Indian Railways: ರೈಲ್ವೆ ನಿಲ್ದಾಣದಲ್ಲಿ ಹೋಮ್ ಸಿಗ್ನಲ್ ಯಾಕಿರುವುದು? ಅದರ ಪಾತ್ರವೇನು? ಇಲ್ಲಿದೆ ನೋಡಿ
ರೈಲು ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಹೋಮ್ ಸಿಗ್ನಲ್ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ.
ಭಾರತೀಯ ರೈಲ್ವೇ ಸಚಿವಾಲಯವು (Indian Railways) ಒಂದು ಫೋಸ್ಟ್ನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಭಾರತದಾದ್ಯಂತ ರೈಲ್ವೆ ನಿಲ್ದಾಣಗಳ ಆಕರ್ಷಕ ಚಿತ್ರಗಳನ್ನು ಮತ್ತು ರೈಲ್ವೇ ಕೆಲವೊಂದು ಆಸಕ್ತಿಯುತ ವಿಚಾರಗಳನ್ನು ತಿಳಿಸುವ ಪ್ರಯತ್ನವನ್ನು ರೈಲ್ವೆ ಇಲಾಖೆ ಮಾಡಿದೆ. ರೈಲ್ವೆ ಇಲಾಖೆ ಹಂಚಿಕೊಳ್ಳಲು ಈ ಪೋಸ್ಟ್ ಅನೇಕರಿಗೆ ಈ ಬಗ್ಗೆ ಒಂದು ಉತ್ತಮ ಮಾಹಿತಿ ಮತ್ತು ಈ ರೀತಿಯ ವಿಚಾರಗಳನ್ನು ತಿಳಿದುಕೊಳ್ಳವುದು ಅಗತ್ಯ ಎಂದು ಹೇಳಿದೆ. ರೈಲ್ವೆ ಸಚಿವಾಲಯವು ರೈಲುಗಳು ಮತ್ತು ಅವುಗಳ ಅನೇಕ ಸೇವೆಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದೆ. ಶನಿವಾರ, ರೈಲ್ವೆ ಸಚಿವಾಲಯವು ರೈಲು ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ”ಹೋಮ್ ಸಿಗ್ನಲ್”ನ ಪ್ರಾಮುಖ್ಯತೆಯನ್ನು ಟ್ವಿಟರ್ ಮೂಲಕ ವಿವರಿಸಿದೆ. ನೀವು ರೈಲಿನಲ್ಲಿ ಪ್ರಯಾಣಿಸುವಾಗ, ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಮೊದಲ ಸಿಗ್ನಲ್ ಕೆಂಪು/ಹಳದಿ/ಹಸಿರು ಬಣ್ಣಕ್ಕೆ ತಿರುಗುವುದನ್ನು ನೀವು ಗಮನಿಸಿದ್ದೀರಾ? ಇದು ಹೋಮ್ ಸಿಗ್ನಲ್, ಮೊದಲ ಸ್ಟಾಪ್ ಸಿಗ್ನಲ್, ಬಗ್ಗೆ ಟ್ವಿಟರ್ನಲ್ಲಿ ಈ ಹಂಚಿಕೊಂಡಿದೆ. ‘ಹೋಮ್ ಸಿಗ್ನಲ್’ ರೈಲ್ವೇ ನಿಲ್ದಾಣಗಳಿಗೆ ಸ್ವಾಗತ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ, ರೈಲು ಸುರಕ್ಷಿತವಾಗಿ ನಿಲ್ದಾಣದ ವಿಭಾಗಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
When you travel by train, have you ever noticed the first Signal turning Red/Yellow/Green as the train approaches the station?
It’s the Home Signal : the First Stop Signal ! pic.twitter.com/SL7lJfTmo0
— Ministry of Railways (@RailMinIndia) March 25, 2023
ಮತ್ತೊಂದು ಪೋಸ್ಟ್ನಲ್ಲಿ ರೈಲ್ವೇ ಸಚಿವಾಲಯವು ಬಹು ಹಳಿಗಳಿರುವ ನಿಲ್ದಾಣವನ್ನು ಸಮೀಪಿಸುವಾಗ ಯಾವ ಮಾರ್ಗಕ್ಕೆ ತಿರುಗಿಸಬೇಕು ಎಂಬುದನ್ನು ಲೋಕೋ ಪೈಲಟ್ ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ರೈಲಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ವಿಭಿನ್ನ ಮಾರ್ಗಗಳು ಲಭ್ಯವಿದ್ದಾಗ, ಹೋಮ್ ಸಿಗ್ನಲ್‌ನಲ್ಲಿ ನಿಗದಿಪಡಿಸಲಾದ ಮಾರ್ಗ ಸೂಚಕಗಳನ್ನು ಲೊಕೊ ಪೈಲಟ್‌ಗೆ ಯಾವ ಮಾರ್ಗವನ್ನು ಹೊಂದಿಸಲಾಗಿದೆ ಎಂಬುದನ್ನು ಸೂಚಿಸಲು ಬಳಸಲಾಗುತ್ತದೆ ಎಂಬುದನ್ನು ಕೂಡ ಇದರಲ್ಲಿ ವಿವರಿಸಿದ್ದಾರೆ.
Have you ever wondered how a loco pilot understands which diverging route to take when approaching a station with multiple tracks?
It’s possible only with the help of the Home Signal’s Route Indicator! pic.twitter.com/KSzsP07gkM
— Ministry of Railways (@RailMinIndia) March 25, 2023
ಇದನ್ನೂ ಓದಿ: Indian Railways Recruitment 2021: ರೈಲ್ವೇ ಇಲಾಖೆಯ 3591 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇರ ನೇಮಕಾತಿ
ಸಚಿವಾಲಯವು ಮಾರ್ಚ್ 25 ರಂದು ಈ ಟ್ವೀಟ್ನ್ನು ಹಂಚಿಕೊಂಡಿದೆ. ಈ ಟ್ವೀಟ್ಗೆ 493 ಲೈಕ್ ಮತ್ತು 322 ರಿಟ್ವೀಟ್ ಬಂದಿದೆ. ಕೆಲವು ದಿನಗಳ ಹಿಂದೆ, ರೈಲ್ವೆ ಸಚಿವಾಲಯವು ಕರ್ನಾಟಕದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣದ ನೋಟವನ್ನು ಹಂಚಿಕೊಂಡಿತ್ತು, ಇದು ಇತ್ತೀಚೆಗೆ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಎಂದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 1,507 ಮೀ ಉದ್ದದ ವೇದಿಕೆಯನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಉತ್ತರ ಪ್ರದೇಶದ ಗೋರಖ್‌ಪುರ ಪ್ಲಾಟ್‌ಫಾರ್ಮ್ 1,366.33 ಮೀಟರ್‌ಗಳಲ್ಲಿ ಎರಡನೇ ಅತಿ ಉದ್ದವಾಗಿದ್ದರೆ, ಕೇರಳದ ಕೊಲ್ಲಂ ಜಂಕ್ಷನ್ 1,180.5 ಮೀಟರ್‌ಗಳಲ್ಲಿ ಮೂರನೇ ಅತಿ ಉದ್ದದ ಪ್ಲಾಟ್‌ಫಾರ್ಮ್ ಹೊಂದಿದೆ.
Published On - 1:28 pm, Mon, 27 March 23