ಕರ್ನಾಟಕ ಬಿಜೆಪಿಯಲ್ಲಿನ ಗಾಯಕ್ಕೆ ಆರ್​ಎಸ್​ಎಸ್​​ ಮುಲಾಮು, ಮುಖಂಡರ ಸಭೆ

ಕರ್ನಾಟಕ ಬಿಜೆಪಿಯಲ್ಲಿ ಮೂಡಿರುವ ಬಂಡಾಯವನ್ನು ಶಮನ ಮಾಡಲು ಆರ್​ಎಸ್​ಎಸ್​ ಮುಂದಾಗಿದೆ. ಬಿಜೆಪಿಯ ನಾಯಕರನ್ನು ಒಟ್ಟುಗೂಡಿಸಿ ಆರ್​ಎಸ್​ಎಸ್​ ಸಭೆ ನಡೆಸಲಿದೆ. ಮೂಡಿರುವ ಬಿರುಕನ್ನು ಮುಚ್ಚಲು ಆರ್​ಎಸ್​ಎಸ್​ ಸದ್ದಿಲ್ಲದೆ ತಯಾರಿ ನಡೆಸಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಕರ್ನಾಟಕ ಬಿಜೆಪಿಯಲ್ಲಿನ ಗಾಯಕ್ಕೆ ಆರ್​ಎಸ್​ಎಸ್​​ ಮುಲಾಮು, ಮುಖಂಡರ ಸಭೆ
ಬಿಜೆಪಿ, ಆರ್​ಎಸ್​ಎಸ್​
Follow us
Pramod Shastri G
| Updated By: ವಿವೇಕ ಬಿರಾದಾರ

Updated on:Sep 11, 2024 | 8:46 AM

ಬೆಂಗಳೂರು, ಸೆಪ್ಟೆಂಬರ್​ 11: ಲೋಕಸಭೆ ಚುನಾವಣೆ ಟಿಕೆಟ್​ ವಿಚಾರವಾಗಿ ಕರ್ನಾಟಕ ಬಿಜೆಪಿಯಲ್ಲಿ (BJP) ಮೂಡಿದ್ದ ಬಿರುಕು ಈಗ ದೊಡ್ಡದಾಗಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಮೇಲ್ನೋಟಕ್ಕೆ ಕಾಣುತ್ತಿದೆ. ನಾಯಕರ ಮಧ್ಯೆಯೇ ಅಸಮಧಾನ ಮೂಡಿದೆ. ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಬಂಡಾಯವನ್ನು ಶಮನ ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮೈದಾನಕ್ಕೆ ಇಳಿಯಲಿದೆ. ಗುರುವಾರ (ಸೆಪ್ಟೆಂಬರ್​ 12) ರಂದು ರಾಜ್ಯ ಬಿಜೆಪಿ ಮತ್ತು ಆರ್​ಎಸ್​ಎಸ್​ ನಾಯಕರ ನಡುವೆ ಸಭೆ ನಡೆಯಲಿದೆ ಎಂದು ಟಿವಿ9ಗೆ ಮೂಲಗಳಿಂದ ಮಾಹಿತಿ ದೊರೆತಿದೆ.

ಈ ಸಭೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ, ಗೋಕಾಕ್​ ಶಾಸಕ ರಮೇಶ ಜಾರಕಿಹೊಳಿ ಮತ್ತು ವಿರೋಧ ಪಕ್ಷದ ನಾಯಕ ಆರ್​. ಅಶೋಕ್ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣಕ್ಕೆ ಅಹ್ವಾನ ನೀಡಲಾಗಿದೆ. ಸಭೆಗೆ ಒಟ್ಟು 40ಕ್ಕೂ ಅಧಿಕ ನಾಯಕರನ್ನು ಆಹ್ವಾನಿಸಲಾಗಿದೆ.

