RR vs MI IPL 2026: ರಾಜಸ್ಥಾನ್ ರಾಯಲ್ಸ್ಗೆ ಭರ್ಜರಿ ಜಯ
Rajasthan Royals vs Mumbai Indians, IPL 2026 Live Score Updates: ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಈವರೆಗೆ 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು 16 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನೊಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು. ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ (RR) ಭರ್ಜರಿ ಜಯ ಸಾಧಿಸಿದೆ. ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಳೆ ಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 11 ಓವರ್ಗಳಲ್ಲಿ ಬರೋಬ್ಬರಿ 150 ರನ್ ಕಲೆಹಾಕಿದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 11 ಓವರ್ಗಳಲ್ಲಿ 123 ರನ್ಗಳಿಸಿ 27 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಉಭಯ ತಂಡಗಳ ಮುಖಾಮುಖಿ:
ಐಪಿಎಲ್ನಲ್ಲಿ ಉಭಯ ತಂಡಗಳು ಈವರೆಗೆ 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು 16 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು 15 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನೊಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಅಲ್ಲಾ ಗಝನ್ಫನ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲದೀಪ್ ಸೇನ್.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.
LIVE NEWS & UPDATES
-
RR vs MI IPL 2026 Live Score: ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್
- ನಿಗದಿತ 11 ಓವರ್ಗಳ 150 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್
- 123 ರನ್ಗಳಿಸಿ 27 ರನ್ಗಳಿಂದ ಸೋಲೊಪ್ಪಿಕೊಂಡ ಮುಂಬೈ ಇಂಡಿಯನ್ಸ್
- ಸತತ ಮೂರನೇ ಪಂದ್ಯದಲ್ಲೂ ಗೆಲುವು ದಾಖಲಿಸಿದ ರಿಯಾನ್ ಪರಾಗ್ ಪಡೆ
ರಾಜಸ್ಥಾನ್ ರಾಯಲ್ಸ್– 150/3 (11 ಓವರ್)
ಮುಂಬೈ ಇಂಡಿಯನ್ಸ್– 123/9 (11 ಓವರ್)
-
RR vs MI IPL 2026 Live Score: 35 ರನ್ಗಳ ಅವಶ್ಯಕತೆ
ಕೊನೆಯ ಓವರ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 35 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ದೀಪಕ್ ಚಹರ್ ಹಾಗೂ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್.
10 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 116 ರನ್ ಕಲೆಹಾಕಿರುವ ಮುಂಬೈ ಇಂಡಿಯನ್ಸ್.
-
-
RR vs MI IPL 2026 Live Score: ಮುಂಬೈ ಇಂಡಿಯನ್ಸ್ 7ನೇ ವಿಕೆಟ್ ಪತನ
ನಾಂಡ್ರೆ ಬರ್ಗರ್ ಎಸೆದ 9ನೇ ಓವರ್ನ 5ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ನಮನ್ಧೀರ್ (25).
ಕೊನೆಯ 12 ಎಸೆತಗಳಲ್ಲಿ ಮುಂಬೈ ಇಂಡಿಯನ್ಸ್ಗೆ ಗೆಲ್ಲಲು 44 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ದೀಪಕ್ ಚಹರ್ ಹಾಗೂ ಶಾರ್ದೂಲ್ ಠಾಕೂರ್ ಬ್ಯಾಟಿಂಗ್.
-
RR vs MI IPL 2026 Live Score: 57 ರನ್ಗಳ ಅವಶ್ಯಕತೆ
- ಕೊನೆಯ 3 ಓವರ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 57 ರನ್ಗಳ ಅವಶ್ಯಕತೆ
- ಕ್ರೀಸ್ನಲ್ಲಿ ಶಾರ್ದೂಲ್ ಠಾಕೂರ್ ಹಾಗೂ ನಮನ್ಧೀರ್ ಬ್ಯಾಟಿಂಗ್.
- 8 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 64 ರನ್ ಕಲೆಹಾಕಿರುವ ಮುಂಬೈ ಇಂಡಿಯನ್ಸ್.
