AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

36 ಸಾವಿರ ಅಡಿ ಎತ್ತರದಲ್ಲಿ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್: 24 ಪ್ರಯಾಣಿಕರಿಗೆ ಗಾಯ, ಮುಖ್ಯ ಪೈಲಟ್​ಗೆ ಗೇಟ್ ಪಾಸ್

ಮೂವತ್ತಾರು ಸಾವಿರ ಅಡಿ ಎತ್ತರದಲ್ಲಿ ಏರ್ ಇಂಡಿಯಾ ವಿಮಾನದ ಮೂರೂ ಹೈಡ್ರಾಲಿಕ್ ವ್ಯವಸ್ಥೆಗಳು ಸ್ಥಗಿತಗೊಂಡು ಭಾರಿ ಗಂಡಾಂತರ ಸೃಷ್ಟಿಯಾಗಿದೆ. ಹಠಾತ್ ಎತ್ತರದ ಏರುಪೇರಿನಿಂದ 24 ಪ್ರಯಾಣಿಕರಿಗೆ ಗಾಯಗಳಾಗಿವೆ. ದೆಹಲಿಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಆದರೂ, ಮುಖ್ಯ ಪೈಲಟ್ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟು ಸೇವೆಯಿಂದ ವಜಾಗೊಳಿಸಲಾಗಿದೆ. ತಾಂತ್ರಿಕ ವೈಫಲ್ಯ ಮತ್ತು ಪೈಲಟ್‌ನ ಸ್ಥಿತಿ ಕುರಿತು ತನಿಖೆ ಮುಂದುವರೆದಿದೆ.

36 ಸಾವಿರ ಅಡಿ ಎತ್ತರದಲ್ಲಿ ಏರ್ ಇಂಡಿಯಾ ವಿಮಾನದ ಹೈಡ್ರಾಲಿಕ್ಸ್ ಫೇಲ್: 24 ಪ್ರಯಾಣಿಕರಿಗೆ ಗಾಯ, ಮುಖ್ಯ ಪೈಲಟ್​ಗೆ ಗೇಟ್ ಪಾಸ್
ಏರ್ ಇಂಡಿಯಾImage Credit source: Travel Trends Today
ನಯನಾ ರಾಜೀವ್
|

Updated on:Sep 05, 2026 | 11:06 AM

Share

ನವದೆಹಲಿ, ಸೆಪ್ಟೆಂಬರ್ 05: ಫುಕೆಟ್‌ನಿಂದ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು 36 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ, ಕೆಲವೇ ಸೆಕೆಂಡುಗಳ ಅಂತರದಲ್ಲಿ ಮೂರೂ ಹೈಡ್ರಾಲಿಕ್ ಸಿಸ್ಟಂ ಸ್ಥಗಿತಗೊಂಡು ಭಾರಿ ಗಂಡಾಂತರ ಸೃಷ್ಟಿಯಾಗಿದೆ. ಹಠಾತ್ ಎತ್ತರದ ಏರುಪೇರಿನಿಂದಾಗಿ ಕ್ಯಾಬಿನ್ ಒಳಗಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದು, ಆಟೋಪೈಲಟ್ ಸಂಪರ್ಕ ಕಡಿದುಕೊಂಡಿದ್ದ ವಿಮಾನ ಕೊನೆಗೆ ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಬಿಡುಗಡೆ ಮಾಡಿರುವ ಪ್ರಾಥಮಿಕ ವರದಿಯಲ್ಲಿ ತಾಂತ್ರಿಕ ವೈಫಲ್ಯದ ನಿಖರ ಕಾರಣ ಬಹಿರಂಗವಾಗಿಲ್ಲವಾದರೂ, ಮುಖ್ಯ ಪೈಲಟ್ ನಿಷೇಧಿತ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಲಾಗಿದೆ.

ಮೂರಕ್ಕೆ ಮೂರೂ ಹೈಡ್ರಾಲಿಕ್ಸ್ ಕೆಲಸವೇ ಮಾಡಿಲ್ಲ: ಕೋಲ್ಕತ್ತಾ ವಾಯುಪ್ರದೇಶದಲ್ಲಿ 36 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಮೊದಲು ಗ್ರೀನ್, ನಂತರ ಬ್ಲೂ ಮತ್ತು ಯೆಲ್ಲೋ ಹೈಡ್ರಾಲಿಕ್ ಸಿಸ್ಟಂ ನಿಷ್ಕ್ರಿಯಗೊಂಡಿತ್ತು.

