- Kannada News Photo gallery Jil Jil Jilebi Rani Song in Bigg Boss Kannada For Bhavya Gowda Cinema News In Kannada
ಭವ್ಯಾಗೋಸ್ಕರ ಗುಡ್ ಮಾರ್ನಿಂಗ್ ಸಾಂಗ್; ಬಂತು ಜಿಲೇಬಿ ಹಾಡು
ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.
Updated on: Dec 03, 2024 | 8:59 AM

ಬಿಗ್ ಬಾಸ್ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್ನಲ್ಲಿ ‘ಜಿಲ್ ಜಿಲ್ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.




