AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

S R Ekkundi Birthday : ಅಭಿಜ್ಞಾನ ; ‘ಮಿಸುನಿಜಿಂಕೆ’ ಬಲೆಗೆ ಕೆಡಹುವಲ್ಲಿ ಸೋತನೆ ಜಯಂತ?

Poetry : ‘ಎಕ್ಕುಂಡಿಯವರ ಕಾವ್ಯ ಎಂಬ ಮಿಸುನಿಜಿಂಕೆಯೂ ಓದುಗರನ್ನು ಮೋಹಗೊಳಿಸಿ ದಿಕ್ಕುಗೆಡಿಸಿ ನಾವು ಪಡೆದ ವಿಮರ್ಶೆಯ ಬಲೆಗಳಿಂದ ಅದನ್ನು ಮುಷ್ಠಿಗ್ರಾಹ್ಯವಾಗಿ ಬಂಧಿಸಿದೆವು ಅಂತ ಹೆಮ್ಮೆಯಿಂದ ಬೀಗುವ ಹೊತ್ತಿಗೆ ಅದು ಮತ್ತಿನ್ನೇನೋ ಆಗಿ ಅದರಾಚೆಗೆ ಉಳಿದಿರುತ್ತದೆ.’ ಡಿ. ವಿ. ಪ್ರಹ್ಲಾದ 

S R Ekkundi Birthday : ಅಭಿಜ್ಞಾನ ; ‘ಮಿಸುನಿಜಿಂಕೆ’ ಬಲೆಗೆ ಕೆಡಹುವಲ್ಲಿ ಸೋತನೆ ಜಯಂತ?
ಕವಿ ಸು. ರಂ ಎಕ್ಕುಂಡಿ
ಶ್ರೀದೇವಿ ಕಳಸದ
|

Updated on:Jan 20, 2022 | 3:33 PM

Share

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಇಂದು ಸುಬ್ಬಣ್ಣ ರಂಗನಾಥ ಎಕ್ಕುಂಡಿ | S. R. Ekkundi (1923-2995) ಅವರ ಜನ್ಮದಿನ. ಲೇಖಕ, ಸಂಚಯ ಸಾಹಿತ್ತ್ಯಿಕ ಪತ್ರಿಕೆಯ ಸಂಪಾದಕ ಡಿ. ವಿ. ಪ್ರಹ್ಲಾದ, ಎಕ್ಕುಂಡಿಯವರ ‘ಮಿಸುನಿಜಿಂಕೆ’ ಬಗ್ಗೆ ಬರೆದಿದ್ದು ಇಲ್ಲಿದೆ.

*

ನಮ್ಮ ಆಧುನಿಕ ಕನ್ನಡ ಕಾವ್ಯದ ಮುಖ್ಯ ಕವಿಗಳಲ್ಲಿ ಒಬ್ಬರು, ಧಾರವಾಡ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಜನಿಸಿದ ಎಕ್ಕುಂಡಿಯವರು ಕಿರಿ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡರು. ತಾಯಿ ಮತ್ತು ಬಂಧುಗಳ ನೆರವಿನಿಂದ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ನಂತರದ ಬಿ.ಎ. ಆನರ್ಸ್ ಪದವಿಯನ್ನು ಸಾಂಗಲಿಯ ವಿಲ್ಲಿಂಗ್‌ಡನ್ ಕಾಲೇಜಿನಲ್ಲಿ ಪಡೆದುಕೊಂಡರು. ಕೌಟುಂಬಿಕ ಸಾವು-ನೋವು ಅಪಾರವಾದ ಬಡತನದ ಕಷ್ಟದಲ್ಲೇ ಸಾಗಬೇಕಿದ್ದ ವಿದ್ಯಾಭ್ಯಾಸ ಎಕ್ಕುಂಡಿಯವರ ಮೇಲೆ ದಟ್ಟವಾದ ಪ್ರಭಾವ ಬೀರಿದೆ. ಹಿರಿಯರಾದ ವಿ. ಕೃ. ಗೋಕಾಕ್ ಮತ್ತು ರಂ. ಶ್ರೀ. ಮುಗಳಿಯವರ ಸಹವಾಸ ಹಾಗೂ ಅವರ ಕಾವ್ಯಗಳ ಪ್ರಭಾವಕ್ಕೆ ಒಳಗಾದ ಎಕ್ಕುಂಡಿಯವರು, ಇವರೆಲ್ಲರೂ ಸೇರಿ ರೂಪಿಸಿದ್ದ ‘ವರುಣಕುಂಜ’ ಎಂಬ ಸಾಹಿತ್ಯದ ಗೆಳೆಯರ ಬಳಗದ ಸಕ್ರಿಯ ಸದಸ್ಯರಾಗಿದ್ದರು. ಈ ಬಳಗದ ಚಟುವಟಿಕೆಗಳು ಅವರ ಆರಂಭಿಕ ಆಸಕ್ತಿಯನ್ನು ಪೋಷಿಸಿ ಬೆಳೆಸಿತು.