ಮತ್ತಷ್ಟು ಓದಿ: ಏರ್​ ಇಂಡಿಯಾ ಅಪಘಾತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿಯ ಸ್ಥಿತಿ ಏನಾಗಿದೆ ಗೊತ್ತೇ?

ಆಟೋಪೈಲಟ್ ಕಟ್ : ತಕ್ಷಣವೇ ಆಟೋಪೈಲಟ್ ಸಂಪರ್ಕ ಕಡಿತಗೊಂಡು ಎಚ್ಚರಿಕೆಯ ಸೈರನ್ ಮೊಳಗಿತು. ನಿಯಂತ್ರಣ ಕಳೆದುಕೊಂಡ ವಿಮಾನ ಕೇವಲ ಕೆಲವೇ ಸೆಕೆಂಡುಗಳಲ್ಲಿ ಸುಮಾರು 372 ಅಡಿಗಳಷ್ಟು ಮೇಲಕ್ಕೆದ್ದು, ನಂತರ ದಿಢೀರನೆ 292ಅಡಿಗಳಷ್ಟು ಕೆಳಗೆ ಕುಸಿಯಿತು.

ಕೆಲವೇ ಸೆಕೆಂಡುಗಳಲ್ಲಿ ಚೇತರಿಕೆ: ಅದೃಷ್ಟವಶಾತ್, ಕೆಲವೇ ಸೆಕೆಂಡುಗಳಲ್ಲಿ ಬ್ಲೂ ಸಿಸ್ಟಂ ಸರಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿತು, ನಂತರ ಹಳದಿ ಮತ್ತು ಹಸಿರು ವ್ಯವಸ್ಥೆಗಳು ಸರಿಯಾಗಿ ನಿಯಂತ್ರಣಕ್ಕೆ ಬಂದವು.

ಸೀಲಿಂಗ್ ಪ್ಯಾನೆಲ್‌ಗಳು ಮುರಿದುಬಿದ್ದವು, ಲಗೇಜ್ ಬಾಕ್ಸ್‌ಗಳು ತೆರೆದುಕೊಂಡವು, ತುರ್ತು ನಿರ್ಗಮನ ಬಾಗಿಲಿನ ಹ್ಯಾಂಡಲ್ ಮತ್ತು ಶೌಚಾಲಯದ ಕಮೋಡ್ ಕೂಡ ಹಾನಿಗೊಳಗಾಯಿತು.

ಮಾದಕ ದ್ರವ್ಯ ಸೇವನೆ ಧೃಢ: ವಿಮಾನ ದೆಹಲಿಯಲ್ಲಿ ಲ್ಯಾಂಡಿಂಗ್ ಆದ ಬಳಿಕ ಸಿಬ್ಬಂದಿಗೆ ನಡೆಸಿದ ಪರೀಕ್ಷೆಯಲ್ಲಿ, ಮುಖ್ಯ ಪೈಲಟ್ ದೇಹದಲ್ಲಿ ನಿಷೇಧಿತ ಮನೋ-ಸಕ್ರಿಯ ಪದಾರ್ಥಗಳು ಇರುವುದು ಪತ್ತೆಯಾಯಿತು. ಸಹ-ಪೈಲಟ್ ಪರೀಕ್ಷೆ ನೆಗೆಟಿವ್ ಬಂದಿದೆ.

ಏರ್ ಇಂಡಿಯಾ ಕಠಿಣ ಕ್ರಮ: ವಾಯುಯಾನ ಸುರಕ್ಷತಾ ನಿಯಮಗಳ ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆ ಪೈಲಟ್ ಅನ್ನು ಸೇವೆಯಿಂದ ಕಿತ್ತುಹಾಕಲಾಗಿದೆ.

ಬ್ಲಾಕ್ ಬಾಕ್ಸ್ ವಶಕ್ಕೆ: ಘಟನೆಗೆ ನಿಖರ ಕಾರಣವೇನು ಮತ್ತು ಪೈಲಟ್‌ನ ಸ್ಥಿತಿ ಹಾರಾಟ ನಿಯಂತ್ರಣದ ಮೇಲೆ ಪ್ರಭಾವ ಬೀರಿತ್ತೇ ಎಂಬುದನ್ನು ಪತ್ತೆಹಚ್ಚಲು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR) ಗಳನ್ನು ವಶಕ್ಕೆ ಪಡೆದು ವಿಶ್ಲೇಷಿಸಲಾಗುತ್ತಿದೆ.

