AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಚೇಸ್ ಮಾಸ್ಟರ್ ಎಂಟ್ರಿ: 4 ಇನಿಂಗ್ಸ್​ಗಳಲ್ಲೇ ವಿರಾಟ್ ಕೊಹ್ಲಿ ದಾಖಲೆ ಉಡೀಸ್!

ಕ್ರಿಕೆಟ್​ನಲ್ಲಿ '350 ಪ್ಲಸ್ ರನ್ ಚೇಸಿಂಗ್' ಎನ್ನುವುದು ಕೇವಲ ಪಂದ್ಯವಲ್ಲ, ಅದು ಬ್ಯಾಟರ್‌ಗಳ ಪಾಲಿಗೆ ಅತ್ಯಂತ ಕಠಿಣವಾದ ಅಗ್ನಿಪರೀಕ್ಷೆ! ಇಂತಹ ಅಸಾಧ್ಯವಾದ ಗುರಿಗಳನ್ನು ಬೆನ್ನಟ್ಟಿ ಶತಕದ ಇತಿಹಾಸ ಬರೆಯುವ ಚಾಕಚಕ್ಯತೆ ಕೇವಲ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರಿಗೆ ಮಾತ್ರ ಸಾಧ್ಯ ಎಂದು ಜಗತ್ತು ನಂಬಿತ್ತು. ಆದರೆ, ಈಗ ಕ್ರಿಕೆಟ್ ಲೋಕದ ಆ ನಂಬಿಕೆಯನ್ನೇ ಧೂಳೀಪಟ ಮಾಡಿ, ಇವರಿಬ್ಬರ ಸಾರ್ವಕಾಲಿಕ ದಾಖಲೆಯ ಸಾಮ್ರಾಜ್ಯಕ್ಕೆ ಯುವ ದಾಂಡಿಗ ಎಂಟ್ರಿ ಕೊಟ್ಟಿದ್ದಾನೆ.

ಹೊಸ ಚೇಸ್ ಮಾಸ್ಟರ್ ಎಂಟ್ರಿ: 4 ಇನಿಂಗ್ಸ್​ಗಳಲ್ಲೇ ವಿರಾಟ್ ಕೊಹ್ಲಿ ದಾಖಲೆ ಉಡೀಸ್!
Pavan RathnayakeImage Credit source: GettyImages
ಝಾಹಿರ್ ಯೂಸುಫ್
|

Updated on: Oct 31, 2026 | 3:13 PM

Share

ವಿಶ್ವ ಕ್ರಿಕೆಟ್​ನ ಚೇಸ್ ಮಾಸ್ಟರ್ ಯಾರು? ಈ ಪ್ರಶ್ನೆಗೆ ಥಟ್ಟನೆ ಬರುವ ಉತ್ತರ ವಿರಾಟ್ ಕೊಹ್ಲಿ… ಇದೀಗ ವಿರಾಟ್ ಕೊಹ್ಲಿ ಚೇಸಿಂಗ್ ವೇಳೆ ಬರೆದಿದ್ದ ಭರ್ಜರಿ ದಾಖಲೆಯನ್ನು ಶ್ರೀಲಂಕಾದ ಯುವ ದಾಂಡಿಗ ಪವನ್ ರತ್ನಾಯಕೆ ಮುರಿದಿದ್ದಾರೆ. ಅದು ಸಹ 350+ ರನ್​ಗಳ ಚೇಸಿಂಗ್ ವೇಳೆ ಎಂಬುದು ವಿಶೇಷ.

ಇಷ್ಟು ದಿನ ರನ್ ಬೆನ್ನಟ್ಟುವ ಕರಗತ ಕಲೆ ಟೀಮ್ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗೆ ಮಾತ್ರ ಸಿದ್ದಿಸಿದೆ ಎಂದೇ ನಂಬಲಾಗಿತ್ತು. ಆದರೆ, ಈಗ ಈ ಇಬ್ಬರೂ ದಿಗ್ಗಜರ ಹೆಜ್ಜೆಯ ಗುರುತುಗಳನ್ನು ಅಳಿಸಿ ಹಾಕಿ ಅವರದ್ದೇ ಸಾಮ್ರಾಜ್ಯಕ್ಕೆ ಲಗ್ಗೆ ಇಟ್ಟಿದ್ದಾನೆ ಲಂಕಾದ ಈ 24 ವರ್ಷದ ಯುವ ದಾಂಡಿಗ.

ಏನಿದು ಅಪರೂಪದ ದಾಖಲೆ?

