಸಿಕೊಳ್ಳುತ್ತಾ ಅವರು ತುಂಬಾ ಕಟ್ಟುನಿಟ್ಟಿನ ಮನುಷ್ಯ. ನನ್ನೊಂದಿಗೆ ಎಂದೂ ಆಟವಾಡಲೇ ಇಲ್ಲ. ನಗಲೂ ಇಲ್ಲ. ನನ್ನ ಪಾಲಿಗೆ ಹುಲಿಯಂತಿದ್ದರು. ನನಗೆ ಅವರಿಂದ ಪ್ರೀತಿ ಬೇಕಿತ್ತು. ಆದರೆ ಅವರು ಯೋಚಿಸಿದ್ದೇ ಬೇರೆ ರೀತಿ. ಅತಿಯಾಗಿ ಪ್ರೀತಿಸಿಬಿಟ್ಟರೆ ಮಗ ಹಾಳಾಗಿ ಬಿಡುತ್ತಾನೆ ಅಂತ ಅವರಿಗೆ ಅಳುಕು ಇತ್ತು. ಆಗ ನನಗೆ ಅವರ ನಡೆವಳಿಕೆಯ ಬಗ್ಗೆ ತುಂಬಾ ಸಿಟ್ಟು ಇತ್ತು. ಈಗ ನನಗೆ ಅರ್ಥವಾಗಿದೆ. ನಾನು ಅವರಿಗೆ ಋಣಿಯಾಗಿದ್ದೇನೆ ಎನ್ನುತ್ತಾರೆ. ತಂದೆ ಇಷ್ಟೊಂದು ಕಠಿಣವಾಗಿ ನಡೆದುಕೊಂಡಿದ್ದರ ಬಗ್ಗೆ ಖಾನ್ ಸಾಹೇಬರೇ ಒಂದು ಸಂದರ್ಶನದಲ್ಲಿ ವಿವರಣೆ ನೀಡುತ್ತಾ ಅವರು ಪಟ್ಟ ಶ್ರಮ ಅವರನ್ನು ಕಲಿಸುವ ವಿಷಯದಲ್ಲಿ ನಿರ್ದಯಿಯನ್ನಾಗಿಸಿತ್ತು. ಮುಂಗೋಪ ಕೂಡ ಅಸಾಧ್ಯವಾಗಿತ್ತು. ವಿದ್ಯಾರ್ಥಿಗಳನ್ನು ಸರಿಯಾಗಿ ರೂಪಿಸಬೇಕು, ಅವರು ಸರಿಯಾಗಿ ಕಲಿಯಬೇಕು ಅನ್ನುವ ಕಾಳಜಿಯೇ ಅವರನ್ನು ಹೀಗೆ ಮಾಡಿದ್ದು. ಆದರೆ ನಮ್ಮ ವಾದ್ಯಸಂಗೀತ ಪರಂಪರೆಯಲ್ಲಿ ಏನೇನು ಅತ್ಯುತ್ತಮವಾದದ್ದು ಇದೆಯೋ ಅದೆಲ್ಲದರ ಸಂಯೋಜನೆಯನ್ನು ನಮ್ಮ ತಂದೆಯವರು ಕಲಿಸಿದರು. ಅವರು ನನಗೆ ಎಲ್ಲಾ ರೀತಿಯ ವಾದ್ಯಗಳನ್ನೂ ಹೇಳಿಕೊಟ್ಟರು. ಬಾಕ್, ಬೆಥೂವನ್ ಕೇಳಿಸಿದರು. ದಿನಕ್ಕೆ 15 ಗಂಟೆಗಳು ಪಾಠ ಮಾಡಿದ್ದೂ ಇದೆ. ಅಭ್ಯಾಸ ಕೂಡ ತುಂಬಾ ಕಠಿಣವಾಗಿರುತ್ತಿತ್ತು. ನಾನು ನುಡಿಸುವಾಗ ತಂತಿಯನ್ನು ತುಂಡರಿಸುವುದನ್ನು ಕಲಿತೆ. ಯಾಕೆಂದರೆ ಅದನ್ನು ಸರಿಪಡಿಸುವ ನೆಪದಲ್ಲಿ ಒಂದರ್ಧ ಗಂಟೆ ಪುರುಸೊತ್ತು ಪಡೆಯಬಹುದಿತ್ತು!

