Updated on:Feb 19, 2023 | 8:46 AM
ಆ ಎರಡು ಪ್ರಮುಖ ಧಾರ್ಮಿಕ ಸ್ಥಳಗಳು ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿವೆ. ಇದ್ರಿಂದ ಪ್ರತಿದಿನ ಸಾವಿರಾರು ಜನ ಭಕ್ತರು ಅಲ್ಲಿಗೆ ಹೋಗಿ ಕೆಲಕಾಲ ಪ್ರಾರ್ಥನೆ ಧ್ಯಾನ ಪೂಜೆ ಮಾಡಿ ಬರುತ್ತಾರೆ. ಇನ್ನೂ ಇಂದು ಮಹಾಶಿವರಾತ್ರಿ ಹಿನ್ನಲೆ ಆ ಎರಡು ಧಾರ್ಮಿಕ ಕ್ಷೇತ್ರದಲ್ಲಿ ಜನಸಾಗರವೆ ಹರಿದು ಬಂದಿದೆ. ಇದ್ರಿಂದ ಎಲ್ಲಿ ನೋಡಿದ್ರೂ ಜನವೋ ಜನ.
ವಿಶ್ವಪ್ರಸಿದ್ದ, ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದ ಚೋಳರು ಹಾಗೂ ವಿಜಯನಗರ ಕಾಲದ ಪುಣ್ಯಸ್ಥಳ. ದಕ್ಷಿಣಕಾಶಿ ಎಂದೇ ಖ್ಯಾತಿಯಾಗಿರುವ ಶ್ರೀ ಭೋಗನಂದೀಶ್ವರ ಕ್ಷೇತ್ರ. ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ಕ್ಷೇತ್ರ ಶಿವರಾತ್ರಿ ಹಿನ್ನೆಲೆ ಹೂವಿನ ಅಲಂಕಾರದೊಂದಿಗೆ ಕಂಗೊಳಿಸುತ್ತಿತ್ತು.
ಇನ್ನೂ ಮಹಾಶಿವರಾತ್ರಿಯಂದು ಅಲ್ಲಿಗೆ ಹೋಗಿ ಭಕ್ತಿಬಾವದಿಂದ ಪ್ರಾರ್ಥನೆ ಮಾಡಿ, ಜಾಗರಣೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆ ಎಂಬ ಪ್ರತೀತಿ ಇದೆ. ಇದ್ರಿಂದ ಬೆಳಂಬೆಳಿಗ್ಗೆ ರಾಜಧಾನಿ ಬೆಂಗಳೂರಿನ ಜನ ದೇವಸ್ಥಾನಕ್ಕೆ ಆಗಮಿಸಿ ಅರುಣಾಚಲೇಶ್ವರ, ಉಮಾಮಹೇಶ್ವರ ಹಾಗೂ ಶ್ರೀಭೋಗನಂದೀಶ್ವರ ಸ್ವಾಮಿಯ ದರ್ಶನ ಪಡೆದ್ರು.
ಇನ್ನೂ ನಿನ್ನೆ ರಾತ್ರಿಯಿಡಿ ಜಾಗರಣೆ ಮಾಡುವ ಭಕ್ತರು ಇಂದು ನಡೆಯುವ ಬ್ರಹ್ಮರಥೋತ್ಸವಲದಲ್ಲಿ ಭಾಗಿಯಾಗಿ ನಂತರ ತಮ್ಮ ತಮ್ಮ ಊರಿಗೆ ಹೊರಡುತ್ತಾರೆ. ನಿನ್ನೆ ಹಾಗೂ ಇಂದು ಎರಡು ಲಕ್ಷ ಜನ ಭಕ್ತರು ಸೇರುವ ನಿರೀಕ್ಷೆಯಿದೆ. ಇದ್ರಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿ ಸುಕ್ತ ಮುಂಜಾಗೃತೆ ಕೈಗೊಂಡಿದೆ.
ರಾತ್ರಿ ನಡೆಯುವ ಶಿವೋತ್ಸವದಲ್ಲಿ ಭಕ್ತರಿಗೆ ಆಶಿರ್ವಾದ ಮಾಡಲು 31 ಅಡಿಗಳ ಶಿವನ ಪ್ರತಿಮೆ ನಿರ್ಮಿಸಿ ನಿಲ್ಲಿಸಲಾಗಿದೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಈಶಾ ಪೌಂಡೇಷನ್ ನ ಆಶ್ರಮದಲ್ಲಿ 112 ಅಡಿಗಳ ಆದಿಯೋಗಿಯ ದರ್ಶನ ಪಡೆಯಲು ಸಾವಿರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಇದೆ ಪ್ರಥಮ ಭಾರಿಗೆ ಆದಿಯೋಗಿಗೆ ಆರತಿ ಎತ್ತಿ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದ್ರಿಂದ ನಂದಿ ಹಾಗೂ ಅವಲಗುರ್ಕಿ ಬಳಿ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಆದ್ರೂ ಜಾಗರಣೆಯಲ್ಲಿ ಜನ ಜಾಗೃತೆಯಿಂದ ಇರುವಂತೆ ಚಿಕ್ಕಬಳ್ಳಾಪುರ ಎಸ್ಪಿ ನಾಗೇಶ ಮನವಿ ಮಾಡಿದ್ರು.
ಶಿವರಾತ್ರಿಯೆಂದು ಶಿವನ ಕೃತೆಗೆ ಪಾತ್ರರಾದ್ರೆ. ಪುಣ್ಯ ಪ್ರಾಪ್ತಿಯಾಗುತ್ತೆ ಅನ್ನೊ ನಂಬಿಕೆ ಹಿನ್ನಲೆ ಚಿಕ್ಕಬಳ್ಳಾಪುರದ ನಂದಿಯ ಶ್ರೀಭೋಗನಂದೀಶ್ವರ ಹಾಗೂ 112 ಅಡಿಗಳ ಆದಿಯೋಗಿ ಪ್ರತಿಮೆ ಬಳಿ ಜನಸಾಗರವೆ ಹರಿದು ಬರ್ತಿದೆ. ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಫುರ
Published On - 8:46 am, Sun, 19 February 23