LSG Retention List for IPL 2025: ಹರಾಜಿಗೆ ರಾಹುಲ್; ಲಕ್ನೋ ಧಾರಣ ಪಟ್ಟಿಯಲ್ಲಿ ಐವರಿಗೆ ಸ್ಥಾನ

Lucknow Super Giants Retention Players List for IPL 2025: ಈ ಬಾರಿ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ತಂಡವೆಂದರೆ ಅದು ಲಕ್ನೋ ಸೂಪರ್ ಜೈಂಟ್ಸ್. ಇದಕ್ಕೆ ಕಾರಣವೂ ಇದ್ದು, ಕನ್ನಡಿಗ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಸುದ್ದಿ. ಇದೀಗ ಆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದ್ದು, ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಜೊತೆಗೆ ತಂಡವನ್ನೂ ಸಹ ತೊರೆದಿದ್ದಾರೆ. ಇದೀಗ ಹರಾಜಿಗೆ ಕಾಲಿಡುತ್ತಿರುವ ರಾಹುಲ್​ರನ್ನು ಯಾವ ತಂಡ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

LSG Retention List for IPL 2025: ಹರಾಜಿಗೆ ರಾಹುಲ್; ಲಕ್ನೋ ಧಾರಣ ಪಟ್ಟಿಯಲ್ಲಿ ಐವರಿಗೆ ಸ್ಥಾನ
ಲಕ್ನೋ ತಂಡ
Follow us
|

Updated on:Oct 31, 2024 | 8:36 PM

ಈ ಬಾರಿ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ತಂಡವೆಂದರೆ ಅದು ಲಕ್ನೋ ಸೂಪರ್ ಜೈಂಟ್ಸ್. ಇದಕ್ಕೆ ಕಾರಣವೂ ಇದ್ದು, ಕನ್ನಡಿಗ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಸುದ್ದಿ. ಇದೀಗ ಆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದ್ದು, ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಜೊತೆಗೆ ತಂಡವನ್ನೂ ಸಹ ತೊರೆದಿದ್ದಾರೆ. ಇದೀಗ ಹರಾಜಿಗೆ ಕಾಲಿಡುತ್ತಿರುವ ರಾಹುಲ್​ರನ್ನು ಯಾವ ತಂಡ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ. ರಾಹುಲ್​ರನ್ನು ಖರೀದಿಸುವ ರೇಸ್​ನಲ್ಲಿ ಸಾಕಷ್ಟು ತಂಡಗಳಿದ್ದು, ಆ ಪೈಕಿ ಆರ್​ಸಿಬಿ, ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ಫ್ರಾಂಚೈಸಿಗಳಾಗಿವೆ. ಹೀಗಾಗಿ ರಾಹುಲ್​​ಗೆ ಹರಾಜಿನಲ್ಲಿ ಬೃಹತ್ ಮೊತ್ತ ಸಿಗುವ ಸಾಧ್ಯತೆಗಳಿದ್ದು, ಅಂತಿಮವಾಗಿ ಅವರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಮೆಗಾ ಹರಾಜಿನ ನಂತರ ತಿಳಿಯಲಿದೆ. ಇದನ್ನು ಹೊರತುಪಡಿಸಿ ಲಕ್ನೋ ತಂಡ ತನ್ನ ಧಾರಣ ಪಟ್ಟಿಯಲ್ಲಿ ಕೇವಲ 5 ಆಟಗಾರರಿಗೆ ಮಾತ್ರ ಸ್ಥಾನ ನೀಡಿದೆ.

ನಾಯಕನೇ ತಂಡದಿಂದ ಔಟ್

2022 ರ ಐಪಿಎಲ್​ನಲ್ಲಿ ಲಕ್ನೋ ತಂಡವನ್ನು ಸೇರಿಕೊಂಡಿದ್ದ ಕೆಎಲ್ ರಾಹುಲ್ ಅಂದಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದರು. ಆದರೆ ಒಮ್ಮೆಯೂ ತಂಡವನ್ನು ಪ್ರಶಸ್ತಿ ಗೆಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಕಳೆದ ಸೀಸನ್​ನಲ್ಲಿ, ಅವರ ನಾಯಕತ್ವದಲ್ಲಿ ಲಕ್ನೋ ತಂಡವು ಆಡಿದ 14 ಪಂದ್ಯಗಳಲ್ಲಿ 7 ರಲ್ಲಿ ಮಾತ್ರ ಗೆದ್ದು 7 ನೇ ಸ್ಥಾನ ಪಡೆದುಕೊಂಡಿತ್ತು. ಅಲ್ಲದೆ ಕಳೆದ ಸೀಸನ್​ನಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ಕೆಎಲ್ ರಾಹುಲ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರ ನಡುವೆ ಮಾತಿನ ಜಟಾಪಟಿಯೇ ನಡೆದಿತ್ತು. ತಂಡದ ಸೋಲಿನ ಬಳಿಕ ಸಂಜೀವ್ ಗೋಯೆಂಕಾ ರಾಹುಲ್ ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಂದಿನಿಂದ ಕೆಎಲ್ ರಾಹುಲ್ ತಂಡ ತೊರೆಯಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದು, ಈಗ ಅದೇ ನಡೆದಿದೆ.

