AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಗ್ಗಜರೊಂದಿಗೆ ಹೋಲಿಸಿ, ವೈಭವ್​ಗೆ ಕಿವಿಮಾತು ಹೇಳಿದ ಕಪಿಲ್ ದೇವ್!

Vaibhav Sooryavanshi: ಟೀಮ್ ಇಂಡಿಯಾದ ನ್ಯೂ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಕಣಕ್ಕಿಳಿದರೆ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಳ್ಳಲಿದ್ದಾರೆ.

ದಿಗ್ಗಜರೊಂದಿಗೆ ಹೋಲಿಸಿ, ವೈಭವ್​ಗೆ ಕಿವಿಮಾತು ಹೇಳಿದ ಕಪಿಲ್ ದೇವ್!
Vaibhav Sooryavanshi Image Credit source: BCCI
ಝಾಹಿರ್ ಯೂಸುಫ್
|

Updated on:Jul 04, 2026 | 5:32 PM

Share

ಟೀಮ್ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಅವರು ಇತ್ತೀಚೆಗೆ ಯುವ ದಾಂಡಿಗ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲದೆ, ವೈಭವ್ ಆಟವು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಟ್ಟದಲ್ಲಿದೆ ಎಂದು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಯುವ ದಾಂಡಿಗನಿಗೆ ಕಿವಿಮಾತು ಕೂಡ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, ವೈಭವ್ ಸೂರ್ಯವಂಶಿ ಅವರಲ್ಲಿರುವ ಪ್ರತಿಭೆ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರ ಮಟ್ಟದಲ್ಲಿದೆ. ಆತನ ನೈಸರ್ಗಿಕ ಆಟವೇ ಆತನ ಸಾಮರ್ಥ್ಯ ಎಂದು ಕಪಿಲ್ ದೇವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಅವನಿಗೆ ಈಗಲೇ ಅತಿಯಾದ ಪ್ರಚಾರವನ್ನು ನೀಡಬೇಡಿ. ಈ ಮೂಲಕ ಒತ್ತಡವನ್ನು ಹಾಕಬೇಡಿ. ಮುಕ್ತವಾಗಿ ಉಸಿರಾಡಲು ಬಿಡಿ ಎಂದು ಕಪಿಲ್ ಮಾಧ್ಯಮ ಹಾಗೂ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.

ಅತಿಯಾದ ನಿರೀಕ್ಷೆಗಳು ಯುವ ಆಟಗಾರನ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೀಗಾಗಿ ವೈಭವ್ ಸೂರ್ಯವಂಶಿಗೆ ಈಗಲೇ ಅತಿಯಾದ ಪ್ರಚಾರ ನೀಡಬಾರದು ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ನೀಡದಿರುವ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಕಪಿಲ್ ದೇವ್, ಅವನು ಸಿದ್ಧನಾಗಿದ್ದರೆ, ತಂಡದಲ್ಲಿ ಅವಕಾಶ ನೀಡಿ. ಆಡಲು ಬಿಡಿ. ವಯಸ್ಸನ್ನು ಪರಿಗಣಿಸದೆ ಪ್ರತಿಭೆಗೆ ತಕ್ಕಂತೆ ಭಾರತ ತಂಡದಲ್ಲಿ ಅವಕಾಶ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ವೈಭವ್​ಗೆ ಕಿವಿಮಾತು:

