ಭಾರತ ವಿಜ್ಞಾನದಲ್ಲಿ ಸೂಪರ್​ಪವರ್ ರಾಷ್ಟ್ರವಾಗಲು ಸಾಧ್ಯವೇ? ಈ ಕನಸು ನನಸಾಗಿಸುವ ಮಾರ್ಗೋಪಾಯಗಳಿವು…

Ways for India becoming science power house: ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗುವತ್ತ ಮುನ್ನಡೆದಿದೆ. ಆದರೆ, ವಿಜ್ಞಾನ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತ ಸಾಕಷ್ಟು ಹಿಂದುಳಿದಿದೆ. ಆರ್ ಅಂಡ್ ಡಿ ಕ್ಷೇತ್ರಕ್ಕೆ ಸರ್ಕಾರದಿಂದ ವೆಚ್ಚ ಹೆಚ್ಚಾಗುವ ಅವಶ್ಯಕತೆ ಇದೆ. ಭಾರತದಲ್ಲಿ ಆರ್ ಅಂಡ್​ ಡಿಗೆ ಮಾಡಲಾಗುವ ವೆಚ್ಚದಲ್ಲಿ ಹೆಚ್ಚಿನ ಪಾಲು ಸರ್ಕಾರದ್ದಾಗಿದೆ. ಆದರೆ, ಖಾಸಗಿ ವಲಯದಿಂದಲೂ ಹೂಡಿಕೆ ಹೆಚ್ಚಾಗಬೇಕು ಎಂದು ನೇಚರ್ ಪತ್ರಿಕೆಯಲ್ಲಿ ವರದಿ ಮಾಡಿದೆ.

ಭಾರತ ವಿಜ್ಞಾನದಲ್ಲಿ ಸೂಪರ್​ಪವರ್ ರಾಷ್ಟ್ರವಾಗಲು ಸಾಧ್ಯವೇ? ಈ ಕನಸು ನನಸಾಗಿಸುವ ಮಾರ್ಗೋಪಾಯಗಳಿವು...
ಇಸ್ರೋ ವಿಜ್ಞಾನಿಗಳ ತಂಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 19, 2024 | 5:03 PM

ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಈ ದಶಕದ ಅಂತ್ಯದಲ್ಲಿ ಭಾರತ ಮೂರನೇ ಸ್ಥಾನಕ್ಕೆ ಏರುವ ಎಲ್ಲಾ ಸಾಧ್ಯತೆಯೂ ಇದೆ. ಅಮೆರಿಕ, ಚೀನಾ ಬಿಟ್ಟರೆ ಭಾರತವೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ. ಒಂದು ದೇಶದ ಆರ್ಥಿಕ ಬೆಳವಣಿಗೆಗೆ ಬೇಕಾದ ಭದ್ರ ಅಡಿಪಾಯಗಳಲ್ಲಿ ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರವೂ ಒಂದು. ಒಂದು ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ (science and technology) ಬಲಿಷ್ಠವಾಗಿದ್ದರೆ ಆರ್ಥಿಕ ಬೆಳವಣಿಗೆಯ ಮೂಲಶಕ್ತಿ ಪ್ರಬಲವಾಗಿರುತ್ತದೆ. ಹೆಚ್ಚಿನ ಮುಂದುವರಿದ ದೇಶಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿವೆ. ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ವಿಜ್ಞಾನ ಪ್ರಗತಿಯಲ್ಲಿ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ಭಾರತ ವಿಜ್ಞಾನದಲ್ಲಿ ಇನ್ನೂ ಯಾಕೆ ನಿರೀಕ್ಷಿತವಾಗಿ ಬೆಳೆಯುತ್ತಿಲ್ಲ? ಹಾಗೆ ಬೆಳೆಯಲು ಏನು ತೊಡಕಿದೆ ಎಂಬ ಬಗ್ಗೆ ನೇಚರ್ ನಿಯತಕಾಲಿಕೆಯಲ್ಲಿ ಒಂದು ವರದಿ ಪ್ರಕಟವಾಗಿದೆ.

