AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಸ್ರೋ ಪ್ರಾಮುಖ್ಯತೆ ತಗ್ಗಲ್ಲ, ಖಾಸಗೀಕರಣವೂ ಆಗಲ್ಲ’- ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಹೆಚ್ಚು ಗುರುತರ ಜವಾಬ್ದಾರಿ?

ಇಸ್ರೋ ಅಭಿವೃದ್ಧಿಪಡಿಸಿದ ರಾಕೆಟ್ ತಂತ್ರಜ್ಞಾನಗಳನ್ನು ಖಾಸಗಿ ಸಂಸ್ಥೆಗಳಿಗೆ ಹಂಚುವ ಸರ್ಕಾರದ ನಿರ್ಧಾರದ ಬಗ್ಗೆ ಕೆಲವರು ಬೇಸರ ಪಟ್ಟಿದ್ದಾರೆ. ಆದರೆ, ರಾಕೆಟ್ ಟೆಕ್ನಾಲಜಿ ವರ್ಗಾವಣೆಯಿಂದ ಇಸ್ರೋದ ಪ್ರಾಮುಖ್ಯತೆ ಕಡಿಮೆ ಆಗಲ್ಲ ಎಂದು ಖುದ್ದು ಆ ಸಂಸ್ಥೆಯೇ ಹೇಳಿಕೊಂಡಿದೆ. ರಾಕೆಟ್ ಹಾರಿಸುವುದು ಇತ್ಯಾದಿ ಕೆಲಸದಿಂದ ವಿಮುಕ್ತಿ ಪಡೆದು, ಹೆಚ್ಚು ಗುರುತರವಾದ ಯೋಜನೆಗಳು ಹಾಗೂ ಸಂಶೋಧನೆಗಳತ್ತ ಗಮನ ಹರಿಸಬಹುದು ಎಂದಿದೆ ಇಸ್ರೋ.

‘ಇಸ್ರೋ ಪ್ರಾಮುಖ್ಯತೆ ತಗ್ಗಲ್ಲ, ಖಾಸಗೀಕರಣವೂ ಆಗಲ್ಲ’- ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಹೆಚ್ಚು ಗುರುತರ ಜವಾಬ್ದಾರಿ?
ಇಸ್ರೋImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 06, 2026 | 10:09 PM

Share

ಬೆಂಗಳೂರು, ಸೆಪ್ಟೆಂಬರ್ 6: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ (ISRO) ಕೇವಲ ಉಪಗ್ರಹ ಹಾಗೂ ರಾಕೆಟ್ ಉಡ್ಡಯನ ಸಂಸ್ಥೆಯಾಗಿ ಉಳಿಯದೆ, ದೇಶದ ಇಡೀ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು (National Space Ecosystem) ಮುನ್ನಡೆಸುವ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡುವ ಮೂಲಕ ಭಾರತವನ್ನು ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯ ಪ್ರಮುಖ ಕೇಂದ್ರವನ್ನಾಗಿ ಮಾಡುವುದು ಇಸ್ರೋದ ಮುಂಬರುವ ಪ್ರಮುಖ ಗುರಿಯಾಗಿದೆ.

ಇಸ್ರೋದ ತಂತ್ರಜ್ಞಾನವನ್ನು ಖಾಸಗಿ ಉದ್ಯಮಗಳಿಗೆ ಹಸ್ತಾಂತರಿಸುವ ಮೂಲಕ ಸರ್ವೋಚ್ಚ ಬಾಹ್ಯಾಕಾಶ ಸಂಸ್ಥೆಯ ಬಲ ಮತ್ತು ಪ್ರಾಮುಖ್ಯತೆಯನ್ನು ಕುಂದಿಸಲಾಗುತ್ತಿದೆ ಎಂದು ಇಸ್ರೋದ ಕೆಲ ಉದ್ಯೋಗಿಗಳ ಸಂಘಟನೆಗಳು ಆತಂಕಪಟ್ಟಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳು ಈ ಸ್ಪಷ್ಟನೆ ಕೊಟ್ಟಿದ್ದಾರೆ. ಇಸ್ರೋದ ಖಾಸಗೀಕರಣ ನಡೆಯೋದಿಲ್ಲ. ಅದರ ಪ್ರಾಮುಖ್ಯತೆ ಕುಂದೋದಿಲ್ಲ ಎಂದು ಹೇಳುವ ಮೂಲಕ ಹೊಸ ಹೆಜ್ಜೆಗಳನ್ನಿಡುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ‘ಗುರಿ’ ಮುಟ್ಟಲು ಒಂದು ಸಂಘಟನೆಗೆ ಅಸಾಧ್ಯ, ಖಾಸಗಿ ಉದ್ಯಮವೂ ಬೇಕು: ಇಸ್ರೋ ಉದ್ಯೋಗಿಗಳ ಅಸಮಾಧಾನಕ್ಕೆ ಪವನ್ ಗೋಯೆಂಕಾ ಉತ್ತರ

