AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Liquor Policy Case: ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ, ತಕ್ಷಣ ಶರಣಾಗುವಂತೆ ಸುಪ್ರೀಂ ಸೂಚನೆ

Satyendra Jain: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​​ ವಜಾಗೊಳಿಸಿದೆ. ತಕ್ಷಣವೇ ಶರಣಾಗುವಂತೆ ಸೂಚಿಸಿದೆ. ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶವನ್ನು ನೀಡಿದೆ. ಈಗಾಗಲೇ ಅವರು ಮಧ್ಯಂತರ ಜಾಮೀನ ಮೇಲೆ ಹೊರಗಿದ್ದಾರೆ. ಸುಪ್ರೀಂ ಅವರ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿದೆ.

Delhi Liquor Policy Case: ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾ, ತಕ್ಷಣ ಶರಣಾಗುವಂತೆ ಸುಪ್ರೀಂ ಸೂಚನೆ
ಸತ್ಯೇಂದ್ರ ಜೈನ್
ಅಕ್ಷಯ್​ ಪಲ್ಲಮಜಲು​​
|

Updated on:Mar 18, 2024 | 11:51 AM

Share

ದೆಹಲಿ, ಮಾ.18: ದೆಹಲಿ ಮದ್ಯ ನೀತಿಯಲ್ಲಿ (Delhi Liquor Policy Case) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸತ್ಯೇಂದ್ರ ಜೈನ್ (Satyendar Jain) ಅವರಿಗೆ ಜಾಮೀನು ನೀಡಲು ಇಂದು (ಮಾ.18) ಸುಪ್ರೀಂ ಕೋರ್ಟ್​​​ ನಿರಾಕರಿಸಿದೆ. ಈಗಾಗಲೇ ಅವರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿ, ತಕ್ಷಣವೇ ಶರಣಾವಾಗುವಂತೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2022ರ ಮೇ ತಿಂಗಳನಲ್ಲಿ ಅವರನ್ನು ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿತ್ತು. 2010-12 ಹಾಗೂ 2015 ಹಾಗೂ 16ರಲ್ಲಿ ವಿವಿಧ ಕಂಪನಿಗಳಿಂದ ಇವರು ಅಕ್ರಮವಾಗಿ ಹಣ ಪಡೆದಿದೆ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಅವರನ್ನು ಇಡಿ ಬಂಧಿಸಿತ್ತು. ನಂತರ ಕೆಲವು ತಿಂಗಳುಗಳ ಹಿಂದೆ ಅವರಿಗೆ ಕೋರ್ಟ್​​​ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಿತ್ತು.

ಇನ್ನು ಈ ತೀರ್ಪುವನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ನೀಡಿದೆ. ಸತ್ಯೇಂದ್ರ ಜೈನ್ ಅವರ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಏಪ್ರಿಲ್ 2023ರ ಆದೇಶದ ವಿರುದ್ಧ ವಿಶೇಷ ಪೀಠವು ವಿಚಾರಣೆ ನಡೆಸಿತು . ನಾಲ್ಕು ದಿನಗಳ ವಿಚಾರಣೆಯ ನಂತರ ಈ ಪ್ರಕರಣದ ತೀರ್ಪನ್ನು ಜನವರಿಯಲ್ಲಿ ಕಾಯ್ದಿರಿಸಲಾಗಿತ್ತು. ಸತ್ಯೇಂದ್ರ ಅವರು ಈ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂ ಕೋರ್ಟ್​​ ಮೆಟ್ಟಿಲೇರಿದರು. ಅಲ್ಲಿ ಜಾಮೀನು ಅರ್ಜಿಗೆ ಮನವಿ ಸಲ್ಲಿಸಿದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್​​ ಇಂದು ನಿರಾಕರಿಸಿದೆ.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್​​ ಎರಡು ಕಡೆಯ ವಾದವನ್ನು ಅಲಿಸಿತ್ತು. ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಸತ್ಯೇಂದ್ರ ಜೈನ್ ಅವರ ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು. ಅಕ್ರಮ ಹಣ ವರ್ಗಾವಣೆಯಲ್ಲಿ ಸತ್ಯೇಂದ್ರ ಅವರು ಪ್ರಭಾವ ಹೆಚ್ಚಾಗಿದ್ದು, ಇದರಿಂದ ಆಡಳಿತ ಮೇಲೆ ಪರಿಣಾಮ ಉಂಟು ಮಾಡಿದೆ. ಕಂಪನಿಗಳ ಜತೆಗೆ ಸತ್ಯೇಂದ್ರ ಅವರು ಕೈಜೋಡಿಸಿದ್ದು, ಈ ಕಂಪನಿಗಳಿಂದ ಅವರು ಕೋಟಿ ಕೋಟಿ ಹಣಗಳನ್ನು ಪಡೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಉಚಿತ ನಿವೇಶನಗಳನ್ನು ಹಂಚಲಿದೆ ಕಾಂಗ್ರೆಸ್​, ಭರವಸೆ ಕೊಟ್ಟ ಭೂಪೇಂದ್ರ ಸಿಂಗ್ ಹೂಡಾ

ಈ ಕಂಪನಿಗಳಲ್ಲಿ ಸತ್ಯೇಂದ್ರ ಅವರ ಕುಟುಂಬ ಕೂಡ ಪಾಲು ಹೊಂದಿದೆ. ಇವರ ಜತೆಗೆ ಸಹ-ಆರೋಪಿಗಳಾದ ವೈಭವ್ ಮತ್ತು ಅಂಕುಶ್ ಜೈನ್ ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಗಳು ಸ್ವೀಕರಿಸಿದ ಸಂಪೂರ್ಣ ಮೊತ್ತವನ್ನು ಸತ್ಯೇಂದ್ರ ಜೈನ್ ಅವರಿಂದಲೇ ಪತ್ತೆ ಮಾಡಬಹುದು. ಹಿಂದೆ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್​​ ಇವರ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು.

ಮತ್ತೊಂದೆಡೆ, ಜೈನ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಸಾಕ್ಷ್ಯಾಧಾರಗಳಿಲ್ಲದೆಯೇ ಮಾಸ್ಟರ್‌ಮೈಂಡ್ ಮತ್ತು ನಿಯಂತ್ರಣ ಎಂಬ ಪದಗಳನ್ನು ಬಳಸುವುದು ಸರಿಯಲ್ಲ, ಇಡಿಯದ್ದು ಸಾಕ್ಷ್ಯರಹಿತ ಆರೋಪವಾಗಿದೆ. ಅವರು ಆ ಕಂಪನಿಗಳ ಜತೆಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಇವರ ಬಂಧನದ ಅಗತ್ಯ ಏನು ಎಂದು ಕೋರ್ಟ್​​ ಮುಂದೆ ವಾದಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:11 am, Mon, 18 March 24