Viksit Bharat Sankalp Yatra: ಸರ್ಕಾರಕ್ಕೆ ಪ್ರಚಾರ ಮುಖ್ಯವಲ್ಲ, ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆ ತಲುಪುವುದು ಮುಖ್ಯ: ಮೋದಿ
ನಮ್ಮ ಸರ್ಕಾರಕ್ಕೆ ಪ್ರಚಾರ ಮುಖ್ಯವಲ್ಲ ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆ ತಲುಪುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ(Viksit Bharat Sankalp Yatra)ಯ ಅಡಿಯಲ್ಲಿ ಫಲಾನುಭವಿಗಳ ಜತೆ ವರ್ಚ್ಯುವಲ್ ಸಂವಾದ ನಡೆಸಿದರು. ಆಗ ಮಾತನಾಡಿದ ಅವರು, ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ವಾಹನಕ್ಕೆ ಗಣ್ಯರ ಅಥವಾ ಪಕ್ಷದ ಚಿಹ್ನೆಯ ಪೋಸ್ಟರ್ ಹಚ್ಚುತ್ತೇವೆ ಅದು ನಿಜ ಆದರೆ ನಮಗೆ ಪ್ರಚಾರವಲ್ಲ, ಯೋಜನೆ ತಲುಪಿಸುವುದು ಮುಖ್ಯ ಎಂದರು.
ನಮ್ಮ ಸರ್ಕಾರಕ್ಕೆ ಪ್ರಚಾರ ಮುಖ್ಯವಲ್ಲ ಕಟ್ಟ ಕಡೆಯ ವ್ಯಕ್ತಿಯವರೆಗೂ ಯೋಜನೆ ತಲುಪುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ವಿಕಸಿತ ಭಾರತ ಸಂಕಲ್ಪ ಯಾತ್ರೆ(Viksit Bharat Sankalp Yatra)ಯ ಅಡಿಯಲ್ಲಿ ಫಲಾನುಭವಿಗಳ ಜತೆ ವರ್ಚ್ಯುವಲ್ ಸಂವಾದ ನಡೆಸಿದರು. ಆಗ ಮಾತನಾಡಿದ ಅವರು, ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ವಾಹನಕ್ಕೆ ಗಣ್ಯರ ಅಥವಾ ಪಕ್ಷದ ಚಿಹ್ನೆಯ ಪೋಸ್ಟರ್ ಹಚ್ಚುತ್ತೇವೆ ಅದು ನಿಜ ಆದರೆ ನಮಗೆ ಪ್ರಚಾರವಲ್ಲ, ಯೋಜನೆ ತಲುಪಿಸುವುದು ಮುಖ್ಯ ಎಂದರು.
ದೇಶದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 10,000 ರಿಂದ 25,000 ಕ್ಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು. ಉತ್ತಮ ಔಷಧ ಮತ್ತು ಅಗ್ಗದ ಔಷಧವೇ ಬಹುದೊಡ್ಡ ಸೇವೆ ಎಂದರು. ಔಷಧಗಳ ಮೇಲಿನ ಖರ್ಚು ಈಗ ಹೇಗೆ ಕಡಿಮೆಯಾಗುತ್ತಿದೆ ಎಂಬುದನ್ನು ಪ್ರಧಾನಿ ಜನರಿಗೆ ತಿಳಿಸಿದರು.
ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಉತ್ತಮ ಔಷಧಗಳು ಮತ್ತು ಅಗ್ಗದ ಔಷಧಗಳು ದೊಡ್ಡ ಸೇವೆಯಾಗಿದೆ ಎಂದು ಹೇಳಿದರು. ನನ್ನ ಮಾತು ಕೇಳುವವರೆಲ್ಲರೂ ಜನೌಷಧಿ ಕೇಂದ್ರದ ಬಗ್ಗೆ ಜನರಿಗೆ ತಿಳಿಸಲು ವಿನಂತಿಸುತ್ತೇನೆ. ಈ ಹಿಂದೆ 12-13 ಸಾವಿರ ರೂ.ಗಳಷ್ಟಿದ್ದ ಔಷಧಿಗಳ ಖರ್ಚು ಇದೀಗ 2-3 ಸಾವಿರ ರೂ.ಗಳಾಗುತ್ತಿದೆ ಎಂದರೆ ಜನೌಷಧಿ ಕೇಂದ್ರದಿಂದಾಗಿ 10 ಸಾವಿರ ರೂ.ಗಳು ನಿಮ್ಮ ಜೇಬಿಗೆ ಉಳಿತಾಯವಾಗುತ್ತಿದೆ.