-
RR vs MI IPL 2026 Live Score: ಮುಂಬೈ ಇಂಡಿಯನ್ಸ್ 5ನೇ ವಿಕೆಟ್ ಪತನ
ರವಿ ಬಿಷ್ಣೋಯ್ ಎಸೆದ 5ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಹಾರ್ದಿಕ್ ಪಾಂಡ್ಯ (9)
ಕೊನೆಯ ಎಸೆತದಲ್ಲಿ ತಿಲಕ್ ವರ್ಮಾ (14) ಕೂಡ ಕ್ಯಾಚಿತ್ತು ನಿರ್ಗಮಿಸಿದರು.
5 ಓವರತ್ಗಳ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ಸ್ಕೋರ್ 45/5 ರನ್ಗಳು
-
-
RR vs MI IPL 2026 Live Score: ವೆಲ್ಕಂ ಬೌಂಡರಿ
ತುಷಾರ್ ದೇಶಪಾಂಡೆ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ತಿಲಕ್ ವರ್ಮಾ
3ನೇ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ನಿಂದ ಡೀಪ್ ಕವರ್ನತ್ತ ಮತ್ತೊಂದು ಫೋರ್.
4 ಓವರ್ಗಳಲ್ಲಿ 36 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್.
-
RR vs MI IPL 2026 Live Score: ರೋಹಿತ್ ಶರ್ಮಾ ಔಟ್
ಸಂದೀಪ್ ಶರ್ಮಾ ಎಸೆದ ಮೂರನೇ ಓವರ್ನ 3ನೇ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ರೋಹಿತ್ ಶರ್ಮಾ (5).
ಕ್ರೀಸ್ನಲ್ಲಿ ಹಾರ್ದಿಕ್ ಪಾಂಡ್ಯ – ತಿಲಕ್ ವರ್ಮಾ ಬ್ಯಾಟಿಂಗ್.
3 ಓವರ್ಗಳ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ಸ್ಕೋರ್ 25/3
-
RR vs MI IPL 2026 Live Score: ಮುಂಬೈ ಇಂಡಿಯನ್ಸ್ 2ನೇ ವಿಕೆಟ್ ಪತನ
ನಾಂಡ್ರೆ ಬರ್ಗರ್ ಎಸೆದ 2ನೇ ಓವರ್ನ ನಾಲ್ಕನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್ (6).
2 ಓವರ್ಗಳ ಮುಕ್ತಾಯದ ವೇಳೆಗೆ ಮುಂಬೈ ಇಂಡಿಯನ್ಸ್ ಸ್ಕೋರ್ 21/2
ಕ್ರೀಸ್ನಲ್ಲಿ ತಿಲಕ್ ವರ್ಮಾ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
-
RR vs MI IPL 2026 Live Score: ಮೊದಲ ಸಿಕ್ಸ್-ಪ್ರಥಮ ವಿಕೆಟ್
ಜೋಫ್ರಾ ಆರ್ಚರ್ ಎಸೆದ ಮೊದಲ ಓವರ್ನ ಐದನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸಿಕ್ಸ್ ಸಿಡಿಸಿದ ರಯಾನ್ ರಿಕೆಲ್ಟನ್.
ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ರಯಾನ್ ರಿಕೆಲ್ಟನ್ (8).
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಮೊದಲ ಯಶಸ್ಸು.
ಮೊದಲ ಓವರ್ನಲ್ಲಿ 10 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್.
