ಹಾಗೆಂದು ಬಾಹ್ಯಾಕಾಶ ಯಾವತ್ತೂ ಭೂಮಿಗೆ ಬೇಕಾದ ರೀತಿಯಲ್ಲೇ ವರ್ತಿಸುತ್ತದೆ ಎಂದಲ್ಲ. ಭೂಮಿಯ ಹೊರವಲಯದಲ್ಲಿ ಬ್ರಹ್ಮಾಂಡದ ಹಲವಾರು ಚಟುವಟಿಕೆಗಳು ಆಗುತ್ತಿರುತ್ತದೆ. ಸೂರ್ಯನೂ ನಮ್ಮ ಸೌರಮಂಡಲದ ಭಾಗವಾಗಿದ್ದಾನೆ. ಹಾಗಾಗಿ, ಸೂರ್ಯನಲ್ಲಿಯೂ ಹಲವು ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಸೋಲಾರ್ ಸ್ಟಾರ್ಮ್ ಎಂಬ ಪ್ರಕ್ರಿಯೆಯೂ ಸೇರಿದೆ. ಸೋಲಾರ್ ಸ್ಟಾರ್ಮ್ ಸದ್ಯದಲ್ಲೇ ಆಗುವ ಸೂಚನೆ ಲಭಿಸಿದೆ. ಅದೇ ಕಾರಣಕ್ಕೆ ಸಂಶೋಧಕರು ಚಿಂತೆಗೊಳಗಾಗಿದ್ದಾರೆ.