AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022 Auction: ಭರ್ಜರಿ ಮೊತ್ತಕ್ಕೆ RCB ತಂಡಕ್ಕೆ ಮರಳಿದ ಹರ್ಷಲ್ ಪಟೇಲ್

ಈ ಹಿಂದೆ ಆರ್​ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ.

IPL 2022 Auction: ಭರ್ಜರಿ ಮೊತ್ತಕ್ಕೆ RCB ತಂಡಕ್ಕೆ ಮರಳಿದ ಹರ್ಷಲ್ ಪಟೇಲ್
Harshal Patel
TV9 Web
| Edited By: |

Updated on:Feb 12, 2022 | 2:17 PM

Share

ಐಪಿಎಲ್ ಮೆಗಾ ಹರಾಜಿನಲ್ಲಿ ಹರ್ಷಲ್ ಪಟೇಲ್ ಭರ್ಜರಿ ಮೊತ್ತ ಪಡೆದಿದ್ದಾರೆ. ಕಳೆದ ಸೀಸನ್​ನಲ್ಲಿ 32 ವಿಕೆಟ್ ಪಡೆದಿದ್ದ ಪಟೇಲ್ ಖರೀದಿಗಾಗಿ ಭರ್ಜರಿ ಪೈಪೋಟಿ ಕಂಡು ಬಂತು. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡ ಹರ್ಷಲ್ ಪಟೇಲ್ ಖರೀದಿಗಾಗಿ ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವೆ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ 10.75 ಕೋಟಿ ನೀಡಿ ಆರ್​ಸಿಬಿ ತಂಡ ಖರೀದಿಸಿತು. ವಿಶೇಷ ಎಂದರೆ ಕಳೆದ ಸೀಸನ್​ನಲ್ಲಿ ಹರ್ಷಲ್ ಪಟೇಲ್​ಗೆ ಆರ್​ಸಿಬಿ ನೀಡಿದ್ದು ಕೇವಲ 20 ಲಕ್ಷ ರೂ. ಮಾತ್ರ.

ಇದೀಗ 10.75 ಕೋಟಿಗೆ  ಹರಾಜಾಗುವ ಮೂಲಕ ಹರ್ಷಲ್ ಪಟೇಲ್ 10.55 ಕೋಟಿ ರೂ. ಅಧಿಕ ಮೊತ್ತ ಪಡೆದು ಆರ್​ಸಿಬಿ ತಂಡಕ್ಕೆ ಮರಳಿದ್ದಾರೆ. ಇದಕ್ಕೂ ಮುನ್ನ ಆರ್​ಸಿಬಿ ತಂಡವು ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಇದೀಗ ಆರ್​ಸಿಬಿ ತಂಡದಲ್ಲಿ ಐದು ಆಟಗಾರರು ಇದ್ದಾರೆ.

ಈ ಹಿಂದೆ ಆರ್​ಸಿಬಿ ತಂಡವು ರಿಟೈನ್ ಆಯ್ಕೆಯ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್, ವಿರಾಟ್ ಕೊಹ್ಲಿ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿದೆ. ಇದೀಗ ಹರ್ಷಲ್ ಪಟೇಲ್ ಹಾಗೂ ಫಾಫ್ ಡುಪ್ಲೆಸಿಸ್ ಕೂಡ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮೊದಲ ಸುತ್ತಿನಲ್ಲಿ ಹರಾಜಾದ ಆಟಗಾರರು:

ಶಿಖರ್ ಧವನ್- 8.25 ಕೋಟಿ (ಪಂಜಾಬ್ ಕಿಂಗ್ಸ್)

ರವಿಚಂದ್ರನ್ ಅಶ್ವಿನ್- 5 ಕೋಟಿ ( ರಾಜಸ್ಥಾನ್ ರಾಯಲ್ಸ್)

ಪ್ಯಾಟ್ ಕಮಿನ್ಸ್- 7.25 ಕೋಟಿ (ಕೊಲ್ಕತ್ತಾ ನೈಟ್ ರೈಡರ್ಸ್​)

ಕಗಿಸೋ ರಬಾಡ- 9.25 ಕೋಟಿ (ಪಂಜಾಬ್ ಕಿಂಗ್ಸ್​)

ಟ್ರೆಂಟ್ ಬೌಲ್ಟ್- 8 ಕೋಟಿ (ರಾಜಸ್ಥಾನ್ ರಾಯಲ್ಸ್​)

ಶ್ರೇಯಸ್ ಅಯ್ಯರ್- 12.25 ಕೋಟಿ (ಕೊಲ್ಕತ್ತಾ ನೈಟ್ ರೈಡರ್ಸ್​)

ಮೊಹಮ್ಮದ್ ಶಮಿ- 6.25 ಕೋಟಿ (ಗುಜರಾತ್ ಟೈಟನ್ಸ್​)

ಫಾಫ್ ಡುಪ್ಲೆಸಿಸ್- 7 ಕೋಟಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಕ್ವಿಂಟನ್ ಡಿಕಾಕ್- 6.75 ಕೋಟಿ (ಲಕ್ನೋ ಸೂಪರ್ ಜೈಂಟ್ಸ್​)

ಡೇವಿಡ್ ವಾರ್ನರ್- 6.25 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್​)

ಇದನ್ನೂ ಓದಿ: IPL 2022 auction: ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 590 ಆಟಗಾರರ ಹೆಸರು ಇಲ್ಲಿದೆ

ಇದನ್ನೂ ಓದಿ: IPL 2022: ಐಪಿಎಲ್​ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಖರ್ಚು ಮಾಡಿದ ತಂಡ ಯಾವುದು ಗೊತ್ತಾ?

ಇದನ್ನೂ ಓದಿ: Rohit Sharma: ಸಚಿನ್ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

(IPL 2022 Auction: Harshal Patel is sold to RCB)

Published On - 2:07 pm, Sat, 12 February 22

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್