-
RR vs MI IPL 2026 Live Score: ಮುಂಬೈ ಇಂಡಿಯನ್ಸ್ ಇನಿಂಗ್ಸ್ ಶುರು
- ಮುಂಬೈ ಇಂಡಿಯನ್ಸ್ ಆರಂಭಿಕರು- ರೋಹಿತ್ ಶರ್ಮಾ, ರಯಾನ್ ರಿಕೆಲ್ಟನ್
- ರಾಜಸ್ಥಾನ್ ರಾಯಲ್ಸ್ ಪರ ಮೊದಲ ಓವರ್- ಜೋಫ್ರಾ ಆರ್ಚರ್
- ಮುಂಬೈ ಇಂಡಿಯನ್ಸ್ಗೆ 11 ಓವರ್ಗಳಲ್ಲಿ 151 ರನ್ಗಳ ಗುರಿ
-
RR vs MI IPL 2026 Live Score: ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಅಂತ್ಯ
- ನಿಗದಿತ 11 ಓವರ್ಗಳಲ್ಲಿ 150 ರನ್ ಚಚ್ಚಿದ ರಾಜಸ್ಥಾನ್ ರಾಯಲ್ಸ್
- ರಾಜಸ್ಥಾನ್ ಪರ 32 ಎಸೆತಗಳಲ್ಲಿ 77 ರನ್ ಚಚ್ಚಿದ ಯಶಸ್ವಿ ಜೈಸ್ವಾಲ್
- ಮುಂಬೈ ಇಂಡಿಯನ್ಸ್ ತಂಡಕ್ಕೆ 11 ಓವರ್ಗಳಲ್ಲಿ 151 ರನ್ಗಳ ಗುರಿ
- ಮಳೆಯ ಕಾರಣ 11 ಓವರ್ಗಳಿಗೆ ಸೀಮಿತವಾಗಿರುವ ಪಂದ್ಯ
-
RR vs MI IPL 2026 Live Score: 10 ರನ್ ನೀಡಿದ ಬುಮ್ರಾ
- 10ನೇ ಓವರ್ನಲ್ಲಿ ಕೇವಲ 10 ರನ್ ನೀಡಿದ ಜಸ್ಪ್ರೀತ್ ಬುಮ್ರಾ
- ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್-ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್
- 10 ಓವರ್ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 132
- ಕೊನೆಯ ಓವರ್ ಬಾಕಿ (11 ಓವರ್ಗಳ ಪಂದ್ಯ)
-
RR vs MI IPL 2026 Live Score: ಭರ್ಜರಿ ಸಿಕ್ಸರ್-ಔಟ್
ಗಝನ್ಫರ್ ಎಸೆದ 9ನೇ ಓವರ್ನ 4ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಿಯಾನ್ ಪರಾಗ್.
5ನೇ ಎಸೆತದಲ್ಲಿ ರಿಯಾನ್ ಪರಾಗ್ (20) ಕ್ಯಾಚ್ ನೀಡಿ ಔಟ್.
9 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಸ್ಕೋರ್ 122/3
-
RR vs MI IPL 2026 Live Score: ಶತಕ ಪೂರೈಸಿದ ರಾಜಸ್ಥಾನ್ ರಾಯಲ್ಸ್
- ಹಾರ್ದಿಕ್ ಪಾಂಡ್ಯ ಎಸೆದ 8ನೇ ಓವರ್ನ 3ನೇ ಎಸೆತದಲ್ಲಿ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್
- ಫೋರ್ನೊಂದಿಗೆ ಶತಕ ಪೂರೈಸಿದ ರಾಜಸ್ಥಾನ್ ರಾಯಲ್ಸ್
- ಇದೇ ಬೌಂಡರಿಯೊಂದಿಗೆ 23 ಎಸೆತಗಳಲ್ಲಿ ಹಾಫ್ ಸೆಂಚುರಿ ಪೂರೈಸಿದ ಯಶಸ್ವಿ ಜೈಸ್ವಾಲ್
- 8 ಓವರ್ಗಳ ಮುಕ್ತಾಯದ ವೇಳೆಗೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 110/2
-
RR vs MI IPL 2026 Live Score: ರಾಜಸ್ಥಾನ್ ರಾಯಲ್ಸ್ 2ನೇ ವಿಕೆಟ್ ಪತನ
ಗಝನ್ಫರ್ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಆಗಿ ಹೊರ ನಡೆದ ಧ್ರುವ್ ಜುರೆಲ್ (2).
ಕ್ರೀಸ್ನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ರಿಯಾನ್ ಪರಾಗ್ ಬ್ಯಾಟಿಂಗ್.
6 ಓವರ್ಗಳಲ್ಲಿ 89 ರನ್ ಕಲೆಹಾಕಿದ ರಾಜಸ್ಥಾನ್ ರಾಯಲ್ಸ್.
-
RR vs MI IPL 2026 Live Score: ಮೊದಲ ವಿಕೆಟ್ ಪತನ
ಶಾರ್ದೂಲ್ ಠಾಕೂರ್ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲೇ ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ
5ನೇ ಎಸೆತದಲ್ಲೇ ವೈಭವ್ ಬ್ಯಾಟ್ನಿಂದ ಮತ್ತೊಂದು ಸಿಕ್ಸ್.
