AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಾ ನಾವಿಕರು ಸೇಫ್; ಒಮಾನ್ ಬಳಿ ಮತ್ತೊಂದು ಭಾರತೀಯ ಹಡಗಿನ ಮೇಲೆ ದಾಳಿ ಸುಳ್ಳೆಂದ ಭಾರತ

ಒಮಾನ್ ಕರಾವಳಿಯ ಬಳಿ ಭಾರತೀಯ ನಾವಿಕರಿದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ದಾಳಿಯಾಗಿದೆ ಎಂಬ ವರದಿಗಳನ್ನು ಭಾರತ ಸರ್ಕಾರ ಅಧಿಕೃತವಾಗಿ ನಿರಾಕರಿಸಿದ್ದು, ಇವೆಲ್ಲವೂ "ಸಂಪೂರ್ಣ ಸುಳ್ಳು" ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ಒಮಾನ್ ಸಮುದ್ರ ವಲಯದಲ್ಲಿ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದು ಮೂವರು ನಾವಿಕರು ಸಾವನ್ನಪ್ಪಿದ ಬೆನ್ನಲ್ಲೇ, ಮತ್ತೊಂದು ಹಡಗು ದಾಳಿಗೆ ಒಳಗಾಗಿದೆ ಎಂಬ ವದಂತಿಗಳು ಜಾಗತಿಕವಾಗಿ ಹರಡಿದ್ದವು. ಆದರೆ, ಭಾರತದ ವಿದೇಶಾಂಗ ಸಚಿವಾಲಯವು ತಕ್ಷಣವೇ ಕಾರ್ಯಪ್ರವೃತ್ತವಾಗಿ ಹಡಗಿನ ಸಿಬ್ಬಂದಿಯನ್ನು ಸಂಪರ್ಕಿಸಿ, ಈ ವರದಿಗಳು ಆಧಾರರಹಿತ ಎಂದು ಸ್ಪಷ್ಟಪಡಿಸಿದೆ.

ಎಲ್ಲಾ ನಾವಿಕರು ಸೇಫ್; ಒಮಾನ್ ಬಳಿ ಮತ್ತೊಂದು ಭಾರತೀಯ ಹಡಗಿನ ಮೇಲೆ ದಾಳಿ ಸುಳ್ಳೆಂದ ಭಾರತ
Oman CoastImage Credit source: Getty Image
ಸುಷ್ಮಾ ಚಕ್ರೆ
|

Updated on: Jun 13, 2026 | 4:54 PM

Share

ನವದೆಹಲಿ, ಜೂನ್ 13: ಒಮಾನ್ ಕರಾವಳಿಯ ಬಳಿ ಭಾರತೀಯ ನಾವಿಕರಿದ್ದ ಮತ್ತೊಂದು ವಾಣಿಜ್ಯ ಹಡಗಿನ ಮೇಲೆ ದಾಳಿಯಾಗಿದೆ ಎಂಬ ವರದಿಗಳನ್ನು ಭಾರತ ಸರ್ಕಾರ ತಳ್ಳಿಹಾಕಿದ್ದು, ಇವೆಲ್ಲವೂ ಸುಳ್ಳು ಸುದ್ದಿಗಳು ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ಒಮಾನ್ (Oman) ಸಮುದ್ರ ವಲಯದಲ್ಲಿ ಭಾರತೀಯ ಸಿಬ್ಬಂದಿಯಿದ್ದ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆದ ಬೆನ್ನಲ್ಲೇ, ಮತ್ತೊಂದು ಹಡಗು ಅಪಾಯಕ್ಕೆ ಸಿಲುಕಿದೆ ಎಂಬ ವದಂತಿಗಳು ಹರಡಿದ್ದವು. ಆದರೆ ವಿದೇಶಾಂಗ ಸಚಿವಾಲಯವು ಆ ಹಡಗಿನ ಕ್ಯಾಪ್ಟನ್ ಜೊತೆ ನೇರ ಸಂಪರ್ಕ ಸಾಧಿಸಿ, ನಾವಿಕರೆಲ್ಲರೂ ಕ್ಷೇಮವಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.

