AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL vs PSL: KKR ಆಟಗಾರ 2 ವರ್ಷ ಬ್ಯಾನ್..!

PSL vs IPL: ಕ್ರಿಕೆಟ್ ಲೋಕದ ಎರಡು ಲೀಗ್‌ಗಳ ನಡುವಿನ ಸಂಘರ್ಷ ಈಗ ಝಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿದೆ.ಪಾಕಿಸ್ತಾನ್ ಸೂಪರ್ ಲೀಗ್ (PSL) ಒಪ್ಪಂದವನ್ನು ಧಿಕ್ಕರಿಸಿ, ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಪ್ರತಿನಿಧಿಸಲು ನಿರ್ಧರಿಸಿದ ಮುಝರಬಾನಿ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಕಠಿಣ ಕ್ರಮ ಕೈಗೊಂಡಿದೆ.

ಝಾಹಿರ್ ಯೂಸುಫ್
|

Updated on: Apr 14, 2026 | 4:42 PM

Share
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆಡಲು ಪಾಕಿಸ್ತಾನ್ ಸೂಪರ್ ಲೀಗ್ (PSL) ಒಪ್ಪಂದವನ್ನು ಅರ್ಧದಲ್ಲೇ ಕೈಬಿಟ್ಟ ಝಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ (Blessing Muzarabani) ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (PCB) ಬಿಗ್ ಶಾಕ್ ನೀಡಿದೆ. ವೃತ್ತಿಪರ ಬದ್ಧತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಮುಝರಬಾನಿ ಮೇಲೆ ಮುಂದಿನ ಎರಡು ಆವೃತ್ತಿಗಳ ಪಿಎಸ್‌ಎಲ್‌ನಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.

1 / 6
ಪಿಎಸ್‌ಎಲ್ 2026ರ ಆವೃತ್ತಿಯಲ್ಲಿ ಆಡಲು ಮುಝರಬಾನಿ ಅವರು ಇಸ್ಲಾಮಾಬಾದ್ ಯುನೈಟೆಡ್ ತಂಡದೊಂದಿಗೆ ಸುಮಾರು 1.1 ಕೋಟಿ ರೂ. (PKR 11 ಮಿಲಿಯನ್) ಮೊತ್ತದ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಲೀಗ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಬಂದ ಆಕರ್ಷಕ ಆಫರ್ ಒಪ್ಪಿಕೊಂಡ ಮುಝರಬಾನಿ, ಪಾಕಿಸ್ತಾನಕ್ಕೆ ಹೋಗುವ ಬದಲು ಭಾರತಕ್ಕೆ ಆಗಮಿಸಿದ್ದರು.

2 / 6
ಬಾಂಗ್ಲಾದೇಶದ ಮುಸ್ತಫಿಝುರ್ ರೆಹಮಾನ್ ಅವರ ಬದಲಿಗೆ ಕೆಕೆಆರ್ ತಂಡ ಸೇರಿಕೊಂಡ ಮುಝರಬಾನಿ ಅವರ ಈ ನಡೆಯಿಂದ ಕೆರಳಿದ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈಗ ಶಿಸ್ತು ಕ್ರಮ ಕೈಗೊಂಡಿದೆ. ಹೀಗಾಗಿ ಮುಂದಿನ 2 ವರ್ಷ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಬ್ಲೆಸ್ಸಿಂಗ್ ಮುಝರಬಾನಿಗೆ ಅವಕಾಶ ಸಿಗುವುದಿಲ್ಲ.

3 / 6
"ಯಾವುದೇ ಆಟಗಾರ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅದನ್ನು ಗೌರವಿಸಬೇಕು. ಕೊನೆಯ ಕ್ಷಣದಲ್ಲಿ ಲೀಗ್‌ನಿಂದ ಹಿಂದೆ ಸರಿಯುವುದು ಟೂರ್ನಿಯ ವಿಶ್ವಾಸಾರ್ಹತೆ ಮತ್ತು ಫ್ರಾಂಚೈಸಿಗಳ ನಂಬಿಕೆಗೆ ಧಕ್ಕೆ ತರುತ್ತದೆ. ಹೀಗಾಗಿ ಮುಝರಬಾನಿ ಅವರಿಗೆ ಮುಂದಿನ ಎರಡು ವರ್ಷಗಳ ಕಾಲ ಪಿಎಸ್‌ಎಲ್‌ನಲ್ಲಿ ಆಡಲು ಅವಕಾಶ ನೀಡುವುದಿಲ್ಲ" ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

4 / 6
ಅತ್ತ ಪಿಎಸ್​ಎಲ್​ಗೆ ಕೈ ಕೊಟ್ಟು ಐಪಿಎಲ್​ಗೆ ಬಂದಿರುವ ಬ್ಲೆಸ್ಸಿಂಗ್ ಮುಝರಬಾನಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಈವರೆಗೆ 2 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 42 ಎಸೆತಗಳನ್ನು ಎಸೆದಿರುವ ಅವರು ಒಟ್ಟು 75 ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ. 

5 / 6
ಅಂದಹಾಗೆ ಐಪಿಎಲ್​ಗೆ ಬಂದು ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಬ್ಯಾನ್ ಆಗುತ್ತಿರುವ ಮೊದಲ ಆಟಗಾರ ಬ್ಲೆಸ್ಸಿಂಗ್ ಮುಝರಬಾನಿ ಅಲ್ಲ. ಇದಕ್ಕೂ ಮುನ್ನ 2025 ರಲ್ಲಿ ಸೌತ್ ಆಫ್ರಿಕಾದ ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ಸೇರಲು ಪಿಎಸ್‌ಎಲ್ ಕೈಕೊಟ್ಟಿದ್ದರು. ಹೀಗಾಗಿ ಅವರಿಗೆ ಮೇಲೆ ನಿಷೇಧ ಹೇರಲಾಗಿತ್ತು. ಇದೀಗ ಪಿಎಸ್​ಎಲ್​ನಿಂದ ಬ್ಯಾನ್​ಗೆ ಒಳಗಾದ 2ನೇ ಆಟಗಾರನಾಗಿ ಬ್ಲೆಸ್ಸಿಂಗ್ ಮುಝರಬಾನಿ ಕಾಣಿಸಿಕೊಂಡಿದ್ದಾರೆ.

6 / 6
Follow Us