AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಲೀಗ್ ಹಂತದಲ್ಲಿ ಮತ್ತೆ ಮುಖಾಮುಖಿಯಾಗಲ್ಲ ಆರ್​ಸಿಬಿ- ಸಿಎಸ್​ಕೆ..!

IPL 2026 RCB vs CSK Match: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ-ಪಾಕ್ ಪಂದ್ಯದಷ್ಟೇ ಐಪಿಎಲ್‌ನಲ್ಲಿ ಆರ್‌ಸಿಬಿ-ಸಿಎಸ್‌ಕೆ ಪಂದ್ಯಗಳಿಗೆ ಮಹತ್ವ. ಸಾಮಾನ್ಯವಾಗಿ ಲೀಗ್ ಹಂತದಲ್ಲಿ ಎರಡು ಪಂದ್ಯಗಳು ನಡೆಯುತ್ತವೆ. ಆದರೆ, 2026ರ ಐಪಿಎಲ್‌ನಲ್ಲಿ ಈ ಬಲಿಷ್ಠ ತಂಡಗಳ ಮುಖಾಮುಖಿ ಕೇವಲ ಒಂದಕ್ಕೆ ಸೀಮಿತವಾಗಿದೆ. ಬಿಸಿಸಿಐನ ತಂಡಗಳ ಗುಂಪು ವಿಂಗಡಣೆಯೇ ಇದಕ್ಕೆ ಪ್ರಮುಖ ಕಾರಣವಾಗಿದ್ದು, ಒಂದೇ ಗುಂಪಿನಲ್ಲಿದ್ದ ಕಾರಣ, ಇನ್ನೊಂದು ಗುಂಪಿನ ತಂಡಗಳ ವಿರುದ್ಧ ಹೆಚ್ಚುವರಿ ಪಂದ್ಯಗಳನ್ನು ಆಡಬೇಕಾಗುತ್ತದೆ.

IPL 2026: ಲೀಗ್ ಹಂತದಲ್ಲಿ ಮತ್ತೆ ಮುಖಾಮುಖಿಯಾಗಲ್ಲ ಆರ್​ಸಿಬಿ- ಸಿಎಸ್​ಕೆ..!
Rcb Vs Csk
ಪೃಥ್ವಿಶಂಕರ
|

Updated on:Apr 06, 2026 | 9:29 PM

Share

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇರುವಷ್ಟೇ ಮಹತ್ವ ಐಪಿಎಲ್‌ನಲ್ಲಿ (IPL) ಆರ್​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವಿನ ಪಂದ್ಯಕ್ಕೆ ಇರುತ್ತದೆ. ಈ ಉಭಯ ತಂಡಗಳ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಹಾಗೆಯೇ ಪಂದ್ಯಗಳು ನಡೆದಾಗ ಕ್ರೀಡಾಂಗಣಗಳು ತುಂಬಿ ತುಳುಕುತ್ತಿರುತ್ತವೆ. ಇದನ್ನು ಗಮನಿಸಿಯೇ ಬಿಸಿಸಿಐ, ಲೀಗ್ ಹಂತದಲ್ಲಿ ಆರ್​ಸಿಬಿ ಹಾಗೂ ಸಿಎಸ್‌ಕೆ ನಡುವೆ ಎರಡು ಪಂದ್ಯಗಳನ್ನು ಆಯೋಜನೆ ಮಾಡುತ್ತದೆ. ಇದರಿಂದ ಅಭಿಮಾನಿಗಳು ಎರಡು ಬಾರಿ ಈ ತಂಡಗಳ ನಡುವಿನ ಮುಖಾಮುಖಿ ನೋಡಲು ಸಾಧ್ಯವಾಗುತ್ತದೆ. ಆದರೆ ಈ ಬಾರಿ ಅದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ, ಈ ಬಾರಿ ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯ ನಡೆಯಲು ಕಾರಣವೇನು ಎಂಬುದನ್ನು ನೋಡುವುದಾದರೆ..

ಮೇಲೆ ಹೇಳಿದಂತೆ 2026 ರ ಐಪಿಎಲ್‌ನ ಲೀಗ್ ಹಂತದಲ್ಲಿ ಆರ್​ಸಿಬಿ ಮತ್ತು ಸಿಎಸ್‌ಕೆ ಒಮ್ಮೆ ಮಾತ್ರ ಮುಖಾಮುಖಿಗಲಿವೆ. ಅದರಂತೆ ನಡೆದ ಪಂದ್ಯದಲ್ಲಿ ಆರ್​ಸಿಬಿ, ಸಿಎಸ್‌ಕೆ ತಂಡವನ್ನು ಹೀನಾಯವಾಗಿ ಮಣಿಸಿದೆ. ಸಿಎಸ್​ಕೆ ತಂಡದ ಪ್ರದರ್ಶನವನ್ನು ನೋಡಿದರೆ, ಈ ಸೀಸನ್​ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗುವ ಸಾಧ್ಯತೆಗಳಿಲ್ಲ. ಒಂದು ವೇಳೆ ಸಿಎಸ್​ಕೆ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ನಾಕೌಟ್ ಸುತ್ತಿಗೆ ಅರ್ಹತೆ ಪಡೆದರೆ, ಆಗ ಉಭಯ ತಂಡಗಳ ನಡುವೆ ಪಂದ್ಯ ನಡೆಯಬಹುದು. ಆದರೆ ಸಿಎಸ್​ಕೆ ಆ ಹಂತಕ್ಕೆ ಹೋಗುವ ಸಾಧ್ಯತೆಗಳು ಗೋಚರಿಸುತ್ತಿಲ್ಲ.