ಈ ಪತ್ರಿಕೆಯ ವರದಿ ಪ್ರಕಾರ ಭಾರತವು ವಿಜ್ಞಾನ ಶಕ್ತಿಕೇಂದ್ರವಾಗಲು ಅಣಿಯಾಗಿದೆ. ಆದರೆ, ವಿವಿಧ ಸರ್ಕಾರಗಳು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿಲ್ಲ. ಈ ಕ್ಷೇತ್ರಕ್ಕೆ ಹೆಚ್ಚು ಸ್ವಾತಂತ್ರ್ಯ ಕಲ್ಪಿಸುವ ಕೆಲಸವನ್ನೂ ಮಾಡಿಲ್ಲ ಎಂದು ಹೇಳಲಾಗಿದೆ.

ಜಿಡಿಪಿಯಲ್ಲಿ ಆರ್ ಅಂಡ್ ಡಿಗೆ ಮುಡಿಪಾಗಿರುವುದು ಶೇ. 0.64 ಮಾತ್ರ

ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಿಸಿದ ವರದಿ ಪ್ರಕಾರ 2020-21ರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ವ್ಯಯಿಸಿದ ಹಣವು ಜಿಡಿಪಿಯ ಶೇ. 0.64ರಷ್ಟು ಮಾತ್ರವಾಗಿದೆ. 2009-10ರ ಸಾಲಿನಲ್ಲಿ ಶೇ. 0.82ರಷ್ಟು ಹಣವನ್ನು ಆರ್ ಅಂಡ್ ಡಿಗೆ ಮುಡಿಪಾಗಿರಿಸಲಾಗಿತ್ತು. ಇದು ಭಾರತದ ವಾಸ್ತವಿಕ ಚಿತ್ರಣ.

ಇದನ್ನೂ ಓದಿ: ಚುನಾವಣೆಯ ವರ್ಷವೂ ಭಾರತದ ಹಣಕಾಸು ಶಿಸ್ತು ಮೆಚ್ಚಿಕೊಂಡ ಐಎಂಎಫ್

ಶ್ಲಾಘನೀಯ ಅಂಶ ಎಂದರೆ ಇಷ್ಟು ಕಡಿಮೆ ವೆಚ್ಚ ಮಾಡಿಯೂ ಭಾರತ ಕಳೆದ 10 ವರ್ಷದಲ್ಲಿ ಸಾಕಷ್ಟು ವೈಜ್ಞಾನಿಕ ಮೈಲಿಗಲ್ಲು ತಲಪಿದೆ. ಯೂನಿವರ್ಸಿಟಿಗಳ ಸಂಖ್ಯೆ 760 ಇದ್ದದ್ದು 1,113ಕ್ಕೆ ಏರಿದೆ. ಐಐಟಿಗಳ ಸಂಖ್ಯೆ 23ಕ್ಕೆ ಏರಿದೆ. ಎರಡು ಹೊಸ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.

ಭಾರತವು ಔಷಧ ತಯಾರಿಕೆಗೆ ಪ್ರಮುಖ ಕೇಂದ್ರವಾಗಿದೆ. ಮಂಗಳಯಾನ, ಚಂದ್ರಯಾನ ಹೀಗೆ ಬಾಹ್ಯಾಕಾಶ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಚುರುಕುಗೊಂಡಿವೆ. ಇಷ್ಟೆಲ್ಲವೂ ಕೂಡ ಅಲ್ಪ ವೆಚ್ಚದಿಂದಲೇ ಸಾಧ್ಯವಾಗಿರುವುದು ಗಮನಾರ್ಹ. ಆದರೆ, ವರ್ಲ್ಡ್ ಬ್ಯಾಂಕ್​ನಿಂದ ಪ್ರಕಟವಾದ 38 ಅಧಿಕ ಆದಾಯ ದೇಶಗಳಲ್ಲಿನ ದತ್ತಾಂಶವನ್ನು ಗಮನಿಸುವುದಾದರೆ ಇವುಗಳ ಸರಾಸರಿ ವೆಚ್ಚ ಶೇ. 2.7ರಷ್ಟು ಇದೆ. ಚೀನಾದ ದೇಶ 2021ರಲ್ಲಿ ಶೇ. 2.4ರಷ್ಟು ಹಣವನ್ನು ಆರ್ ಅಂಡ್ ಡಿಗೆ ವ್ಯಯಿಸಿತ್ತು ಎಂದು ನೇಚರ್ ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಆರ್ ಅಂಡ್ ಡಿಗೆ ಖಾಸಗಿ ಹೂಡಿಕೆ ಕಡಿಮೆ

ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಫಂಡಿಂಗ್ ಸರ್ಕಾರದಿಂದಲೇ ಆಗುತ್ತದೆ. ರಿಸರ್ಚ್ ಕ್ಷೇತ್ರಕ್ಕೆ ಸಿಗುವ ಫಂಡಿಂಗ್​ನಲ್ಲಿ ಸರ್ಕಾರದ ಪಾಲು ಶೇ. 60ರಷ್ಟು ಇದೆ. ಆದರೆ, ಅಮೆರಿಕ, ಚೀನಾ, ಜಪಾನ್, ಜರ್ಮನಿ ಮೊದಲಾದ ದೇಶಗಳಲ್ಲಿ ಖಾಸಗಿ ವಲಯದಿಂದಲೇ ಆರ್ ಅಂಡ್ ಡಿಗೆ ಹೆಚ್ಚಿನ ಫಂಡಿಂಗ್ ಆಗುತ್ತದೆ. ಶೇ. 60ರಿಂದ 80ರಷ್ಟು ಫಂಡಿಂಗ್ ಖಾಸಗಿ ಕ್ಷೇತ್ರದಿಂದ ಆಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ಟೈಲರ್ ಇವತ್ತು ಬಿಲಿಯನೇರ್; ಸಾವಿರಾರು ಕೋಟಿ ರೂ ಕುಬೇರನಾದರೂ ಮೂಲ ಕಸುಬು ಮರೆತಿಲ್ಲ ರಜಾಕ್

ಭಾರತದಲ್ಲಿ ಖಾಸಗಿ ಕ್ಷೇತ್ರ ಆರ್ ಅಂಡ್ ಡಿಗೆ ಹೆಚ್ಚಿನ ಫಂಡಿಂಗ್ ಮಾಡಬೇಕು. ಈ ಕ್ಷೇತ್ರ ಗಟ್ಟಿಯಾದರೆ ಅದೆಷ್ಟು ಪ್ರಯೋಜನ ಆಗುತ್ತದೆ ಎಂಬುದನ್ನು ಮುಂದುವರಿದ ದೇಶಗಳಿಗೆ ಚೆನ್ನಾಗಿ ತಿಳಿದಿದೆ. ಅದಕ್ಕೆ ಅಲ್ಲಿ ಆರ್ ಅಂಡ್ ಡಿಗೆ ಪ್ರಾಶಸ್ತ್ಯ ಸಿಗುತ್ತದೆ. ಇದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕಿದೆ.

(ಕೃಪೆ: ನೇಚರ್ ಡಾಟ್ ಕಾಮ್)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
‘ಸುಮ್ಮನಿರುವ ಮಗ ನಾನಲ್ಲ’: ಸಿಡಿದೆದ್ದ ಧನರಾಜ್; ಸಮಾಧಾನ ಮಾಡಿದ ಹನುಮ
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಉಳಿದುಬಿಟ್ಟಿದೆ: ಯೋಗೇಶ್ವರ್
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ಪ್ರತಿ ಹುಟ್ಟುಹಬ್ಬಕ್ಕೆ ಇಬ್ರಾಹಿಂ ನನಗೆ ವಿಶ್ ಮಾಡುತ್ತಾರೆ: ಜಿಟಿ ದೇವೇಗೌಡ
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ದೊಡ್ಮನೆಗೆ ಬರೋಕಿಂತ ಮುನ್ನ ಧರ್ಮ, ಅನುಷಾ ರೈ ನಡುವೆ ಬ್ರೇಕಪ್ ಆಗಿತ್ತಾ?
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಯೋಗೇಶ್ವರ್ ಕೇವಲ ಅಭಿವೃದ್ಧಿ ಕೆಲಸಗಳನ್ನು ಉಲ್ಲೇಖಿಸಿ ಮತ ಕೇಳಿದರು: ಶಾಸಕ
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್