ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
ತೆಲಂಗಾಣ ಸಿಎಂ ರೇವಂತ್ ರೆಡ್ಡಿ 'ಶಿವ ಬಡವರ ದೇವರು, ರಾಮ ಶ್ರೀಮಂತರ ದೇವರು' ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ. ಬಿಜೆಪಿ ಇದನ್ನು ಸನಾತನ ಧರ್ಮಕ್ಕೆ ವಿರೋಧ ಎಂದಿದ್ದು, ಉತ್ತರ-ದಕ್ಷಿಣ, ಶಿವ-ರಾಮ ನಡುವೆ ವಿಷ ಬೀಜ ಬಿತ್ತುವ ಪ್ರಯತ್ನ ಎಂದು ಟೀಕಿಸಿದೆ. ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯದ ಆತಂಕವೂ ಚರ್ಚೆಗೆ ಬಂದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನವದೆಹಲಿ, ಸೆಪ್ಟೆಂಬರ್ 29: ಶಿವ ಬಡವರ ದೇವರು ಹಾಗೂ ರಾಮ ಶ್ರೀಮಂತರ ದೇವರು ಎಂದು ಹೇಳುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.ಉತ್ತರ ಭಾರತದಲ್ಲಿ ಬಿಜೆಪಿಯ ಚುನಾವಣಾ ಪ್ರಾಬಲ್ಯಕ್ಕೆ ಆ ಪಕ್ಷವು ಶ್ರೀರಾಮನನ್ನು ತನ್ನ ಸ್ವತ್ತಾಗಿ ಮಾಡಿಕೊಂಡಿರುವುದೇ ಕಾರಣ ಎಂದು ಆರೋಪಿಸಿದ ಅವರು, ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಧಾರ್ಮಿಕ ಹೋಲಿಕೆಗಳನ್ನು ಮುಂದಿಟ್ಟಿದ್ದಾರೆ.
ಆರ್ಯ-ದ್ರಾವಿಡ ಮತ್ತು ಶಿವ-ರಾಮ ಚರ್ಚೆ: “ನಾವು ದ್ರಾವಿಡರು, ಉತ್ತರದವರು ಆರ್ಯರು. ನಾವು ಶಿವನ ಆರಾಧಕರು, ಅವರು ರಾಮನ ಭಕ್ತರು. ಬಿಜೆಪಿ ಶ್ರೀರಾಮನನ್ನು ಕದ್ದು ಕೇವಲ ತಮ್ಮ ರಾಜಕೀಯ ಭಾವನೆಯನ್ನಾಗಿ ಪರಿವರ್ತಿಸಿಕೊಂಡಿದೆ ಎಂದರು. ಶಿವನು ಸದಾ ಬಡವರ ಪರವಾಗಿರುವ ದೇವರು, ರಾಮನು ಶ್ರೀಮಂತರ ದೇವರು, ಹಾಗಾಗಿಯೇ ಶ್ರೀಮಂತರ ಪಕ್ಷವಾದ ಬಿಜೆಪಿಗೆ ರಾಮ ನೆನಪಾಗುತ್ತಾನೆ ಎಂದು ಅವರು ವಿಶ್ಲೇಷಿಸಿದರು.
ಸೈಮನ್ ಗೋ ಬ್ಯಾಕ್ ಮಾದರಿ ಹೋರಾಟದ ಕರೆ: ಕ್ಷೇತ್ರ ಮರುವಿಂಗಡಣೆ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಬಿಜೆಪಿಗೆ ಅನುಕೂಲ ಮಾಡಿಕೊಡುವ ಮತ್ತು ಮತಗಳನ್ನು ಕಡಿತಗೊಳಿಸುವ ಹುನ್ನಾರ ಎಂದು ದೂರಿದ ಅವರು, ಸ್ವಾತಂತ್ರ್ಯ ಹೋರಾಟದ ‘ಸೈಮನ್ ಗೋ ಬ್ಯಾಕ್’ ಮಾದರಿಯಲ್ಲೇ ಮಮತಾ ಬ್ಯಾನರ್ಜಿ, ಉದ್ಧವ್ ಠಾಕ್ರೆ ಹಾಗೂ ಎಂ.ಕೆ. ಸ್ಟಾಲಿನ್ ಒಂದಾಗಿ ಹೋರಾಡಬೇಕೆಂದು ಕರೆ ನೀಡಿದರು. ಜೊತೆಗೆ ರಕ್ಷಣೆ, ಗೃಹ, ವಾಣಿಜ್ಯದಂತಹ ಪ್ರಮುಖ ಖಾತೆಗಳನ್ನು ಉತ್ತರ ಭಾರತೀಯ ನಾಯಕರೇ ಹಿಡಿದಿಟ್ಟುಕೊಂಡಿದ್ದಾರೆ ಎಂದು ಆಪಾದಿಸಿದರು.
ಚುನಾವಣೆಗಾಗಿ ‘ಮುಸ್ಲಿಂ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಮುಸ್ಲಿಂ’ ಎಂದು ತುಷ್ಟೀಕರಣ ರಾಜಕಾರಣ ಮಾಡಿದ್ದ ರೇವಂತ್ ರೆಡ್ಡಿ, ಈಗ ಅಧಿಕಾರಕ್ಕಾಗಿ ರಾಮ ಮತ್ತು ಶಿವನ ನಡುವೆಯೇ ರಾಜಕೀಯ ಗಡಿ ಎಳೆಯಲು ಹೊರಟಿದ್ದಾರೆ ಎಂದು ಬಂಡಿ ಸಂಜಯ್ ಕಿಡಿಕಾರಿದರು.
