AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pele Passes Away: ಕಾಲ್ಚೆಂಡು ಲೋಕದಲ್ಲಿ ಮಹಾರಾಜನಾಗಿ ಮೆರೆದ ಪೀಲೆ: ಫುಟ್ಬಾಲ್ ದೇವರ ದಾಖಲೆಗಳ ಪಟ್ಟಿ ಇಲ್ಲಿದೆ

Soccer Legend Pele Death: ಕಾಲ್ಚೆಂಡು ಜಗತ್ತಿನಲ್ಲಿ ವಿಶೇಷ ಗೌರವ ಸಂಪಾದಿಸಿದ ಪೀಲೆ ಹಲವು ಸಾಧನೆಗಳನ್ನು ಕ್ರೀಡಾ ಜಗತ್ತಿಗೆ ಬಿಟ್ಟುಕೊಟ್ಟು ಇಹಲೋಕ ತ್ಯಜಿಸಿದ್ದಾರೆ. ಪೀಲೆ ಅವರ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.

Pele Passes Away: ಕಾಲ್ಚೆಂಡು ಲೋಕದಲ್ಲಿ ಮಹಾರಾಜನಾಗಿ ಮೆರೆದ ಪೀಲೆ: ಫುಟ್ಬಾಲ್ ದೇವರ ದಾಖಲೆಗಳ ಪಟ್ಟಿ ಇಲ್ಲಿದೆ
Pele
TV9 Web
| Edited By: |

Updated on: Dec 30, 2022 | 8:14 AM

Share

ಫುಟ್ಬಾಲ್ (Football) ಲೋಕದ ದೇವರು ಪೀಲೆ(Pele) ಎಂದೇ ಖ್ಯಾತರಾಗಿದ್ದ ಎಡ್ಸನ್​ ಅರಾಂಟೆಸ್​ ಡು ನಸಿಮೆಂಟೊ (82) ಗುರುವಾರ ರಾತ್ರಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದ್ದಾರೆ. ಅವರ ಪುತ್ರಿ ಕೆಲಿ ನಾಸಿಮೆಂಟೊ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಕರುಳಿನ ಕ್ಯಾನ್ಸರ್ (Cancer) ಬಂದಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಮೂತ್ರಪಿಂಡದ ಸಮಸ್ಯೆ ತಲೆದೋರಿತ್ತು. ಜತೆಗೆ ಕ್ಯಾನ್ಸರ್​ ಗಂಟಲಿಗೂ ಹರಡಿತ್ತು. ಕಾಲ್ಚೆಂಡು ಜಗತ್ತಿನಲ್ಲಿ ವಿಶೇಷ ಗೌರವ ಸಂಪಾದಿಸಿದ ಪೀಲೆ ಹಲವು ಸಾಧನೆಗಳನ್ನು ಕ್ರೀಡಾ ಜಗತ್ತಿಗೆ ಬಿಟ್ಟುಕೊಟ್ಟು ಇಹಲೋಕ ತ್ಯಜಿಸಿದ್ದಾರೆ. ಪೀಲೆ ಅವರ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ.

