Paris Olympics 2024: 13ನೇ ಪದಕದ ಮೇಲೆ ಭಾರತ ಹಾಕಿ ಪಡೆಯ ಕಣ್ಣು

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನ ಪುರುಷರ ಹಾಕಿ ಪಂದ್ಯದ ಕ್ವಾರ್ಟರ್ ಫೈನಲ್​ನಲ್ಲಿ ಇಂದು ಭಾರತ ಮತ್ತು ಗ್ರೇಟ್ ಬ್ರಿಟನ್ ಮುಖಾಮುಖಿಯಾಗಲಿದೆ. ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಭಾರತ ತಂಡವು ಸೆಮಿಫೈನಲ್​ಗೇರಬಹುದು. ಈ ಮೂಲಕ 13ನೇ ಪದಕ ಗೆಲ್ಲುವ ವಿಶ್ವಾಸದೊಂದಿಗೆ ಇಂದು ಟೀಮ್ ಇಂಡಿಯಾ ಆಟಗಾರರು ಕಣಕ್ಕಿಳಿಯಲಿದ್ದಾರೆ.

Paris Olympics 2024: 13ನೇ ಪದಕದ ಮೇಲೆ ಭಾರತ ಹಾಕಿ ಪಡೆಯ ಕಣ್ಣು
Team India
Follow us
ಝಾಹಿರ್ ಯೂಸುಫ್
|

Updated on:Aug 04, 2024 | 12:01 PM

ಒಲಿಂಪಿಕ್ಸ್ ( Olympics ) ಕ್ರೀಡಾಕೂಟ ಆರಂಭವಾಗಿ 128 ವರ್ಷಗಳು ಕಳೆದಿವೆ. ವಿಶ್ವ ಕ್ರೀಡಾಕೂಟ 1896 ರಲ್ಲಿ ಅಥೆನ್ಸ್ ನಗರದಲ್ಲಿ ಶುರುವಾದರೂ, ಭಾರತವು ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದು 1990 ರಲ್ಲಿ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿಲ್ಲ ಎಂಬುದೇ ಸತ್ಯ.

ಇದಾಗ್ಯೂ ಒಂದು ಕಾಲದಲ್ಲಿ ಭಾರತೀಯ ಹಾಕಿ ತಂಡವು ಒಲಿಂಪಿಕ್ಸ್​ನ ಹಾಕಿ ಅಂಗಳದಲ್ಲಿ ಪಾರುಪತ್ಯ ಸ್ಥಾಪಿಸಿತ್ತು ಎಂದರೆ ನಂಬಲೇಬೇಕು. ಇದಕ್ಕೆ ಸಾಕ್ಷಿಯೇ ಭಾರತ ಹಾಕಿ ತಂಡ ಇದುವರೆಗೆ ಗೆದ್ದಿರುವ 8 ಚಿನ್ನದ ಪದಕಗಳು. ಅಷ್ಟೇ ಅಲ್ಲದೆ ಭಾರತಕ್ಕೆ ಚೊಚ್ಚಲ ಬಾರಿ ಚಿನ್ನದ ಪದಕ ತಂದುಕೊಟ್ಟಿದ್ದೂ ಕೂಡ ಹಾಕಿ ತಂಡ ಎಂಬುದು ಇಲ್ಲಿ ವಿಶೇಷ.