ಪ್ಲೇ ಆಫ್ ಸುತ್ತಿನಲ್ಲಿ ಮುಖಾಮುಖಿ ಹೇಗೆ ಸಾಧ್ಯ?

ಆದಾಗ್ಯೂ ಎಲ್ಲಾ ಆಡೆತಡೆಗಳನ್ನು ನಿವಾರಿಸಿ ಸಿಎಸ್​ಕೆ ಪ್ಲೇ ಆಫ್ ಸುತ್ತಿಗೆ ಅರ್ಹತೆ ಪಡೆದರೆ, ಆಗ ಆರ್​ಸಿಬಿ ವಿರುದ್ಧ ಪಂದ್ಯವನ್ನಾಡಬಹುದಾಗಿದೆ. ಅದು ಹೇಗೆ ಎಂದರೆ, ಲೀಗ್ ಹಂತ ಮುಗಿದ ಬಳಿಕ ಅಂಕಪಟ್ಟಿಯಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ಮೊದಲ ಎರಡು ಸ್ಥಾನಗಳಲ್ಲಿದ್ದರೆ, ಆಗ ಎರಡು ತಂಡಗಳು ಕ್ವಾಲಿಫೈಯರ್ 1 ಆಡಲಿವೆ. ಹಾಗೆಯೇ ಆರ್​ಸಿಬಿ ಹಾಗೂ ಸಿಎಸ್​ಕೆ ಪಾಯಿಂಟ್‌ ಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರೆ ಆಗ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಗಲಿವೆ.

ಇದರ ಹೊರತಾಗಿ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರ ಎರಡಲ್ಲಿ ಸ್ಥಾನ ಪಡೆದು, ಕ್ವಾಲಿಫೈಯರ್ 1 ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ, ಇತ್ತ ಸಿಎಸ್​ಕೆ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನ ಪಡೆದು, ಎಲಿಮಿನೇಟರ್ ಗೆದ್ದು, ಕ್ವಾಲಿಫೈಯರ್ 2 ರಲ್ಲೂ ಗೆದ್ದರೆ ಆಗ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಒಂದು ವೇಳೆ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರ 2 ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್ 1 ರಲ್ಲಿ ಸೋತರೆ, ಇತ್ತ ಸಿಎಸ್​ಕೆ ಅಂಕಪಟ್ಟಿಯಲ್ಲಿ ಅಗ್ರ ಮೂರು ಅಥವಾ ನಾಲ್ಕರಲ್ಲಿ ಸ್ಥಾನ ಪಡೆದು ಎಲಿಮಿನೇಟರ್​ನಲ್ಲಿ ಗೆದ್ದರೆ, ಆಗ ಉಭಯ ತಂಡಗಳು ಕ್ವಾಲಿಫೈಯರ್ 2 ರಲ್ಲಿ ಮುಖಾಮುಖಿಗಲಿವೆ.

ಲೀಗ್ ಹಂತದಲ್ಲಿ ಒಂದು ಪಂದ್ಯ ಏಕೆ?

ಇನ್ನು ಈ ಸೀಸನ್​ನಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ಕೇವಲ ಒಂದು ಪಂದ್ಯ ನಡೆದಿದ್ದು ಏಕೆ ಎಂಬುದನ್ನು ನೋಡುವುದಾದರೆ.. ಪ್ರತಿ ಬಾರಿಯಂತೆ ಈ ಬಾರಿಯೂ ಬಿಸಿಸಿಐ, 10 ತಂಡಗಳನ್ನು ತಲಾ 5 ತಂಡಗಳ ಎರಡು ವರ್ಚುವಲ್ ಗುಂಪುಗಳಾಗಿ ವಿಂಗಡಿಸಿದೆ. ಅದರಂತೆ ಲೀಗ್ ಹಂತದಲ್ಲಿ ನಡೆಯುವ 70 ಪಂದ್ಯಗಳಲ್ಲಿ ಪ್ರತಿಯೊಂದು ತಂಡವು ತಲಾ 14 ಪಂದ್ಯಗಳನ್ನು ಆಡುತ್ತದೆ. ಅದರಲ್ಲಿ ತಲಾ ಒಂದು ಪಂದ್ಯವನ್ನು ತನ್ನ ಗುಂಪಿನಲ್ಲಿರುವ ಇತರ 4 ತಂಡಗಳ ವಿರುದ್ಧ ಆಡಿದರೆ, ತಲಾ 2 ಪಂದ್ಯಗಳನ್ನು ಇನ್ನೊಂದು ಗುಂಪಿನಲ್ಲಿರುವ 5 ತಂಡಗಳ ವಿರುದ್ಧ ಆಡಲಿದೆ.