ಕೊನೆಯ ಎಸೆತದಲ್ಲಿ ವೈಭವ್ ಸೂರ್ಯವಂಶಿ ಔಟ್.
ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಹೊರ ನಡೆದ ವೈಭವ್ ಸೂರ್ಯವಂಶಿ.
14 ಎಸೆತಗಳಲ್ಲಿ 39 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದ ಯುವ ಎಡಗೈ ದಾಂಡಿಗ.
5 ಓವರ್ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ 80/1
-
RR vs MI IPL 2026 Live Score: ಕೇವಲ 4 ರನ್
4ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ನೀಡಿದ್ದು ಕೇವಲ 4 ರನ್ ಮಾತ್ರ.
ರಾಜಸ್ಥಾನ್ ರಾಯಲ್ಸ್ ತಂಡದ ಸ್ಕೋರ್ 4 ಓವರ್ಗಳಲ್ಲಿ 62 ರನ್ಗಳು.
ಕ್ರೀಸ್ನಲ್ಲಿ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಬ್ಯಾಟಿಂಗ್.
-
RR vs MI IPL 2026 Live Score: ಜೈಹೋ ಜೈಸ್ವಾಲ್
ಟ್ರೆಂಟ್ ಬೌಲ್ಟ್ ಎಸೆದ 3ನೇ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಸಿಕ್ಸ್ ಬಾರಿಸಿದ ಯಶಸ್ವಿ ಜೈಸ್ವಾಲ್.
ಎರಡನೇ ಎಸೆತದಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಮತ್ತೊಂದು ಸಿಕ್ಸರ್.
ನಾಲ್ಕನೇ ಎಸೆತದಲ್ಲಿ ಸಿಕ್ಸ್ ಬಾರಿಸಿದ ವೈಭವ್ ಸೂರ್ಯವಂಶಿ.
16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಜಸ್ಥಾನ್ ರಾಯಲ್ಸ್.
3 ಓವರ್ಗಳ ಮುಕ್ತಾಯಕ್ಕೆ ರಾಜಸ್ಥಾನ್ ರಾಯಲ್ಸ್ ಸ್ಕೋರ್ 58 ರನ್ಗಳು.
-
RR vs MI IPL 2026 Live Score: ಬೇಬಿ ಬಾಸ್ ಸಿಕ್ಸರ್
ಜಸ್ಪ್ರೀತ್ ಬುಮ್ರಾ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲೇ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ.
ಮೂರನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಬಾರಿಸಿದ ವೈಭವ್.
2 ಓವರ್ಗಳಲ್ಲಿ 36 ರನ್ ಚಚ್ಚಿದ ರಾಜಸ್ಥಾನ್ ರಾಯಲ್ಸ್.
-
RR vs MI IPL 2026 Live Score: ಸಿಡಿಲಬ್ಬರದ ಶುರು
- ದೀಪಕ್ ಚಹರ್ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್.
- ಎರಡನೇ ಬಾಲ್ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಜೈಸ್ವಾಲ್.
- ಮೂರನೇ ಬಾಲ್ನಲ್ಲಿ ಜೈಸ್ವಾಲ್ ಬ್ಯಾಟ್ನಿಂದ ಆಫ್ ಸೈಡ್ನತ್ತ ಮತ್ತೊಂದು ಫೋರ್.
- ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಇಲ್ಲ.
- ಐದನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಯಶಸ್ವಿ ಜೈಸ್ವಾಲ್.
- ಪ್ರಥಮ ಓವರ್ನ ಕೊನೆಯ ಎಸೆತದಲ್ಲಿ ಮತ್ತೊಂದು ಫೋರ್.
ದೀಪಕ್ ಚಹರ್ ಎಸೆದ ಮೊದಲ ಓವರ್ನಲ್ಲಿ ಬರೋಬ್ಬರಿ 22 ರನ್ ಚಚ್ಚಿದ ಯಶಸ್ವಿ ಜೈಸ್ವಾಲ್.
