AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಟಿ ಧರಿಸಿ ಆಂಬ್ಯುಲೆನ್ಸ್​​ನಲ್ಲಿ ಬಂದು ಎಸ್​ಬಿಐ ಎಟಿಎಂ ಲೂಟಿ ಮಾಡಿದ ಕಳ್ಳರು

ತೆಲಂಗಾಣದ ಕಾಮರೆಡ್ಡಿಯಲ್ಲಿ ನೈಟಿ ಧರಿಸಿ, ಆಂಬ್ಯುಲೆನ್ಸ್‌ನಲ್ಲಿ ಬಂದ ದುಷ್ಕರ್ಮಿಗಳು ಎಸ್‌ಬಿಐ ಎಟಿಎಂ ಲೂಟಿ ಮಾಡಿದ್ದಾರೆ. ಅಕ್ಟೋಬರ್ 11ರ ಬೆಳಗಿನ ಜಾವ ನಡೆದ ಈ ಘಟನೆಯಲ್ಲಿ ಗ್ಯಾಸ್ ಕಟ್ಟರ್‌ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಲಕ್ಷಾಂತರ ರೂಪಾಯಿ ನಗದು ಕದಿಯಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಇದು ಅಂತರರಾಜ್ಯ ದರೋಡೆಕೋರರ ಕೃತ್ಯ ಎಂದು ಶಂಕಿಸಿದ್ದಾರೆ. ಹಿಂದೆ ಕರೀಂನಗರದಲ್ಲೂ ಇದೇ ರೀತಿ ಕಳ್ಳತನ ನಡೆದಿತ್ತು.

ನೈಟಿ ಧರಿಸಿ ಆಂಬ್ಯುಲೆನ್ಸ್​​ನಲ್ಲಿ ಬಂದು ಎಸ್​ಬಿಐ ಎಟಿಎಂ ಲೂಟಿ ಮಾಡಿದ ಕಳ್ಳರು
ಎಟಿಎಂ Image Credit source: Video Screenshot Tv9 Telugu
ನಯನಾ ರಾಜೀವ್
|

Updated on: Oct 12, 2026 | 11:43 AM

Share

ಕಾಮರೆಡ್ಡಿ, ಅಕ್ಟೋಬರ್ 12: ಕಳ್ಳರು ನೈಟಿ ಧರಿಸಿ ಆಂಬ್ಯುಲೆನ್ಸ್​ನಲ್ಲಿ ಬಂದು ಎಸ್​ಬಿಐ ಎಟಿಎಂ ಲೂಟಿ ಮಾಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿಯಲ್ಲಿ ನಡೆದಿದೆ. ಮಹಿಳೆಯರ ನೈಟಿ ಮತ್ತು ಮಾಸ್ಕ್ ಧರಿಸಿದ್ದ ಅಪರಿಚಿತ ಪುರುಷರ ಗ್ಯಾಂಗ್‌ವೊಂದು, ಯಾರಿಗೂ ಅನುಮಾನ ಬಾರದಂತೆ ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಿಯೋಸ್ಕ್ ಅನ್ನು ಗ್ಯಾಸ್ ಕಟ್ಟರ್‌ಗಳಿಂದ ಕತ್ತರಿಸಿ ಲಕ್ಷಾಂತರ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದೆ.

ಅಕ್ಟೋಬರ್ 11ರ ಬೆಳಗಿನ ಜಾವ ಸುಮಾರು 1 ರಿಂದ 1.30ರ ನಡುವೆ ಈ ಕೃತ್ಯ ನಡೆದಿದೆ. ಎಟಿಎಂ ಕೇಂದ್ರದ ಮುಂಭಾಗ ಆಂಬ್ಯುಲೆನ್ಸ್ ಬಂದು ನಿಂತಿದ್ದು, ಅದರಿಂದ ಇಳಿದ ವ್ಯಕ್ತಿಗಳು ಮಹಿಳೆಯರ ನೈಟಿ ಹಾಗೂ ಮುಖಕ್ಕೆ ಪೂರ್ಣ ಮಾಸ್ಕ್ ಧರಿಸಿದ್ದರು. ಎಟಿಎಂ ಒಳನುಗ್ಗಿದ ಆರೋಪಿಗಳು ಅತ್ಯಾಧುನಿಕ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಎಟಿಎಂ ಯಂತ್ರವನ್ನು ಕೆಲವೇ ನಿಮಿಷಗಳಲ್ಲಿ ಕತ್ತರಿಸಿ, ಅದರೊಳಗಿದ್ದ ನಗದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದ ವಾಹನದಲ್ಲೇ ಎಸ್ಕೇಪ್ ಆಗಿದ್ದಾರೆ.

ಬೆಳಗ್ಗೆ ಹಣ ತೆಗೆಯಲು ಬಂದ ಸ್ಥಳೀಯ ಗ್ರಾಹಕರು ಎಟಿಎಂ ಯಂತ್ರ ಛಿದ್ರಗೊಂಡಿರುವುದನ್ನು ನೋಡಿ ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಟಿಎಂನಲ್ಲಿ ಎಷ್ಟು ಮೊತ್ತದ ಹಣವಿತ್ತು ಎಂಬ ನಿಖರ ಲೆಕ್ಕವನ್ನು ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ಪೊಲೀಸರು ಪರಿಶೀಲಿಸುತ್ತಿದ್ದು, ಲಕ್ಷಾಂತರ ರೂಪಾಯಿ ಲೂಟಿಯಾಗಿರುವ ಶಂಕೆಯಿದೆ.