ಲಕ್ನೋ ತಂಡದಲ್ಲಿ ಉಳಿದುಕೊಂಡವರಿವರು

ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪುರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ನಿಕೋಲಸ್ ಪೂರನ್ ತಂಡದ ಅತ್ಯಂತ ದುಬಾರಿ ಧಾರಣೆಯಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್​ಗಾಗಿ 21 ಕೋಟಿ ರೂ. ಖರ್ಚು ಮಾಡಿದೆ. ಇದಲ್ಲದೆ ರವಿ ಬಿಷ್ಣೋಯ್ ಮತ್ತು ಮಯಾಂಕ್ ಯಾದವ್ ಅವರನ್ನು ತಲಾ 11 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಕಳೆದ ಸೀಸನ್​ನಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ಮಯಾಂಕ್ ಯಾದವ್ ತಮ್ಮ ಛಾಪು ಮೂಡಿಸಿದ್ದರು. ಇವರಲ್ಲದೆ ಮೊಹ್ಸಿನ್ ಖಾನ್ ಮತ್ತು ಆಯುಷ್ ಬಡೋನಿ ಅನ್‌ಕ್ಯಾಪ್ಡ್ ಆಟಗಾರರಾಗಿ ಉಳಿದುಕೊಂಡಿದ್ದಾರೆ. ಈ ಇಬ್ಬರೂ ಆಟಗಾರರನ್ನು ತಲಾ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.

ಈ ಸ್ಟಾರ್ ಆಟಗಾರರಿಗೆ ಗೇಟ್​ಪಾಸ್

ಲಕ್ನೋ ತಂಡದಿಂದ ಕೆಎಲ್ ರಾಹುಲ್ ಹೊರತುಪಡಿಸಿ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಯುಧ್ವೀರ್ ಸಿಂಗ್ ಚರಕ್, ಅರ್ಷದ್ ಖಾನ್, ನವೀನ್ ಉಲ್ ಹಕ್, ದೇವದತ್ ಪಡಿಕ್ಕಲ್, ಪ್ರೇರಕ್ ಮಂಕಡ್, ಮಣಿಮಾರನ್ ಸಿದ್ಧಾರ್ಥ್, ಕೃಷ್ಣಪ್ಪ ಗೌತಮ್, ಆಶ್ಟನ್ ಟರ್ನರ್, ಅಮಿತ್ ಮಿಶ್ರಾ, ಅರ್ಶಿನ್ ಕೆ. ಕೈಲ್ ಮೇಯರ್ಸ್, ಮ್ಯಾಟ್ ಹೆನ್ರಿ, ಶಮರ್ ಜೋಸೆಫ್ ಮತ್ತು ಯಶ್ ಠಾಕೂರ್ ತಂಡದಿಂದ ಹೊರಬಿದ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Thu, 31 October 24

ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ಯೋಜನೆಗಳನ್ನು ಘೋಷಿಸಿದ್ದು ಕಾಂಗ್ರೆಸ್, ಯಾವ ಕಾರಣಕ್ಕೂ ನಿಲ್ಲಿಸಲಾಗದು: ಮಂಜು
ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ನಟ ದರ್ಶನ್​ ವಿಚಾರದಲ್ಲಿ ಅರ್ಜುನ್ ಗುರೂಜಿ ನುಡಿದಿದ್ದ ಭವಿಷ್ಯ ನಿಜ ಆಯ್ತು
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ: ಸಿದ್ದರಾಮಯ್ಯ
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
ದೇವಿಯ ದೃಷ್ಟಿಯಲ್ಲಿ ಎಲ್ಲರೂ ಒಂದೇ ವಿಐಪಿ ವ್ಯವಸ್ಥೆ ಯಾಕೆ? ಭಕ್ತರು
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
‘ಬಘೀರ’ ಯಶಸ್ಸು: ಪುನೀತ್ ಚಿತ್ರ ಹಿಡಿದು ಡ್ಯಾನ್ಸ್ ಮಾಡಿದ ಶ್ರೀಮುರಳಿ
ಪಕ್ಷ ಬಿಡದಿದ್ದರೆ ಅರಸು ಇನ್ನೈದು ವರ್ಷ ಸಿಎಂ ಆಗಿರುತ್ತಿದ್ದರು: ಖರ್ಗೆ
ಪಕ್ಷ ಬಿಡದಿದ್ದರೆ ಅರಸು ಇನ್ನೈದು ವರ್ಷ ಸಿಎಂ ಆಗಿರುತ್ತಿದ್ದರು: ಖರ್ಗೆ
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ವೋಟು ಕೇಳುವಾಗ ಸರ್ಕಾರ 5-ವರ್ಷದ ಯೋಜನೆ ಎಂದಿತ್ತು ಅನ್ನುತ್ತಾರೆ ಮಹಿಳೆಯರು!
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಕಚ್​ನಲ್ಲಿ ಸೈನಿಕರಿಗೆ ಸ್ವೀಟ್ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!
ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರಿಗೂ ಕೈಮುಗಿದು ಮತ ಯಾಚಿಸಿದ ಕುಮಾರಸ್ವಾಮಿ!