ಮತ್ತಷ್ಟು ಓದಿ: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ನಾಳೆ ಮೋದಿ ಸಂವಾದ
ಪ್ರಧಾನಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರ ಆರಂಭ ಪ್ರಧಾನಿ ಮೋದಿ ಅವರು ಪ್ರಧಾನಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರವನ್ನು ಸಹ ಪ್ರಾರಂಭಿಸಿದ್ದಾರೆ. ಡ್ರೋನ್ ಕೇಂದ್ರವು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ (SHGs) ಡ್ರೋನ್‌ಗಳನ್ನು ಒದಗಿಸುತ್ತದೆ ಇದರಿಂದ ಅವರು ಈ ತಂತ್ರಜ್ಞಾನವನ್ನು ಬಳಸಿಕೊಂಡು ಜೀವನೋಪಾಯವನ್ನು ಗಳಿಸಬಹುದು. ಈ ಯೋಜನೆಯಡಿ ಮೂರು ವರ್ಷಗಳಲ್ಲಿ 15 ಸಾವಿರ ಡ್ರೋನ್‌ಗಳನ್ನು ಮಹಿಳೆಯರಿಗೆ ನೀಡಲಾಗುವುದು. ಈ ಯೋಜನೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಡ್ರೋನ್‌ಗಳನ್ನು ಆಪರೇಟಿಂಗ್ ಮಾಡಲು ತರಬೇತಿಯನ್ನು ಪ್ರಾರಂಭಿಸಿದಾಗ, ಈ ಯೋಜನೆಯ ಬಗ್ಗೆ ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು.
ಕೃಷಿಯಲ್ಲಿ ಡ್ರೋನ್‌ಗಳು ತಂತ್ರಜ್ಞಾನದ ವ್ಯಾಪ್ತಿಯನ್ನು ಮೀರಿ ಹೋಗುತ್ತವೆ ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿ ಹೊರಹೊಮ್ಮುತ್ತವೆ ಎಂಬುದನ್ನು ರಾಮನ್ ಅಮ್ಮಾ ಜಿ ಅವರಂತಹ ಮಹಿಳೆಯರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ನೀವೆಲ್ಲರೂ ಇಡೀ ದೇಶಕ್ಕೆ ಸ್ಪೂರ್ತಿ. ಅಭಿವೃದ್ಧಿ ಹೊಂದಿದ ಭಾರತದ ಈ ಸಂಕಲ್ಪ ಪಯಣದಲ್ಲಿ ನಿಮ್ಮಂತಹ ಮಹಿಳೆಯರ ಸಹಭಾಗಿತ್ವ ಬಹಳ ಮುಖ್ಯ ಎಂದರು.
ತನಗೆ ಯಾವ ಜಾತಿ ದೊಡ್ಡದು ಎಂದು ವಿವರಿಸಿದ ಮೋದಿ
ದೇಶದಲ್ಲಿ ಜಾತಿ ಗಣತಿಗೆ ಸಂಬಂಧಿಸಿದಂತೆ ಎದ್ದಿರುವ ಬೇಡಿಕೆಗಳ ನಡುವೆ, ಪ್ರಧಾನಿ ಮೋದಿ ಅವರು ನನಗೆ ದೊಡ್ಡ ಜಾತಿ – ಬಡವರು, ನನಗೆ ದೊಡ್ಡ ಜಾತಿ – ಯುವಕರು, ನನಗೆ ದೊಡ್ಡ ಜಾತಿ – ಮಹಿಳೆಯರು, ನನಗೆ ದೊಡ್ಡ ಜಾತಿ – ರೈತ. ಈ ನಾಲ್ಕು ಜಾತಿಗಳ ಉನ್ನತಿಯಿಂದ ಮಾತ್ರ ಭಾರತ ಅಭಿವೃದ್ಧಿಯಾಗುತ್ತದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ 4 ಅಮೃತ ಸ್ತಂಭಗಳ ಮೇಲೆ ನಿಂತಿದೆ ಎಂದರು. ಇವು ಅಮೃತ ಸ್ತಂಭಗಳು – ನಮ್ಮ ಮಹಿಳಾ ಶಕ್ತಿ, ನಮ್ಮ ಯುವ ಶಕ್ತಿ, ನಮ್ಮ ರೈತರು ಮತ್ತು ನಮ್ಮ ಬಡ ಕುಟುಂಬಗಳು.
ನಮ್ಮ ಸರ್ಕಾರ ಹತಾಶೆಯ ಪರಿಸ್ಥಿತಿಯನ್ನು ಬದಲಾಯಿಸಿತು ದೇಶದ ಹೆಚ್ಚಿನ ಜನಸಂಖ್ಯೆಯು ಸ್ವಾತಂತ್ರ್ಯದ ನಂತರ ಹಲವು ದಶಕಗಳವರೆಗೆ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಹತಾಶೆಯ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಬದಲಾಯಿಸಿದೆ ಎಂದರು. ಇಂದು ದೇಶದಲ್ಲಿ ಇರುವ ಸರಕಾರ ಜನರನ್ನೇ ದೇವರಂತೆ ಕಾಣುವ ಸರಕಾರವಾಗಿದೆ. ನಾವು ಅಧಿಕಾರದ ಭಾವನೆಯಿಂದ ಜನರ ಬಳಿಗೆ ಹೋಗುತ್ತಿಲ್ಲ, ಆದರೆ ಸೇವಾ ಭಾವನೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ಐದು ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ
ಜಾರ್ಖಂಡ್, ರುಚಿ ಕುಮಾರಿ ಜನೌಷಧಿ ಕೇಂದ್ರಗಳಲ್ಲು 25 ಸಾವಿರಕ್ಕೆ ಹೆಚ್ಚಿಸುತ್ತಿರುವುದು ಸಂತಸದ ಸಂಗತಿ, ಬೇರೆ ಔಷಧ ಕೇಂದ್ರಗಳಲ್ಲಿ 100 ರೂ.ಗೆ ಸಿಗುತ್ತಿರುವ ಔಷಧಿ ಜನೌಷಧಿ ಕೇಂದ್ರಗಳಲ್ಲಿ 30 ರಿಂದ 50 ರೂ.ಗೆ ಸಿಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತುಂಬಾ ಸಹಾಯವಾಗುತ್ತಿದೆ ಎಂದು ಹೇಳಿದ್ದಾರೆ.