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 350 ಕ್ಕೂ ಹೆಚ್ಚು ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಇದೀಗ ಈ ದಾಖಲೆ ಪಟ್ಟಿಗೆ ಪವನ್ ರತ್ನಾಯಕೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಸಹ ಕೇವಲ ಇನಿಂಗ್ಸ್​ಗಳಲ್ಲೇ ಎಂಬುದೇ ಇಲ್ಲಿ ವಿಶೇಷ.

ಅಂದರೆ ಏಕದಿನ ಕ್ರಿಕೆಟ್​ನಲ್ಲಿ 350+ ಸ್ಕೋರ್ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ 3 ಶತಕ ಸಿಡಿಸಿ ಮಿಂಚಿದ್ದಾರೆ. ಆದರೆ ಈ ಸಾಧನೆ ಮಾಡಲು ಇವರಿಬ್ಬರು ತೆಗೆದುಕೊಂಡಿರುವುದು 8 ಮತ್ತು 11 ಇನಿಂಗ್ಸ್​ಗಳನ್ನು. ಆದರೆ ಪವನ್ ರತ್ನಾಯಕೆ ಈ ಸಾಧನೆಯನ್ನು ಕೇವಲ 4 ಇನಿಂಗ್ಸ್​ಗಳಲ್ಲೇ ಮಾಡಿ ಮುಗಿಸಿದ್ದಾರೆ.

  • ರೋಹಿತ್ ಶರ್ಮಾ: 350 ಕ್ಕೂ ಹೆಚ್ಚು ರನ್ ಚೇಸ್ ಮಾಡಿದಂತಹ 8 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿ, ಅದರಲ್ಲಿ 3 ಶತಕ ಸಿಡಿಸಿದ್ದಾರೆ.
  • ವಿರಾಟ್ ಕೊಹ್ಲಿ: 350+ ರನ್​ಗಳ ಗುರಿ ಬೆನ್ನಟ್ಟುವ ಪಂದ್ಯಗಳಲ್ಲಿ 11 ಬಾರಿ ಬ್ಯಾಟ್ ಬೀಸಿದ್ದ ವಿರಾಟ್ ಕೊಹ್ಲಿ, ಅದರಲ್ಲಿ 3 ಮ್ಯಾಚ್​ಗಳಲ್ಲಿ ಸೆಂಚುರಿ ಸಿಡಿಸಿದ್ದರು.
  •  ಪವನ್ ರತ್ನಾಯಕೆ: ಶ್ರೀಲಂಕಾದ ಯುವ ದಾಂಡಿಗ ಪವನ್​ ರತ್ನಾಯಕೆ 350+ ರನ್​ಗಳನ್ನು ಚೇಸ್ ಮಾಡಿದ ಕೇವಲ 4 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದು, ಈ ವೇಳೆ ಬರೋಬ್ಬರಿ 3 ಬಾರಿ ಸೆಂಚುರಿ ಸಿಡಿಸಿದ್ದಾರೆ.

ಈ ಮೂಲಕ 350+ ಏಕದಿನ ಪಂದ್ಯಗಳ ಚೇಸಿಂಗ್ ವೇಳೆ ಅತೀ ಕಡಿಮೆ ಇನಿಂಗ್ಸ್​ಗಳಲ್ಲಿ ಮೂರು ಶತಕ ಸಿಡಿಸಿದ ವಿಶ್ವ ದಾಖಲೆಯನ್ನು ಪವನ್​ ರತ್ನಾಯಕೆ ತಮ್ಮದಾಗಿಸಿಕೊಂಡಿದ್ದಾರೆ.

ಕೇವಲ 24ನೇ ವಯಸ್ಸಿನಲ್ಲೇ ಇಂತಹ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಪವನ್​ ರತ್ನಾಯಕೆ ಅವರನ್ನು ಸದ್ಯ ವಿಶ್ವ ಕ್ರಿಕೆಟ್​ನ ‘ಹೊಸ ಚೇಸ್ ಮಾಸ್ಟರ್’ ಎಂದು ಬಣ್ಣಿಸಲಾಗುತ್ತಿದೆ.

ಬೃಹತ್ ಮೊತ್ತದ, ಅತ್ಯಂತ ಒತ್ತಡದ ಪಂದ್ಯಗಳಲ್ಲೂ ಯಾವುದೇ ಆತಂಕವಿಲ್ಲದೆ ನಿರಾಯಾಸವಾಗಿ ಬ್ಯಾಟ್ ಬೀಸುವ ಅಪರೂಪದ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದಾರೆ. ಆ ಮೂಲಕ ದೀರ್ಘಕಾಲದ ನಂತರ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಹೊಸದೊಂದು ಗೆಲುವಿನ ಭರವಸೆಯನ್ನು ಹುಟ್ಟುಹಾಕಿದ್ದಾರೆ.