ಮಾರ್ಷಲ್ ಐಲ್ಯಾಂಡ್ಸ್ ಧ್ವಜದ ಅಡಿಯಲ್ಲಿ ಸಂಚರಿಸುತ್ತಿದ್ದ ‘ಎಂವಿ ಲಿಯಾಕಿ ಫ್ರೀಡಂ’ ಎಂಬ ತೈಲ ಮತ್ತು ರಾಸಾಯನಿಕ ಟ್ಯಾಂಕರ್ ಹಡಗು ಶುಕ್ರವಾರ ರಾತ್ರಿ ಒಮಾನ್ ಕೊಲ್ಲಿಯಲ್ಲಿ ವಿಎಚ್‌ಎಫ್ (ರೇಡಿಯೋ ಸಂಪರ್ಕ) ಕಳೆದುಕೊಂಡಿದೆ. ಆ ಹಡಗಿನ ಮೇಲೆ ದಾಳಿಯಾಗಿದೆ ಎಂದು ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಇದರಲ್ಲಿ ಹಲವು ಭಾರತೀಯ ನಾವಿಕರಿದ್ದು, ಸಾವು-ನೋವಿನ ಭೀತಿ ವ್ಯಕ್ತವಾಗಿತ್ತು.

ಇದಕ್ಕೆ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ನೀಡಿದ್ದು, “ನಾವು ಲಿಯಾಕಿ ಫ್ರೀಡಂ ಹಡಗಿನ ಮಾಸ್ಟರ್ (ಕ್ಯಾಪ್ಟನ್) ಅವರೊಂದಿಗೆ ನೇರವಾಗಿ ಮಾತನಾಡಿದ್ದೇವೆ. ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ದಾಳಿಯ ಮಾಹಿತಿ ಸುಳ್ಳು ಎಂಬುದನ್ನು ಅವರು ಖಚಿತಪಡಿಸಿದ್ದಾರೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ದಾಳಿ ಕೊನೆಗೊಳ್ಳಬೇಕು; 3 ಭಾರತೀಯರು ಸಾವನ್ನಪ್ಪಿದ ಒಮಾನ್ ಹಡಗಿನ ಮೇಲಿನ ಅಮೆರಿಕದ ದಾಳಿಗೆ ಭಾರತ ಖಂಡನೆ

ಸದ್ಯಕ್ಕೆ ಒಮಾನ್ ಕರಾವಳಿಯ ಬಳಿ ಭಾರತೀಯ ಸಿಬ್ಬಂದಿಯಿದ್ದ ಮೂರು ವಾಣಿಜ್ಯ ಹಡಗುಗಳ ಮೇಲೆ ಮಾತ್ರ ದಾಳಿ ನಡೆದಿರುವುದು ದೃಢಪಟ್ಟಿದೆ. ಜೂನ್ 8ರಂದು ಎಂಟಿ ಮರಿವೆಕ್ಸ್ ಎಂಬ ಪಲಾವ್ ಧ್ವಜದ ಹಡಗಿನಲ್ಲಿ 24 ಭಾರತೀಯರಿದ್ದರು. ಇವರನ್ನು ಒಮಾನ್ ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿದ್ದರು. ಜೂನ್ 10ರಂದು ಎಂಟಿ ಸೆಟ್ಟೆಬೆಲ್ಲೊ ಎಂಬ ಪಲಾವ್ ಧ್ವಜದ ಈ ಟ್ಯಾಂಕರ್ ಮೇಲಿನ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ದುರಂತವಾಗಿ ಸಾವನ್ನಪ್ಪಿದ್ದರು.