ಸಂಗೀತ ಒಲಿಯಬೇಕಾದರೆ ಸಾಧನೆ ಬೇಕು ಅನ್ನೋದು ಖಾನ್ ಸಾಹೇಬರಿಗೂ ಮನವರಿಕೆಯಾಗಿತ್ತು. ನಿರಂತರವಾಗಿ ಹತ್ತು ವರ್ಷ ಸಾಧನೆ ಮಾಡಿದರೆ, ನಿಮ್ಮ ಸಂಗೀತದಿಂದ ನಿಮಗೆ ಒಂದಿಷ್ಟು ಸಂತೋಷ ಸಿಗಬಹುದು. ಇಪ್ಪತ್ತು ವರ್ಷ ಅಭ್ಯಾಸ ಮಾಡಿದರೆ, ನೀವು ಕಾರ್ಯಕ್ರಮ ನೀಡಬಹುದು, ಸಭಿಕರನ್ನೂ ಆನಂದ ಪಡಿಸಬಹುದು. ಮೂವತ್ತು ವರ್ಷ ಅಭ್ಯಾಸ ಮಾಡಿದರೆ ನಿಮ್ಮ ಗುರುವೂ ನಿಮ್ಮನ್ನು ಮೆಚ್ಚಿಕೊಳ್ಳಬಹುದು. ಆದರೆ ನಿಜವಾದ ಕಲಾವಿದನಾಗಬೇಕಾದರೆ ಇನ್ನೂ ಹಲವಾರು ವರ್ಷ ಅಭ್ಯಾಸ ಮಾಡಬೇಕು. ಆಗ ನೀವು ದೇವರನ್ನೂ ಮೆಚ್ಚಿಸಬಹುದು. ನನಗೆ ಸಂಗೀತ ನಿಜವಾಗಿ ಅರ್ಥವಾಗಿದ್ದು ನನಗೆ ೫೦ ವರ್ಷಗಳಾದಾಗ. ಎನ್ನುತ್ತಿದ್ದರು. ಅಲಿ ಅಕ್ಬರ್‌ಖಾನ್ ತಮ್ಮ ಧಮನಿಗಳಲ್ಲಿ ಸಂಗೀತವನ್ನೇ ತುಂಬಿಕೊಂಡು ಹುಟ್ಟಿದವರು. ಆದರೆ ನಿರಂತರ ಕಠಿಣ ಅಭ್ಯಾಸದಿಂದ ಅವರು ವಾದಕರಲ್ಲೆಲ್ಲಾ ಅತ್ಯಂತ ಶ್ರೇಷ್ಠರೆನಿಸಿಕೊಂಡರು ಎಂದು ಖಾನ್‌ಸಾಹೇಬರ ಬಗ್ಗೆ ರವಿಶಂಕರ್ ಹೇಳುತ್ತಾರೆ.

ಇದನ್ನೂ ಓದಿ : Gabriel Garcia Marquez’s Birth Anniversary: ‘ಗೋರಿಯ ಹಾದಿಯಲ್ಲಿ’ ಸೂರ್ಯ ತಣ್ಣಗಾಗೋವರೆಗೂ ತಡೀರಿ