ಕೇವಲ 11 ಕೋಟಿಗೆ ಐವರು ಮ್ಯಾಚ್ ವಿನ್ನರ್ಸ್​; ಆರ್​ಸಿಬಿ ಲೆಕ್ಕಾಚಾರಕ್ಕೆ ಥಂಡಾ ಹೊಡೆದ ಉಳಿದ ಫ್ರಾಂಚೈಸಿಗಳು

2 ಗುಂಪುಗಳಲ್ಲಿ ಯಾವ್ಯಾವ ತಂಡಗಳಿವೆ

ಇಲ್ಲಿ ಬಿಸಿಸಿಐ, ಎಲ್ಲಾ 10 ತಂಡಗಳನ್ನು ತಲಾ ಐದು ತಂಡಗಳ 2 ಗುಂಪುಗಳಾಗಿ ವಿಂಗಡಿಸಿದೆ. ಅದರಂತೆ ಗುಂಪು 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (5), ಕೋಲ್ಕತ್ತಾ ನೈಟ್ ರೈಡರ್ಸ್ (3), ರಾಜಸ್ಥಾನ್ ರಾಯಲ್ಸ್ (1), ರಾಯಲ್ ಚಾಲೆಂಜರ್ಸ್ ಬೆಂಗಳೂರು (1) ಮತ್ತು ಪಂಜಾಬ್ ಕಿಂಗ್ಸ್ ಗುಂಪು ಎ ನಲ್ಲಿ ಸ್ಥಾನ ಪಡೆದರೆ, ಗುಂಪು ಬಿಯಲ್ಲಿ ಮುಂಬೈ ಇಂಡಿಯನ್ಸ್ (5), ಸನ್‌ರೈಸರ್ಸ್ ಹೈದರಾಬಾದ್ (1), ಗುಜರಾತ್ ಟೈಟಾನ್ಸ್ (1), ದೆಹಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿವೆ.

ಮೇಲೆ ಹೇಳಿದಂತೆ ಆರ್​ಸಿಬಿ ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಅಂದರೆ, ಸಿಎಸ್​ಕೆ,ಕೆಕೆಆರ್, ರಾಜಸ್ಥಾನ್ ಹಾಗೂ ಪಂಜಾಬ್ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಲೀಗ್ ಹಂತದಲ್ಲಿ ಆಡಲಿದೆ. ಇನ್ನು ಬಿ ಗುಂಪಿನಲ್ಲಿರುವ ಮುಂಬೈ, ಸನ್‌ರೈಸರ್ಸ್, ಗುಜರಾತ್, ಡೆಲ್ಲಿ ಹಾಗೂ ಲಕ್ನೋ ವಿರುದ್ಧ ತಲಾ 2 ಪಂದ್ಯಗಳನ್ನು ಆಡಲಿದೆ. ಹೀಗಾಗಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಸಿಎಸ್​ಕೆ ಹಾಗೂ ಆರ್​ಸಿಬಿ ಈ ಬಾರಿ ಲೀಗ್ ಹಂತದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:11 pm, Mon, 6 April 26

Follow Us
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಪ್ರತಿ ಸಿನಿಮಾದಲ್ಲಿ ಬೇರೆ ರೀತಿ ಕಾಣೋದು ಹೇಗೆ? ಉತ್ತರಿಸಿದ ಕಿರಣ್ ರಾಜ್
ಹಾಸನ ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಭಾರಿ ಅವಾಂತರ, ವಿಡಿಯೋ ನೋಡಿ
ಹಾಸನ ಜಿಲ್ಲೆಯಲ್ಲಿ ಗಾಳಿ ಮಳೆಯಿಂದ ಭಾರಿ ಅವಾಂತರ, ವಿಡಿಯೋ ನೋಡಿ
ಬಿಜೆಪಿಗೆ ಸಪೋರ್ಟ್‌, SDPIಗೆ ಹಣ ನೀಡಿದ ವಿಡಿಯೋ ಇದೆ ಎಂದ ಕೈ ನಾಯಕ
ಬಿಜೆಪಿಗೆ ಸಪೋರ್ಟ್‌, SDPIಗೆ ಹಣ ನೀಡಿದ ವಿಡಿಯೋ ಇದೆ ಎಂದ ಕೈ ನಾಯಕ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!