  •  1928ರಲ್ಲಿ ಆಮ್ಸ್ಟರ್‌ಡ್ಯಾಮ್ ಒಲಿಂಪಿಕ್ಸ್​ನಲ್ಲಿ ಭಾರತ ಹಾಕಿ ತಂಡವು ಫೈನಲ್​ನಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಹಾಕಿ ದಂತಕಥೆ ಧ್ಯಾನ್ ಚಂದ್ ಮೂರು ಗೋಲು ಗಳಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
  • 1932 ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲೂ ಪಾರುಪತ್ಯ ಮೆರೆದ ಭಾರತೀಯ ಹಾಕಿ ತಂಡ ಜಪಾನ್ ತಂಡವನ್ನು 11-1ರಿಂದ ಸೋಲಿಸಿ ದಾಖಲೆ ಬರೆದಿತ್ತು. ಅಷ್ಟೇ ಅಲ್ಲದೆ ಫೈನಲ್​ನಲ್ಲಿ ಯುಎಸ್ಎ ತಂಡವನ್ನು 24-1 ಗೋಲುಗಳಿಂದ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿತು.
  •  1936 ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಆತಿಥೇಯ ಜರ್ಮನಿ ವಿರುದ್ಧ 8-1 ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡ ಮೂರನೇ ಬಾರಿ ಒಲಿಂಪಿಕ್ಸ್ ಚಿನ್ನದ ಪದಕಕ್ಕೆ ಕೊರೊಲೊಡ್ಡಿತು.
  • 12 ಸುದೀರ್ಘ ವರ್ಷಗಳ ನಂತರ 1948 ರ ಲಂಡನ್ ಒಲಿಂಪಿಕ್ಸ್ ಮತ್ತೊಮ್ಮೆ ಭಾರತವು ಫೈನಲ್‌ ಪ್ರವೇಶಿಸಿತು. ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿದ ಭಾರತೀಯ ಹಾಕಿ ತಂಡ 4ನೇ ಬಾರಿ ಒಲಿಂಪಿಕ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇದು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ಸ್ ಪದಕವಾಗಿತ್ತು. ಅಷ್ಟೇ ಅಲ್ಲದೆ ಈ ವಿಜಯವು ಭಾರತವನ್ನು ಆಳಿದ್ದ ಗ್ರೇಟ್ ಬ್ರಿಟನ್ ವಿರುದ್ದ ಬಂದಿರುವುದು ಮತ್ತೊಂದು ವಿಶೇಷ.
  • 1952ರ ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 6-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿತು.
  • 1956 ಮೆಲ್ಬೋರ್ನ್​ ಒಲಿಂಪಿಕ್ಸ್​ನ ಫೈನಲ್ ಪಂದ್ಯವು ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅದೇ ಮೊದಲ ಬಾರಿ ಭಾರತ-ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್​ನಲ್ಲಿ ಭಾರತವು 1-0 ಅಂತರದಲ್ಲಿ ಜಯಗಳಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
  • 1960ರ ರೋಮ್ ಒಲಿಂಪಿಕ್ಸ್​ ಫೈನಲ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ 1-0 ಅಂತರದಿಂದ ಪರಾಜಯ ಅನುಭವಿಸುವ ಮೂಲಕ ಭಾರತ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
  • 1964ರ ಟೋಕಿಯೊ ಒಲಿಂಪಿಕ್ಸ್​ನ ಫೈನಲ್​ನಲ್ಲಿ ಏಷ್ಯಾದ ಪ್ರತಿಸ್ಪರ್ಧಿಗಳು ಮತ್ತೊಮ್ಮೆ ಮುಖಾಮುಖಿಯಾಗಿದ್ದರು. ಆದರೆ ಈ ಬಾರಿ ಕೂಡ ಪಾಕ್​ಗೆ ಸೋಲುಣಿಸುವ ಮೂಲಕ ಭಾರತ ತಮ್ಮ 7ನೇ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು.
  • 1968ರ ಮೆಕ್ಸಿಕೊ ಒಲಿಂಪಿಕ್ಸ್​ ಫೈನಲ್​ನಲ್ಲಿ ಭಾರತ ಜರ್ಮನಿ ವಿರುದ್ದ ಮೂರನೇ ಸ್ಥಾನಕ್ಕಾಗಿ ಸ್ಪರ್ಧಿಸಿತ್ತು. ಈ ಪಂದ್ಯದಲ್ಲಿ ಜರ್ಮನಿ ತಂಡವನ್ನು 2-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಚೊಚ್ಚಲ ಬಾರಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.
  • 1972 ರಲ್ಲಿ ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಭಾರತ ಹಾಗೂ ನೆದರ್ಲ್ಯಾಂಡ್ಸ್ 3ನೇ ಸ್ಥಾನಕ್ಕಾಗಿ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ 2-1 ಅಂತರದಿಂದ ಗೆಲ್ಲುವ ಮೂಲಕ ಮತ್ತೊಮ್ಮೆ ಭಾರತದ ಹಾಕಿ ತಂಡ ಕಂಚಿನ ಪದಕದೊಂದಿಗೆ ಮರಳಿತ್ತು.
  • ಟೋಕಿಯೋ ಒಲಿಂಪಿಕ್ಸ್ ಬಳಿಕ ಸತತ 3 ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಭಾರತೀಯ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಫೈನಲ್​ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಹಾಕಿಯಲ್ಲಿ 8ನೇ ಚಿನ್ನದ ಪದಕ ಗೆದ್ದರು. ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ.
  • ಇದಾಗ್ಯೂ 2020 ರಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ತಂಡವು 41 ವರ್ಷಗಳ ಪದಕದ ಬರ ನೀಗಿಸಿದೆ. 3ನೇ ಸ್ಥಾನಕ್ಕಾಗಿ ನಡೆದ ಈ ಪಂದ್ಯದಲ್ಲಿ ಜರ್ಮನಿಯನ್ನು 5-4 ಅಂತರದಿಂದ ಮಣಿಸುವ ಮೂಲಕ 4 ದಶಕಗಳ ಬಳಿಕ ಮತ್ತೊಮ್ಮೆ ಪದಕ ಗೆದ್ದುಕೊಂಡಿತ್ತು.

ಇದುವರೆಗೆ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ 12 ಪದಕ (8 ಚಿನ್ನ, 1, ಬೆಳ್ಳಿ, 3 ಕಂಚು) ಗೆದ್ದುಕೊಂಡಿದೆ. ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ತಂಡವೊಂದರೆ ಸರ್ವಶ್ರೇಷ್ಠ ಸಾಧನೆ. ಈ ಹಿಂದೆ 11 ಪದಕ ಗೆದ್ದ ಜರ್ಮನಿ ಹಾಕಿ ತಂಡ ಒಲಿಂಪಿಕ್ಸ್​ ಇತಿಹಾಸ ನಿರ್ಮಿಸಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜರ್ಮನಿಯನ್ನು ಮಣಿಸುವ ಮೂಲಕ ಭಾರತದ ಹಾಕಿ ತಂಡ ಹೊಸ ದಾಖಲೆ ನಿರ್ಮಿಸಿದೆ.

Published On - 11:59 am, Sun, 4 August 24

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