IPL 2027: ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಹತ್ವದ ಬದಲಾವಣೆ
Jatin Barucha Joins Mumbai Indians: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಇತ್ತೀಚಿನ ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ, ಮುಂಬೈ ಇಂಡಿಯನ್ಸ್ ಮಾಜಿ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ನಿರ್ದೇಶಕ ಜುಬಿನ್ ಭರುಚಾ ಅವರನ್ನು ಪ್ರದರ್ಶನ ನಿರ್ದೇಶಕರಾಗಿ ನೇಮಿಸಿದೆ. ಯುವ ಪ್ರತಿಭೆಗಳನ್ನು ಗುರುತಿಸಿ, ಅಭಿವೃದ್ಧಿಪಡಿಸುವಲ್ಲಿ ಅಪಾರ ಅನುಭವ ಹೊಂದಿರುವ ಭರುಚಾ, ಮುಂಬೈ ಇಂಡಿಯನ್ಸ್‌ಗೆ ಹೊಸ ಆಟಗಾರರನ್ನು ಬೆಳೆಸಲು ಮತ್ತು ತಂಡದ ಭವಿಷ್ಯದ ಯಶಸ್ಸಿಗೆ ನೆರವಾಗಲಿದ್ದಾರೆ.

ಐದು ಬಾರಿಯ ಐಪಿಎಲ್ (IPL) ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪ್ರದರ್ಶನ ಕಳೆದ ಕೆಲವು ಆವೃತ್ತಿಗಳಿಂದ ಉತ್ತಮವಾಗಿಲ್ಲ. ತಂಡದಲ್ಲಿ ಘಟಾನುಘಟಿ ಆಟಗಾರರೇ ಇದ್ದರೂ ಪ್ರದರ್ಶನ ಮಾತ್ರ ಸುಧಾರಿಸುತ್ತಿಲ್ಲ. ಹೀಗಾಗಿ ಪ್ರತಿ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅದರಂತೆ 2027 ರ ಐಪಿಎಲ್ ಆರಂಭಕ್ಕೆ ಇನ್ನು ಸಾಕಷ್ಟು ಸಮಯ ಇದ್ದರೂ ಮುಂಬೈ ಫ್ರಾಂಚೈಸಿ ತನ್ನ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ತಂಡಕ್ಕೆ ಪ್ರದರ್ಶನ ನಿರ್ದೇಶಕರಾಗಿ ಜುಬಿನ್ ಭರುಚಾ ಅವರನ್ನು ಸೇರಿಸಿಕೊಂಡಿದೆ. ಈ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ಜುಬಿನ್, ಇದೀಗ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಾಹಿತಿ ನೀಡಿದ ಮುಂಬೈ
ಆಗಸ್ಟ್ 22 ರ ಶನಿವಾರದಂದು ಮುಂಬೈ ಇಂಡಿಯನ್ಸ್ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಜುಬಿನ್ ಭರುಚಾ ಮುಂಬೈ ಫ್ರಾಂಚೈಸಿಗೆ ಸೇರಿದ್ದಾರೆ. ಅವರು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಸೇರಿದಂತೆ ಮುಂಬೈ ಇಂಡಿಯನ್ಸ್ ಸಹಾಯಕ ಸಿಬ್ಬಂದಿಯೊಂದಿಗೆ ಕೆಲಸ ಮಾಡಲಿದ್ದು, ಹೊಸ ಆಟಗಾರರನ್ನು ಬೆಳೆಸುವ ಕೆಲಸವನ್ನು ನಿರ್ವಹಿಸಲಿದ್ದಾರೆ ಎಂದಿದೆ.
𝗠𝘂𝗺𝗯𝗮𝗶 𝗜𝗻𝗱𝗶𝗮𝗻𝘀 𝗮𝗽𝗽𝗼𝗶𝗻𝘁 𝗭𝘂𝗯𝗶𝗻 𝗕𝗵𝗮𝗿𝘂𝗰𝗵𝗮 𝗮𝘀 𝗗𝗶𝗿𝗲𝗰𝘁𝗼𝗿 𝗼𝗳 𝗣𝗲𝗿𝗳𝗼𝗿𝗺𝗮𝗻𝗰𝗲
Read more 👉 https://t.co/DbIcJ1weDD pic.twitter.com/BXN6rNvBdy
— Mumbai Indians (@mipaltan) August 22, 2026
ಯಾರು ಈ ಜುಬಿನ್ ಭರುಚಾ?
ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜುಬಿನ್ ಭರುಚಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಗೊಂಡಿರುವುದು ಮಹತ್ವದ್ದಾಗಿದೆ. ಏಕೆಂದರೆ ಅವರಿಗೆ ಯುವ ಆಟಗಾರರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ವ್ಯಾಪಕ ಅನುಭವವಿದೆ. ಕಳೆದ ದಶಕದಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಹೊರಹೊಮ್ಮಿರುವ ಅನೇಕ ಯುವ ಆಟಗಾರರ ಹಿಂದೆ ಜುಬಿನ್ ಭರುಚಾ ಅವರ ಶ್ರಮವಿದೆ.
ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿಯಂತಹ ಯುವ ಪ್ರತಿಭೆಗಳ ಹುಡುಕಾಟದಲ್ಲಿ ಭರುಚಾ ಅವರ ಕೊಡುಗೆ ಅಪಾರವಾಗಿದೆ. ಎರಡು ವರ್ಷಗಳ ಹಿಂದೆ ವೈಭವ್ ಅವರ ಟ್ರಯಲ್ಸ್ ನಡೆಸಿದವರು ಭರುಚಾ. ವೈಭವ್ ಅವರ ಆಟವನ್ನು ಗಮನಿಸಿದ ಭರುಚಾ ಐಪಿಎಲ್ ಹರಾಜಿನಲ್ಲಿ ಅವರನ್ನು ಖರೀದಿಸುವಂತೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಲಹೆ ನೀಡಿದ್ದರು.
IND vs ENG: ‘ಇದು ಐಪಿಎಲ್ ಅಲ್ಲ’; ಟೀಂ ಇಂಡಿಯಾ ಆಟಗಾರರನ್ನು ಎಚ್ಚರಿಸಿದ ಆರ್ಚರ್
ರಾಜಸ್ಥಾನ ತಂಡದಲ್ಲಿದ್ದ ಭರುಚಾ
ಮುಂಬೈ ಮತ್ತು ಸರ್ರೆ ಪರ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿರುವ ಮಾಜಿ ಬ್ಯಾಟ್ಸ್‌ಮನ್ ಜುಬಿನ್ ಭರುಚಾ, ಐಪಿಎಲ್ ಆರಂಭದಿಂದಲೂ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕೆಲಸ ಮಾಡಿದ್ದಾರೆ. 2008 ರಿಂದ 2015 ರವರೆಗೆ ತಂಡದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಭರುಚಾ ಎರಡು ವರ್ಷಗಳ ನಿಷೇಧದ ಸಮಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಲ್ಲಿದ್ದರು. ನಂತರ 2018 ರಲ್ಲಿ ರಾಜಸ್ಥಾನ ತಂಡಕ್ಕೆ ಮರಳಿದ ಭರುಚಾ 2026 ರವರೆಗೆ ರಾಜಸ್ಥಾನ ರಾಯಲ್ಸ್‌ನಲ್ಲಿ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Sat, 22 August 26




