AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಟಿ20 ವಿಶ್ವಕಪ್ ಭಾರತ ತಂಡದ ವೇಳಾಪಟ್ಟಿ ಪ್ರಕಟ

T20 World Cup 2026 Schedule: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ 20 ತಂಡಗಳನ್ನು ನಾಲ್ಕು ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಗ್ರೂಪ್-1 ರಲ್ಲಿ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ವೇಳಾಪಟ್ಟಿ ಈ ಕೆಳಗಿನಂತಿದೆ..

T20 World Cup 2026: ಟಿ20 ವಿಶ್ವಕಪ್ ಭಾರತ ತಂಡದ ವೇಳಾಪಟ್ಟಿ ಪ್ರಕಟ
T20 World Cup 2026
ಝಾಹಿರ್ ಯೂಸುಫ್
|

Updated on:Nov 25, 2025 | 8:49 PM

Share

ಬಹುನಿರೀಕ್ಷಿತ ಟಿ20 ವಿಶ್ವಕಪ್ (T20 World Cup 2026) ಫೆಬ್ರವರಿ 7 ರಿಂದ ಶುರುವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು 4 ಗ್ರೂಪ್​​ಗಳಾಗಿ ವಿಂಗಡಿಸಲಾಗಿದೆ. ಗ್ರೂಪ್-1 ರಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕಾಣಿಸಿಕೊಂಡಿದ್ದು, ಹೀಗಾಗಿ ಮೊದಲ ಸುತ್ತಿನಲ್ಲೇ ಬದ್ಧ ವೈರಿಗಳ ಮುಖಾಮುಖಿಯನ್ನು ವೀಕ್ಷಿಸಬಹುದು.

ಪಾಕಿಸ್ತಾನ್ ಅಲ್ಲದೆ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲಿ ಯುಎಸ್​ಎ, ನಮೀಬಿಯಾ ಮತ್ತು ನೆದರ್​ಲೆಂಡ್ಸ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳ ವೇಳಾಪಟ್ಟಿ ಈ ಕೆಳಗಿನಂತಿದೆ…

ಟಿ20 ವಿಶ್ವಕಪ್ 2026 ಭಾರತದ ವೇಳಾಪಟ್ಟಿ:

  1. ಫೆಬ್ರವರಿ 7: ಭಾರತ vs ಯುಎಸ್​​ಎ-  (ಮುಂಬೈ)
  2. ಫೆಬ್ರವರಿ 12: ಭಾರತ vs  ನಮೀಬಿಯಾ- (ದೆಹಲಿ)
  3. ಫೆಬ್ರವರಿ 15: ಭಾರತ vs ಪಾಕಿಸ್ತಾನ್-  (ಕೊಲಂಬೊ)
  4. ಫೆಬ್ರವರಿ 18: ಭಾರತ vs ನೆದರ್​ಲೆಂಡ್ಸ್-​​ (ಅಹಮದಾಬಾದ್)

ಈ ನಾಲ್ಕು ಪಂದ್ಯಗಳ ಬಳಿಕ ಟೀಮ್ ಇಂಡಿಯಾ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿದೆ. ಅಂದರೆ 4 ಗ್ರೂಪ್​ಗಳ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯಲಿದೆ. ಅದರಂತೆ ಮೊದಲ ಸುತ್ತಿನ ಬಳಿಕ ಸೂಪರ್-8 ಹಂತದ ಮುಖಾಮುಖಿ ಶುರುವಾಗಲಿದೆ. ಸೂಪರ್-8 ಅಂಕ ಪಟ್ಟಿಯಲ್ಲಿ ಟಾಪ್-4 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್​​ಗೆ ಅರ್ಹತೆ ಪಡೆಯಲಿದೆ.

ಸೆಮಿಫೈನಲ್ ಪಂದ್ಯ ನಡೆಯುವುದು ಎಲ್ಲಿ?