ಆದರೆ, ಕೆಲ ನಾಯಕರು ನಮಗೆ ಯಾರೂ ಆಹ್ವಾನ ನೀಡಿಲ್ಲ ಎನ್ನುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ ಟೀಮ್​ ಈಗಾಗಲೇ ರಾಷ್ಟ್ರೀಯ ಮಟ್ಟದ ಹಿರಿಯ ಆರ್​ಎಸ್​ಎಸ್​ ನಾಯಕರನ್ನು ಭೇಟಿಯಾಗಿದೆ. ಈ ವೇಳೆ ಆರ್​ಎಸ್​ಎಸ್ ನಾಯಕರು ಒಂದು ತಿಂಗಳು ಸುಮ್ಮನಿರಿ, ಎಲ್ಲ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಇದಾದ ಬಳಿಕ ಬಸನಗೌಡ ಪಾಟೀಲ್​ ಯತ್ನಾಳ ಟೀಮ್​ ಬಿಎಲ್​ ಸಂತೋಷರನ್ನು ಸಹ ಭೇಟಿಯಾಗಿತ್ತು. ಈ ಸಂದರ್ಭದಲ್ಲಿಯೂ ಬಿಎಲ್​ ಸಂತೋಷ್​ ಕೆಲ ದಿನಗಳ ಕಾಲ ಶಾಂತವಾಗಿ ಇರುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಮಲ್ಲೇಶ್ವರ ಬಿಜೆಪಿ ಕಚೇರಿ ಮೇಲೆ ಉಗ್ರರ ಕಣ್ಣು; ಭದ್ರತೆ ಹೆಚ್ಚಿಸಿದ ಗೃಹ ಇಲಾಖೆ

ರಾಜ್ಯ ಬಿಜೆಪಿಯಲ್ಲಿ ಒಡಕು

ವಿಧಾನಸಭೆ ಚುನಾವಣೆ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ನಾಯಕರ ನಡುವೆ ಬಿರುಕು ಮೂಡಿತು. ನಂತರ, ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಬಳಿಕ ಕೆಲ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಮುಲಾಮು ಹಚ್ಚಲಾಯ್ತು. ಆದರೂ, ಪೂರ್ಣ ಪ್ರಮಾಣದಲ್ಲಿ ಗಾಯ ವಾಸಿಯಾಗಲಿಲ್ಲ.

ನಂತರ, ಲೋಕಸಭೆ ಚುನಾವಣೆಗೆ ಟಿಕೆಟ್​​ ಕೈ ತಪ್ಪುತ್ತಿದ್ದಂತೆ ನಿರೀಕ್ಷೆಯಲ್ಲಿದ್ದ ಮಾಜಿ ಸಂಸದ ಪ್ರತಾಪ್​ ಸಿಂಹ ಸೇರಿದಂತೆ ಕೆಲ ನಾಯಕರು ಹತಾಶೆಯಿಂದ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದರು. ಆಗಲೂ ಕೂಡ ತೇಪೆ ಹಚ್ಚಲಾಯಿತಾದರೂ ಬಿರುಕು ಮತ್ತೆ ಮೂಡಿತು.

ಇತ್ತೀಚಿಗೆ ಬಿಜೆಪಿ ನಡೆಸಿದ ಮೈಸೂರು ಚಲೋ ಪಾದಯಾತ್ರೆಯಲ್ಲಿ ಬಸನಗೌಡ ಪಾಟೀಲ್​ ಯತ್ನಾಳ್​, ರಮೇಶ್​ ಜಾರಕಿಹೊಳಿ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ನಾವು ಬಳ್ಳಾರಿವರೆಗೆ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇವೆ. ಹೈಕಮಾಂಡ್​ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಘೋಷಿಸಿದರು. ಬಳಿಕ, ಬಸನಗೌಡ ಪಾಟೀಲ್​ ಯತ್ನಾಳ್​, ಮಾಜಿ ಸಂಸದ ಪ್ರತಾಪ್​ ಸಿಂಹ​​, ಕುಮಾರ್​ ಬಂಗಾರಪ್ಪ ಸೇರಿದಂತೆ ಇನ್ನಿತರೆ ಕೆಲ ನಾಯಕರು ನಡೆಸಿದ ಸಭೆ ಚರ್ಚೆಗೆ ಕಾರಣವಾಯ್ತು.

ತೀರ ಇತ್ತೀಚಿಗೆ ಮಾಜಿ ಸಂಸದ ಪ್ರತಾಪ್​ ಸಿಂಹ​​ ಸಭಾ ಕಾರ್ಯಕ್ರಮವೊಂದರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದರು. ಹರ್ಷ ಮತ್ತು ನೆಟ್ಟಾರು ಕೊಲೆ ಆರೋಪಿಗಳನ್ನು ಎನ್ಕೌಂಟರ್​ ಮಾಡಲು ಪೊಲೀಸರಿಗೆ ಸರ್ಕಾರ ಅನುಮತಿ ನೀಡಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಈ ಎಲ್ಲ ಘಟನೆಗಳು ರಾಜ್ಯ ಬಿಜೆಪಿಯಲ್ಲಿನ ಬಂಡಾಯಕ್ಕೆ ಕೈಗನ್ನಡಿಯಾಗಿವೆ.

ಇದರ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್​. ಅಶೋಕ್​​ ದೆಹಲಿಗೆ ತೆರಳಿದ್ದು, ವರಿಷ್ಠರ ಜೊತೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Wed, 11 September 24

ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