AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಚತುರ್ಥಿ ವಿಶೇಷ: ಹಬ್ಬದ ದಿನಗಳಲ್ಲಿ ಇಲಿ ಕಾಣಿಸಿಕೊಂಡರೆ ಅದೃಷ್ಟವೇ? ಶಾಸ್ತ್ರಗಳು ಹೇಳುವುದೇನು?

ಗಣೇಶ ಚತುರ್ಥಿ ಸಮಯದಲ್ಲಿ ವಿಘ್ನನಿವಾರಕನ ವಾಹನವಾದ ಇಲಿ ಕಾಣಿಸಿಕೊಳ್ಳುವುದು ಅತ್ಯಂತ ಶುಭ ಸಂಕೇತವೆಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಹಬ್ಬದ ದಿನಗಳಲ್ಲಿ ಅಥವಾ 9 ದಿನಗಳ ಅವಧಿಯಲ್ಲಿ ಪ್ರತ್ಯಕ್ಷವಾಗಿ ಇಲಿ ಕಂಡರೆ ಅಥವಾ ಕನಸಿನಲ್ಲಿ ಕಾಣಿಸಿಕೊಂಡರೆ, ಅದು ಗಣೇಶನ ಆಶೀರ್ವಾದ, ಇಷ್ಟಾರ್ಥ ಸಿದ್ಧಿ ಮತ್ತು ಅದೃಷ್ಟದ ದ್ಯೋತಕವಾಗಿದೆ. ಇದು ಆರ್ಥಿಕ ಹಾಗೂ ಕೌಟುಂಬಿಕ ಅಭಿವೃದ್ಧಿ ತರುವ ಮಹತ್ವಪೂರ್ಣ ಘಟನೆಯಾಗಿದೆ.

ಗಣೇಶ ಚತುರ್ಥಿ ವಿಶೇಷ: ಹಬ್ಬದ ದಿನಗಳಲ್ಲಿ ಇಲಿ ಕಾಣಿಸಿಕೊಂಡರೆ ಅದೃಷ್ಟವೇ? ಶಾಸ್ತ್ರಗಳು ಹೇಳುವುದೇನು?
ಗಣೇಶ ಚತುರ್ಥಿImage Credit source: Getty Images
ಅಕ್ಷತಾ ವರ್ಕಾಡಿ
|

Updated on: Sep 13, 2026 | 2:03 PM

Share

ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಕಳೆಗಟ್ಟಿದ್ದು, ಮನೆ-ಮನಗಳಲ್ಲಿ ಹಾಗೂ ಗ್ರಾಮ-ನಗರಗಳ ಮಂಟಪಗಳಲ್ಲಿ ಗಣಪಯ್ಯನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅತ್ಯಂತ ವಿಜೃಂಭಣೆಯಿಂದ ಪೂಜಿಸಲಾಗುತ್ತಿದೆ. ವಿಘ್ನನಿವಾರಕನಿಗೆ ಅತ್ಯಂತ ಪ್ರಿಯವಾದ ವಾಹನ ಮೂಷಿಕ (ಇಲಿ). ಗಣೇಶೋತ್ಸವದ ಈ ಪವಿತ್ರ ದಿನಗಳಲ್ಲಿ ಇಲಿಯನ್ನು ನೋಡುವುದು ಅಥವಾ ಮನೆಯಲ್ಲಿ ಇದ್ದಕ್ಕಿದ್ದಂತೆ ಇಲಿ ಕಾಣಿಸಿಕೊಳ್ಳುವುದು ಶ್ರೇಷ್ಠ ಹಾಗೂ ಶುಭ ಸಂಕೇತವೆಂದು ಜ್ಯೋತಿಷ್ಯ ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಹಬ್ಬದ ದಿನಗಳಲ್ಲಿ ಆಕಸ್ಮಿಕವಾಗಿ ಇಲಿ ಕಾಣಿಸಿಕೊಂಡರೆ ಲಭಿಸುವ ಫಲಗಳು:

ಸಾಮಾನ್ಯವಾಗಿ ಮನೆಗಳಲ್ಲಿ ಇಲಿಗಳಿದ್ದರೆ ಅವು ಪ್ರತಿದಿನ ಕಾಣ ಸಿಗುವುದು ಸಹಜ. ಆದರೆ ಮನೆಯಲ್ಲಿ ಇಲಿಗಳೇ ಇಲ್ಲದಿರುವಾಗ, ಗಣೇಶ ಚತುರ್ಥಿಯ ದಿನದಂದು ಅಥವಾ ಹಬ್ಬದ ಒಂಬತ್ತು ದಿನಗಳ ಅವಧಿಯಲ್ಲಿ ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಇಲಿ ಪ್ರತ್ಯಕ್ಷವಾದರೆ ಅದನ್ನು ಸಾಕ್ಷಾತ್ ವಿನಾಯಕನ ಆಶೀರ್ವಾದವೆಂದೇ ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮನಸ್ಸಿನಲ್ಲಿ ಅಂದುಕೊಂಡ ಆಸೆಗಳು, ಕಾರ್ಯಗಳು ಅತ್ಯಂತ ಶೀಘ್ರವಾಗಿ ಈಡೇರುತ್ತವೆ ಎಂಬ ದೃಢ ನಂಬಿಕೆಯಿದೆ.

ಇದನ್ನೂ ಓದಿ: ಗಣೇಶ ಮೂರ್ತಿಯನ್ನು ಎಷ್ಟು ದಿನ ಇಡುವುದು ಶುಭ? ಸಂಪೂರ್ಣ ಧಾರ್ಮಿಕ ವಿವರಣೆ ಇಲ್ಲಿದೆ

ಗಣೇಶೋತ್ಸವದ ಒಂಬತ್ತು ದಿನಗಳ ಪೂಜಾ ಮಹತ್ವ:

ಗಣೇಶ ಚತುರ್ಥಿಯಿಂದ ತೊಡಗಿ ಒಂಬತ್ತು ದಿನಗಳ ಕಾಲ ವಿಘ್ನೇಶ್ವರನನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸಲಾಗುತ್ತದೆ. ಈ ಒಂಬತ್ತು ದಿನಗಳಲ್ಲಿ ಯಾವ ದಿನದಲ್ಲಾದರೂ ಸರಿ, ಇಲಿ ನಿಮ್ಮ ಕಣ್ಣಿಗೆ ಬಿದ್ದರೆ ಅದು ಮಹಾ ಅದೃಷ್ಟದ ಸಂಕೇತವಾಗಿದೆ. ಗಣೇಶನ ಕೃಪಾಕಟಾಕ್ಷ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಪಂಡಿತರು ತಿಳಿಸುತ್ತಾರೆ.

ಕನಸಿನಲ್ಲಿ ಇಲಿ ಬಂದರೆ ಒಳಿತೇ?

ಕೆಲವರಿಗೆ ಪ್ರತ್ಯಕ್ಷವಾಗಿ ಇಲಿ ಕಾಣಿಸದಿದ್ದರೂ, ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಕನಸಿನಲ್ಲಿ ಇಲಿ ಪ್ರತ್ಯಕ್ಷವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಬ್ಬದ ವೇಳೆ ಕನಸಿನಲ್ಲಿ ಇಲಿಯನ್ನು ಕಾಣುವುದು ಸಹ ಅತ್ಯಂತ ಶುಭ ಶಕುನವಾಗಿದೆ. ಇದರಿಂದ ನೀವು ಕೈಗೊಳ್ಳುವ ಪ್ರತಿಯೊಂದು ಕಾರ್ಯದಲ್ಲೂ ಜಯ ಲಭಿಸುತ್ತದೆ, ಕಷ್ಟಗಳು ನಿವಾರಣೆಯಾಗಿ ಆರ್ಥಿಕ ಹಾಗೂ ಕೌಟುಂಬಿಕ ಅಭಿವೃದ್ಧಿ ಸಿದ್ಧಿಸುತ್ತದೆ ಎಂದರ್ಥ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