ಹೊಸ ತಲೆಮಾರಿನ ತಂತ್ರಜ್ಞಾನಗಳ ಅನ್ವೇಷಣೆ ಸಾಧ್ಯ

‘ಅಭಿವೃದ್ಧಿಗೊಂಡ ತಂತ್ರಜ್ಞಾನವನ್ನು ವರ್ಗಾವಣೆ ಮಾಡುವುದರಿಂದ ಆ ಕ್ಷೇತ್ರದಲ್ಲಿ ಇಸ್ರೋ ಹೊರಗುಳಿದಂತಾಗುವುದಿಲ್ಲ. ದೊಡ್ಡ ಪ್ರಮಾಣದಲ್ಲಿ ತಯಾರಿಕೆ, ವಾಣಿಜ್ಯೀಕರಣ, ನಾವೀನತ್ಯತೆ ಸಾಧಿಸಲು ಸಾಧ್ಯವಾಗುತ್ತದೆ. ಜಾಗತಿಕ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗುತ್ತದೆ. ಇದರಿಂದ ಇಸ್ರೋದ ವೈಜ್ಞಾನಿಕ ಮತ್ತು ತಾಂತ್ರಿಕ ಮಾನವಸಂಪನ್ಮೂಲವು ಮುಂದಿನ ತಲೆಮಾರಿನ ತಂತ್ರಜ್ಞಾನಗಳು ಹಾಗೂ ಬಹಳ ಮುಖ್ಯವಾದ ಮತ್ತು ಸಂಕೀರ್ಣವಾದ ಮಿಷನ್​ಗಳತ್ತ ಗಮನ ಹರಿಸಲು ಅವಕಾಶ ಸಿಗುತ್ತದೆ’ ಎಂದು ಇಸ್ರೋ ಸಂಸ್ಥೆ ಹೇಳಿಕೆ ನೀಡಿದೆ.

ಮಾರ್ಗದರ್ಶಕನ ಪಾತ್ರ: ಇಸ್ರೋ ಇನ್-ಸ್ಪೇಸ್ (IN-SPACe) ಮತ್ತು ಎನ್‌ಎಸ್‍ಐಎಲ್ (NSIL) ಸಂಸ್ಥೆಗಳ ಮೂಲಕ ಖಾಸಗಿ ಕಂಪನಿಗಳಿಗೆ ತಾಂತ್ರಿಕ ಬೆಂಬಲ, ಪರೀಕ್ಷಾ ಕೇಂದ್ರಗಳು ಮತ್ತು ಮೂಲಸೌಕರ್ಯಗಳನ್ನು (Facilitator Role) ಒದಗಿಸಲಿದೆ.

ಇದನ್ನೂ ಓದಿ:

ಸಣ್ಣ ಉಪಗ್ರಹ ಉಡ್ಡಯನ ವಾಹನ (SSLV) ತಂತ್ರಜ್ಞಾನವನ್ನು ಎಚ್‌ಎಎಲ್ (HAL) ಮತ್ತು ಖಾಸಗಿ ವಲಯಕ್ಕೆ ವರ್ಗಾಯಿಸುವ ಪ್ರಕ್ರಿಯೆಯು ಈ ಹೊಸ ನೀತಿಯ ಭಾಗವಾಗಿದೆ. ಇಸ್ರೋ ಸಂಸ್ಥೆಯು ತನ್ನ ಸಂಪೂರ್ಣ ಗಮನವನ್ನು ಗಗನಯಾನ, ಚಂದ್ರಯಾನಗಳು ಹಾಗೂ ಆಳ ಬಾಹ್ಯಾಕಾಶ ಸಂಶೋಧನೆಗಳತ್ತ (Deep Space Exploration) ಕೇಂದ್ರೀಕರಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us