‘ಮಿಸುನಿಜಿಂಕೆ’ ಎಕ್ಕುಂಡಿಯವರ ಸಾರ್ಥಕ ಕಥನಕವನಗಳಲ್ಲೊಂದು. ಇಂದ್ರನ ಮಗಳು ಜಯಂತಿ ಹೊಂಬಣ್ಣದ ಸುಂದರವಾದ ಜಿಂಕೆಯೊಂದನ್ನು ಕಂಡು, ಮೋಹಗೊಂಡು ಅದು ತನಗೆ ಬೇಕೆಂದು ಕೋರಿದಾಗ ಇಂದ್ರ ತನ್ನ ಮಗ ಜಯಂತನನ್ನ ಅದರ ಬೇಟೆಗಾಗಿ ಕಳುಹಿಸುತ್ತಾನೆ. ಅವನು ತನ್ನ ಎಲ್ಲಾ ಶಕ್ತಿ ಸಾಮರ್ಥ್ಯಗಳನ್ನು ಬಳಸಿಯೂ ಆ ಜಿಂಕೆಯನ್ನು ಬಲೆಗೆ ಕೆಡಹುವಲ್ಲಿ ಸೋಲುತ್ತಾನೆ. ಕೊನೆಗೆ ಕುತ್ಸನಿಂದ ಪಡೆದ ಸಾರಬಲೆಯನ್ನು ಬೀಸಿ ಅದನ್ನು ಹಿಡಿದುತಂದು ತಂಗಿಗೊಪ್ಪಿಸುತ್ತಾನೆ, ಅವಳು ಮೋಹಿಸಿದ್ದ ಜಿಂಕೆ ಅವಳನ್ನೇ ಮೋಹಿಸಿದ ಶುಕ್ರನಾಗಿದ್ದು, ಬೇಟೆಯೇ ಬೇಟೆಗಾರನಾಗುವ, ಬೇಟೆಗಾರನೇ ಬೇಟೆಗೆ ಒಳಗಾಗುವ ಪ್ರಸಂಗವು ಘಟಿಸುತ್ತದೆ. ಕಾವ್ಯವೆನ್ನುವ ‘ಮಿಸುನಿಜಿಂಕೆ’ಯ ಬೇಟೆಗಾಗಿ ಕವಿಗಳು ತಮ್ಮೆಲ್ಲಾ ಸಾರಬಲೆಗಳನ್ನು ಪಡೆದು ತಂದು ಬೇಟೆಯಾಡಿದರೂ ಕಾವ್ಯ ಮಾತ್ರ ತನ್ನ ಬೇಟೆಯ ಗತಿಯನ್ನು ತಾನು ಪಾಲಿಸುತ್ತಿರುತ್ತದೆ. ಹಾಗೆಯೇ ಎಕ್ಕುಂಡಿಯವರ ಕಾವ್ಯ ಎಂಬ ಮಿಸುನಿಜಿಂಕೆಯೂ ಓದುಗರನ್ನು ಮೋಹಗೊಳಿಸಿ ದಿಕ್ಕುಗೆಡಿಸಿ ನಾವು ಪಡೆದ ವಿಮರ್ಶೆಯ ಬಲೆಗಳಿಂದ ಅದನ್ನು ಮುಷ್ಠಿಗ್ರಾಹ್ಯವಾಗಿ ಬಂಧಿಸಿದೆವು ಅಂತ ಹೆಮ್ಮೆಯಿಂದ ಬೀಗುವ ಹೊತ್ತಿಗೆ ಅದು ಮತ್ತಿನ್ನೇನೋ ಆಗಿ ಅದರಾಚೆಗೆ ಉಳಿದಿರುತ್ತದೆ.