ವಿಮಾನದ ಹೈಡ್ರಾಲಿಕ್ ವ್ಯವಸ್ಥೆ ಎಂದರೇನು? ವಿಮಾನದ ಹೈಡ್ರಾಲಿಕ್ ಸಿಸ್ಟಮ್ ಎನ್ನುವುದು ಕಾರಿನಲ್ಲಿರುವ ಪವರ್ ಸ್ಟೀರಿಂಗ್ ಮತ್ತು ಹೈಡ್ರಾಲಿಕ್ ಬ್ರೇಕ್ ಕಾರ್ಯನಿರ್ವಹಿಸುವ ರೀತಿಯಲ್ಲೇ ಕೆಲಸ ಮಾಡುತ್ತದೆ, ಆದರೆ ಇದು ಅತ್ಯಂತ ಬೃಹತ್ ಪ್ರಮಾಣದಲ್ಲಿರುತ್ತದೆ. ವಿಮಾನವು ಗಂಟೆಗೆ ನೂರಾರು ಕಿಲೋಮೀಟರ್ ವೇಗದಲ್ಲಿ ಹಾರುವಾಗ, ಗಾಳಿಯ ಭಾರೀ ಒತ್ತಡ ರೆಕ್ಕೆಗಳು ಮತ್ತು ನಿಯಂತ್ರಣ ಭಾಗಗಳ ಮೇಲೆ ಬೀಳುತ್ತದೆ. ಅಷ್ಟು ಬಲವಾದ ಗಾಳಿಯ ಒತ್ತಡದ ವಿರುದ್ಧ ಬೃಹತ್ ರೆಕ್ಕೆಗಳನ್ನು ಅಥವಾ ಲ್ಯಾಂಡಿಂಗ್ ಚಕ್ರಗಳನ್ನು ಮನುಷ್ಯ ತನ್ನ ಸ್ವಂತ ಬಲದಿಂದ ತಿರುಗಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ.

ಇದಕ್ಕಾಗಿ ಹೈಡ್ರಾಲಿಕ್ ದ್ರವವನ್ನು (Hydraulic Fluid) ಅತ್ಯಧಿಕ ಒತ್ತಡದಲ್ಲಿ ಪೈಪ್‌ಗಳ ಮೂಲಕ ಹರಿಸಿದಾಗ ಈ ಭಾರೀ ಯಾಂತ್ರಿಕ ಭಾಗಗಳು ಸುಲಭವಾಗಿ ಅಲುಗಾಡುವಂತೆ ಮಾಡಲಾಗುತ್ತದೆ.

ಗ್ರೀನ್ ಸಿಸ್ಟಂ:ಮುಖ್ಯವಾಗಿ ಎಡ ಇಂಜಿನ್‌ನಿಂದ ಶಕ್ತಿ ಪಡೆಯುತ್ತದೆ. ಬ್ಲೂ ಸಿಸ್ಟಂ: ಎಲೆಕ್ಟ್ರಿಕ್ ಪಂಪ್‌ನಿಂದ ಚಾಲನೆಯಾಗುತ್ತದೆ ಯೆಲ್ಲೋ ಸಿಸ್ಟಂ: ಮುಖ್ಯವಾಗಿ ಬಲ ಇಂಜಿನ್‌ನಿಂದ ಶಕ್ತಿ ಪಡೆಯುತ್ತದೆ

ಈ ಮೂರೂ ವ್ಯವಸ್ಥೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದರಿಂದ, ಯಾವುದಾದರೂ ಒಂದು ಅಥವಾ ಎರಡು ವ್ಯವಸ್ಥೆಗಳು ವಿಫಲವಾದರೂ ವಿಮಾನವನ್ನು ಸುರಕ್ಷಿತವಾಗಿ ಹಾರಿಸಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತದೆ. ಆದರೆ, 36 ಸಾವಿರ ಅಡಿ ಎತ್ತರದಲ್ಲಿ ಮೂರಕ್ಕೆ ಮೂರೂ ಹೈಡ್ರಾಲಿಕ್ ವ್ಯವಸ್ಥೆಗಳು ಸಂಪೂರ್ಣ ಸ್ಥಗಿತಗೊಳ್ಳುವುದು ಅತ್ಯಂತ ಅಪರೂಪದ ಹಾಗೂ ಗಂಭೀರವಾದ ತುರ್ತು ಪರಿಸ್ಥಿತಿಯಾಗಿದೆ.

