ಡೈಮಂಡ್ ಲೀಗ್​ನಲ್ಲಿ ಫೈನಲ್​ನಲ್ಲಿ ನೀರಜ್ ಚೋಪ್ರಾ: ಅಂತಿಮ ಹಣಾಹಣಿ ಎಷ್ಟು ಗಂಟೆಗೆ? ಇಲ್ಲಿದೆ ಮಾಹಿತಿ

Neeraj Chopra: ಡೈಮಂಡ್ ಲೀಗ್​ನಲ್ಲಿ ನೀರಜ್ ಚೋಪ್ರಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಮೊದಲ ಎಸೆತದಲ್ಲಿ ಕೇವಲ 82.10 ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಅಲ್ಲದೆ ಐದನೇ ಎಸೆತದವರೆಗೆ ಅವರು 86 ಮೀಟರ್ ದೂರವನ್ನು ಕ್ರಮಿಸಿರಲಿಲ್ಲ. ಆದರೆ ನಿರ್ಣಾಯಕವಾಗಿದ್ದ ಕೊನೆಯ ಪ್ರಯತ್ನದಲ್ಲಿ ಭರ್ಜಿಯನ್ನು 89.49 ಮೀಟರ್​ ದೂರಕ್ಕೆ ತಲುಪಿಸಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಸಫಲರಾದರು.

ಡೈಮಂಡ್ ಲೀಗ್​ನಲ್ಲಿ ಫೈನಲ್​ನಲ್ಲಿ ನೀರಜ್ ಚೋಪ್ರಾ: ಅಂತಿಮ ಹಣಾಹಣಿ ಎಷ್ಟು ಗಂಟೆಗೆ? ಇಲ್ಲಿದೆ ಮಾಹಿತಿ
Neeraj Chopra
Follow us
ಝಾಹಿರ್ ಯೂಸುಫ್
|

Updated on:Sep 14, 2024 | 8:38 AM

ಸ್ವಿಟ್ಜರ್ಲೆಂಡ್‌ನ ಲೂಝನ್​ನಲ್ಲಿ ನಡೆಯಲಿರುವ ಡೈಮಂಡ್ ಲೀಗ್​ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್​ನಲ್ಲಿ ನೀರಜ್ ಚೋಪ್ರಾ ಕಣಕ್ಕಿಳಿಯಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಭರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಈ ಬಾರಿಯ ಡೈಮಂಡ್ ಲೀಗ್​ನಲ್ಲಿ ದ್ವಿತೀಯ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಪಡೆದಿದ್ದರು. ಅದರಂತೆ ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತದ ಚಿನ್ನದ ಹುಡುಗ ಇತರೆ 6 ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಅರ್ಹತಾ ಸುತ್ತಿನಲ್ಲಿ ನೀರಜ್ ಮಿಂಚಿಂಗ್:

ಆಗಸ್ಟ್ 24 ರಂದು ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಸೀಸನ್ ಬೆಸ್ಟ್ ಥ್ರೋ ಎಸೆದಿದ್ದರು. 89.49 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಭಾರತೀಯ ತಾರೆ ದ್ವಿತೀಯ ಸ್ಥಾನವನ್ನು ಪಡೆದಿದ್ದರು. ಅಂದರೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ 89.45 ಮೀಟರ್ ಎಸೆದಿದ್ದ ನೀರಜ್ ಡೈಮಂಡ್ ಲೀಗ್​ನಲ್ಲಿ 89.49 ಮೀಟರ್ ದೂರವನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದಿದ್ದ 26ರ ಹರೆಯದ ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಅವರು 90.81 ಮೀಟರ್‌ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿದ್ದರು. ಹಾಗೆಯೇ ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ಎಸೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದರು.  ಅದರಂತೆ ಇದೀಗ ಅರ್ಹತಾ ಸುತ್ತಿನಲ್ಲಿ ಮೊದಲ 7 ಸ್ಥಾನಗಳನ್ನು ಪಡೆದವರು ಇದೀಗ ಫೈನಲ್​ ಸುತ್ತಿನಲ್ಲಿ ಕಣಕ್ಕಿಳಿಯಲಿದ್ದಾರೆ.

ಫೈನಲ್ ಸುತ್ತಿನಲ್ಲಿರುವ ಸ್ಪರ್ಧಿಗಳು:

  • 1) ಆಂಡರ್ಸನ್ ಪೀಟರ್ಸ್ – ಗ್ರೆನಡಾ
  • 2) ಜೂಲಿಯನ್ ವೆಬರ್ – ಜರ್ಮನಿ
  • 3) ಜಾಕುಬ್ ವಡ್ಲೆಜ್ – ಜೆಕಿಯಾ
  • 4) ನೀರಜ್ ಚೋಪ್ರಾ – ಭಾರತ
  • 5) ಆಂಡ್ರಿಯನ್ ಮರ್ಡೇರ್ – ಮೊಲ್ಡೊವಾ
  • 6) ರೋಡ್ರಿಕ್ ಜೆಂಕಿ ಡೀನ್ – ಜಪಾನ್
  • 7) ಆರ್ಟರ್ ಫೆಲ್ಫ್ನರ್ – ಉಕ್ರೇನ್

ದಾಖಲೆ ಬರೆದಿದ್ದ ಪೀಟರ್ಸ್:

ಡೈಮಂಡ್ ಲೀಗ್​ನಲ್ಲಿ 90.61 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿರುವ ಅ್ಯಂಡರ್ಸನ್ ಪೀಟರ್ಸ್ ಹೊಸ ದಾಖಲೆ ಬರೆದಿದ್ದಾರೆ. ಈ ಲೀಗ್​ನಲ್ಲಿ ಈ 2015 ರಲ್ಲಿ ಕೆಶೋರ್ನ್ ವಾಲ್ಕಾಟ್ 90.16 ಮೀ. ದೂರಕ್ಕೆ ಭರ್ಜಿ ಎಸೆದು ದಾಖಲೆ ನಿರ್ಮಿಸಿದ್ದರು. ಇದೀಗ 90.61 ಮೀಟರ್​​ನೊಂದಿಗೆ ಪೀಟರ್ಸ್ ಹೊಸ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ಡೈಮಂಡ್ ಲೀಗ್ ಜಾವೆಲಿನ್ ಫೈನಲ್‌ ಪಂದ್ಯ ಯಾವಾಗ?

ನೀರಜ್ ಚೋಪ್ರಾ ಕಣಕ್ಕಿಳಿಯಲಿರುವ ಜಾವೆಲಿನ್ ಥ್ರೋ ಫೈನಲ್ ಪಂದ್ಯವು ಭಾನುವಾರ, ಸೆಪ್ಟೆಂಬರ್ 15 ರಂದು ನಡೆಯಲಿದೆ.

ಡೈಮಂಡ್ ಲೀಗ್ ಫೈನಲ್‌ ಎಷ್ಟು ಗಂಟೆಗೆ ಶುರು?

 ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯು ಭಾರತೀಯ ಕಾಲಮಾನ 1:52 AM IST ಕ್ಕೆ ಪ್ರಾರಂಭವಾಗಲಿದೆ.

ಯಾವ ಚಾನೆಲ್​ನಲ್ಲಿ ವೀಕ್ಷಿಸಬಹುದು?

ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯು ಭಾರತದಲ್ಲಿ ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ಉಚಿತವಾಗಿ ವೀಕ್ಷಿಸುವುದು ಹೇಗೆ?

ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯನ್ನು ಜಿಯೋ ಸಿನಿಮಾ ಆ್ಯಪ್​ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

Published On - 8:35 am, Sat, 14 September 24

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