ರಾಯಗಢ, ಪೂರ್ಣಚಂದ್ ಪೂರ್ಣಚಂದ್ ರೈತರಾಗಿದ್ದು, ಪಿಎಂ ಕಿಸಾನ್ ಸಮ್ಮಾನ್, ಗರೀಬ್ ಕಲ್ಯಾಣ ಯೋಜನೆ, ಉಜ್ವಲ ಯೋಜನೆಯ ಫಲಾನುಭವಿಯಾಗಿದ್ದಾರೆ. ಅವರು ಮೊದಲು ಕಟ್ಟಿಗೆಯನ್ನು ತಂದು ಒಲೆಯನ್ನು ಹೊತ್ತಿಸಿ ಅಡುಗೆ ತಯಾರಿಸಬೇಕಿತ್ತು ಆದರೆ ಉಜ್ವಲ ಯೋಜನೆಯಿಂದ ತುಂಬಾ ಸಹಾಯವಾಗಿದೆ, ಹೊಗೆಯಿಂದಾಗಿ ಮೊದಲು ಪತ್ನಿ ಹಾಗೂ ತಾಯಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು ಆದರೆ ಈಗ ಆರೋಗ್ಯ ಕೂಡ ಉತ್ತಮವಾಗಿದೆ ಎಂದು ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ಪ್ರಕಾಸಂ, ಆಂಧ್ರಪ್ರದೇಶ, ಕಮಲಾ ಅಗ್ನಿಕಲ್ಚರ್ ಡ್ರೋನ್ ನಿಂದ ತುಂಬಾ ಸಹಾಯವಾಗಿದೆ, ಉಜ್ವಲ ಯೋಜನೆಯ ಸಹಾಯವನ್ನು ಕೂಡ ಪಡೆದಿದ್ದೇವೆ ಎಂದಿದದ್ಆರೆ.
ಅರುಣಾಚಲ ಪ್ರದೇಶ,ನಾಮ್ಸಾಯ್, ಲಾಕರ್ ಲಾಕ್ ಎಂಬುವವರು ಮಾತನಾಡಿ, ಮನೆಯಲ್ಲಿ ಐದು ಜನರಿದ್ದೇವೆ, ಮೊದಲು ಮನೆಯಿರಲಿಲ್ಲ, ಕೇಂದ್ರ ಸರ್ಕಾರದಿಂದ 1.30 ಲಕ್ಷ ಹಣವನ್ನು ಪಡೆದಿದ್ದೇನೆ, ರಾಜ್ಯ ಸರ್ಕಾರ ಕೂಡ ಹಣ ನೀಡಿದೆ, ಅದರಿಂದ ಮನೆಯಲ್ಲಿ ನೆಮ್ಮದಿಯಾಗಿ ವಾಸವಾಗಿದ್ದೇವೆ. ಮೊದಲು ಊರಿನಲ್ಲಿ ಸಮರ್ಪಕವಾಗಿ ಕುಡಿಯುವ ನೀರಿಲ್ಲದೆ ಜನರು ಮಲೇರಿಯಾ ಸೇರಿದಂತೆ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದರು, ಆದರೆ ಜಲ್ ಜೀವನ್ ಮಿಷನ್ ಅಡಿ ಪ್ರತಿ ಮನೆಗೂ ನಲ್ಲಿಯಲ್ಲಿ ನೀರು ಬರುತ್ತಿದೆ ಎಂದರು.
ಜಮ್ಮು ಮತ್ತು ಕಾಶ್ಮೀರ, ಬಲ್ವೀರ್ ಕೌರ್ ಕಿಸಾನ್ ಸಮ್ಮಾನ್ ನಿಧಿ, ಕೆಸಿಸಿಯಿಂದ ಲಾಭ ಪಡೆದಿದ್ದೇನೆ, ಮಾರ್ಮ್ ಮೆಷಿನರಿಯಿಂದ 2 ಲಕ್ಷ ರೂ. ಸಬ್ಸಿಡಿಯೂ ಕೂಡ ದೊರೆತಿದೆ. ಟ್ರ್ಯಾಕ್ಟರ್ ಹೊಂದಿದ್ದೇನೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 30 November 23