ಜೂನ್ 11ರಂದು ಎಂಟಿ ಜಲವೀರ್ ಎಂಬ ಗಿನಿ-ಬಿಸೌ ಧ್ವಜದ ಈ ಹಡಗಿನಲ್ಲಿದ್ದ 20 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು. ಭಾರತೀಯ ನಾವಿಕರ ಸಾವಿಗೆ ಕಾರಣವಾದ ಈ ಮಿಲಿಟರಿ ದಾಳಿಗಳ ವಿರುದ್ಧ ನವದೆಹಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತ ಸರ್ಕಾರವು ನವದೆಹಲಿಯಲ್ಲಿರುವ ಅಮೆರಿಕದ ಉಪ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ಕೇವಲ ಒಂದೇ ವಾರದಲ್ಲಿ ಎರಡು ಬಾರಿ ಸಮನ್ಸ್ ಜಾರಿ ಮಾಡಿದೆ. ವಾಣಿಜ್ಯ ಹಡಗುಗಳ ಸಂಚಾರ ಮಾರ್ಗ ಮುಕ್ತ ಮತ್ತು ಸುರಕ್ಷಿತವಾಗಿರಬೇಕು ಎಂದು ಭಾರತ ಪ್ರತಿಪಾದಿಸಿದೆ.

ಇದನ್ನೂ ಓದಿ: ಒಮಾನ್ ಕರಾವಳಿಯಲ್ಲಿ ಭಾರತೀಯರಿದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ದಾಳಿ, ನಾಪತ್ತೆಯಾಗಿದ್ದ ಮೂವರ ಸಾವು ದೃಢ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಶುಕ್ರವಾರ ತಡರಾತ್ರಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಮ್ಮ ತೀವ್ರ ಆಕ್ಷೇಪವನ್ನು ತಿಳಿಸಿದ್ದಾರೆ. “ವಾಣಿಜ್ಯ ಹಡಗುಗಳ ಮೇಲೆ ಇಂತಹ ಮಾರಣಾಂತಿಕ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ” ಎಂದು ಎಸ್.​ ಜೈಶಂಕರ್ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳಿಗೆ ಇರಾನ್ ಕಾರಣ ಎಂದು ಆರೋಪಿಸಿದ್ದರೆ, ಇರಾನ್‌ನ ತೆಹ್ರಾನ್ ಆಡಳಿತವು ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಮತ್ತು ಜಾಗತಿಕ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ತಳ್ಳಿಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
ಕೊಲೆ ಆರೋಪಿಗಳಿಂದ ಜೈಲಿನಲ್ಲಿ ಪುಂಡಾಟ: ವಾರ್ಡನ್ ಮೇಲೆ ಹಲ್ಲೆ!
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
‘ಯತ್ನಾಳ್ ಯಾವುದೋ ಒಂದು ಕೋತಿಯ ಬ್ರೀಡ್’: ಪ್ರದೀಪ್ ಈಶ್ವರ್ ವಾಗ್ದಾಳಿ
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!
ಕೆಆರ್​ಎಸ್​ನಲ್ಲಿ ಕುಸಿದ ನೀರಿನ ಮಟ್ಟ; ಸಂಪೂರ್ಣ ಗೋಚರಿಸುತ್ತಿರುವ ದೇಗುಲ!
ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್
24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಕಾಕ್ಸ್​
24 ಫೋರ್, 2 ಭರ್ಜರಿ ಸಿಕ್ಸ್​: ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಕಾಕ್ಸ್​
ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್
ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಭರ್ಜರಿ ಕಸರತ್ತು; ವಿಡಿಯೋ ವೈರಲ್
ಬಿಡದಿ ಟೌನ್‌ಶಿಪ್ ಯೋಜನೆ: ಜೂನ್ 20ಕ್ಕೆ ರೈತರ ಬೃಹತ್ ಪ್ರತಿಭಟನೆ
ಬಿಡದಿ ಟೌನ್‌ಶಿಪ್ ಯೋಜನೆ: ಜೂನ್ 20ಕ್ಕೆ ರೈತರ ಬೃಹತ್ ಪ್ರತಿಭಟನೆ
ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು
ಬೆಂಗಳೂರು: ಮುಂಗಾರು ಮಳೆಯ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು
ಸಂಜೆ ವೇಳೆ ಮುಖ್ಯ ಬಾಗಿಲಲ್ಲಿ ಕುಳಿತುಕೊಳ್ಳುವುದು ಅಶುಭವೇ?
ಸಂಜೆ ವೇಳೆ ಮುಖ್ಯ ಬಾಗಿಲಲ್ಲಿ ಕುಳಿತುಕೊಳ್ಳುವುದು ಅಶುಭವೇ?