Updated on:Aug 14, 2021 | 1:41 AM
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಎಲ್ಲ ಸೇವೆ ಪೂರೈಕೆದಾರರು, ವರ್ತಕರು ಮತ್ತು ಭಾರತದಲ್ಲಿನ ಎಲ್ಲ ಉತ್ಪಾದಕರಿಗೂ ಅನ್ವಯಿಸುತ್ತದೆ. ಜಿಎಸ್ಟಿ ನೋಂದಣಿಯ ಪ್ರಕ್ರಿಯೆಯು ಆನ್ಲೈನ್ನಲ್ಲೇ ಲಭ್ಯ ಇದೆ.
ವಾರ್ಷಿಕವಾಗಿ 20 ಲಕ್ಷ ರೂಪಾಯಿ ಮೇಲ್ಪಟ್ಟು ವಹಿವಾಟು (ಸೇವಾ ಪೂರೈಕೆದಾರರು) ನಡೆಸುವ ಕಂಪೆನಿಗಳಿಗೆ ಹಾಗೂ ವಸ್ತುಗಳನ್ನು ಪೂರೈಸುವಂಥವುಗಳಿಗೆ ವಾರ್ಷಿಕವಾಗಿ ರೂ. 40 ಲಕ್ಷ ವಹಿವಾಟು ನಡೆಸಿದರೆ ಜಿಎಸ್ಟಿ ಕಡ್ಡಾಯ.
ವಸ್ತುಗಳ ಅಂತರರಾಜ್ಯ ಪೂರೈಕೆದಾರರಿಗೆ ಉದ್ಯಮವು ಜಿಎಸ್ಟಿ ಅಡಿಯಲ್ಲಿ ನೋಂದಣಿ ಆಗುವುದು ತುಂಬ ಮುಖ್ಯವಾದದ್ದು.
ತೆರಿಗೆ ವ್ಯಾಪ್ತಿಗೆ ಬರುವ ಪೂರೈಕೆದಾರರ ಪರವಾಗಿ ಸರಕು/ಸೇವೆಗಳ ಮಾರಾಟ ಮಾಡುವ ಎಲ್ಲ ದಲ್ಲಾಳಿಗಳು/ಏಜೆಂಟ್ಗಳು ಕಾನೂನಿನ ಪ್ರಕಾರವಾಗಿ ಜಿಎಸ್ಟಿ ನೋಂದಣಿಯನ್ನು ಪೂರ್ತಿ ಮಾಡಬೇಕು.
ಜಿಎಸ್ಟಿ ಅರ್ಜಿಯನ್ನು ತುಂಬುವುದಕ್ಕೆ ಜಿಎಸ್ಟಿಯ ದೃಢೀಕೃತ ಪೋರ್ಟಲ್ https://www.gst.gov.in/ಗೆ ತೆರಳಬೇಕು. ನಿರ್ದೇಶನದ ಅನುಸಾರವಾಗಿ ಅರ್ಜಿ ಭರ್ತಿ ಮಾಡಬೇಕು ಹಾಗೂ ನೋಂದಣಿ ಪೂರ್ಣಗೊಳಿಸಲು ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.
ಜಿಎಸ್ಟಿ ನೋಂದಣಿಗೆ ಅರ್ಜಿದಾರರ PAN ಮತ್ತು ಆಧಾರ್, ಉದ್ಯಮ ನೋಂದಣಿಯ ಪುರಾವೆ, ಪ್ರವರ್ತಕರ ವಿಳಾಸ ಹಾಗೂ ಗುರುತಿನ ಪುರಾವೆ ಬೇಕಾಗುತ್ತದೆ.
ಇನ್ನು ಉದ್ಯಮದ ವಿಳಾಸ ಪುರಾವೆ, ಬ್ಯಾಂಕ್ ಖಾತೆಯ ಪುರಾವೆ, ಡಿಜಿಟಲ್ ಸಹಿ ಹಾಗೂ ದೃಢೀಕೃತ ಪತ್ರ ಇವೆಲ್ಲವೂ ಆನ್ಲೈನ್ನಲ್ಲಿ ನೋಂದಣಿ ಪೂರ್ಣಗೊಳಿಸುವುದಕ್ಕೆ ಬೇಕಾಗುತ್ತದೆ.
ಪಾವತಿಯನ್ನು ತಪ್ಪಿಸಿದಲ್ಲಿ ತೆರಿಗೆ ಶೇ 10ರಷ್ಟನ್ನು ದಂಡವನ್ನಾಗಿ ವಿಧಿಸಬಹುದು. ಉದ್ದೇಶಪೂರ್ವಕವಾಗಿಯೇ ತೆರಿಗೆ ತಪ್ಪಿಸಲಾಗಿದೆ ಎಂದು ಗೊತ್ತಾದರೆ ಶೇ 100ರಷ್ಟು ದಂಡ ಹಾಕಬಹುದು.
ಅಗತ್ಯ ಮಾನದಂಡಗಳ ಅಡಿಯಲ್ಲಿ ಬರುವುದಿಲ್ಲ ಅಂತಾದರೂ ಉದ್ಯಮವನ್ನು ಜಿಎಸ್ಟಿ ಅಡಿಯಲ್ಲಿ ನೋಂದಾಯಿಸುವುದು ಉತ್ತಮ. ಜಿಎಸ್ಟಿ ನೋಂದಾಯಿತ ಉದ್ಯಮವು ಕಾನೂನು ಬದ್ಧ ಹಾಗೂ ನಂಬಿಕಾರ್ಹ ಗುರುತು ಎಂದು ಮಾರುಕಟ್ಟೆಯಲ್ಲಿ ಭಾವಿಸಲಾಗುತ್ತದೆ.
Published On - 1:17 am, Sat, 14 August 21