ಖಾನ್ ಸಾಹೇಬರು ತಮ್ಮ 13ನೇ ವರ್ಷದಲ್ಲಿ ಮೊದಲ ಕಛೇರಿಯನ್ನು (ಅಲಹಾಬಾದ್ 19360 ನೀಡಿದರು. ಅತ್ಯಂತ ಸಣ್ಣ ವಯಸ್ಸಿನಲ್ಲಿ ಆಕಾಶವಾಣಿಗೆ ಆಯ್ಕೆಯಾದ ಕಲಾವಿದರೂ ಇವರೇ. ನಂತರ ಹಲವಾರು ಕಾರ್ಯಕ್ರಮಗಳನ್ನು ತಂದೆಯವರ ಜೊತೆ ಹಾಗೂ ಸ್ವತಂತ್ರವಾಗಿ ನೀಡಿದರು. ಆಕಾಶವಾಣಿಯಲ್ಲೂ ಕಾರ್ಯಕ್ರಮ ನೀಡುತ್ತಿದ್ದರು. 1940rಲ್ಲಿ ಲಕ್ನೋ ಆಕಾಶವಾಣಿಯಲ್ಲಿ ಸಂಗೀತ ನಿರ್ದೇಶಕರಾಗಿ ಸೇರಿಕೊಂಡರು. ಮಗನಿಗೆ ಸ್ವಲ್ಪ ಸ್ವಾತಂತ್ರ್ಯ ಸಿಗಲಿ ಅಂತ ಅವರ ತಂದೆಯವರೇ ಈ ಏರ್ಪಾಡು ಮಾಡಿದ್ದರು. ಆದರೆ ಮಗನಿಗೆ ಮಾಮೂಲಿಗಿಂತ ಅರ್ಧದಷ್ಟು ಮಾತ್ರ ಸಂಬಳ ನೀಡಬೇಕೆಂದು ತಾಕೀತು ಮಾಡಿದ್ದರಂತೆ! ಯಾಕೆಂದರೆ ಮಗನಲ್ಲಿ ವಿನಯ ಉಳಿಯಬೇಕು ಅಂತ! ನಮ್ಮ ತಂದೆಯವರ ಮುಖ್ಯ ಉದ್ದೇಶವೇ ನನ್ನ ಸಂಗೀತವನ್ನು ಕೇಳುವುದಾಗಿತ್ತು. ನನ್ನ ಸಂಗೀತ ಪದೆ ಪದೇ ಪ್ರಸಾರವಾಗುತ್ತಿತ್ತು. ತಪ್ಪು ಕಂಡ ತಕ್ಷಣ ಮುಂದಿನ ರೈಲಿನಲ್ಲಿ ಲಕ್ನೋಗೆ ಬಂದು ಅದು ಸರಿಯಾಗುವವರೆಗೆ ನುಡಿಸುವಂತೆ ಮಾಡಿ ಹೋಗುತ್ತಿದ್ದರು.

1942rಲ್ಲಿ ಜೋಧಪುರದ ಮಹಾರಾಜ ಹನುಮಂತಸಿಂಗ್ ಅವರ ಆಸ್ಥಾನ ವಿದ್ವಾಂಸರಾಗಿ ಅಲಿ ಅಕ್ಬರ್ ಖಾನ್ ಅವರು ನೇಮಕಗೊಂಡರು. ಅಲ್ಲಿ ಇವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡರು. ತೀರಾ ಸಣ್ಣ ವಯಸ್ಸಿಗೆ ಅವರಿಗೆ ಉಸ್ತಾದ್ ಎಂಬ ಬಿರುದನ್ನು ನೀಡಿದರು. ಅಲಿ ಅಕ್ಬರ್‌ಖಾನ್ ಅವರ ನೇತೃತ್ವದಲ್ಲಿ ಒಂದು ಸಂಗೀತ ಶಾಲೆಯನ್ನು ಪ್ರಾರಂಭ ಮಾಡಬೇಕೆಂದಿದ್ದರು. ಆದರೆ ಈ ಆಸೆ ನೆರವೇರಲಿಲ್ಲ ಏಕೆಂದರೆ ಮಹಾರಾಜರು ೧೯೪೮ರಲ್ಲಿ ವಿಮಾನ ಅಪಘಾತದಲ್ಲಿ ಮೃತರಾದರು. ನಂತರದ ದಿನಗಳಲ್ಲಿ ಖಾನ್ ಸಾಹೇಬರ ಹಣಕಾಸಿನ ಸ್ಥಿತಿ ಅಷ್ಟು ಚೆನ್ನಾಗಿರಲಿಲ್ಲ. ಮುಂಬೈಗೆ ಹೋದರು. ಅಲ್ಲಿ ಮೊದಲು ಸಂಗೀತ ಪಾಠ ಹೇಳಿಕೊಡುತ್ತಿದ್ದರು. ನಂತರ ಸಿನಿಮಾಕ್ಕೆ ಕರೆ ಬಂತು. ಆಗ ಸಿನಿಮಾ ಸಂಗೀತ ಇನ್ನೂ ಶಾಸ್ತ್ರೀಯ ರಾಗಗಳನ್ನೇ ಆಧರಿಸಿತ್ತು. ಅಂದಿನ ಪ್ರಮುಖ ಸಂಗೀತ ನಿರ್ದೇಶಕರೆಲ್ಲಾ ಶಾಸ್ತ್ರೀಯ ಸಂಗೀತ ಕಲಿತವರೇ ಆಗಿದ್ದರು. ಎಸ್ ಡಿ ಬರ್ಮನ್, ಅನಿಲ್ ಬಿಸ್ವಾಸ್, ಪನ್ನಾಲಾಲ್ ಘೋಷ್ ಇವರೆಲ್ಲಾ ಶ್ರೇಷ್ಠ ಮಟ್ಟದ ಶಾಸ್ತ್ರೀಯ ಸಂಗೀತ ಕಲಾವಿದರಾಗಿದ್ದರು.

