ಯುಎಇ ವಿರುದ್ಧ ಕೇವಲ 1 ರನ್​ನಿಂದ ಸೋತು ಟೂರ್ನಿಯಿಂದ ಹೊರಬಿದ್ದ ಭಾರತ

Hong Kong Sixes: ರಾಬಿನ್ ಉತ್ತಪ್ಪ ನೇತೃತ್ವದ ಭಾರತೀಯ ತಂಡ ಹಾಂಗ್ ಕಾಂಗ್ ಸಿಕ್ಸ್ ಟೂರ್ನಮೆಂಟ್‌ನಿಂದ ನಿರಾಶಾದಾಯಕವಾಗಿ ಹೊರಬಿದ್ದಿದೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದ ನಂತರ, ಯುಎಇ ವಿರುದ್ಧವೂ ಸೋತು ಮೂರು ಪಂದ್ಯಗಳಲ್ಲಿ ಮೂರು ಸೋಲುಗಳೊಂದಿಗೆ ಟೂರ್ನಮೆಂಟ್‌ನಿಂದ ಹೊರಬಿದ್ದಿದೆ. ಯುಎಇ 131 ರನ್ ಗಳಿಸಿದರೆ, ಭಾರತ 1 ರನ್‌ಗಳಿಂದ ಸೋತಿತು. ಉತ್ತಪ್ಪ ಮತ್ತು ಬಿನ್ನಿ ಅವರ ಅದ್ಭುತ ಪ್ರದರ್ಶನ ವ್ಯರ್ಥವಾಯಿತು.

ಯುಎಇ ವಿರುದ್ಧ ಕೇವಲ 1 ರನ್​ನಿಂದ ಸೋತು ಟೂರ್ನಿಯಿಂದ ಹೊರಬಿದ್ದ ಭಾರತ
ಭಾರತ ತಂಡ
Follow us
ಪೃಥ್ವಿಶಂಕರ
|

Updated on:Nov 02, 2024 | 4:57 PM

ರಾಬಿನ್ ಉತ್ತಪ್ಪ ನೇತೃತ್ವದ ಟೀಂ ಇಂಡಿಯಾ ಹಾಂಗ್ ಕಾಂಗ್ ಸಿಕ್ಸ್ ಟೂರ್ನಮೆಂಟ್‌ನಿಂದ ಹೊರಬಿದ್ದಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿದ್ದ ತಂಡವು ಆ ಬಳಿಕ ಇಂಗ್ಲೆಂಡ್‌ ವಿರುದ್ಧವೂ ಸೋತಿತ್ತು. ಈಗ ಯುಎಇಯಂತಹ ದುರ್ಬಲ ತಂಡದ ವಿರುದ್ಧ ಸೋಲನ್ನು ಎದುರಿಸಿದ್ದು, ಸತತ ಮೂರು ಪಂದ್ಯಗಳನ್ನು ಸೋತ ಉತ್ತಪ್ಪ ಪಡೆ ಪಂದ್ಯಾವಳಿಯಿಂದ ಹೊರಬಿದ್ದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಇ 6 ಓವರ್​ಗಳಲ್ಲಿ 131 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ 1 ರನ್​ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ.

ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿದ್ದ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲವುದು ಅತ್ಯವಶ್ಯಕವಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತದ ಪರ ಬೌಲಿಂಗ್ ಆರಂಭಿಸಿದ ಭರತ್ ಚಿಪ್ಲಿ, ಮೊದಲ ಎಸೆತದಲ್ಲಿ ಯುಎಇ ನಾಯಕ ಆಸಿಫ್ ಖಾನ್ ಅವರ ವಿಕೆಟ್ ಪಡೆದರು. ಆದಾಗ್ಯೂ, ಆ ನಂತರ ಬಂದ ಯುಎಇ ಬ್ಯಾಟ್ಸ್‌ಮನ್​ಗಳು ಟೀಂ ಇಂಡಿಯಾ ಬೌಲಿಂಗ್ ವಿಭಾಗವನ್ನು ದ್ವಂಸಗೊಳಿಸಿದರು.