ಮತ್ತಷ್ಟು ಓದಿ: ಇಡೀ ಎಟಿಎಂ ಯಂತ್ರವನ್ನೇ ಕಿತ್ತು, ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾದ ಕಳ್ಳರು! ವಿಡಿಯೋ ವೈರಲ್

ದರೋಡೆಗೆ ಬಳಸಲಾದ ಆಂಬ್ಯುಲೆನ್ಸ್ ವಾಹನವು ನಿಜವಾದ ಆಸ್ಪತ್ರೆಯ ವಾಹನವೇ ಅಥವಾ ಪೊಲೀಸರ ದಿಕ್ಕು ತಪ್ಪಿಸಲು ಹಾಗೂ ರಾತ್ರಿ ವೇಳೆ ನಾಕಾಬಂದಿಗಳಿಂದ ತಪ್ಪಿಸಿಕೊಳ್ಳಲು ನಕಲಿ ಸೈರನ್ ಮತ್ತು ಫಲಕ ಬಳಸಿ ಸೃಷ್ಟಿಸಲಾದ ವಾಹನವೇ ಎಂಬುದರ ಕುರಿತು ಸಾರಿಗೆ ಇಲಾಖೆಯ ನೆರವಿನಿಂದ ತನಿಖೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಮತ್ತು ಕ್ಲೂಸ್ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಹೆದ್ದಾರಿಯ ಟೋಲ್‌ಗೇಟ್‌ಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ.

ವಿಡಿಯೋ

ಈ ಘಟನೆಯು ಕೇವಲ ಪ್ರತ್ಯೇಕ ಪ್ರಕರಣವಾಗಿರದೆ, ಆಂಧ್ರ-ತೆಲಂಗಾಣದಲ್ಲಿ ಸಕ್ರಿಯವಾಗಿರುವ ಕುಖ್ಯಾತ ಅಂತರರಾಜ್ಯ ದರೋಡೆಕೋರರ ಕೈವಾಡವಿರುವ ಶಂಕೆಯನ್ನು ಮೂಡಿಸಿದೆ. ಕೆಲವೇ ವಾರಗಳ ಹಿಂದೆ ಕರೀಂನಗರದ ಹೊರವಲಯದ ಡರ್ಶೆಡ್ ಮತ್ತು ತಿಮ್ಮಾಪುರದಲ್ಲಿರುವ ಎರಡು ಎಸ್‌ಬಿಐ ಎಟಿಎಂಗಳನ್ನು ಇದೇ ರೀತಿ ಗುರಿಯಾಗಿಸಲಾಗಿತ್ತು.

ಆ ಪ್ರಕರಣಗಳಲ್ಲೂ ಕಳ್ಳರು ಮಹಿಳೆಯರ ಉಡುಪು ಧರಿಸಿ ಬಂದು, ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣ ಸ್ಪ್ರೇ ಮಾಡಿ, ಗ್ಯಾಸ್ ಕಟ್ಟರ್‌ಗಳ ಮೂಲಕ ಹಣ ದೋಚಿದ್ದರು. ಹೀಗಾಗಿ ಕಾಮರೆಡ್ಡಿ ದರೋಡೆಯಲ್ಲೂ ಅದೇ ಹಳೆ ಗ್ಯಾಂಗ್ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ವಿಶೇಷ ತನಿಖಾ ತಂಡಗಳನ್ನು ರಚಿಸಿ ಶೋಧ ತೀವ್ರಗೊಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ
ಮಗುವಿಗೆ 'ಅನ್ನರಾಮಯ್ಯ' ಎಂದು ನಾಮಕರಣ
ಯುವ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಬಂದ ಪ್ರಭುದೇವಗೆ ಭರ್ಜರಿ ಸ್ವಾಗತ
ಯುವ ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಬಂದ ಪ್ರಭುದೇವಗೆ ಭರ್ಜರಿ ಸ್ವಾಗತ
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್‌ಗೆ ಹೊಸ UPS ಅಳವಡಿಕೆ
ಟಿವಿ9 ವರದಿಯ ಪರಿಣಾಮ: ತೆಕ್ಕಲಕೋಟೆ ಆಸ್ಪತ್ರೆ ವಾರ್ಡ್‌ಗೆ ಹೊಸ UPS ಅಳವಡಿಕೆ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪೊಲೀಸರ ಜೀಪನ್ನೇ ಅಲುಗಾಡಿಸಿ ವಿದ್ಯಾರ್ಥಿನಿಯರ ಆಕ್ರೋಶ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ರದ್ದಾಗಲು ಪ್ರಭಾವಿ ವ್ಯಕ್ತಿ ಕರೆಯೇ ಕಾರಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ದೊಡ್ಮನೆಯಲ್ಲಿ ಅದ್ದೂರಿ ಸ್ವಾಗತ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!