ಸಿನೆಮಾಗೆ ಸಂಗೀತ ನೀಡುವುದು ಖಾನ್ ಸಾಹೇಬರಿಗೆ ಅಷ್ಟೇನು ಇಷ್ಟವಿರಲಿಲ್ಲ. ಗೆಳೆಯ ಋತ್ವಿಕ್ ಘಟಕ್ ತಮ್ಮ ಅಜಾಂತ್ರಿಕ್ ಚಲನಚಿತ್ರಕ್ಕೆ ಸಂಗೀತ ನೀಡಲು ಪುಸಲಾಯಿಸಿದರಂತೆ. ಅವರಿಗೆ ಸ್ವಲ್ಪ ಹಿಂಜರಿಕೆ ಇತ್ತು. ಆದರೆ ಘಟಕ್ ಅವರು ಹೇಳುವಂತೆ ಅಜಾಂತ್ರಿಕ್‌ಗೆ ಅವರು ನುಡಿಸಿದ ಹಿನ್ನೆಲೆ ಸಂಗೀತ ಸಿನಿಮಾಕ್ಕೆ ತೀರಾ ಸೊಗಸಾಗಿ ಹೊಂದಿಕೊಳ್ಳುತ್ತಿತ್ತು. ನಂತರ ಹಲವಾರು ಸಿನಿಮಾಗಳಿಗೆ ಅವರು ಸಂಗೀತ ನೀಡಿದರು. ಇದು ಬಾಬಾಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಇಂದಿನಿಂದ ನೀನು ನನ್ನ ಮಗನೇ ಅಲ್ಲ ಅಂತ ಸಿಟ್ಟಿನಿಂದ ಮಗನಿಗೆ ಟೆಲಿಗ್ರಾಂ ಕೂಡ ಕಳುಹಿಸಿದರು. ತಂದೆಯವರ ಸ್ವಭಾವವನ್ನು ತಿಳಿದಿದ್ದ ಖಾನ್ ಸಾಹೇಬರು ತುಂಬಾ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸ ಮುಂದುವರಿಸಿದ್ದರು. ಚೇತನ್ ಆನಂದ್ ಅವರ ಆಂಧಿಯಾ, ಸತ್ಯಜಿತ್ ರೇ ಅವರ ‘ದೇವಿ’, ಮರ್ಚೆಂಟ್ ಐವರಿ ಅವರ ’ದಿ ಹೌಸ್ ಹೋಲ್ಡರ್’, ತಪನ್ ಸಿನ್ಹರವರ ‘ಕ್ಷುದಿತ ಪಾಷಾಣ್’ ಮೊದಲಾದ ಸಿನಿಮಾಗಳಿಗೆ ಸಂಗೀತ ನೀಡಿದರು.

ಭಾಗ  2 : https://tv9kannada.com/tag/nimma-timeline

ಗಮನಿಸಿ: ನಿಮ್ಮ ಟೈಮ್​ಲೈನ್ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com 

ಇದನ್ನೂ ಓದಿ : Ramadan 2022: ನಿಮ್ಮ ಟೈಮ್​ಲೈನ್; ಉಪವಾಸದ ಮಾಸದಲಿ ಕರುಣೆ ತುಳುಕಲಿ ಉದಾರವಾಗಿರಿ, ಮೌನದಲಿ ಧ್ಯಾನಿಸಿ

Published On - 9:22 am, Thu, 14 April 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