ವಿಮಾನವನ್ನು ಮೇಲೆ-ಕೆಳಗೆ , ಅಕ್ಕಪಕ್ಕಕ್ಕೆ ತಿರುಗಿಸುವ ಭಾಗಗಳು ಸಂಪೂರ್ಣವಾಗಿ ಬಿಗಿಯಾಗುತ್ತವೆ ಅಥವಾ ಚಲಿಸುವುದೇ ಇಲ್ಲ.

ಇಳಿಯುವ ಸಮಯದಲ್ಲಿ ವಿಮಾನದ ವೇಗವನ್ನು ಕಡಿಮೆ ಮಾಡಲು ರೆಕ್ಕೆಗಳಿಂದ ಹೊರಬರುವ ಫ್ಲ್ಯಾಪ್‌ಗಳು ತೆರೆದುಕೊಳ್ಳುವುದಿಲ್ಲ. ಇದರಿಂದ ವಿಮಾನವನ್ನು ಅನಿವಾರ್ಯವಾಗಿ ಅಪಾಯಕಾರಿ ಹೆಚ್ಚಿನ ವೇಗದಲ್ಲೇ ರನ್‌ವೇಗೆ ಇಳಿಸಬೇಕಾಗುತ್ತದೆ.

ಚಕ್ರಗಳನ್ನು ಹೈಡ್ರಾಲಿಕ್ ಪವರ್ ಬಳಸಿ ಹೊರತೆಗೆಯಲು ಸಾಧ್ಯವಾಗುವುದಿಲ್ಲ. ಪೈಲಟ್‌ಗಳು ಮ್ಯಾನುಯಲ್ ಲಿವರ್ ಎಳೆಯುವ ಮೂಲಕ ಕೇವಲ ಗುರುತ್ವಾಕರ್ಷಣೆಯ ಬಲದಿಂದ ಚಕ್ರಗಳು ಕೆಳಗೆ ಬಿದ್ದು ಲಾಕ್ ಆಗುವಂತೆ ಮಾಡಬೇಕಾಗುತ್ತದೆ. ರನ್‌ವೇ ಮೇಲೆ ಚಕ್ರಗಳು ಇಳಿದ ನಂತರ ಮುಂಭಾಗದ ಚಕ್ರದ ಸ್ಟೀರಿಂಗ್ ಹಾಗೂ ಸಾಮಾನ್ಯ ಆಂಟಿ-ಸ್ಕಿಡ್ ಬ್ರೇಕ್‌ಗಳು ಕೆಲಸ ಮಾಡುವುದಿಲ್ಲ ಇಷ್ಟೆಲ್ಲಾ ಸಮಸ್ಯೆಗಳು ತಲೆದೂರುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:06 am, Sat, 5 September 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಬಾಲ್ಕನಿ ತಡೆಗೋಡೆ ಕುಸಿದು ರಸ್ತೆಗೆ ಬಿದ್ದ ವಿದ್ಯಾರ್ಥಿಗಳು
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಪ್ರಣಾಳಿಕೆ ಫೈಟ್: BR ಪಾಟೀಲ್​​ ಬೆನ್ನಲ್ಲೇ ಸಿಎಂಗೆ ಬಿಕೆ ಹರಿಪ್ರಸಾದ್ ಪತ್ರ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಕಳ್ಳಾಟ ಆಡಿ ಸಿಕ್ಕಿಬಿದ್ದ ಕಿರಣ್​​ಗೆ ಕಿಚ್ಚನ ಕ್ಲಾಸ್: ವಿಡಿಯೋ ನೋಡಿ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಬಂಗಾಳದಲ್ಲಿ ಟಿಎಂಸಿ ಶಾಸಕ ಕುನಾಲ್ ಘೋಷ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಮೆಚ್ಚಿನ ಶಿಕ್ಷಕನಿಗೆ ಮಕ್ಕಳ ಕಣ್ಣೀರಿನ ವಿದಾಯ
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ಪಿತೃಪಕ್ಷದ ಮಹತ್ವವೇನು? ಈ 15 ದಿನಗಳಲ್ಲಿ ಪಿತೃಕಾರ್ಯ ಏಕೆ ಮಾಡಬೇಕು?
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ; ಕಾರ್ಯಕ್ರಮದ ವಿವರ ಹೀಗಿದೆ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ
ರಾಜೀನಾಮೆ ಬಗ್ಗೆ ಕೇಳಿಬರ್ತಿರೋ ಟೀಕೆಗಳಿಗೆ ಯಶವಂತರಾಯ ಗೌಡ ಏನಂದ್ರು ನೋಡಿ