ಪೋಸ್ಟ್
#WATCH Delhi: On Telangana CM Revanth Reddy’s remarks on Lord Rama and Shiva, BJP leader Syed Shahnawaz Hussain says, “Congress leaders keep making such statements against Sanatan. The way Revanth Reddy has spoken about Lord Ram and Shiv. He should not use such language… This… pic.twitter.com/d0W9Oqgbos
— ANI (@ANI) September 29, 2026
ವಿಷವನ್ನು ತಾನೇ ಕುಡಿದು ಶಿವ ನೀಲಕಂಠನಾದ. ಆದರೆ ಇಂದು ಕಾಂಗ್ರೆಸ್ ಪಕ್ಷವು ಜಾತಿ ವಿರುದ್ಧ ಜಾತಿ, ಉತ್ತರದ ವಿರುದ್ಧ ದಕ್ಷಿಣ ಹಾಗೂ ಶಿವನ ವಿರುದ್ಧ ರಾಮನನ್ನು ಎತ್ತಿಕಟ್ಟುವ ಮೂಲಕ ಹೊಸ ವಿಷವನ್ನು ತಯಾರಿಸುತ್ತಿದೆ” ಎಂದು ಟೀಕಿಸಿದರು.
“ವಿಷ್ಣುವಿನ ಹೃದಯದಲ್ಲಿ ಶಿವನಿದ್ದಾನೆ, ಶಿವನ ಹೃದಯದಲ್ಲಿ ವಿಷ್ಣುವಿದ್ದಾನೆ; ಇದೇ ಸನಾತನ ಧರ್ಮದ ಸಾರ. ಪ್ರಧಾನಿ ಮೋದಿ ಅವರು ವಾರಾಣಸಿಯ ಸಂಸದರಾಗಿದ್ದು, ಸ್ವಾತಂತ್ರ್ಯಾನಂತರ ವೇಮುಲವಾಡದ ರಾಜರಾಜೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಸಾರ್ವಜನಿಕ ಸಭೆಗಳಲ್ಲಿ ಅವರು ಸದಾ ‘ಹರ ಹರ ಮಹಾದೇವ್’ ಜಯಘೋಷ ಮೊಳಗಿಸುತ್ತಾರೆ” ಎಂದು ಹೇಳಿ ವಿಡಿಯೋ ಸಾಕ್ಷ್ಯಗಳನ್ನು ನೆನಪಿಸಿದರು.
ಪೋಸ್ಟ್
CM Revanth Reddy says Rama is god of rich and Shiva god of poor. PM Modi, BJP never say Hara Hara Mahadev. They are aryans, we are dravidians.
How ignorant can this man get?
Who re-developed Kashi Vishwanath corridor in UP? Who Somnath Swabhiman Parv at Somnath Temple in…
— Karthik Reddy (@bykarthikreddy) September 28, 2026
ದಕ್ಷಿಣ ಕಾಶಿ ಮತ್ತು ದಕ್ಷಿಣ ಅಯೋಧ್ಯೆ: ತೆಲಂಗಾಣದಲ್ಲೇ ಪ್ರಸಿದ್ಧ ಶಿವಕ್ಷೇತ್ರವಾದ ವೇಮುಲವಾಡ ಹಾಗೂ ಪ್ರಸಿದ್ಧ ರಾಮಕ್ಷೇತ್ರವಾದ ಭದ್ರಾಚಲಂ ಇವೆ. ತೆಲಂಗಾಣದ ಮುಖ್ಯಮಂತ್ರಿಯಾಗಿ ಈ ಎರಡೂ ದೇವರುಗಳನ್ನು ಭೌಗೋಳಿಕ ಗಡಿಗಳಿಗೆ ಸೀಮಿತಗೊಳಿಸುವುದು ತಪ್ಪು ಎಂದು ಬಿಜೆಪಿ ನಾಯಕರು ಪ್ರಮುಖವಾಗಿ ಬೆಟ್ಟುಮಾಡಿದ್ದಾರೆ.
ಲೋಕಸಭಾ ಕ್ಷೇತ್ರ ಮರುವಿಂಗಡಣೆ ಆತಂಕ: ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳಿಗೆ ಮುಂಬರುವ ಕ್ಷೇತ್ರ ಮರುವಿಂಗಡಣೆಯಿಂದ ಲೋಕಸಭಾ ಸೀಟುಗಳು ಕಡಿಮೆಯಾಗಿ ರಾಜಕೀಯ ಪ್ರಾತಿನಿಧ್ಯ ಕುಗ್ಗಬಹುದು ಎಂಬ ಕಳವಳ ದಕ್ಷಿಣ ಭಾರತದ ನಾಯಕರಲ್ಲಿ ದೀರ್ಘಕಾಲದಿಂದಲೂ ಇದೆ. ರೇವಂತ್ ರೆಡ್ಡಿ ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ವಿಪಕ್ಷಗಳ ಒಗ್ಗಟ್ಟಿಗೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