ಸೆಮಿಫೈನಲ್ ಪಂದ್ಯಗಳಿಗೆ ಮುಂಬೈ ಮತ್ತು ಕೊಲ್ಕತ್ತಾ ನಗರಗಳನ್ನು ಆಯ್ಕೆ ಮಾಡಲಾಗಿದೆ. ಒಂದು ವೇಳೆ ಪಾಕಿಸ್ತಾನ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದರೆ ಆ ಪಂದ್ಯವನ್ನು ಕೊಲಂಬೊದಲ್ಲಿ ಆಡಲಾಗುತ್ತದೆ. ಇದರಿಂದ ಕೊಲ್ಕತ್ತಾದ ಸೆಮಿಫೈನಲ್ ಆತಿಥ್ಯ ಕೈ ತಪ್ಪಬಹುದು.

ಫೈನಲ್ ಮ್ಯಾಚ್ ಯಾವಾಗ?

ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿದೆ. ಅತ್ತ ಪಾಕಿಸ್ತಾನ್ ತಂಡವು ಫೈನಲ್​ಗೇರಿದರೆ ಅಂತಿಮ ಹಣಾಹಣಿ ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯ ಮತ್ತೊಂದು ವಿಶ್ವ ದಾಖಲೆಯನ್ನ ಸರಿಗಟ್ಟಿದ ಬಾಬರ್ ಆಝಂ

ಟಿ20 ವಿಶ್ವಕಪ್​ನ 4 ಗ್ರೂಪ್​ಗಳು:

  • ಗ್ರೂಪ್- 1
  • ಭಾರತ
  • ಪಾಕಿಸ್ತಾನ್
  • ಯುಎಸ್​ಎ
  • ನಮೀಬಿಯಾ
  • ನೆದರ್​ಲೆಂಡ್ಸ್

___________________

  • ಗ್ರೂಪ್-2
  • ಆಸ್ಟ್ರೇಲಿಯಾ
  • ಶ್ರೀಲಂಕಾ
  • ಝಿಂಬಾಬ್ವೆ
  • ಐರ್ಲೆಂಡ್
  • ಒಮಾನ್

___________________

  • ಗ್ರೂಪ್-3
  • ಇಂಗ್ಲೆಂಡ್
  • ವೆಸ್ಟ್ ಇಂಡೀಸ್
  • ಇಟಲಿ
  • ಬಾಂಗ್ಲಾದೇಶ್
  • ನೇಪಾಳ

___________________

  • ಗ್ರೂಪ್-4
  • ಸೌತ್ ಆಫ್ರಿಕಾ
  • ನ್ಯೂಝಿಲೆಂಡ್
  • ಅಫ್ಘಾನಿಸ್ತಾನ್
  • ಯುಎಇ
  • ಕೆನಡಾ

___________________

Published On - 10:31 am, Tue, 25 November 25

Follow Us
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್, ಡಿಸೇಲ್ ಏರಿಕೆ ಭೀತಿ! ಪೆಟ್ರೋಲ್ ಬಂಕ್​ಗಳಿಗೆ ಮುಗಿಬಿದ್ದ ಜನ
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಅಳಿಯನ ಮನೆಗೇ ಕನ್ನ ಹಾಕಿ ಸಿಕ್ಕಿಬಿದ್ದ ಅತ್ತೆ: ಕದ್ದ ಬಂಗಾರ ಎಷ್ಟು ಗೊತ್ತಾ?
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಇಬ್ಬರು ಅಧಿಕಾರಿಗಳ ತಲೆಂಡ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಪಶ್ಚಿಮ ಬಂಗಾಳದ 15 ಬೂತ್​ಗಳಲ್ಲಿ ಮರು ಮತದಾನ: ಮತದಾರರ ಜೋಶ್​​ ನೋಡಿ
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಮರುಎಣಿಕೆಗೂ ಮೊದಲೇ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಬಾಕ್ಸ್​ ಸೀಲ್​​ ಓಪನ್​?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಛಾಯಾ ಸಿಂಗ್ ಹುಡುಗನಾಗಿ, ರಾಜೇಶ್ ಹುಡುಗಿಯಾಗಿ ಬದಲಾದ್ರೆ ಹೇಗಿರ್ತಾರೆ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