  • ಅಂತರರಾಷ್ಟ್ರೀಯ ಮಟ್ಟದಲ್ಲಿ, 92 ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಪೀಲೆ ತನ್ನ ದೇಶದ ಸಾರ್ವಕಾಲಿಕ ಟಾಪ್ ಸ್ಕೋರರ್ ಆಗಿ ಉಳಿದಿದ್ದಾರೆ.
  • ಪೀಲೆ 1958 ರ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಪಂದ್ಯಾವಳಿಯ ಉದ್ದಕ್ಕೂ ಆರು ಗೋಲುಗಳನ್ನು ಗಳಿಸಿದರು. ಅವರು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು.
  • ಇದನ್ನೂ ಓದಿ
    Image
    ICC ODI Rankings 2022: ಏಕದಿನ ರ‍್ಯಾಂಕಿಂಗ್: ಟಾಪ್-10 ನಲ್ಲಿ ಟೀಮ್ ಇಂಡಿಯಾದ ಇಬ್ಬರಿಗೆ ಸ್ಥಾನ
    Image
    WTC 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ಗೇರಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?
    Image
    Year Ender 2022: ಈ ವರ್ಷದ ಸಿಕ್ಸರ್ ಕಿಂಗ್ ಯಾರು ಗೊತ್ತಾ?
    Image
    IPL 2023: ಮಾಜಿ RCB ಆಟಗಾರರೇ ಈಗ ಮುಂಬೈ ಇಂಡಿಯನ್ಸ್​ ತಂಡದ ಹಿಂದಿನ ಶಕ್ತಿ..!
  • FIFA ವಿಶ್ವಕಪ್‌ನಲ್ಲಿ, ಪೀಲೆ ನಾಲ್ಕು ಆವೃತ್ತಿಗಳಲ್ಲಿ 14 ಪಂದ್ಯಗಳಲ್ಲಿ 12 ಗೋಲುಗಳನ್ನು ಗಳಿಸಿದ ಸಾಧನೆ ಕೂಡ ಮಾಡಿದ್ದಾರೆ.
  • 16 ವರ್ಷವಿದ್ದಾಗ 1957ರಲ್ಲಿ ಬ್ರೆಜಿಲ್​ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಅವರು ಅರ್ಜೆಂಟೀನಾ ವಿರುದ್ದ ಮೊದಲ ಪಂದ್ಯವಾಡಿದ್ದರು. ಅದರಲ್ಲೇ ಗೋಲ್​ ಬಾರಿಸಿ ಜಗತ್ತಿನ ಗಮನ ಸೆಳೆದಿದ್ದರು. ಅಲ್ಲದೆ ಸಣ್ಣ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಗೋಲ್​ ಬಾರಿಸಿದ ಆಟಗಾರ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದರು.
  • 1958, 1966 ಹಾಗೂ 1970ರ ವಿಶ್ವ ಕಪ್​ ಗೆದ್ದ ಬ್ರೆಜಿಲ್​ ತಂಡದ ಸದಸ್ಯರಾಗಿದ್ದ ಅವರು ಮೂರು ವಿಶ್ವ ಕಿರೀಟ ಧರಿಸಿದ ಏಕೈಕ ಆಟಗಾರ.
  • ಫುಟ್ಬಾಲ್​ ವಿಶ್ವ ಕಪ್​ನಲ್ಲಿ 10 ಬಾರಿ ಅಸಿಸ್ಟ್​ (ಬೇರೆ ಆಟಗಾರರಿಗೆ ಗೋಲ್​ ಬಾರಿಸಲು ನೆರವಾಗುವುದು) ಮಾಡಿದ ಕೀರ್ತಿ ಪೀಲೆ ಅವರದ್ದು. ಇಷ್ಟೊಂದು ಅಸಿಸ್ಟ್​ ಮಾಡಿದ ಪೀಲೆ ದಾಖಲೆಯನ್ನು ಇನ್ನೂ ಯಾರೂ ಅಳಿಸಿಲ್ಲ.
  • ಬ್ರೆಜಿಲ್​ನ ಸ್ಯಾಂಟೋಸ್​ ಕ್ಲಬ್​ ಪರ ಆಡುತ್ತಿದ್ದ ಪೀಲೆ ಗರಿಷ್ಠ ಗೋಲ್​ಗಳ ದಾಖಲೆ ಹೊಂದಿದ್ದಾರೆ. ಅವರು 659 ಪಂದ್ಯಗಳಲ್ಲಿ 643 ಗೋಲ್​ಗಳನ್ನು ಬಾರಿಸಿದ್ದಾರೆ.
  • ಬ್ರೆಜಿಲ್​ನ ಈ ದಿಗ್ಗಜ ತಮ್ಮ ವೃತ್ತಿ ಫುಟ್ಬಾಲ್​ನಲ್ಲಿ 92 ಬಾರಿ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ. ಇದು ವಿಶ್ವದಲ್ಲೇ ಅತ್ಯಂತ ಗರಿಷ್ಠ ಸಾಧನೆಯಾಗಿದೆ.
  • ಕ್ಯಾಲೆಂಡರ್​ ವರ್ಷವೊಂದರಲ್ಲಿ 100ಕ್ಕೂ ಅಧಿಕ ಗೋಲ್​ಗಳನ್ನು ಬಾರಿಸಿದ ಏಕೈಕ ಆಟಗಾರ ಪೀಲೆ ಎಂಬುದಾಗಿ ಫಿಫಾ ದಾಖಲೆಗಳು ಹೇಳುತ್ತವೆ. ಅವರು 1959ರಲ್ಲಿ 127 ಗೋಲ್​ಗಳನ್ನು ಬಾರಿಸಿದ್ದರೆ, 1961ರಲ್ಲಿ 110 ಗೋಲ್​ಗಳನ್ನು ಬಾರಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