-
RR vs MI IPL 2026 Live Score: ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್ ಶುರು
- ರಾಜಸ್ಥಾನ್ ರಾಯಲ್ಸ್ ಆರಂಭಿಕರು- ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್
- ಮುಂಬೈ ಇಂಡಿಯನ್ಸ್ ಪರ ಮೊದಲ ಓವರ್- ದೀಪಕ್ ಚಹರ್
- 11 ಓವರ್ಗಳ ಪಂದ್ಯ
-
RR vs MI IPL 2026 Live Score: ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11
ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
-
RR vs MI IPL 2026 Live Score: ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಅಲ್ಲಾ ಗಝನ್ಫನ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
-
RR vs MI IPL 2026 Live Score: ಟಾಸ್ ಗೆದ್ದ ಮುಂಬೈ ಇಂಡಿಯನ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ದುಕೊಂಡಿದ್ದಾರೆ.
-
RR vs MI IPL 2026 Live Score: 11 ಓವರ್ಗಳ ಪಂದ್ಯ
- 11 ಓವರ್ಗಳ ಪಂದ್ಯಕ್ಕೆ ಅಂಪೈರ್ಸ್ ಗ್ರೀನ್ ಸಿಗ್ನಲ್
- ಉಭಯ ತಂಡಗಳಿಗೆ ತಲಾ 11 ಓವರ್ಗಳು
- 3.2 ಓವರ್ ಪವರ್ಪ್ಲೇ
- 10.10 ಕ್ಕೆ ಪಂದ್ಯ ಶುರು
-
RR vs MI IPL 2026 Live Score: ಕಟ್ ಆಫ್ ಟೈಮ್
- 10.56 ಕಟ್ ಆಫ್ ಟೈಮ್
- ಈ ವೇಳೆ ಮಳೆ ನಿಂತರೆ 5 ಓವರ್ಗಳ ಪಂದ್ಯ
- ಉಭಯ ತಂಡಗಳು 5 ಓವರ್ ಆಡಿದ್ರೆ ಮಾತ್ರ ಫಲಿತಾಂಶ ನಿರ್ಧಾರ
- 5 ಓವರ್ಗಳ ಮ್ಯಾಚ್ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಪಂದ್ಯ ರದ್ದು
-
RR vs MI IPL 2026 Live Score: ಗುಡುಗು ಸಹಿತ ಭಾರೀ ಮಳೆ
ಗುವಾಹಟಿಯಲ್ಲಿ ಗುಡುಗು ಸಹಿತ ಭಾರೀ ಮಳೆ.
Not a great sign in Guwahati. pic.twitter.com/qhPQXOjO7s
— Mufaddal Vohra (@mufaddal_vohra) April 7, 2026
-
RR vs MI IPL 2026 Live Score: ಮತ್ತೆ ಮಳೆ ಶುರು
ಕೆಲ ಹೊತ್ತಿನವರೆಗೆ ನಿಂತಿದ್ದ ಮಳೆ ಇದೀಗ ಮತ್ತೆ ಶುರುವಾಗಿದೆ. ಹೀಗಾಗಿ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂ ಮೈದಾನವನ್ನು ಮತ್ತೆ ಕವರ್ಗಳಿಂದ ಮುಚ್ಚಲಾಗಿದೆ.
-
RR vs MI IPL 2026 Live Score: ಗುಡ್ ನ್ಯೂಸ್
ಗುವಾಹಟಿಯಲ್ಲಿ ಮಳೆ ನಿಂತಿದ್ದು, ಮೈದಾನದ ಸಿಬ್ಬಂದಿ ಕವರ್‌ಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಕೆಲ ನಿಮಿಷಗಳ ಬಳಿಕ ಪಂದ್ಯ ಶುರುವಾಗುವ ಸಾಧ್ಯತೆಯಿದೆ.
-
RR vs MI IPL 2026 Live Score: ಪಂದ್ಯಕ್ಕೆ ಮಳೆ ಅಡ್ಡಿ
🚨 Update 🚨
Toss is delayed in Guwahati.