ಖಾಲಿದ್ ಶಾ ಸ್ಫೋಟಕ ಬ್ಯಾಟಿಂಗ್‌

ಯುಎಇ ಪರ ಖಾಲಿದ್ ಶಾ 10 ಎಸೆತಗಳಲ್ಲಿ 42 ರನ್ ಗಳಿಸಿದರೆ, ಮುಹಮ್ಮದ್ ಜುಹೈಬ್ 5 ಎಸೆತಗಳಲ್ಲಿ 17 ರನ್ ಗಳಿಸಿ ಎರಡನೇ ವಿಕೆಟ್‌ಗೆ ಎರಡು ಓವರ್‌ಗಳಲ್ಲಿ 58 ರನ್ ಸೇರಿಸಿದರು. ಉಳಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಹ ಕೆಲವು ಕೊಡುಗೆಗಳನ್ನು ನೀಡಿದರು. ಅದರಲ್ಲ್ಲಿ ಜಹೂರ್ ಖಾನ್ 11 ಎಸೆತಗಳಲ್ಲಿ 37 ರನ್ ಬಾರಿಸುವ ಯುಎಇ ಸ್ಕೋರ್ ಅನ್ನು ಆರು ಓವರ್‌ಗಳಲ್ಲಿ 130 ರನ್‌ಗಳಿಗೆ ಕೊಂಡೊಯ್ದರು. ಭಾರತದ ಪರ ಸ್ಟುವರ್ಟ್ ಬಿನ್ನಿ ತಮ್ಮ ಎರಡು ಓವರ್‌ಗಳಲ್ಲಿ 31 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು.

ಬಿನ್ನಿ-ಉತ್ತಪ್ಪ ಹೋರಾಟ ವ್ಯರ್ಥ

ಇದಕ್ಕುತ್ತರವಾಗಿ ಭಾರತವು ಹಿಂದಿನ ಪಂದ್ಯದಲ್ಲಿ ಅಜೇಯ ಅರ್ಧಶತಕ ಗಳಿಸಿದ್ದ ಭರತ ಚಿಪ್ಲಿಯೊಂದಿಗೆ, ಮನೋಜ್ ತಿವಾರಿ ಅವರನ್ನು ಓಪನಿಂಗ್ ಮಾಡಲು ಕಳುಹಿಸಿತು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಚಿಪ್ಲಿ 20 ರನ್ ಗಳಿಸಿ ಔಟಾದರೆ, ತಿವಾರಿ ಮೂರು ಎಸೆತಗಳಲ್ಲಿ 10 ರನ್ ಗಳಿಸಲಷ್ಟೇ ಶಕ್ತರಾದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಾಬಿನ್ ಉತ್ತಪ್ಪ ಜವಾಬ್ದಾರಿ ಹೊತ್ತು 10 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 43 ರನ್ ಗಳಿಸಿದರು.

ಉತ್ತಪ್ಪ ಔಟಾದ ನಂತರ, ಸ್ಟುವರ್ಟ್ ಬಿನ್ನಿ ಜವಾಬ್ದಾರಿ ವಹಿಸಿಕೊಂಡು 11 ಎಸೆತಗಳಲ್ಲಿ 44 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಭಾರತಕ್ಕೆ 32 ರನ್‌ಗಳ ಅಗತ್ಯವಿತ್ತು. ಕೊನೆಯ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲ್ಲಿಸಲು ಬಿನ್ನಿ ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Sat, 2 November 24

ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
ಬಸ್‌ ಪ್ರಯಾಣ ದರ ಹೆಚ್ಚಿಸಿದ್ದಕ್ಕೆ ಸಂಸದ ಯದುವೀರ್ ಗರಂ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