Tech Tips: ವಾಟ್ಸ್​ಆ್ಯಪ್​ನಲ್ಲಿ AI: ಈ ಅದ್ಭುತ ಫೀಚರ್ ನೀವಿನ್ನೂ ಬಳಸಿಕೊಂಡಿಲ್ವಾ?

WhatsApp AI Tool: ವಾಟ್ಸ್​ಆ್ಯಪ್​ನಲ್ಲಿ ಎಐ ಟೂಲ್ ತರಲಾಗಿದೆ. ಈ ಹೊಸ AI ಉಪಕರಣವು ಬಳಕೆದಾರರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಪ್ರಸ್ತುತ, ಚಾಟ್ ಜಿಪಿಟಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ವಾಟ್ಸ್​ಆ್ಯಪ್​ AI ನಲ್ಲಿಯೂ ಒದಗಿಸಲಾಗಿದೆ.

Tech Tips: ವಾಟ್ಸ್​ಆ್ಯಪ್​ನಲ್ಲಿ AI: ಈ ಅದ್ಭುತ ಫೀಚರ್ ನೀವಿನ್ನೂ ಬಳಸಿಕೊಂಡಿಲ್ವಾ?
WhatsApp
Follow us
Vinay Bhat
|

Updated on: May 23, 2024 | 12:15 PM

ಕೃತಕ ಬುದ್ಧಿಮತ್ತೆ ಪ್ರಸ್ತುತ ಇಡೀ ಜಗತ್ತನ್ನು ಬದಲಾಯಿಸುತ್ತಿದೆ. ಶಾಪಿಂಗ್‌ನಿಂದ ಔಷಧದವರೆಗೆ, AI ತಂತ್ರಜ್ಞಾನದ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಬಹುತೇಕ ಎಲ್ಲಾ ಪ್ರಮುಖ ಟೆಕ್ ಕಂಪನಿಗಳು ಈಗಾಗಲೇ ಈ ಕ್ಷೇತ್ರವನ್ನು ಪ್ರವೇಶಿಸಿವೆ. ಗೂಗಲ್ ಮತ್ತು ಆ್ಯಪಲ್‌ನಂತಹ ಕಂಪನಿಗಳು AI ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿವೆ. ಪ್ರಸ್ತುತ, ಚಾಟ್‌ಜಿಪಿಟಿ ಮತ್ತು ಗೂಗಲ್ ಬೋಟ್ AI ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿವೆ. ಈ ಸಾದಿಯಲ್ಲಿ ಮೆಟಾ ಕೂಡ ಮುಂದುವರೆಯುತ್ತಿದೆ. ಮೆಟಾ ತನ್ನ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ AI ಪರಿಕರಗಳನ್ನು ಲಭ್ಯವಾಗುವಂತೆ ಮಾಡುತ್ತಿದೆ. ಇದರಲ್ಲಿ ವಾಟ್ಸ್​ಆ್ಯಪ್ ಕೂಡ ಇದೆ.

ವಾಟ್ಸ್​ಆ್ಯಪ್​ನಲ್ಲಿ ಎಐ ಟೂಲ್ ತರಲಾಗಿದೆ. ಈ ಹೊಸ AI ಉಪಕರಣವು ಬಳಕೆದಾರರಿಗೆ ಅದ್ಭುತ ಅನುಭವವನ್ನು ನೀಡುತ್ತದೆ. ಪ್ರಸ್ತುತ, ಚಾಟ್ ಜಿಪಿಟಿಯಲ್ಲಿ ಲಭ್ಯವಿರುವ ಎಲ್ಲಾ ವೈಶಿಷ್ಟ್ಯಗಳನ್ನು ವಾಟ್ಸ್​ಆ್ಯಪ್​ AI ನಲ್ಲಿಯೂ ಒದಗಿಸಲಾಗಿದೆ. AI ಮೂಲಕ ವಾಟ್ಸ್​ಆ್ಯಪ್​ನಲ್ಲಿ ಫೋಟೋ ವಿನ್ಯಾಸ ವೈಶಿಷ್ಟ್ಯವನ್ನು ಉಪಯೋಗಿಸಬಹುದು. ನಿಮ್ಮ ಕಲ್ಪನೆಯ ಯಾವುದೇ ವಿಷಯವನ್ನು ಕೃತಕ ಬುದ್ಧಿಮತ್ತೆಯು ಫೋಟೋವನ್ನಾಗಿ ಬದಲಾಯಿಸುತ್ತದೆ.

