AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

17 ವರ್ಷದ ಯುವ ದಾಂಡಿಗನ ಸ್ಫೋಟಕ ಸೆಂಚುರಿ: ಟೀಮ್ ಇಂಡಿಯಾಗೆ ಸೋಲು

England U19 vs India U19: ಭಾರತ ಮತ್ತು ಇಂಗ್ಲೆಂಡ್ ಅಂಡರ್ 19 ತಂಡಗಳ 5 ಪಂದ್ಯಗಳ ಏಕದಿನ ಸರಣಿಯ ದ್ವಿತೀಯ ಮ್ಯಾಚ್​ನಲ್ಲಿ ಆಂಗ್ಲರು ಜಯ ಸಾಧಿಸಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ, ಇದೀಗ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದೆ.

17 ವರ್ಷದ ಯುವ ದಾಂಡಿಗನ ಸ್ಫೋಟಕ ಸೆಂಚುರಿ: ಟೀಮ್ ಇಂಡಿಯಾಗೆ ಸೋಲು
Thomas Rew
ಝಾಹಿರ್ ಯೂಸುಫ್
|

Updated on: Jul 01, 2025 | 11:25 AM

Share

ನಾರ್ಥಂಪ್ಟನ್​ನಲ್ಲಿ ನಡೆದ ಭಾರತ ಅಂಡರ್-19 ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್-19 ತಂಡ ಭರ್ಜರಿ ಜಯ ಸಾಧಿಸಿದೆ. ಕೌಂಟಿ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಥಾಮಸ್ ರೆವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಆಯುಷ್ ಮ್ಹಾತ್ರೆ (0) ಮೊದಲ ಎಸೆತದಲ್ಲೇ ಔಟಾದರು.

ಈ ವೇಳೆ ಜೊತೆಗೂಡಿದ ವೈಭವ್ ಸೂರ್ಯವಂಶಿ ಹಾಗೂ ವಿಹಾನ್ ಮಲ್ಹೋತ್ರ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ 10 ಓವರ್​ಗಳಲ್ಲಿ ತಂಡದ ಮೊತ್ತವನ್ನು 69 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ವೈಭವ್ (45) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ವಿಹಾನ್ (49) ಕೂಡ ಪೆವಿಲಿಯನ್​ಗೆ ಮರಳಿದ್ದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ ಕುಮಾರ್ 47 ರನ್ ಬಾರಿಸಿದರೆ, ಕೌಶಿಕ್ ಚೌಹಾನ್ 45 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಟೀಮ್ ಇಂಡಿಯಾ 49 ಓವರ್​ಗಳಲ್ಲಿ 290 ರನ್​ಗಳಿಸಿ ಆಲೌಟ್ ಆಯಿತು.

291 ರನ್​ಗಳ ಕಠಿಣ ಗುರಿ:

50 ಓವರ್​ಗಳಲ್ಲಿ 291 ರನ್​ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ 47 ರನ್​ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್​ಗಳನ್ನು ಕಳೆದುಕೊಂಡರು. ಈ ವೇಳೆ ಆಗಮಿಸಿದ ರಾಕಿ ಫ್ಲಿಂಟಾಫ್ ಹಾಗೂ ಥಾಮಸ್ ರೆವ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. ಅಲ್ಲದೆ 4ನೇ ವಿಕೆಟ್​ಗೆ 123 ರನ್​ಗಳನ್ನು ಪೇರಿಸಿದರು. ಈ ವೇಳೆ ಕೌಶಿಕ್ ಚೌಹಾನ್ ಎಸೆತವನ್ನು ಸರಿಯಾಗಿ ಗುರುತಿಸುವಲ್ಲಿ ಎಡವಿ ರಾಕಿ ಫ್ಲಿಂಟಾಫ್ (39) ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮತ್ತೊಂದೆಡೆ ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಥಾಮಸ್ ರೆವ್​ ಕೇವಲ 73 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಆರ್ಭಟ ಮುಂದುವರೆಸಿದ ಥಾಮಸ್ 89 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ 131 ರನ್​ ಚಚ್ಚಿದರು. ಈ ಭರ್ಜರಿ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು 49.3 ಓವರ್​ಗಳಲ್ಲಿ 291 ರನ್​ಗಳಿಸಿ ಒಂದು ವಿಕೆಟ್​ನ ರೋಚಕ ಜಯ ಸಾಧಿಸಿತು.