ಪವನ್ ಪವರ್​ಫುಲ್ ಸೆಂಚುರೀಸ್:

  • ಮೊದಲ ಶತಕ (ಜನವರಿ 2026): ಕೊಲಂಬೊದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿ ನಿರ್ಣಾಯಕ ಪಂದ್ಯದಲ್ಲಿ 121 ರನ್ ಸಿಡಿಸಿ ಶ್ರೀಲಂಕಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು.
  •  ಎರಡನೇ ಶತಕ (ಅಕ್ಟೋಬರ್ 22, 2026): ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 430 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಲಂಕಾ ಪರ ರತ್ನಾಯಕೆ ಕೇವಲ 106 ಎಸೆತಗಳಲ್ಲಿ 130 ರನ್ ಚಚ್ಚಿ ಇತಿಹಾಸ ಸೃಷ್ಟಿಸಿದರು.
  •  ಮೂರನೇ ಶತಕ (ಅಕ್ಟೋಬರ್ 29, 2026): ಇಂಗ್ಲೆಂಡ್ ನೀಡಿದ 387 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಕೇವಲ 77 ಎಸೆತಗಳಲ್ಲಿ 118 ರನ್ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು.

ಇದನ್ನೂ ಓದಿ: 6,6,6,6,6,6,6: ರಾಹುಲ್ ಸಿಡಿಲಬ್ಬರ, ಸ್ಫೋಟಕ ಅರ್ಧಶತಕ

ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವ ಕ್ರಿಕೆಟ್‌ನ ಘಟಾನುಘಟಿ ಬೌಲರ್‌ಗಳ ನಿದ್ದೆಗೆಡಿಸಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸಾರ್ವಕಾಲಿಕ ದಾಖಲೆಯ ಪಟ್ಟಿಗೆ ಪವನ್ ರತ್ನಾಯಕೆ ಲಗ್ಗೆ ಇಟ್ಟಿರುವುದು ಸಾಮಾನ್ಯ ಸಾಧನೆಯಲ್ಲ. ಕೇವಲ 24ನೇ ವಯಸ್ಸಿನಲ್ಲೇ ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧದ ಬೃಹತ್ ರನ್ ಚೇಸಿಂಗ್‌ಗಳಲ್ಲಿ ಅವರು ತೋರಿರುವ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ಕ್ರಿಕೆಟ್ ಜಗತ್ತಿಗೆ ಹೊಸದೊಂದು ದಿಕ್ಸೂಚಿಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಯುವ ಬ್ಯಾಟರ್ ಕಡೆಯಿಂದ ಇಂತಹ ಮತ್ತಷ್ಟು ದಾಖಲೆಗಳನ್ನು ನಿರೀಕ್ಷಿಸಬಹುದು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಸೌಜನ್ಯ ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಬೆಂಗಳೂರಿನಲ್ಲಿ ಸ್ಫೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆ
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಕೋರಮಂಗಲದಲ್ಲಿ ಬಿಎಂಟಿಸಿ ಬಸ್ ಅಗ್ನಿ ಅವಘಡ; ತಪ್ಪಿದ ಅನಾಹುತ!
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮುಗಿಯಿತು ಮದುವೆ ಸಂಭ್ರಮ, ಶುರು ಆಯ್ತು ಎವಿಕ್ಷನ್ ಭಯ: ವಿಡಿಯೋ
ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಸನಾಂಬೆ ದರ್ಶನೋತ್ಸವಕ್ಕೆ ಬೆಳ್ಳಂಬೆಳಿಗ್ಗೆಯೇ ಭಕ್ತಸಾಗರ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವೂ ಲೀಟರ್​​ಗೆ​​ 14 ರೂ.ಹೆಚ್ಚಳ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ಇಂದು ಈ ರಾಶಿಯವರು ಅತಿಯಾಗಿ ಯಾರಿಗೂ ಆಶ್ವಾಸನೆ ನೀಡಬೇಡಿ
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ನಿಯಮ ಉಲ್ಲಂಘಿಸಿದ್ದ ಎಂಟು ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳು ಬಂದ್
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!
ಕೇದಾರನಾಥದಲ್ಲಿ ಈ ಋತುವಿನ ಮೊದಲ ಹಿಮಪಾತ; ಭಕ್ತರ ಮೇಲೆ ಹಿಮದ ಮಳೆ!