ನೀವು ಎಷ್ಟು GB RAM ಫೋನ್ ಖರೀದಿಸಬೇಕು?: ಗೊಂದಲವಿದ್ದರೆ ಈ ಸ್ಟೋರಿ ಓದಿ

ವಾಟ್ಸ್​ಆ್ಯಪ್​ನಲ್ಲಿ ಎಐ ಟೂಲ್ ಬಳಕೆ ಹೇಗೆ?:

ವಾಟ್ಸ್​ಆ್ಯಪ್​ನಲ್ಲಿ ಎಐ ಟೂಲ್ ಬಳಸಲು ಬಳಕೆದಾರರು ತಮ್ಮ ವಾಟ್ಸ್​ಆ್ಯಪ್​ ಅನ್ನು ಮೊದಲು ಅಪ್ ಡೇಟ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಚಾಟ್ ಇಂಟರ್‌ಫೇಸ್‌ನ ಮೇಲ್ಭಾಗದಲ್ಲಿ ನೇರಳೆ ಮತ್ತು ನೀಲಿ ಬಣ್ಣದಲ್ಲಿ ಒಂದು ವಿಶಿಷ್ಟವಾದ ವೃತ್ತಾಕಾರದ ಐಕಾನ್ ಅನ್ನು ಕಾಣುತ್ತೀರಿ. ಈ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಬಳಕೆದಾರರು ಮೆಟಾ AI ಗೆ ಪ್ರವೇಶಿಸಬಹುದು. ಪರ್ಸನಲ್ ಅಥವಾ ಗ್ರೂಪ್ ಚಾಟ್‌ಗಳಲ್ಲಿರಲಿ, “@” ನಂತರ “ಮೆಟಾ AI” ಎಂದು ಟೈಪ್ ಮಾಡುವ ಮೂಲಕ ಜನರು ಚಾಟ್ ಬೋಟ್ ಸೇವೆಗಳನ್ನು ಪ್ರವೇಶಿಸಬಹುದು. ಸದ್ಯಕ್ಕೆ ಈ ಆಯ್ಕೆ ಕೆಲ ವಾಟ್ಸ್​ಆ್ಯಪ್ ಬಳಕೆದಾರರಿಗೆ ಲಭ್ಯವಿದೆಯಷ್ಟೆ.

ಚೀನಾದಲ್ಲಿ ವಾಟ್ಸ್​ಆ್ಯಪ್​ ನಿಷೇಧ

ಚೀನಾ ಸರ್ಕಾರದ ಆದೇಶದ ಅನುಸಾರ ಆ್ಯಪಲ್ ತನ್ನ ಚೀನಾ ಆ್ಯಪ್ ಸ್ಟೋರ್​ನಿಂದ ವಾಟ್ಸ್​ಆ್ಯಪ್​ ಮತ್ತು ಥ್ರೆಡ್ಸ್ ಆ್ಯಪ್​ಗಳನ್ನು ತೆಗೆದುಹಾಕಿದೆ. ವಾಟ್ಸ್​ಆ್ಯಪ್​ ಮತ್ತು ಥ್ರೆಡ್​ನಿಂದ ದೇಶದ ಭದ್ರತೆಗೆ ಅಪಾಯ ಆಗುತ್ತದೆ ಎಂಬ ಕಾರಣಕ್ಕೆ ಆ ಎರಡು ಆ್ಯಪ್​ಗಳನ್ನು ಚೀನಾ ನಿಷೇಧಿಸಿದೆ. ಹೀಗಾಗಿ, ಆ್ಯಪಲ್​ನ ಆ್ಯಪ್ ಸ್ಟೋರ್​ನಿಂದ ಅದನ್ನು ತೆಗೆಯಲಾಗಿದೆ. ಇದು ಚೀನಾದಲ್ಲಿ ಮಾತ್ರ ಅನ್ವಯ ಆಗುತ್ತದೆ. ಭಾರತದಲ್ಲಿರುವ ಐಫೋನ್ ಬಳಕೆದಾರರಿಗೆ ಅವರ ಆ್ಯಪ್ ಸ್ಟೋರ್​ನಲ್ಲಿ ವಾಟ್ಸ್​ಆ್ಯಪ್​ ಲಭ್ಯ ಇರುತ್ತದೆ.

ಸೈಬರ್ ವಂಚಕರ ಬಾಲ ಕತ್ತರಿಸಲು ಸರ್ಕಾರ ಪ್ಲಾನ್; 18 ಲಕ್ಷ ಮೊಬೈಲ್ ನಂಬರ್​ಗಳು ರದ್ದಾಗುವ ಸಾಧ್ಯತೆ

ಚೀನಾದಲ್ಲಿ ಈ ರೀತಿ ಸೋಷಿಯಲ್ ಮೀಡಿಯಾ ಮೇಲಿನಿ ನಿರ್ಬಂಧ ಬಹಳ ಕಠಿಣತರದ್ದಾಗಿದೆ. ಅಲ್ಲಿನ ಸರ್ಕಾರ ಸೋಷಿಯಲ್ ಮೀಡಿಯಾದ ಯಾವುದೇ ಮಾಹಿತಿ ತನ್ನ ಕಣ್ತಪ್ಪಿ ಹರಿದಾಡದಂತೆ ಸಾಧ್ಯವಾದಷ್ಟೂ ಎಚ್ಚರ ವಹಿಸುತ್ತದೆ. ಅದರಲ್ಲೂ ರಾಜಕೀಯವಾಗಿ ಸೂಕ್ಷ್ಮವೆನಿಸುವ ಮಾಹಿತಿಯನ್ನು ಚೀನಾ ಸರ್ಕಾರ ತಪ್ಪದೇ ನಿರ್ಬಂಧಿಸುತ್ತದೆ.

ಹೆಚ್ಚಿನ ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