Next update to follow once the rain stops.#TATAIPL | #KhelBindaas | #RRvMI pic.twitter.com/cheEGdXSEz
— IndianPremierLeague (@IPL) April 7, 2026
ಗುವಾಹಟಿಯಲ್ಲಿ ಸಂಜೆಯಿಂದ ಮಳೆಯಾಗುತ್ತಿದ್ದು, ಇದೀಗ ಬರ್ಸಪರಾ ಸ್ಟೇಡಿಯಂ ಸುತ್ತ ಮುತ್ತ ತುಂತು ಮಳೆ ಸುರಿಯುತ್ತಿದೆ. ಹೀಗಾಗಿ ಪಂದ್ಯದ ಟಾಸ್ ಪ್ರಕ್ರಿಯೆಯು ವಿಳಂಬವಾಗಿದೆ. ಅಂದರೆ ಮಳೆ ನಿಲ್ಲುವ ಸೂಚನೆ ಸಿಕ್ಕ ಬೆನ್ನಲ್ಲೇ ಟಾಸ್ ಪ್ರಕ್ರಿಯೆ ನಡೆಯಲಿದೆ.
-
RR vs MI IPL 2026 Live Score: ಮಳೆಯ ಕಾರಣ ಟಾಸ್ ವಿಳಂಬ
ಗುವಾಹಟಿಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಯಿಂದಾಗಿ ಮೈದಾನವನ್ನು ಕವರ್ ಮಾಡಲಾಗಿದೆ. ಇದೇ ಕಾರಣದಿಂದಾಗಿ ಟಾಸ್ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
-
RR vs MI IPL 2026 Live Score: ಇದೇ ಮೊದಲ ಬಾರಿಗೆ ಮುಖಾಮುಖಿ
A contest we’ve all been waiting for 🤩
Vaibhav Sooryavanshi 🩷 🆚 Jasprit Bumrah 💙
Who will win the battle tonight? 🤔#TATAIPL | #KhelBindaas | #RRvMI | @rajasthanroyals | @mipaltan pic.twitter.com/kOHUk3RFhX
— IndianPremierLeague (@IPL) April 7, 2026
ಈ ಪಂದ್ಯದ ಮೂಲಕ ಇದೇ ಮೊದಲ ಬಾರಿಗೆ ವೈಭವ್ ಸೂರ್ಯವಂಶಿ ಹಾಗೂ ಜಸ್ಪ್ರೀತ್ ಬುಮ್ರಾ ಮುಖಾಮುಖಿಯಾಗಲಿರುವುದು ವಿಶೇಷ.
-
RR vs MI IPL 2026 Live Score: ರಾಜಸ್ಥಾನ್ ರಾಯಲ್ಸ್ ತಂಡ
ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್, ಕುಲದೀಪ್ ಸೇನ್.
-
RR vs MI IPL 2026 Live Score: ಮುಂಬೈ ಇಂಡಿಯನ್ಸ್ ತಂಡ
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕಲ್ಟನ್, ರಾಬಿನ್ ಮಿಂಝ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಗಫನ್ಝರ್, ಅಶ್ವನಿ ಕುಮಾರ್, ದೀಪಕ್ ಚಹರ್, ವಿಲ್ ಜ್ಯಾಕ್ಸ್, ಶೆರ್ಫೇನ್ ರದರ್ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೆಕರ್, ಮಯಾಂಕ್ ರಾವತ್.
-
RR vs MI IPL 2026 Live Score: ಉಭಯ ತಂಡಗಳ ಮುಖಾಮುಖಿ
Some undeniable classics over the years 🩷💙
Tell us your favourite memory from an #RRvMI clash 👇#TATAIPL | #KhelBindaas | @rajasthanroyals | @mipaltan pic.twitter.com/BEtQUsNEYI
— IndianPremierLeague (@IPL) April 7, 2026
ಐಪಿಎಲ್ನಲ್ಲಿ ಉಭಯ ತಂಡಗಳು ಈವರೆಗೆ 31 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು 16 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು 14 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನೊಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿತ್ತು.
-
RR vs MI IPL 2026 Live Score: ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್
- ಐಪಿಎಲ್ನ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿ.
- ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ
- ಬರ್ಸಪರಾ ಸ್ಟೇಡಿಯಂ ರಾಜಸ್ಥಾನ್ ರಾಯಲ್ಸ್ ತಂಡದ ತವರು ಮೈದಾನ
- ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದು ಬೀಗಿದ್ದ ರಾಜಸ್ಥಾನ್ ರಾಯಲ್ಸ್
- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತಿದ್ದ ಮುಂಬೈ ಇಂಡಿಯನ್ಸ್
Published On - Apr 07,2026 6:01 PM




