GT vs RR, IPL 2025: ಟೇಬಲ್ ಟಾಪರ್ ಆದ ಗಿಲ್ ಪಡೆ: ಪೋಸ್ಟ್ ಮ್ಯಾಚ್ನಲ್ಲಿ ಶುಭ್ಮನ್ ಆಡಿದ ಮಾತುಗಳೇನು?
Shubman Gill Post Match Presentation: ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ ಅವರ ಅರ್ಧಶತಕದ ನಂತರ ಪ್ರಸಿದ್ಧ್ ಕೃಷ್ಣ ಮತ್ತು ಇತರ ಬೌಲರ್‌ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ಅನ್ನು 58 ರನ್‌ಗಳಿಂದ ಸೋಲಿಸಿತು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಶುಭ್ಮನ್ ಗಿಲ್ ಕೆಲ ವಿಚಾರ ಹಂಚಿಕೊಂಡಿದ್ದಾರೆ.

ಬೆಂಗಳೂರು (ಏ. 10): ಬುಧವಾರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಗೆಲುವಿನ ನಂತರ ಗುಜರಾತ್ ಟೈಟಾನ್ಸ್ (Gujarat Titans vs Rajasthan Royals) ತಂಡದ ನಾಯಕ ಶುಭ್ಮನ್ ಗಿಲ್ ತಮ್ಮ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ (82) ಅರ್ಧಶತಕ ಮತ್ತು ಪ್ರಸಿದ್ಧ್ ಕೃಷ್ಣ (3-24) ಮತ್ತು ಇತರ ಬೌಲರ್‌ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ಅನ್ನು 58 ರನ್‌ಗಳಿಂದ ಸೋಲಿಸಿ ಸತತ ನಾಲ್ಕನೇ ಗೆಲುವು ದಾಖಲಿಸಿತು.
ಪಂದ್ಯದ ನಂತರ ಶುಭ್ಮನ್ ಗಿಲ್ ಹೇಳಿದ್ದೇನು?
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಶುಭ್ಮನ್ ಗಿಲ್, ‘ಮೊದಲನೆಯದಾಗಿ ನಾವು ಉತ್ತಮ ಸ್ಕೋರ್ ಗಳಿಸಿದ್ದೇವೆ. ಜೋಸ್ ಬಟ್ಲರ್ ಮತ್ತು ಸಾಯಿ ಸುದರ್ಶನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ನಂತರ ನಮ್ಮ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಕೂಡ ಮಾಡಿದರು. ಎಲ್ಲರೂ ಇದಕ್ಕೆ ಕೊಡುಗೆ ಸಲ್ಲಿಸಿದ್ದಾರೆ, ಇದು ಒಳ್ಳೆಯ ತಂಡದ ಸಂಕೇತ ಮತ್ತು ಇಂದು ಕೂಡ ನಾವು ಅದನ್ನೇ ಮುಂದುವರೆಸಿದ್ದೇವೆ’ ಎಂದು ಹೇಳಿದ್ದಾರೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಸಂಜು ಸ್ಯಾಮ್ಸನ್ ಹೇಳಿದ್ದೇನು?