ಇದನ್ನೂ ಓದಿ: IPL 2026: ಚೆನ್ನೈ ಸೂಪರ್ ಕಿಂಗ್ಸ್​ಗೆ ಸಂಜು ಸ್ಯಾಮ್ಸನ್?

ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಅಂಡರ್ 19 ತಂಡವು 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದರು. ಇದೀಗ ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್ 19 ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿದೆ.

Follow Us
ಹೈದರಾಬಾದ್‌ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್‌ಎಸ್ ಶಾಸಕ
ಹೈದರಾಬಾದ್‌ನಲ್ಲಿ ಸೊಳ್ಳೆ ಪರದೆ ಧರಿಸಿ ಪ್ರತಿಭಟನೆ ನಡೆಸಿದ ಬಿಆರ್‌ಎಸ್ ಶಾಸಕ
ಡ್ರಿಪ್ಸ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ
ಡ್ರಿಪ್ಸ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ
15 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಇರುತ್ತೇನೆ ಎಂದ ಅಮಿತ್ ಶಾ
15 ದಿನಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಇರುತ್ತೇನೆ ಎಂದ ಅಮಿತ್ ಶಾ
ಸಿಬಿಎಸ್ಇ ಶಾಲೆಗಳಲ್ಲಿ AI; ಹೊಸ ಪಠ್ಯಕ್ರಮದ ಅನಾವರಣ
ಸಿಬಿಎಸ್ಇ ಶಾಲೆಗಳಲ್ಲಿ AI; ಹೊಸ ಪಠ್ಯಕ್ರಮದ ಅನಾವರಣ
ಬೈ ಎಲೆಕ್ಷನ್​ ಪ್ರಚಾರಕ್ಕಿಳಿಯುವ ಮುನ್ನವೇ ಬಿಜೆಪಿ ವಿರುದ್ಧ ಯತ್ನಾಳ್ ಕಿಡಿ
ಬೈ ಎಲೆಕ್ಷನ್​ ಪ್ರಚಾರಕ್ಕಿಳಿಯುವ ಮುನ್ನವೇ ಬಿಜೆಪಿ ವಿರುದ್ಧ ಯತ್ನಾಳ್ ಕಿಡಿ
Video: ಬಂದೂಕು, ದೊಣ್ಣೆ ಹಿಡಿದು ಮನೆಗೆ ನುಗ್ಗಿದ ಮುಸುಕುಧಾರಿಗಳು
Video: ಬಂದೂಕು, ದೊಣ್ಣೆ ಹಿಡಿದು ಮನೆಗೆ ನುಗ್ಗಿದ ಮುಸುಕುಧಾರಿಗಳು
ಗ್ಯಾಂಗ್ ಅನುಮಾನಾಸ್ಪದ ​​ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್​?
ಗ್ಯಾಂಗ್ ಅನುಮಾನಾಸ್ಪದ ​​ ಓಡಾಟ: ಹೆಣ್ಣುಮಕ್ಕಳೇ ಇವರ ಟಾರ್ಗೆಟ್​?
ಶೆಟ್ಟಿ ಗ್ಯಾಂಗ್​​ನಲ್ಲಿ ಬಿರುಕು? ಪ್ರಮೋದ್ ಶೆಟ್ಟಿ ಹೇಳಿದ್ದೇನು?
ಶೆಟ್ಟಿ ಗ್ಯಾಂಗ್​​ನಲ್ಲಿ ಬಿರುಕು? ಪ್ರಮೋದ್ ಶೆಟ್ಟಿ ಹೇಳಿದ್ದೇನು?
ಹೈಕೋರ್ಟ್​ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ
ಹೈಕೋರ್ಟ್​ ಎದುರು ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ ಮಹಿಳೆ
ಪಾಲಾರ್ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಪ್ರತ್ಯಕ್ಷವಾದ ಕಾಡಾನೆ!
ಪಾಲಾರ್ ಚೆಕ್ ಪೋಸ್ಟ್ ಬಳಿ ರಾತ್ರಿ ವೇಳೆ ಪ್ರತ್ಯಕ್ಷವಾದ ಕಾಡಾನೆ!