ಮಿಸುನಿಜಿಂಕೆ

ಹಸಿರುಮಲೆತ ಮಲೆಗಂಧಮಾದನಿಯ ಬಯಲ ತಪ್ಪಲೋಡಿ

ಮಿಸುನಿಜಿಂಕೆ ಬಲು ಮುಂದೆ ಮುಂದೆ ನೆಗೆದಿತ್ತು ಹಿಂದೆ ನೋಡಿ

ತೊಳಗುತಿತ್ತು ಥಳಥಳಿಸುತಿತ್ತು ಮೈಬಣ್ಣ ಕಣ್ಣುಕುಕ್ಕಿ

ನಯನವಲಯಗಳ ನಡುವೆ ಹಸಿರು ಹೊಳೆದಿದ್ದವೆರಡು ಚಿಕ್ಕಿ

ನೀಲಶೃಂಗ ಸಿಂಗಾರ ಮೈಯ ಬಂಗಾರ ಮಿಂಚನಿಟ್ಟು

ಒಪ್ಪುತಿರಲು ನೆಗೆದಿತ್ತು ಮುಗಿಲ ನಕ್ಷತ್ರಮಾಲೆ ತೊಟ್ಟು

ಕಾಲ ಕೆಳಗೆ ನೆಲ ಓಡುತಿತ್ತು ನಭ ನೋಡುತಿತ್ತು ಮೇಲೆ

ಬಯಲ ನುಂಗಿ ಬೆಳಗಿತ್ತು ಹೇಮಹರಿಣದ ಸುವರ್ಣಲೀಲೆ

ಬಯಲು ದಿನ್ನೆ ಗಿರಿದರಿಯ ನೆಗೆದು ನಡೆದಿಂದ್ರಮಂಡಲಕ್ಕೆ

ಮಿಸುನಿಜಿಂಕೆ ನೀರಡಿಸಿ ಬಂದಿತಮರಾವತಿಯ ಪುರಕ್ಕೆ

ಚೆಲುವು ಜಿಗಿತು ಬಯಲಾಗಿ ಬಯಲು ಬನವಾಗಿ ಮೆರೆಯುತಿತ್ತು

ನವನಮೇರು ಮಂದಾರವೃಕ್ಷಗಳು ನಿಂತು ಸುತ್ತುಮುತ್ತು

ಚೆಲುವು ಹಸಿರು ಪಲ್ಲವಿಸಿದಂತೆ ಮರಮರಕೆ ಬಳ್ಳಿ ಹಬ್ಬಿ

ಅಲ್ಲಿ ಹೂತು ಬನಸಿರಿಗೆ ಸೋತು ಬಂದಿತ್ತು ಗಾಳಿ ತಬ್ಬಿ

ಸಾಲುಸಾಲು ನಿಂತಂಥ ಗಿಡದ ಬುಡದಲ್ಲಿ ಬಳ್ಳಿವರಿದು

ಮರದ ಕಂಪು ಕನವರಿಸಿ ತಂಪು ತೊರೆ ನಡೆದವೆಷ್ಟೊ ಹರಿದು

ಬಣ್ಣಬಣ್ಣಗಳ ಹಕ್ಕಿ ಹೂವು ಮರಿದುಂಬಿ ಚಿಟ್ಟೆ ಬಂದು

ಬನವ ಬಳಿಸಿದವು ರೆಕ್ಕೆವಡೆದ ಸೌಂದರ್ಯರೂಪವೆಂದು

ನೆಳಲ ತಂಪು ಹೂಗಂಪು ಹಕ್ಕಿಯುಲಿಯಿಂಪು ತುಂಬಿತೀಚೆ

ಮಿಸುಜಿಂಕೆ ಕುಡಿದಿತ್ತು ನೀರು ಸುರನದಿಯ ದಂಡೆಯಾಚೆ

SR Ekkundi Birthday My Poetry by Kannada Poet SR Ekkundi

2008ರಲ್ಲಿ ‘ಸಂಚಯ’ದಿಂದ ಪ್ರಕಟಿತ

(ಈ ಕವಿತೆಯ ಪೂರ್ಣ ಓದು ಮತ್ತು ಸುಬ್ಬಣ್ಣ ರಂಗನಾಥ ಎಕ್ಕುಂಡಿ ಸಮಗ್ಯ ಕಾವ್ಯ ‘ಬೆಳ್ಳಕ್ಕಿ ಹಿಂಡು’ ಕೃತಿಯಲ್ಲಿ ಲಭ್ಯ. 9844063514)

ಇದನ್ನೂ ಓದಿ : R. S. Mugali Birthday : ಬಿ. ಎಲ್. ರೈಸ್-ರಂ. ಶ್ರೀ. ಮುಗಳಿ ‘ಕನ್ನಡ ಸಾಹಿತ್ಯ’ ಮುಖಾಮುಖಿ

Published On - 3:11 pm, Thu, 20 January 22

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