AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ಇಂಧನದ ಮೇಲಿನ ವ್ಯಾಟ್ ತೆರಿಗೆಯಲ್ಲಿ ಭಾರೀ ಕಡಿತ; ತಮಿಳುನಾಡು ಸರ್ಕಾರದ ಕ್ರಮಕ್ಕೆ ಕೇಂದ್ರದಿಂದ ಪ್ರಶಂಸೆ

ತಮಿಳುನಾಡಿನಾದ್ಯಂತ ವಿಮಾನ ಇಂಧನ (ATF) ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (VAT) ಟಿವಿಕೆ (TVK) ಸರ್ಕಾರವು ಭಾರೀ ಪ್ರಮಾಣದಲ್ಲಿ ತಗ್ಗಿಸಿದೆ. ಈ ನಿರ್ಧಾರವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚೆನ್ನೈ ಏರ್​ಪೋರ್ಟ್​ನಲ್ಲಿ ಎಟಿಎಫ್ ಮೇಲಿನ ವ್ಯಾಟ್ ತೆರಿಗೆಯನ್ನು ಶೇ. 29ರಿಂದ ಶೇ. 16ಕ್ಕೆ ಇಳಿಸಲಾಗಿದೆ. ತಮಿಳುನಾಡಿನ ಇತರ ಏರ್​ಪೋರ್ಟ್​ಗಳಲ್ಲಿ ಇದು ಶೇ. 1ಕ್ಕೆ ಇಳಿದಿದೆ.

ವಿಮಾನ ಇಂಧನದ ಮೇಲಿನ ವ್ಯಾಟ್ ತೆರಿಗೆಯಲ್ಲಿ ಭಾರೀ ಕಡಿತ; ತಮಿಳುನಾಡು ಸರ್ಕಾರದ ಕ್ರಮಕ್ಕೆ ಕೇಂದ್ರದಿಂದ ಪ್ರಶಂಸೆ
ತಮಿಳುನಾಡು ಸಿಎಂ ಜೋಸೆಫ್ ವಿಜಯ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2026 | 7:03 PM

Share

ಚೆನ್ನೈ, ಅಕ್ಟೋಬರ್ 25: ಸಿಎಂ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ವಿಮಾನ ಇಂಧನವಾದ ಎಟಿಎಫ್ ಮೇಲಿನ ವ್ಯಾಟ್ ತೆರಿಗೆಯನ್ನು ಗಣನೀಯವಾಗಿ ಇಳಿಸಿದೆ. ಜೆಟ್ ಫುಯೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಇಳಿಸುವ ರಾಜ್ಯ ಸರ್ಕಾರದ ಈ ಕ್ರಮವನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಅಪರೂಪವಾಗಿ ಕಾಣುವ ಸನ್ನಿವೇಶ ಇದಾಗಿರಬಹುದು.

ಎಟಿಎಫ್ ಮೇಲೆ ವ್ಯಾಟ್: ಚೆನ್ನೈನಲ್ಲಿ ಶೇ. 16, ಇತರೆಡೆ ಶೇ. 1

ಚೆನ್ನೈ ವಿಮಾನ ನಿಲ್ದಾಣದಲ್ಲಿ ಶೇ. 29ರಷ್ಟಿದ್ದ ಜೆಟ್ ಇಂಧನ ಮೇಲಿನ ವ್ಯಾಟ್ (VAT) ಪ್ರಮಾಣವನ್ನು ಶೇ. 16ಕ್ಕೆ ಇಳಿಸಲಾಗಿದೆ. ಅದೇ ರೀತಿ, ರಾಜ್ಯದ ಇತರ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಇದನ್ನು ಬ್ರಹ್ಮಾಂಡ ಕಡಿತಗೊಳಿಸಿ ಕೇವಲ ಶೇ. 1ಕ್ಕೆ ತರಲಾಗಿದೆ. ಅಲ್ಲದೆ, ಸಣ್ಣ ವಿಮಾನಗಳ ಇಂಧನ ತೆರಿಗೆಯನ್ನು ಶೇ. 5ರಿಂದ ಶೇ. 1ಕ್ಕೆ ಇಳಿಸಲಾಗಿದೆ. ಈ ವಿನಾಯಿತಿಯು ಒಂದು ವರ್ಷದವರೆಗೆ, ಅಂದರೆ ಅಕ್ಟೋಬರ್ 31, 2027ರವರೆಗೆ ಜಾರಿಯಲ್ಲಿರಲಿದೆ.

ಇದನ್ನೂ ಓದಿ: ಡ್ರಗ್ಸ್ ಜಾಲದ ಮೇಲೆ ‘ಆಪರೇಷನ್ ಟ್ರೈಡೆಂಟ್’; ಈಶಾನ್ಯ ರಾಜ್ಯಗಳಲ್ಲಿ 38 ಕಡೆ ದಾಳಿ; 100 ಕೋಟಿ ರೂ ಹವಾಲಾ ಜಾಲ ಪತ್ತೆ

ತಮಿಳುನಾಡು ಸರ್ಕಾರದ ಕ್ರಮಕ್ಕೆ ಕೇಂದ್ರ ಸಚಿವರ ಪ್ರಶಂಸೆ

ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ಬಹಿರಂಗವಾಗಿ ಸ್ವಾಗತಿಸಿದ್ದಾರೆ.

“ವಿಮಾನ ಇಂಧನ ಮೇಲಿನ ವ್ಯಾಟ್ ತಗ್ಗಿಸುವ ಮೂಲಕ ತಮಿಳುನಾಡು ಸರ್ಕಾರವು ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ರಿಲೀಫ್ ನೀಡಿದೆ. ಪ್ರಯಾಣಿಕರನ್ನು ಸುಲಭವಾಗಿ ತಲುಪುವಂತೆ ಮಾಡಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ” ಎಂದು ವಿಮಾನಯಾನ ಸಚಿವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ, ಮುಖ್ಯಮಂತ್ರಿ ವಿಜಯ್ ಅವರನ್ನು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ಆಹಾರ ಸುರಕ್ಷತಾ ಸಂಸ್ಥೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ; ತಪಾಸಣೆ, ಪರವಾನಗಿ ಅಧಿಕಾರ ಮರಳಿಸುವಂತೆ ಒತ್ತಾಯ

ವಿಮಾನಯಾನ ಕ್ಷೇತ್ರಕ್ಕೆ ಅನುಕೂಲ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಇಂಧನ ವೆಚ್ಚದಿಂದ ಸಂಕಷ್ಟಕ್ಕೀಡಾಗಿರುವ ವಿಮಾನಯಾನ ಸಂಸ್ಥೆಗಳಿಗೆ ಈ ತೆರಿಗೆ ಕಡಿತವು ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ನೀಡಲಿದೆ. ಅಲ್ಲದೆ, ರಾಜ್ಯದ ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಮತ್ತು ಹೊಸ ಮಾರ್ಗಗಳ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ ಎಂದು ತಮಿಳುನಾಡು ಕೈಗಾರಿಕಾ ಸಚಿವರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
'ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ'; ಖರ್ಗೆ
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ದಾಂಡೇಲಿಯಲ್ಲಿ ಪ್ರವಾಸಿಗನ ಧ್ವನಿ ಕೇಳಿ ದಡಕ್ಕೆ ಬಂತು ಮೊಸಳೆ!
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಸ್ಟಿಂಗ್ ವಿಚಾರ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ; ಜೋಶಿ ವಾಗ್ದಾಳಿ
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