‘ಬೌಲಿಂಗ್‌ನಲ್ಲಿ ನಾವು ಸುಮಾರು 15-20 ರನ್‌ಗಳನ್ನು ಹೆಚ್ಚು ನೀಡಿದೆವು. ಪಂದ್ಯದಲ್ಲಿ ನಾವು ಆವೇಗವನ್ನು ಉಳಿಸಿಕೊಳ್ಳಲು ಬಯಸಿದಾಗಲೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡೆವು, ನಾನು ಮತ್ತು ಹೆಟ್ಮೆಯರ್ ಬ್ಯಾಟಿಂಗ್ ಮಾಡುವಾಗ ಪಂದ್ಯ ನಮ್ಮ ಕೈಯಲ್ಲೇ ಇತ್ತು. ಆದರೆ ನನ್ನ ವಿಕೆಟ್ ಆಟವನ್ನು ಬದಲಾಯಿಸಿತು. ಜೋಫ್ರಾ ಬೌಲಿಂಗ್ ಮಾಡಿದ ರೀತಿ ಮತ್ತು ಗಿಲ್ ವಿಕೆಟ್ ಪಡೆದ ರೀತಿ ಸ್ವಲ್ಪ ಉತ್ತಮವಾಗಿತ್ತು. ಆದರೆ ನಾವು ಡೆತ್ ಬೌಲಿಂಗ್‌ನಲ್ಲಿ ಎಡವಿದೆವು. ನಾಳೆಯ (ಇಂದು) ಮೀಟಿಂಗ್ನಲ್ಲಿ ಇದರ ಬಗ್ಗೆ ಚರ್ಚಿಸುತ್ತೇವೆ ಮತ್ತು ಉತ್ತಮವಾಗಿ ಹಿಂತಿರುಗುತ್ತೇವೆ. ನೀವು ಪಂದ್ಯಗಳನ್ನು ಸೋತಾಗ ನಾವು ಮೊದಲು ಚೇಸ್ ಮಾಡಬೇಕೇ ಅಥವಾ ಬ್ಯಾಟಿಂಗ್ ಮಾಡಬೇಕೇ ಎಂದು ನಾವು ಭಾವಿಸುತ್ತೇವೆ, ನಾವು ಈ ಪರಿಸ್ಥಿತಿಗಳನ್ನು ನಿರೀಕ್ಷಿಸುತ್ತಿದ್ದೆವು, ಇದು ನಿಜವಾಗಿಯೂ ಉತ್ತಮ ವಿಕೆಟ್’ ಎಂದು ಹೇಳಿದ್ದಾರೆ.
RCB vs DC, IPL 2025: ಐಪಿಎಲ್ನಲ್ಲಿಂದು ಆರ್ಸಿಬಿ ಪಂದ್ಯ: ಬೆಂಗಳೂರಲ್ಲಿ ರಜತ್ ಪಡೆ ಗೆದ್ದರೆ ಏನೆಲ್ಲ ಆಗಲಿದೆ ನೋಡಿ
ಪಂದ್ಯ ಹೇಗಿತ್ತು?
ಫಾರ್ಮ್‌ನಲ್ಲಿರುವ ಸಾಯಿ ಸುದರ್ಶನ್ ಅವರ ಅರ್ಧಶತಕದ ನಂತರ ಪ್ರಸಿದ್ಧ್ ಕೃಷ್ಣ ಮತ್ತು ಇತರ ಬೌಲರ್‌ಗಳ ಅದ್ಭುತ ಪ್ರದರ್ಶನದ ನೆರವಿನಿಂದ ಗುಜರಾತ್ ಟೈಟಾನ್ಸ್ ಈ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 58 ರನ್‌ಗಳಿಂದ ಸೋಲಿಸಿತು. ಸಾಯಿ ಸುದರ್ಶನ್ ಅವರ 53 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ಆರು ವಿಕೆಟ್‌ಗಳಿಗೆ 217 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದು ಸಾಯಿ ಸುದರ್ಶನ್ ಅವರ ಈ ಋತುವಿನ ಅತ್ಯುತ್ತಮ ಸ್ಕೋರ್ ಮತ್ತು ಅವರ ಮೂರನೇ ಅರ್ಧಶತಕವಾಗಿದೆ.
ಈ ಗುರಿಯನ್ನು ಬೆನ್ನಟ್ಟಲು ಬಂದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳು ಕಳಪೆ ಪ್ರದರ್ಶನದ ನೀಡಿದರು. ಶಿಮ್ರಾನ್ ಹೆಟ್ಮೆಯರ್ (52) ಅರ್ಧಶತಕದ ಹೊರತಾಗಿಯೂ, ತಂಡವು 19.2 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಸಂಜು ಸ್ಯಾಮ್ಸನ್ (41) ಮತ್ತು ರಿಯಾನ್ ಪರಾಗ್ (26) ಸಾಧಾರಾಣ ಪ್ರದರ್ಶನ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