ಐಪಿಎಲ್ ಮತ್ತು ಟಿ20 ಮಾದರಿಯಲ್ಲಿ ವೈಭವ್ ಸೂರ್ಯವಂಶಿ ಅದ್ಭುತವಾಗಿ ಆಡಿದ್ದರೂ, ಒಬ್ಬ ಕ್ರಿಕೆಟಿಗನ ನಿಜವಾದ ಯಶಸ್ಸು ಮತ್ತು ಪರಂಪರೆ ನಿರ್ಧಾರವಾಗುವುದು ಟೆಸ್ಟ್ ಕ್ರಿಕೆಟ್‌ನಲ್ಲಿ. ಹೀಗಾಗಿ ವೈಭವ್ ಮುಂದೆ ಟೆಸ್ಟ್ ಕ್ರಿಕೆಟ್​ನತ್ತ ಹೆಚ್ಚು ಗಮನ ಹರಿಸಬೇಕು ಎಂದು ಕಪಿಲ್ ದೇವ್ ಕಿವಿಮಾತು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 15 ವರ್ಷದ ವೈಭವ್ ಸೂರ್ಯವಂಶಿ ಅವರಲ್ಲಿ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗುವ ಎಲ್ಲಾ ಲಕ್ಷಣಗಳೂ ಇವೆ. ಕಪಿಲ್ ದೇವ್ ಅವರ ಈ ಮಾರ್ಗದರ್ಶನ ಮತ್ತು ಎಚ್ಚರಿಕೆಯ ಮಾತುಗಳು ಯುವ ಆಟಗಾರನನ್ನು ಅನಗತ್ಯ ಒತ್ತಡದಿಂದ ಕಾಪಾಡಲು ಅತ್ಯಂತ ಅವಶ್ಯಕವಾಗಿವೆ.

ಇದನ್ನೂ ಓದಿ: ಜೂನ್ 28… ಭಾರತೀಯ ಕ್ರಿಕೆಟ್ ಇತಿಹಾಸದ ‘ಅತ್ಯಂತ ಕೆಟ್ಟ ದಿನ’!

ಅತಿಯಾದ ಪ್ರಚಾರದ ಬದಲು ಅವರಿಗೆ ಮುಕ್ತವಾಗಿ ಆಡುವ ವಾತಾವರಣ ನಿರ್ಮಿಸಿಕೊಟ್ಟರೆ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತೆ ವೈಭವ್ ಸೂರ್ಯವಂಶಿ ಕೂಡ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

Vaib

Published On - 5:31 pm, Sat, 4 July 26

Follow Us
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ನೆಲಮಂಗಲ: ಮನೆ ಮನೆಗೆ ಹೋಗುವ ಬದಲು ಮಸೀದಿಯಲ್ಲೇ ಕುಳಿತು SIR ಪತ್ರ ವಿತರಣೆ
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
ಬತ್ತಿದ್ದ ಕೃಷ್ಣಾ ನದಿಗೆ ಜೀವ ಕಳೆ, 15 ಸಾವಿರ ಕ್ಯೂಸೆಕ್ ಒಳ ಹರಿವು
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
SIR ವಿವಾದ: ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ ಬಿಜೆಪಿ, ಜೆಡಿಎಸ್‌ ಸಿದ್ಧತೆ
ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!
ಟ್ರಾಫಿಕ್ ಸಿಗ್ನಲ್​ನಲ್ಲಿ ನಿಂತಿದ್ದ ಎಸಿ ಬಸ್​ಗೆ ಮತ್ತೊಂದು ಬಸ್ ಡಿಕ್ಕಿ!
ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ
ಸರ್ಕಾರಿ ಕೆಲಸ ಕೊಡಿಸುವ ನೆಪದಲ್ಲಿ ವಂಚನೆ: ಟಿವಿ9 ವರದಿ ಬಳಿಕ ಆರೋಪಿಗಳ ಬಂಧನ
ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?
ಮಂಡ್ಯ ಫೈರಿಂಗ್: ಪ್ರಭಾವಿ ಪುತ್ರನ ಬೆನ್ನಿಗೆ ನಿಂತ್ರಾ ಎಸ್‌ಪಿ ಶೋಭಾರಾಣಿ?
ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ
ರೌಡಿಶೀಟರ್​ಗಳಿಗೆ ಸಿಸಿಬಿ ಬಿಗ್ ಶಾಕ್, ರಾತ್ರೋರಾತ್ರಿ ಮಿಂಚಿನ ಕಾರ್ಯಾಚರಣೆ
ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ
ಕೊರತೆ ತಪ್ಪಿಸಲು ಸಿಎಂ ಡಿಕೆ ಶಿವಕುಮಾರ್ ತುರ್ತು ಸಭೆ, ಅಧಿಕಾರಿಗಳಿಗೆ ಸೂಚನೆ