AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Suryakumar Yadav: ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದು ಕಾಲೆಳೆದ ಸೂರ್ಯಕುಮಾರ್ ಯಾದವ್

Suryakumar Yadav: ಈ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಬಿಸಿಸಿಐ ಪ್ರಸ್ತುತ ಪಡಿಸುವ ವಿಶೇಷ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು.

Suryakumar Yadav: ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದು ಕಾಲೆಳೆದ ಸೂರ್ಯಕುಮಾರ್ ಯಾದವ್
Yuzvendra Chahal-Suryakumar Yadav
TV9 Web
| Edited By: |

Updated on: Jan 30, 2023 | 5:01 PM

Share

India vs New Zealand: ಲಕ್ನೋನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 8 ವಿಕೆಟ್ ನಷ್ಟಕ್ಕೆ 99 ರನ್​ ಕಲೆಹಾಕಿತ್ತು. ನೂರು ರನ್​ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಗೆದ್ದಿರುವುದು ಕೊನೆಯ ಓವರ್​ನಲ್ಲಿ. ಅದು ಕೂಡ 20ನೇ ಓವರ್​ನ 5ನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಫೋರ್​ನಿಂದ ಎಂಬುದು ವಿಶೇಷ. ಸ್ಪಿನ್ ಬೌಲರ್​ಗಳಿಗೆ ಸಹಕಾರಿಯಾಗಿದ್ದ ಈ ಪಿಚ್​ನಲ್ಲಿ ರನ್​ಗಳಿಸಲು ಉಭಯ ತಂಡಗಳ ಬ್ಯಾಟರ್​ಗಳು ಪರದಾಡಿದರು. ಇದಾಗ್ಯೂ 31 ಎಸೆತಗಳಲ್ಲಿ ಅಜೇಯ 26 ರನ್​ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ರೋಚಕ ಜಯ ತಂದುಕೊಟ್ಟಿದ್ದರು.

ಈ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್, ಯುಜ್ವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಬಿಸಿಸಿಐ ಪ್ರಸ್ತುತ ಪಡಿಸುವ ವಿಶೇಷ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆ ಚಹಾಲ್ ಹಾಗೂ ಸೂರ್ಯಕುಮಾರ್ ಅವರನ್ನು ಕುಲ್ದೀಪ್ ಯಾದವ್ ಸಂದರ್ಶಿಸಿದ್ದರು.

ಇದನ್ನೂ ಓದಿ
Image
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
Image
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Image
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
Image
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ವಿಶೇಷ ಎಂದರೆ ಈ ಪಂದ್ಯದಲ್ಲಿ 1 ವಿಕೆಟ್ ಪಡೆಯುವ ಮೂಲಕ ಯುಜ್ವೇಂದ್ರ ಚಹಾಲ್ ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಚಹಾಲ್, ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದಾಗ ಸಂತೋಷವಾಗುತ್ತದೆ ಎಂದರು.

ಇದನ್ನೂ ಓದಿ: ICC T20 Rankings: ಐಸಿಸಿ ರ‍್ಯಾಂಕಿಂಗ್​ನಲ್ಲೂ ಸರ್ವಶ್ರೇಷ್ಠ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಆ ಬಳಿಕ ತಮ್ಮ ಬ್ಯಾಟಿಂಗ್ ಬಗ್ಗೆ ಸೂರ್ಯಕುಮಾರ್ ಅವರನ್ನು ಪ್ರಶ್ನಿಸಲಾಯಿತು. ಇದೇ ವೇಳೆ ಜೊತೆಗೂಡಿದ ಚಹಾಲ್, ನಾನು ನಿಮಗೆ 360 ಡಿಗ್ರಿ ಬ್ಯಾಟಿಂಗ್ ಕಲಿಸಿದ್ದೇನೆ. ಆದರೆ ಈ ಪಿಚ್​ನಲ್ಲಿ ನನ್ನ ಬ್ಯಾಟಿಂಗ್‌ ಸಲಹೆಯಿಂದ ನೀವು ಬಹಳಷ್ಟು ಚೆನ್ನಾಗಿ ಆಡಿದ್ದೀರಿ ಎಂದು ಕಿಚಾಯಿಸಿದರು.

ಈ ವೇಳೆ ಮಾತು ಮುಂದುವರೆಸಿದ ಸೂರ್ಯಕುಮಾರ್ ಯಾದವ್, ಹೌದು, ನೀವು ಕಳೆದ ಟಿ20 ಸರಣಿಯಲ್ಲಿ ನನಗೆ ಕಲಿಸಿದಂತೆ, ನಾನು ಇಂದು ಅದೇ ರೀತಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದೆ. ಚಹಾಲ್ ನನ್ನ ಬ್ಯಾಟಿಂಗ್ ಕೋಚ್ ಎಂದು ಟ್ರೋಲ್ ಮಾಡಿದರು. ಇದೀಗ ಟೀಮ್ ಇಂಡಿಯಾ ಆಟಗಾರರು ಪರಸ್ಪರ ಕಾಲೆಳೆಯುತ್ತಿರುವ ಫನ್ನಿ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

Follow Us
ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು
ಕ್ಷಮೆ ಕೇಳಿದ ಬಳಿಕವೂ ಚೇತನ್ ವಿರುದ್ಧ ಹರಿಹಾಯ್ದ ಸಾರಾ ಗೋವಿಂದು
ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ
ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ರಾಜ್​​ಕುಮಾರ್ ಸಮಾಧಿ ಬಗ್ಗೆ ಪ್ರಶ್ನೆ, ವಿತಂಡ ವಾದ ಮುಂದುವರೆಸಿದ ಚೇತನ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ, SSLC ಫಲಿತಾಂಶ ಏರಿಕೆ ಆಗಿದ್ಹೇಗೆ? ವಿಶ್ವನಾಥ್
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು
ಉಕ್ರೇನ್ ಮೇಲೆ ಮತ್ತೆ ರಷ್ಯಾದಿಂದ ಡ್ರೋನ್ ದಾಳಿ; ನಾಲ್ವರು ಸಾವು